ಸೇನೆ ಸೇವೆಯಲ್ಲಿ ರಿಯಲ್ ಹೀರೋ ಪಾಟೇಕರ್..!

ಕಾರ್ಗಿಲ್ ಯುದ್ಧದಲ್ಲಿ QRT ಟೀಮ್‌‌ನಲ್ಲಿ ಕಾರ್ಯ

Befunky collage 2025 05 14t173648.653

ಆಪರೇಷನ್ ಸಿಂದೂರ್ ಬಗ್ಗೆ ಕಾಮೆಂಟ್ ಮಾಡೋಕೇನೇ ಒಂದಷ್ಟು ಬಾಲಿವುಡ್ ಸ್ಟಾರ್ಸ್‌ ಹಿಂದು ಮುಂದು ನೋಡ್ತಾರೆ. ಅಂಥದ್ರಲ್ಲಿ ಬಿಟೌನ್ ನಟರೊಬ್ಬರು ಯುದ್ಧ ಭೂಮಿಗೆ ಹೋಗಿ ನಮ್ಮ ಇಂಡಿಯನ್ ಆರ್ಮಿ ಜೊತೆ ಕೆಲಸ ಮಾಡಿ ಬಂದಿರೋ ಸುದ್ದಿ ಸಖತ್ ಸದ್ದು ಮಾಡ್ತಿದೆ. ಇಷ್ಟಕ್ಕೂ ಯಾರು ಆ ಸ್ಟಾರ್..? ಆರ್ಮಿಯಲ್ಲಿ ಕೆಲಸ ಮಾಡೋದು ಅಷ್ಟು ಸುಲಭನಾ..? ಇಲ್ಲಿದೆ ಕಂಪ್ಲೀಟ್ ಕಹಾನಿ.

ಯೆಸ್.. ಆಪರೇಷನ್ ಸಿಂದೂರ್‌‌ ವಿಚಾರ ಭಾರತ ಸರ್ಕಾರ ಹಾಗೂ ನಮ್ಮ ಇಂಡಿಯನ್ ಆರ್ಮಿಯನ್ನ ಇಡೀ ದೇಶವೇ ಶ್ಲಾಘಿಸುತ್ತಿದೆ. ಪಹಲ್ಗಾಮ್‌‌ನಲ್ಲಿ ಉಗ್ರರು ಮಾಡಿದ ದಾಳಿ ಹಾಗೂ ಅದಕ್ಕೆ ಕುಮ್ಮಕ್ಕು ಕೊಟ್ಟಂತಹ ಪಾಕಿಸ್ತಾನವನ್ನು ಎಲ್ಲರೂ ಖಂಡಿಸುತ್ತಿದ್ದಾರೆ. ತೆರೆ ಮೇಲೆ ಹೀರೋಗಳು ಅನಿಸಿಕೊಂಡವರು ನಿಜ ಜೀವನದಲ್ಲಿ ಈ ಬಗ್ಗೆ ಮಾತನಾಡದೆ ಮೌನ ವಹಿಸಿರೋದು ನಿಜಕ್ಕೂ ದುರಂತ.

ಒಂದಷ್ಟು ಮಂದಿ ರಿಯಾಕ್ಟ್ ಮಾಡಿದ್ದಾರಾದ್ರೂ, ಖಾನ್‌‌ಗಳಿಗೆ ಸಿಕ್ಕಾಪಟ್ಟೆ ತರಾಟೆಗೆ ತೆಗೆದುಕೊಂಡಿದ್ದಾರೆ ನೆಟ್ಟಿಗರು. ಇಂತವರ ಮಧ್ಯೆ ಸಿನಿಮಾಗಳಲ್ಲಿನ ಹೀರೋಗಳಂತೆ ಇಂಡಿಯನ್ ಆರ್ಮಿ ಜೊತೆ ಭಾರತ-ಪಾಕ್ ಬಾರ್ಡರ್‌‌ನಲ್ಲಿ ದೇಶ ಸೇವೆ ಮಾಡಿ ಬಂದಿರೋ ರಿಯಲ್ ಹೀರೋ ಕಥೆ ನಿಮಗೆ ಹೇಳಲೇಬೇಕು. ಯೆಸ್.. ಆತ ಬೇರಾರೂ ಅಲ್ಲ, ಭಾರತೀಯ ಚಿತ್ರರಂಗದ ಮೋಸ್ಟ್ ವರ್ಸಟೈಲ್ ಆ್ಯಕ್ಟರ್ ಅನಿಸಿಕೊಂಡಿರೋ ನಾನಾ ಪಾಟೇಕರ್.

ಬರೋಬ್ಬರಿ 50 ವರ್ಷಗಳಿಗೂ ಮೇಲ್ಪಟ್ಟು ಭಾರತೀಯ ಚಿತ್ರರಂಗದಲ್ಲಿ ತನ್ನದೇ ಆದಂತಹ ಬಹುದೊಡ್ಡ ಛಾಪು ಮೂಡಿಸಿದ್ದಾರೆ ಬಾಲಿವುಡ್ ನಟ ನಾನಾ ಪಾಟೇಕರ್. ಅಂದಹಾಗೆ ಇವರು 1999ರ ಕಾರ್ಗಿಲ್ ಯುದ್ಧದಲ್ಲಿ ದೇಶ ಸೇವೆ ಮಾಡಿದ್ದಾರೆ. LOCನಲ್ಲಿ ರಿಯಲ್ ಯೋಧರ ಜೊತೆ ತಾನೂ ಕೂಡ ಶತ್ರುಗಳ ಜೊತೆ ಕಾದಾಡಿದ್ದಾರೆ, ಹೋರಾಡಿದ್ದಾರೆ. ಅದನ್ನ ಸ್ವತಃ ನಾನಾ ಪಾಟೇಕರ್ ಅವರೇ ಇತ್ತೀಚೆಗೆ ಸಂದರ್ಶನವೊಂದರಲ್ಲಿ ಬಹಿರಂಗಪಡಿಸಿದ್ದಾರೆ.

ಯಾರು ಬೇಕಾದ್ರೂ ಆರ್ಮಿಗೆ ಹೋಗಿ ಜಾಯಿನ್ ಆಗಬಹುದಾ..? ದೇಶ ಸೇವೆಗಾಗಿ ಯೋಧರ ಜೊತೆ ಹೋಗಿ ಬೆರೆಯಬಹುದಾ ಅನ್ನೋ ಪ್ರಶ್ನೆ ನಿಮಗೆ ಮೂಡದೇ ಇರದು. ಯಾರಂದ್ರೆ ಅವರಿಗೆ ಆರ್ಮಿಗೆ ಎಂಟ್ರಿ ಇರೋದಿಲ್ಲ. ಹೌದು.. ನಾನಾ ಪಾಟೇಕರ್‌‌ಗೂ ಆರ್ಮಿಯಲ್ಲಿ ಕೆಲಸ ಮಾಡೋಕೆ ನೀವು ಅಂದುಕೊಂಡಷ್ಟು ಸುಲಭವಾಗಿ ಅವಕಾಶ ಸಿಕ್ಕಿಲ್ಲ. ಅವರು ಕಾರ್ಗಿಲ್ ರೆಜಿಮೆಂಟ್ ಆರ್ಮಿ ಆಫೀಸರ್‌‌ಗೆ ಮನವಿ ಮಾಡಿದ್ರು. ಅವರು ಮನವಿಯನ್ನ ತಿರಸ್ಕರಿಸಿದ ಬಳಿಕ ರಕ್ಷಣಾ ಸಚಿವರ ಬಳಿ ಹೋಗಿದ್ದಾರೆ.

ಅಂದಿನ ರಕ್ಷಣಾ ಸಚಿವ ಜಾರ್ಜ್ ಫರ್ನಾಂಡಿಸ್ ಕೂಡ ಪಾಟೇಕರ್ ಸೇನೆ ಸೇರೋಕೆ ನೋ ಅಂದಿದ್ದಾರೆ. ಆದ್ರೆ ಅವರು ಪ್ರಹಾರ್ ಸಿನಿಮಾಗಾಗಿ ಬರೋಬ್ಬರಿ ಮೂರು ವರ್ಷಗಳ ಕಾಲ ಮರಾಠ ಲೈಟ್ ಇನ್‌‌ಫೆಂಟ್ರಿಯಲ್ಲಿ ಆರ್ಮಿ ಮಂದಿ ಜೊತೆ ತರಬೇತಿ ಪಡೆದಿದ್ದರಂತೆ. ಅದನ್ನ ರೀಸನ್ ಕೊಟ್ಟು ಕೊನೆಗೂ ಭಾರತ-ಪಾಕ್ ಗಡಿ ಆಗಿರೋ ಎಲ್‌ಓಸಿಯಲ್ಲಿ ಕೆಲಸ ಮಾಡಿದ್ದಾರೆ. ಯೋಧರ ಜೊತೆ ಬಂದೂಕು ಹಿಡಿದು ಗಡಿ ಕಾದಿದ್ದಾರೆ. ಬೇಸ್ ಆಸ್ಪತ್ರ ೆಯಲ್ಲೂ ಎರಡು ಮೂರು ವಾರಗಳ ಕಾಲ ಕೆಲಸ ಮಾಡಿ ಭೇಷ್ ಅನಿಸಿಕೊಂಡಿದ್ದಾರೆ.

ಅದಾದ ಬಳಿಕ ಅವರು ದೇಶಪ್ರೇಮ ಹೆಚ್ಚಿಸೋ ಅಂತಹ ಪೇಟ್ರಿಯಾಟಿಕ್ ಚಿತ್ರಗಳಲ್ಲಿ ಹೆಚ್ಚಾಗಿ ಕಾಣಿಸಿಕೊಂಡಿದ್ರು. ಅಂದಹಾಗೆ ನಮ್ಮ ಕನ್ನಡಿಗರಿಗೂ ಚಿರಪರಿಚಿತ ಈ ಬಾಲಿವುಡ್ ನಾನಾ. ಹೌದು.. 2010ರಲ್ಲಿ ತೆರೆಕಂಡ ಲೂಸ್‌ಮಾದ ಯೋಗಿ ನಟನೆಯ ಯಕ್ಷ ಚಿತ್ರದಲ್ಲಿ ಯೋಗಿ ತಂದೆ ಪಾತ್ರದಲ್ಲಿ ಬಣ್ಣ ಹಚ್ಚಿದ್ರು. ಮಕ್ಕಳನ್ನ ಎಷ್ಟು ಶಿಸ್ತಾಗಿ ಬೆಳೆಸಬೇಕು ಅನ್ನೋದನ್ನ ಆ ಪಾತ್ರದ ಮೂಲಕ ಪ್ರೇಕ್ಷಕರ ಮುಂದೆ ಮನೋಜ್ಞ ಅಭಿನಯ ನೀಡಿದ್ರು. ಅದೇನೇ ಇರಲಿ, ದೇಶ ಸೇವೆ ಮಾಡಿ ಬಂದಿರೋ ಈ ರಿಯಲ್ ಹೀರೋನ ವಿಡಿಯೋಗಳು ಈಗೀಗ ವೈರಲ್ ಆಗ್ತಿದ್ದು, ನಾವೊಂದು ಸೆಲ್ಯೂಟ್ ಹೊಡೆಯಲೇಬೇಕು.

Exit mobile version