ಕೊರಗಜ್ಜದಲ್ಲಿ ಗುಳಿಗ ನರ್ತನ.. ಇದು ಮತ್ತೊಂದು ದಂತಕಥೆ

ಉಗ್ರಭಯಂಕರ, ರಕ್ತದಾಹದ ದೈವ ಗುಳಿಗನ ಮಹಿಮೆ ನೋಡಿ

Untitled design (65)

ಕೊರಗಜ್ಜ ದೈವದ ಮೇಲೆ ಮಹತ್ವದ ಪ್ಯಾನ್ ಇಂಡಿಯಾ ಸಿನಿಮಾ ತಯಾರಾಗ್ತಿದ್ದು, ಇತ್ತೀಚೆಗೆ ಫಸ್ಟ್ ಲುಕ್ ಟೀಸರ್ ಎಲ್ಲರ ಹುಬ್ಬೇರಿಸಿತ್ತು. ಆದ್ರೀಗ ಕೊರಗಜ್ಜ ಆಲ್ಬಮ್‌‌ನಿಂದ ಹಾಡೊಂದು ಹೊರಬಿದ್ದಿದೆ. ಗುಳಿಗ ಗುಳಿಗ ಅನ್ನೋ ದೃಶ್ಯವೈಭವದ ಹಾಡಲ್ಲಿ ನೇತ್ರಾವತಿ ನೆತ್ತರು, ಗುಳಿಗ ನರ್ತನ ನೋಡ್ತಿದ್ರೆ ಇದು ಕಾಂತಾರ ರೀತಿ ಮತ್ತೊಂದು ದಂತಕಥೆ ಆಗೋದ್ರಲ್ಲಿ ಯಾವುದೇ ಸಂದೇಹವಿಲ್ಲ.

ಕಾಂತಾರ ಹಾಗೂ ಕಾಂತಾರ-1 ಚಿತ್ರದ ಬಳಿಕ ಗುಳಿಗ ದೈವ, ಪಂಜುರ್ಲಿ ದೈವದ ಮಹಿಮೆ ಇಡೀ ವಿಶ್ವಕ್ಕೆ ಪಸರಿಸಿತು. ಆ ಚಿತ್ರಗಳು ಹಣ ಮಾಡಿದ್ವು ಅನ್ನೋದಕ್ಕಿಂತ ಹೆಚ್ಚಾಗಿ ಕರಾವಳಿ ದೈವಗಳ ಮೂಲ, ಆಚಾರ, ಅಸಲಿ ಕಥೆಯನ್ನ ಪರಿಚಯಿಸಿದವು. ಇದೀಗ ಅಂಥದ್ದೇ ಬಗೆಯ ಮತ್ತೊಂದು ಮಹತ್ವದ ಸಿನಿಮಾ ಬರ್ತಿದೆ. ಅದೇ ಕೊರಗಜ್ಜ. ಈ ಚಿತ್ರ ಕೂಡ ಬರೋಬ್ಬರಿ ಐದು ಭಾಷೆಗಳಲ್ಲಿ ಪ್ಯಾನ್ ಇಂಡಿಯಾ ತೆರೆಗಪ್ಪಳಿಸುತ್ತಿದೆ.

ಕೊರಗಜ್ಜದಲ್ಲಿ ಗುಳಿಗ ನರ್ತನ.. ಇದು ಮತ್ತೊಂದು ದಂತಕಥೆ

ಉಗ್ರಭಯಂಕರ, ರಕ್ತದಾಹದ ದೈವ ಗುಳಿಗನ ಮಹಿಮೆ ನೋಡಿ

ಇತ್ತೀಚೆಗೆ ಕೊಗರಜ್ಜ ಚಿತ್ರದ ಫಸ್ಟ್‌‌ಲುಕ್ ಟೀಸರ್ ಲಾಂಚ್ ಆಗಿತ್ತು. ಇದೀಗ ಅದ್ರ ಆಲ್ಬಮ್‌ನ ಫಸ್ಟ್ ಸಾಂಗ್ ರಿಲೀಸ್ ಆಗಿದೆ. ಗುಳಿಗ ಗುಳಿಗ ಅನ್ನೋ ಈ ಹಾಡು ನಿಜಕ್ಕೂ ಕಣ್ಮನ ತಣಿಸುತ್ತಿದೆ. ಮೈ ರೋಮಾಂಚನಗೊಳಿಸ್ತಿದೆ. ತ್ರಿವಿಕ್ರಮ ಸಿನಿಮಾಸ್ ಮತ್ತು ಸಕ್ಸಸ್ ಫಿಲ್ಮ್ಸ್ ಬ್ಯಾನರ್‌‌ನಡಿ, ಉಗ್ರಭಯಂಕರ, ರಕ್ತದಾಹದ ಪವರ್‌‌ಫುಲ್ ದೈವ ಗುಳಿಗನ ಕುರಿತಾದ ಹಾಡು ಇದಾಗಿದೆ. ನಿರ್ದೇಶಕ ಸುಧೀರ್ ಅತ್ತಾವರ್ ಅವ್ರೇ ಬರೆದಿರುವ ಗುಳಿಗ ಗುಳಿಗ ಗುಳಿಗ.. ಘೋರ ಗುಳಿಗ ಅನ್ನೋ ಱಪ್ ಮಿಶ್ರಿತ ಹಾಡು ಎಲ್ಲರ ಕಿವಿಯಲ್ಲೂ ಮಾರ್ದನಿಸುತ್ತಿದೆ.

ದಕ್ಷಿಣ ಭಾರತದ ಖ್ಯಾತ ಸಂಯೋಜಕ ಗೋಪಿಸುಂದರ್ ಸಂಗೀತಕ್ಕೆ ಬಾಲಿವುಡ್ ಫೇಮಸ್ ಗಾಯಕ ಜಾವೆದ್ ಆಲಿ ಜೊತೆ ಸುಧೀರ್ ಅತ್ತಾವರ್ ಅವರೇ ಇದನ್ನ ಹಾಡಿರೋದು ಮತ್ತೊಂದು ಹೈಲೈಟ್. ಕೆಲವು ಭಾಗಗಳಲ್ಲಿ ಗೋಪಿ ಸುಂದರ್ ಕೂಡಾ ಧ್ವನಿ ನೀಡಿದ್ದಾರೆ. ನೆಲವುಲ್ಲ ಸಂಕೆಯ 24ನೆಯ ಮಗನಾಗಿ ಹುಟ್ಟಿದ ಗುಳಿಗ, ಹುಟ್ಟುವಾಗಲೇ ಭಯಂಕರ ಹಸಿವಿನಿಂದಾಗಿ  ಸಾವಿರ ಕೋಳಿ, ಸಾವಿರ‌ ಕುದುರೆಯ ರಕ್ತ ಹೀರಿದರೂ ಹಸಿವು ನಿಲ್ಲದಿದ್ದಾಗ,  ಶ್ರೀಮನ್ನಾರಾಯಣ ದೇವರೇ ತಮ್ಮ ಕಿರುಬೆರಳಿನಿಂದ ಅವ್ರ ರಕ್ತವನ್ನೆಲ್ಲಾ ಹೀರಿದ ಅನ್ನೋ ಜನಪದ ಕಥೆ ಗುಳಿಗನ ಹುಟ್ಟಿನ ಬಗ್ಗೆ ಹೇಳುತ್ತೆ.

ಗೋಪಿ ಸುಂದರ್ ಸಂಗೀತ.. ಸುಧೀರ್ ಅತ್ತಾವರ್ ಸಾಹಿತ್ಯ

ಕಾಂತಾರ, ಕಾಂತಾರ-1 ಬಳಿಕ ಅಂಥದ್ದೇ ಶೈಲಿಯ ದೈವ ಚಿತ್ರ

ಇಂತಹ ಘೋರ ಗುಳಿಗನ ಕೋಲ ಸೇವೆಯೂ ಘನ ಘೋರ ರೂಪದಲ್ಲಿ ತುಳುನಾಡಿನಾದ್ಯಂದ ಆಚರಿಸಲ್ಪಡುತ್ತಿದೆ. ಈ ಘೋರ ಗುಳಿಗನ ರಕ್ತ ಹೀರುವ ರುದ್ರ ನರ್ತನವನ್ನು ನೋಡಲಾಗದೆ ಭಯಭೀತಿಯಿಂದ ಅನೇಕರು ಕಣ್ಣು ಮುಚ್ಚಿಕೊಳ್ಳುವುದೂ ಇದೆ. ರಕ್ತ ದಾಹದಿಂದ ಎಲ್ಲೆಂದರಲ್ಲಿ ಓಡುವ ಗುಳಿಗನನ್ನು ಹಿಡಿಯಲು ಹರಸಾಹಸ ಮಾಡುವ ದೃಶ್ಯವಂತೂ ಮೈ ಜುಮ್ಮೆನಿಸುತ್ತದೆ.

ರುದ್ರಭಯಂಕರ ಗುಳಿಗ ದೈವ ಪಂಜುರ್ಲಿ ಜೊತೆ ಸೇರಿ ಕೊರಗಜ್ಜನನ್ನು ಭೇಟಿಯಾಗುವ ಸನ್ನಿವೇಶವು ಚಿತ್ರದಲ್ಲಿ ಮೂಡಿಬರಲಿದೆ. ಗುಳಿಗ ದೈವದ ರಣ ಭಯಂಕರ ನರ್ತನವನ್ನು ಹಾಲಿವುಡ್-ಬಾಲಿವುಡ್‌‌ನ ಡಾನ್ಸರ್ ಕಮ್ ಕೊರಿಯೋಗ್ರಾಫರ್ ಸಂದೀಪ್ ಸೋಪರ್ಕರ್ ನಿರ್ವಹಿಸಿದ್ದಾರೆ. ಗುಳಿಗ ದೈವದ ರುದ್ರನರ್ತನದ ಕೊರಿಯೋಗ್ರಾಫಿ ಸ್ವತಃ ಸೋಪರ್ಕರ್ ಮಾಡಿದ್ದು, ಪಂಜುರ್ಲಿಯಾಗಿ ಸರ್ದಾರ್ ಸತ್ಯ ಮಿಂಚಿದ್ದಾರೆ.

ಮಂಗಳೂರಿನ ಸೋಮೇಶ್ವರದ ಕಡಲ ಕಿನಾರೆಯಲ್ಲಿ ನೂರು ಫೀಟ್‌ನ ಎರಡು ಕ್ರೇನ್‌ಗಳ ಸಹಾಯದಿಂದ 5 ಕ್ಯಾಮೆರಾಗಳ ಮೂಲಕ ಚಿತ್ರಿಸೋ ವೇಳೆ ರೌಡಿಗಳ ಗ್ಯಾಂಗ್ ಎರಡು  ದಿನ ದಾಳಿಮಾಡಿ, ಚಿತ್ರತಂಡಕ್ಕೆ ಅಪಾರವಾದ ನಷ್ಟ ಕೂಡ ಉಂಟು ಮಾಡಿತ್ತು. ಎರಡನೆಯ ದಿನ ನಿರ್ಮಾಪಕ ತ್ರಿವಿಕ್ರಮರವರು ಸುಮಾರು 25 ಜನ ಬೌನ್ಸರ್‌‌ಗಳನ್ನು ನೇಮಿಸಿದ್ದರು‌. ಕಾರ್ಯಕಾರಿ ನಿರ್ಮಾಪಕ ವಿದ್ಯಾಧರ್ ಶೆಟ್ಟಿ ಪರಿಪರಿಯಾಗಿ ರೌಡಿಗಳ ಮನ ಒಲಿಸಿದರೂ ಕೇಳದ ಗೂಂಡಾಗಳು ಶೂಟಿಂಗ್ ಸ್ಥಗಿತಗೊಳಿಸಿ ವಿಕೃತಿ ಮೆರೆದಿದ್ದರು.

ನಿರ್ಮಾಪಕ ತ್ರಿವಿಕ್ರಮ ಸಪಲ್ಯ ಎದೆಗುಂದದೆ, ಪೊಲೀಸರ ಸರ್ಪಗಾವಲಿನಲ್ಲಿ ಮೂರನೇ ಭಾರಿ ಮತ್ತದೇ ಸೋಮೇಶ್ವರ ಕಡಲ ಕಿನಾರೆಯಲ್ಲಿ ಗುಳಿಗ ಹಾಡಿನ ಚಿತ್ರೀಕರಣ ಮುಗಿಸುವಲ್ಲಿ ಯಶಸ್ವಿಯಾದರು. ಇಷ್ಟೆಲ್ಲಾ ಅಡೆತಡೆಗಳ ನಡುವೆ ತಯಾರಾಗಿರೋ ಈ ಹಾಡು ನಿಜಕ್ಕೂ ಸಖತ್ ಥ್ರಿಲ್ಲಿಂಗ್ ಆಗಿದೆ.

 

 

 

Exit mobile version