ಪುಷ್ಪರಾಜ್ ಜೊತೆ ಸಾಮಿ ಸಾಮಿ ಅಂದಿದ್ದ ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ, ಇದೀಗ ಮೈಸಾ ವೆಪನ್ ಆಗಿ ಯುದ್ಧಕ್ಕೆ ಸನ್ನದ್ಧರಾಗಿದ್ದಾರೆ. ಓ ಮೈ ಗಾಡ್.. ರಶ್ಮಿಕಾ ನೆಕ್ಸ್ಟ್ ವೆಂಚರ್ ಮೈಸಾ ಟೀಸರ್ ಉರಂ ಮಾಸ್ ಆಗಿದ್ದು, ಪಾತ್ರಕ್ಕಾಗಿ ಬೆವರಿನ ಜೊತೆ ರಕ್ತ ಕೂಡ ಹರಿಸಿದ್ದಾರೆ. ಅಷ್ಟೇ ಅಲ್ಲ.. ಸೊಂಟ ಮುರಿದುಕೊಂಡು ಶೂಟಿಂಗ್ ಮಾಡಿರೋದು ಹೈಲೈಟ್. ಅದನ್ನ ಟೀಸರ್ ಸಮೇತ ರಶ್ಮಿಕಾ ಬಾಯಿಂದಲೇ ಕೇಳೋಣ ಬನ್ನಿ.
ಗೊಂಡ ಬುಡಕಟ್ಟು ಹೆಣ್ಣು ಮಗಳಾಗಿ ರಶ್ಮಿಕಾ ರಕ್ತದೋಕುಳಿ
ಯುದ್ಧಕ್ಕೆ ರೆಡಿ ‘ಮೈಸಾ’ ವೆಪನ್.. ಅಬ್ಬಬ್ಬಾ ಉರಂ ಮಾಸ್..!
ಸಕ್ಸಸ್‌ಗೆ ಕೇರ್ ಆಫ್ ಅಡ್ರೆಸ್ ಆಗಿರೋ ನ್ಯಾಷನಲ್ ಕ್ರಶ್ ರಶ್ಮಿಕಾ ಬತ್ತಳಿಕೆಯಿಂದ ಬರ್ತಿರೋ ವುಮೆನ್ ಸೆಂಟ್ರಿಕ್ ಮೂವಿ ಮೈಸಾ. ಗರ್ಲ್ ಫ್ರೆಂಡ್ ನಂತ್ರ ಮತ್ತೊಮ್ಮೆ ಮಹಿಳಾ ಪ್ರಧಾನ ಚಿತ್ರಕ್ಕೆ ಕೈ ಹಾಕಿರೋ ರಶ್ಮಿಕಾ, ಈ ಬಾರಿ ಸಿನಿಮಾಗಾಗಿ ಬೆವರಿನ ಜೊತೆ ರಕ್ತ ಕೂಡ ಸುರಿಸಿದ್ದಾರೆ. ಹೌದು.. ಗೊಂಡ ಬುಡಕಟ್ಟು ಜನಾಂಗದ ಹೆಣ್ಣು ಮಗಳಾಗಿ ಕಾಣಿಸಿಕೊಂಡಿರೋ ರಶ್ಮಿಕಾ, ತಂದೆ ಹಾಗೂ ಸತ್ಯದ ಅನ್ವೇಷಣೆಗಾಗಿ ದೊಡ್ಡ ಯುದ್ಧವನ್ನೇ ಮಾಡ್ತಾರೆ. ಮೈಸಾ ಟೀಸರ್ ಸದ್ಯ ಟಾಕ್ ಆಫ್ ದಿ ಟೌನ್ ಆಗಿದೆ.
ಇಷ್ಟು ದಿನ ಗ್ಲಾಮರ್, ಕ್ಲಾಸ್ ಹಾಗೂ ಎಮೋಷನಲ್ ಪಾತ್ರಗಳಿಂದ ಎಲ್ಲರ ಗಮನ ಸೆಳೆದಿದ್ದ ರಶ್ಮಿಕಾ, ಇದೀಗ ಮಾಸ್ ಅವತಾರದಲ್ಲಿ ಮೈಸಾ ಆಗಿ ಕಾಳಿ ಅವತಾರ ತಾಳಿದಂತಿದೆ. ಇದು ರವೀಂದ್ರ ಪುಲ್ಲೆ ನಿರ್ದೇಶನದ ಪೀರಿಯಾಡಿಕ್ ಆ್ಯಕ್ಷನ್ ಡ್ರಾಮಾ. ಈಕೆ ರಕ್ತ ಸುರಿಸಿ ಪಾತ್ರಕ್ಕಾಗಿ ಅಷ್ಟು ಡೆಡಿಕೇಟೆಡ್ ಆಗಿ ಕಾರ್ಯ ನಿರ್ವಹಿಸಿರುವುದಲ್ಲದೆ, ರಕ್ತದೋಕುಳಿಯನ್ನೇ ಹರಿಸಿದ್ದಾರೆ. ಒಂದೊಂದು ದೃಶ್ಯ ಕೂಡ ಮೈ ಝುಮ್ಮೆನಿಸುವಂತಿವೆ.
ದೇಹವನ್ನ ಸಿಕ್ಕಾಪಟ್ಟೆ ಹುರಿಗೊಳಿಸಿ, ದೈಹಿಕ ಹಾಗೂ ಮಾನಸಿಕವಾಗಿ ಒಳ್ಳೆಯ ಟ್ರಾನ್ಸ್‌ಫಾರ್ಮೇಷನ್ ಮಾಡಿಕೊಂಡಿದ್ದಾರೆ ರಶ್ಮಿಕಾ. ಇಂಟರೆಸ್ಟಿಂಗ್ ಅಂದ್ರೆ ಸೊಂಟ ಮುರಿದುಕೊಂಡೆಲ್ಲಾ ಮೈಚಳಿ ಬಿಟ್ಟು ಪರ್ಫಾಮ್ ಮಾಡಿರೋದು ಗಮನಾರ್ಹ ವಿಷಯ.
ರಶ್ಮಿಕಾ ಸೊಂಟದ ವಿಷ್ಯ ರಿವೀಲ್.. ಮುರಿದಿದ್ದೇಗೆ ಗೊತ್ತಾ..?!
ಬೆಟ್ಟದಲ್ಲಿ ರಿಯಲ್ ಓಟ.. 8 ಗಂಟೆ ಅಂಡರ್ ವಾಟರ್ ಫೈಟ್
ಮೈಸಾ ಸಿನಿಮಾದ ಟೀಸರ್ ಲಾಂಚ್ ಇವೆಂಟ್‌ನಲ್ಲಿ ಮಾತಾಡ್ತಾ.. ಈ ಸಿನಿಮಾದಲ್ಲಿ ನನ್ನ ಲೈಫೇ ಇದೆ ಎಂದ ರಶ್ಮಿಕಾ ಮಂದಣ್ಣ, ಕೇರಳದ ರೋಮಾಂಚಕ ಶೂಟಿಂಗ್ ಕ್ಷಣಗಳನ್ನ ನೆನೆದರು. ಈ ಡೈರೆಕ್ಟರ್ ಜೊತೆ ಕೆಲಸ ಮಾಡೋದು ಬಹಳ ಕಷ್ಟ. ಯಾಕಂದ್ರೆ ಎಲ್ಲವೂ ರಿಯಲಿಸ್ಟಿಕ್ ಆಗಿ ಕಾಣಲು ರಿಯಲ್ ಆಗಿ ಬೇಕು ಅಂತಾರೆ. ಬೆಟ್ಟದ ಮೇಲೆ ಓಡಿಸಿದ್ದಾರೆ. 8 ಗಂಟೆಗಳ ಕಾಲ ಅಂಡರ್‌ವಾಟರ್ ಶೂಟಿಂಗ್ ಮಾಡಿಸಿದ್ದಾರೆ. ಅಷ್ಟೊತ್ತು ನೀರಲ್ಲಿ ಇರೋಕೆ ನನ್ನನ್ನೇನು ಮೀನು ಅಂದ್ಕೊಂಡ್ರಾ ಇವರು ಅಂತೆಲ್ಲಾ ಮೈಸಾ ಸಾಹಸ ದೃಶ್ಯಗಳ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ ರಶ್ಮಿಕಾ.
ಇದೇ ವೇಳೆ ಹಿಪ್ ಟೆಂಡನ್ ಮಾಡಿಕೊಂಡಿರೋ ರಶ್ಮಿಕಾ.. ಆ ರೋಚಕ ಇನ್ಸಿಡೆಂಟ್‌ನ ವಿವರಿಸಿದ್ರು. ಅಂದ್ರೆ ಡ್ಯಾನ್ಸ್ ಮಾಡೋ ವೇಳೆ ತನ್ನ ಸೊಂಟ ಹೇಗೆ ಮುರಿಯಿತು ಅಂತ ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಫುಟ್ಬಾಲ್ ಪ್ಲೇಯರ್ಸ್‌ಗೆ ಹೀಗೆ ಆಗೋದೊಂಟು.. ಆದ್ರೆ ಆ್ಯಕ್ಟರ್ಸ್‌ಗೆ ಅಲ್ಲ ಅನ್ನೋದನ್ನ ಡಾಕ್ಟರ್ ಹೇಳಿದ್ದನ್ನ ಸ್ಮರಿಸಿದ್ರು. 12 ದಿನಗಳ ಕಾಲ ಶೂಟಿಂಗ್ ಬಾಕಿಯಿದೆ. ಸೊಂಟ ಮುರಿದ ಹಿನ್ನೆಲೆ ಗ್ಯಾಪ್ ಆಯ್ತು. ಇನ್ನೂ 3 ವಾರ ಬೇಕು ನನ್ನ ಸೊಂಟ ಫಿಕ್ಸ್ ಆಗೋಕೆ ಎಂದಿದ್ದಾರೆ.
ಇದೇ ನವೆಂಬರ್ 27ಕ್ಕೆ ಮೈಸಾ ಮೂವಿ ತೆರೆಗಪ್ಪಳಿಸುತ್ತಿದ್ದು, ತೆಲುಗಿನ ಜೊತೆ ತಮಿಳು, ಮಲಯಾಳಂ, ಕನ್ನಡ ಹಾಗೂ ಹಿಂದಿಯಲ್ಲೂ ಈ ಚಿತ್ರ ಪ್ರೇಕ್ಷಕರನ್ನ ರಂಜಿಸಲಿದೆ. ಇಲ್ಲಿ ಮನರಂಜನೆಗಿಂತ ಅಸಹಾಯಕ ಹೆಣ್ಣು ಮಗಳ ಅಳಲು, ತೊಳಲಾಟಗಳಿವೆ. ಪೊಲೀಸ್, ಕೋರ್ಟ್, ಅಷ್ಟೇ ಅಲ್ಲ.. ತನ್ನವರೇ ತನ್ನ ವಿರುದ್ಧ ನಿಂತಾಗ ಯುದ್ಧ ಒಂದೇ ಆಕೆಯ ಮುಂದಿರೋ ಆಯ್ಕೆಯಾಗುತ್ತೆ. ಒಟ್ಟಾರೆ ಇದು ಹೈ ವೋಲ್ಟೇಜ್ ಆ್ಯಕ್ಷನ್ ವಿತ್ ಎಮೋಷನಲ್ ರೈಡ್ ಆಗಿ ಹೊರಹೊಮ್ಮುತ್ತಿದೆ.
