ಕಿರುತೆರೆಯ ಸಂಸ್ಕಾರವಂತ ಸೊಸೆ, ಸೀರೆಯಲ್ಲಿ ದೇವತೆಯಂತೆ ಕಂಗೊಳಿಸುತ್ತಿದ್ದ ಚಂದನದ ಬೊಂಬೆ ದಿಢೀರನೆ ಬಿಕಿನಿ ತೊಟ್ಟು ನಿಂತರೆ ಹೇಗಿರುತ್ತೆ..? ಯೆಸ್.. ರಾಮಾಚಾರಿ ಸೀರಿಯಲ್‌ನ ಚಾರು ಖ್ಯಾತಿಯ ಮೌನ ಗುಡ್ಡೆಮನೆ ಹೊಸ ಅವತಾರ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಸಂಚಲನ ಸೃಷ್ಟಿಸಿದೆ. ಸಾಂಪ್ರದಾಯಿಕ ಉಡುಗೆಯಲ್ಲಿ ಕನ್ನಡಿಗರ ಮನಗೆದ್ದಿದ್ದ ಈ ನಟಿ, ಈಗ ಯಾರೂ ಊಹಿಸದಷ್ಟು ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ.
- ಮಡಿ, ಮೈಲಿಗೆ ಮೀರಿದ ಮೌನ ಗುಡ್ಡೆಮನೆ.. ಹಸಿಬಿಸಿ ಚರ್ಚೆ
- ಬಿಕಿನಿ ತೊಟ್ಟು ಪೋಸ್ ನೀಡಿದ ನಟಿ.. ನೆಟ್ಟಿಗರು ಫುಲ್ ಗರಂ
- ಕಮೆಂಟ್ ಬಾಕ್ಸ್‌ನಲ್ಲಿ ಕೋಲ್ಡ್ ವಾರ್.. ಪಡ್ಡೆ ಹೈಕ್ಳು ಫಿದಾ..!
- ಕೊರಿಯನ್ ಸೀರೀಸ್ ಕಿಕ್.. ‘ಲವ್ ಪಂಚ್’ ಕೊಡ್ತು ಶಾಕ್
ಕಲರ್ಸ್ ಕನ್ನಡ ವಾಹಿನಿಯ ರಾಮಾಚಾರಿ ಸೀರಿಯಲ್‌ನಲ್ಲಿ ಸಾವಿರಕ್ಕೂ ಹೆಚ್ಚು ಎಪಿಸೋಡ್‌ಗಳಲ್ಲಿ ತುಂಬು ಉಡುಗೆ ತೊಟ್ಟು, ಹೋಮ್ಲಿ ಲುಕ್‌ನಿಂದಲೇ ಇಡೀ ಕರ್ನಾಟಕದ ಮನೆಮನ ಗೆದ್ದಿದ್ದವರು ಈ ಮೌನ ಗುಡ್ಡೆಮನೆ. ಆ ಬಳಿಕ ಕೃಷ್ಣ- ರುಕ್ಕು ಅಂತ ಸಾಫ್ಟ್ ಆಗಿ ಮಿಂಚಿದ್ದ ಈ ಕರಾವಳಿ ಬೆಡಗಿ, ಇನ್ಸ್ಟಾಗ್ರಾಮ್‌ನಲ್ಲೂ ಸೀರೆ ಉಟ್ಟುಕೊಂಡೇ ಪಡ್ಡೆಹೈಕ್ಳ ಮನಸ್ಸು ಕದ್ದಿದ್ದರು. ನಂತ್ರ ಕುಲದಲ್ಲಿ ಕೀಳ್ಯಾವುದೋ ಸಿನಿಮಾದಿಂದ ಬೆಳ್ಳಿತೆರೆಗೆ ಎಂಟ್ರಿ ಕೊಟ್ಟ ಮೌನ, ಸಿನಿಮಾ ಸಕ್ಸಸ್ ಸಿಗದೇ ಸೈಲೆಂಟ್ ಆಗೋದ್ರು.
ಆದರೀಗ ಈ ಸಂಸ್ಕಾರವಂತ ಚೆಲುವೆ ತನ್ನ ಹಳೆಯ ಇಮೇಜ್‌ನ ಕಂಪ್ಲೀಟ್ ಆಗಿ ಪುಡಿಪುಡಿ ಮಾಡಿದ್ದಾರೆ ಅನ್ನೋದು ನೆಟ್ಟಿಗರ ಅಭಿಪ್ರಾಯ. ಯಾಕಂದ್ರೆ ಯಾರೂ ಕನಸಿನಲ್ಲೂ ಯೋಚಿಸದ ರೇಂಜ್‌ಗೆ ಬೋಲ್ಡ್ ಅವತಾರದಲ್ಲಿ ಇಡೀ ಕಿರುತೆರೆ ಇಂಡಸ್ಟ್ರಿಗೇ ಶಾಕ್ ಟ್ರೀಟ್ಮೆಂಟ್ ಕೊಟ್ಟಿದ್ದಾರೆ ಚೆಲುವೆ ಮೌನ.
ಸದ್ಯ ಮೌನ ಗುಡ್ಡೆಮನೆ ಬುಲೆಟ್ ಮೈಕ್ರೋ ಡ್ರಾಮಾ ಸೀರೀಸ್ ಅನ್ನೋ ಹೊಸ ಟ್ರೆಂಡ್‌ಗೆ ಕೈ ಹಾಕಿದ್ದಾರೆ. ಕೊರಿಯಾದಲ್ಲಿ ಧೂಳೆಬ್ಬಿಸಿರೋ ಕೇವಲ ಒಂದು ನಿಮಿಷದ ಶಾರ್ಟ್ ಎಪಿಸೋಡ್‌ಗಳ ಕ್ರೇಜ್, ಈಗ ಭಾರತಕ್ಕೂ ಬಂದಿದೆ. ಇತ್ತೀಚೆಗಷ್ಟೇ ವಿಧಿವಶರಾದ ಕಿರುತೆರೆ ಲೋಕದ ಕಿಂಗ್, ನಟ, ನಿರ್ದೇಶಕ ದಿಲೀಪ್ ರಾಜ್ ಆ್ಯಕ್ಷನ್ ಕಟ್ ಹೇಳಿರೋ ಲವ್ ಪಂಚ್ ಅನ್ನೋ ಇಂಥದ್ದೇ ಒಂದು ಶಾರ್ಟ್ ಸೀರೀಸ್‌ನಲ್ಲಿ ಮೌನ ಹಾಗೂ ಶರತ್ ಪದ್ಮನಾಭ್ ನಾಯಕ-ನಾಯಕಿಯಾಗಿ ಅಭಿನಯಿಸಿದ್ದಾರೆ. ಜಂಭದ ಹುಡುಗಿ ನಂದಿನಿಯನ್ನು ಖಡಕ್ ಹುಡುಗ ಪ್ರೀತಂ ಹೇಗೆ ಪಳಗಿಸುತ್ತಾನೆ ಅನ್ನೋದೇ ಕಥೆಯಾಗಿದ್ದು, ಇವರಿಬ್ಬರ ಆನ್-ಸ್ಕ್ರೀನ್ ಕೆಮಿಸ್ಟ್ರಿ ಈಗ ಸಖತ್ ಹೈಪ್ ಕ್ರಿಯೇಟ್ ಮಾಡಿದೆ.
ಲವ್ ಪಂಚ್ ಟೀಸರ್ ರಿಲೀಸ್ ಆಗ್ತಿದ್ದಂತೆ ಮೌನ ಗುಡ್ಡೆಮನೆ ಕೊಟ್ಟಿರೋ ಬೋಲ್ಡ್ ಪೋಸ್‌ಗಳಿಗೆ ಇಂಟರ್ನೆಟ್ ನಡುಗಿ ಹೋಗಿದೆ. ಮೌನ ಕೇವಲ ಸ್ವಿಮ್‌ಸೂಟ್ ಅಷ್ಟೇ ಅಲ್ಲ, ತೀರಾ ಬೋಲ್ಡ್ ಆದ ಬಿಕಿನಿ ತೊಟ್ಟು ಮಾದಕವಾಗಿ ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾರೆ. ಸದಾ ಸೀರೆಯಲ್ಲೇ ನೋಡ್ತಿದ್ದ ನಟಿಯನ್ನು ಈ ಹಸಿಬಿಸಿ ಅವತಾರದಲ್ಲಿ ನೋಡಿದ ನೆಟ್ಟಿಗರು ಫುಲ್ ಕೆರಳಿ ಕೆಂಡವಾಗಿದ್ದಾರೆ. “ಯಾಕಮ್ಮ ಬೇಕಿತ್ತು ಈ ರೇಂಜ್ ಎಕ್ಸ್‌ಪೋಸಿಂಗ್..? ದುಡ್ಡಿಗಾಗಿ ಇಷ್ಟು ಕೆಳಗಿಳಿಯಬೇಕಾ..? ನಿಮ್ಮಿಂದ ಇದನ್ನ ಖಂಡಿತ ನಿರೀಕ್ಷಿಸಿರಲಿಲ್ಲ” ಅಂತೆಲ್ಲಾ ಕಮೆಂಟ್ ಸೆಕ್ಷನ್‌ನಲ್ಲಿ ಹಿಗ್ಗಾಮುಗ್ಗಾ ಕ್ಲಾಸ್ ತಗೋತಿದ್ದಾರೆ.
ಒಂದೆಡೆ ಸಂಪ್ರದಾಯಸ್ಥರು, ಸೀರಿಯಲ್ ಫ್ಯಾನ್ಸ್ ಮೌನ ವಿರುದ್ಧ ಇನ್‌ಸ್ಟಾಗ್ರಾಮ್‌ನಲ್ಲಿ ಕಿಡಿ ಸಾರಿದ್ರೆ, ಇನ್ನೊಂದೆಡೆ ಪಡ್ಡೆಹೈಕಳ ಬಳಗ ಈ ಮಾದಕ ಸುಂದರಿಯ ರೂಪಕ್ಕೆ ಮನಸೋತಿದೆ. ಕಮೆಂಟ್ ಬಾಕ್ಸ್‌ನಲ್ಲಿ “ಅಬ್ಬಾ.. ಸೂಪರ್. ಹಾಟ್.. ಬೆಂಕಿ.. ಸೌಂದರ್ಯದ ಗಣಿ” ಅಂತೆಲ್ಲಾ ಹಾರ್ಟ್ ಮತ್ತು ಫೈಯರ್ ಎಮೋಜಿಗಳ ಸುರಿಮಳೆಗೈಯುತ್ತಿದ್ದಾರೆ. ನಟಿಯ ಈ ದಿಢೀರ್ ಮೇಕ್ ಓವರ್ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಬೆಂಕಿ ಮತ್ತು ಮಂಜಿನ ನಡುವಿನ ಹಸಿಬಿಸಿ ಹೋರಾಟದಂತೆ ಜಿದ್ದಾಜಿದ್ದಿನ ಚರ್ಚೆಗೆ ದಾರಿ ಮಾಡಿಕೊಟ್ಟಿದೆ.
ಸೀರಿಯಲ್‌ನಲ್ಲಿ ದೇವತೆ ತರಹ ಕಾಣಿಸಿಕೊಂಡು, ರಿಯಲ್ ಲೈಫ್‌ನಲ್ಲಿ ಬಿಕಿನಿ ತೊಟ್ಟಾಗ ನಟಿಯರು ಟ್ರೋಲ್ ಆಗೋದು ಇದೇ ಮೊದಲೇನಲ್ಲ. ಮಡಿ-ಮೈಲಿಗೆಯ ಎಲ್ಲಾ ಗೆರೆಗಳನ್ನು ದಾಟಿ ಮೌನ ನಡೆಸಿರೋ ಈ ಬೋಲ್ಡ್ ಪಾತ್ರ ಅವರ ಕೆರಿಯರ್‌ಗೆ ಪ್ಲಸ್ ಆಗುತ್ತಾ ಅಥವಾ ಮೈನಸ್ ಆಗುತ್ತಾ ಅನ್ನೋದನ್ನ ಈ ‘ಲವ್ ಪಂಚ್’ ವೆಬ್ ಸೀರೀಸ್ ರಿಲೀಸ್ ಆದ್ಮೇಲೆ ಕಾದು ನೋಡಬೇಕಿದೆ.
ಕೀರ್ತಿ ಪಾಟೀಲ್, ಫಿಲ್ಮ್ ಬ್ಯೂರೋ, ಗ್ಯಾರಂಟಿ ನ್ಯೂಸ್
