‘ಪ್ರೇಮದ ಊರಲಿ’ ರುಕ್ಮಿಣಿಯೊಂದಿಗೆ ‘Mr. ಜಾಕ್’ ಕಮಿಂಗ್..!

ಮಸ್ತ್ ಮನರಂಜನೆ, ಮೆಸೇಜ್ ಜೊತೆ ಗುರುನಂದನ್ ಕಂಬ್ಯಾಕ್

Untitled design 2026 10 10T140443.511

ಈ ವರ್ಷದ ಸೀಕ್ರೆಟ್ ಹಿಟ್.. ಬಾಕ್ಸ್ ಆಫೀಸ್ ತೂಫಾನ್ ಪ್ರೇಮದ ಊರಲಿ ಚಿತ್ರದ ಚೆಲುವೆ ರುಕ್ಮಿಣಿ ಜೊತೆ ಮಿಸ್ಟರ್ ಜಾಕ್ ಬರೋಕೆ ತುದಿಗಾಲಲ್ಲಿ ನಿಂತಿದ್ದಾರೆ. ಯೆಸ್.. ಸಿಂಗಲ್ ಟೀಸರ್ ಹಾಗೂ ಸಾಂಗ್‌ನಿಂದ ಸದ್ದು ಮಾಡ್ತಿರೋ ಫಸ್ಟ್ ಱಂಕ್ ರಾಜು ಖ್ಯಾತಿಯ ಗುರುನಂದನ್ ಒಂದೊಳ್ಳೆ ಮೆಸೇಜ್ ಜೊತೆ ಮನರಂಜನೆಯ ರಸಪಾಕ ಉಣಬಡಿಸೋಕೆ ಬರ್ತಿದ್ದಾರೆ. ಆ ಕುರಿತ ಒಂದು ಸ್ಪೆಷಲ್ ಸ್ಟೋರಿ ಇಲ್ಲಿದೆ ನೋಡಿ.

ಜಾನಕಿ ರಾಮ್ ಅಲಿಯಾಸ್ ಮಿಸ್ಟರ್ ಜಾಕ್ ಆಗಿ ಫಸ್ಟ್ ಱಂಕ್ ರಾಜು, ರಾಜು ಕನ್ನಡ ಮೀಡಿಯಂ ಹಾಗೂ ರಾಜು ಜೇಮ್ಸ್ ಬಾಂಡ್ ಖ್ಯಾತಿಯ ನಟ ಗುರುನಂದನ್ ಭರ್ಜರಿ ಕಂಬ್ಯಾಕ್ ಮಾಡ್ತಿದ್ದಾರೆ. ಈ ಬಾರಿಯೂ ಸಹ ವಿಭಿನ್ನ ಕಥಾಹಂದರದ ಜೊತೆ ಒಂದೊಳ್ಳೆ ಮೆಸೇಜ್‌ನೊಂದಿಗೆ ಮಸ್ತ್ ಮನರಂಜನೆ ಹೊತ್ತು ಪ್ರೇಕ್ಷಕರ ಮುಂದೆ ಬರ್ತಿದ್ದಾರೆ. ನವೆಂಬರ್ ತಿಂಗಳಾಂತ್ಯಕ್ಕೆ ಮಿಸ್ಟರ್ ಜಾಕ್ ತೆರೆಗಪ್ಪಳಿಸಲಿದ್ದು.. ಈಗಾಗ್ಲೇ ಟೀಸರ್ ಹಾಗೂ ಟೈಟಲ್ ಸಾಂಗ್ ಎಲ್ಲರ ಗಮನ ಸೆಳೆದಿದೆ.

ಹೌದು.. ಮಿಸ್ಟರ್ ಜಾಕ್ ಟೀಸರ್‌‌ನಿಂದ ಹೀರೋ ಒಬ್ಬ ಸ್ಟ್ಯಾಂಡಪ್ ಕಮೆಡಿಯನ್ ಅನ್ನೋದು ಕ್ಲಿಯರ್ ಆಗಿ ಗೊತ್ತಾಗ್ತಿದೆ. ಆತನ ಲೈಫ್‌‌ನಲ್ಲಿ ನಡೆಯೋ ಪ್ರೀತಿ, ಪ್ರೇಮ.. ಜೆಂಝಿಗಳ ಫಜೀತಿಗಳ ಕುರಿತ ಕಥೆ ಇದಾಗಿದೆ. ಸುಮಂತ್ ಗೌಡ ಅನ್ನೋ ಯಂಗೆಸ್ಟ್ ಡೈರೆಕ್ಟರ್ ಇದಕ್ಕೆ ಆ್ಯಕ್ಷನ್ ಕಟ್ ಹೇಳಿದ್ದು, ಆತನ ಜೀವನಾನುಭವಗಳೇ ಟೈಟಲ್ ಸಾಂಗ್‌‌ನಲ್ಲಿ ಎಳೆ ಎಳೆಯಾಗಿ ಅನಾವರಣಗೊಂಡಿರೋದು ವಿಶೇಷ. ಕಿರಣ್ ರವೀಂದ್ರನಾಥ್ ಸಂಗೀತ ಸಂಯೋಜನೆಯ ಹಾಡುಗಳು ಒಂದಕ್ಕಿಂತ ಒಂದು ವಿಭಿನ್ನವಾಗಿದ್ದು, ಮೊದಲ ಸಾಂಗ್ ಜೆಂಝಿಗಳ ಹೃದಯ ಗೆದ್ದಿದೆ.

ಸುಮಂತ್ ಬೆಂಗಳೂರಲ್ಲೇ ಹುಟ್ಟಿ ಬೆಳೆದವರಾಗಿದ್ದು, ಮೂಲತಃ ಇಂಜಿನಿಯರ್. ಆದ್ರೆ ತಮ್ಮ ಏರಿಯಾದಲ್ಲಿ ರಾಜರತ್ನ ಪುನೀತ್ ರಾಜ್‌ಕುಮಾರ್ ಅವರ ಅಜಯ್ ಸಿನಿಮಾದ ಶೂಟಿಂಗ್ ನೋಡಿ, ಪ್ರೇರಿತರಾದ ಸುಮಂತ್, ಅಂದಿನಿಂದಲೇ ಸಿನಿಮಾ ಡೈರೆಕ್ಟರ್ ಆಗುವ ಕನಸು ಕಾಣ್ತಾರೆ. ದಶಕದಿಂದ ಸಾಕಷ್ಟು ಚಿತ್ರಗಳಿಗೆ ಕೆಲಸ ಮಾಡ್ತಾರೆ. ಕೆಮಿಸ್ಟ್ರಿ ಆಫ್ ಕರಿಯಪ್ಪ ಚಿತ್ರಕ್ಕೆ ಕೆಲಸ ಮಾಡಿದ್ದ ಸುಮಂತ್.. ಇದೀಗ ಮಿಸ್ಟರ್ ಜಾಕ್ ಚಿತ್ರದಿಂದ ಸ್ವತಂತ್ರ ನಿರ್ದೇಶಕರಾಗಿ ಹೊರಹೊಮ್ಮುತ್ತಿದ್ದಾರೆ.

ಮಿಸ್ಟರ್ ಜಾಕ್ ಟೀಸರ್ ಸಖತ್ ಇಂಪ್ರೆಸ್ಸೀವ್ ಹಾಗೂ ಇಂಟರೆಸ್ಟಿಂಗ್ ಆಗಿದ್ದು, ಗುರುನಂದನ್ ನಟನೆ ಜೊತೆ ಅದ್ಧೂರಿಯಾಗಿ ನಿರ್ಮಾಣ ಕೂಡ ಮಾಡಿದ್ದಾರೆ. ಕಳಸ ಬಳಿ ಇರೋ ಮೈದಾಡಿಯ ಸುಂದರ ಪ್ರಕೃತಿ ಸೊಬಗಿನಲ್ಲಿ ದುನಿಯಾ ವಿಜಯ್ ಅವ್ರ ಫೇವರಿಟ್ ಸಿನಿಮಾಟೋಗ್ರಾಫರ್ ಶಿವಸೇನ ಕ್ಯಾಮೆರಾ ಕಣ್ಣಲ್ಲಿ ಈ ಸಿನಿಮಾ ಸೆರೆಯಾಗಿದೆ. ವಿಶೇಷ ಅಂದ್ರೆ ಸದ್ಯ ಎಲ್ಲರ ಮನೆ ಮಾತಾಗಿರೋ ಪ್ರೇಮದ ಊರಲಿ ಚೆಲುವೆ ರುಕ್ಮಿಣಿ ಅಲಿಯಾಸ್ ತಪಸ್ವಿನಿ ಪೂಣಚ್ಚ ಈ ಚಿತ್ರದ ನಾಯಕನಟಿ.

ಗುರುನಂದನ್ ಹಾಗೂ ತಪಸ್ವಿನಿ ಪೂಣಚ್ಚ ಕೆಮಿಸ್ಟ್ರಿ ಸಖತ್ ಇಂಪ್ರೆಸ್ಸೀವ್ ಆಗಿದ್ದು, ಇಲ್ಲಿ ಮದ್ವೆ, ಫಸ್ಟ್ ನೈಟ್, ಪ್ರೀತಿ, ಪ್ರಣಯ ಸೇರಿದಂತೆ ಸಾಕಷ್ಟು ಅಂಶಗಳು ಅನಾವರಣಗೊಳ್ಳಲಿವೆ. ಒಟ್ಟಾರೆ ಇಡೀ ಫ್ಯಾಮಿಲಿ ಕೂತು ನೋಡುವಂತಹ ಒಂದೊಳ್ಳೆ ಕೌಟುಂಬಿಕ ಚಿತ್ರವಾಗಿ ಮಿಸ್ಟರ್ ಜಾಕ್, ತಿಳಿಹಾಸ್ಯದೊಂದಿಗೆ ಸೀರಿಯಸ್ ವಿಷಯಗಳನ್ನ ಭಾವನಾತ್ಮಕವಾಗಿ ಪ್ರಸ್ತುತ ಪಡಿಸಲಿದ್ದಾರೆ. ನವೆಂಬರ್ ತಿಂಗಳಾಂತ್ಯಕ್ಕೆ ತೆರೆಗೆ ಬರೋಕೆ ಸಜ್ಜಾಗಿರೋ ಮಿಸ್ಟರ್ ಜಾಕ್, ಗುರುನಂದನ್ ಕರಿಯರ್‌ನ ಗೇಮ್ ಚೇಂಜರ್ ಮೂವಿ ಆಗೋ ಲಕ್ಷಣ ತೋರಿದೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್

Exit mobile version