ಫಾರಿನ್, ಲೋಕಲ್..ಎಲ್ಲೆಡೆ ಮೋಡ ಕವಿದ ವಾತಾವರಣ.!

ಸಿಂಗಾಪುರದಲ್ಲಿ ಪ್ರೀಮಿಯರ್..ಚಿತ್ರಕ್ಕೆ ಪ್ರಶಂಸೆಗಳ ಸುರಿಮಳೆ

Untitled design 2026 06 23T172258.965

ಮಾನ್ಸೂನ್ ಶುರುವಾಗಿದ್ದೇ ಆಗಿದ್ದು.. ಎಲ್ಲೆಡೆ ಮೋಡ ಕವಿದ ವಾತಾವರಣ ಬಲು ಜೋರಿದೆ. ಯೆಸ್ ಹವಾಮಾನಕ್ಕೆ ತಕ್ಕನಾಗಿ ಸುನಿ-ಶೀಲಮ್ ಸಿನಿಮಾ ಕೂಡ ಸಿಕ್ಕಾಪಟ್ಟೆ ಸೌಂಡ್ ಮಾಡ್ತಿದ್ದು, ಲೋಕಲ್ ಟು ಫಾರಿನ್ ನಿರೀಕ್ಷೆ ಡಬಲ್ ಮಾಡಿದೆ. ಇಷ್ಟಕ್ಕೂ ಟ್ರೈಲರ್ ಹೇಗಿದೆ..? ಈ ಚಿತ್ರದ ಬಗ್ಗೆ ದೊಡ್ಮನೆ ಹುಡ್ಗ ಹೇಳಿದ್ದೇನು..? ಇದರ ಫುಲ್‌ ಡಿಟೇಲ್ಸ್  ಇಲ್ಲಿದೆ.

ಇದು ಇದೇ ಜೂನ್ 26ರ ಶುಕ್ರವಾರದಂದು ತೆರೆಗಪ್ಪಳಿಸುತ್ತಿರೋ ಸಿಂಪಲ್ ಸುನಿ ನಿರ್ದೇಶನದ ಹಾಗೂ ನವ ನಾಯಕನಟ ಶೀಲಮ್ ನಟನೆಯ ಚೊಚ್ಚಲ ಚಿತ್ರ ಮೋಡ ಕವಿದ ವಾತಾವರಣದ ಟ್ರೈಲರ್ ಝಲಕ್. ಇಂಟೆನ್ಸ್ ಎಮೋಷನ್ಸ್, ಲವ್ ಜೊತೆ ಮಾನ್ಸೂನ್‌‌ಗೆ ತಕ್ಕನಾಗಿ ಇಡೀ ಸಿನಿಮಾ ಹಚ್ಚ ಹಸಿರ ಮನದಲ್ಲೇ ಚಿತ್ರಿಸಿದಂತಿದೆ. ಹಾಗಾಗಿ ಟೈಟಲ್‌‌ಗೆ ಹೊಂದಿಕೆ ಆಗುವ ಕಥೆ, ಪಾತ್ರಗಳು ಹಾಗೂ ಮೇಕಿಂಗ್ ಈ ಚಿತ್ರದಲ್ಲಿದ್ದು, ನೋಡುಗರನ್ನ ಸಿಕ್ಕಾಪಟ್ಟೆ ಕಾಡಲಿದೆ.

ಸಿಂಪಲ್ ಸುನಿ ಅಂದ್ರೇನೇ ಹಾಗೆ.. ನೋಡುಗರಿಗೆ ಕನೆಕ್ಟ್ ಆಗುವ ಹಾಗೂ ಭಾವನಾತ್ಮಕ ಪ್ರೇಮಕಥೆಗಳ ಪ್ರೇಮದಾಸರು. ಸೋ.. ಈ ಮೋಡ ಕವಿದ ವಾತಾವರಣ ಯೂತ್‌ಗೆ ಬಹುಬೇಗ ಕನೆಕ್ಟ್ ಆಗಲಿದೆ. ಸಿನಿಮಾ ಸೈ-ಫೈ ಜಾನರ್‌‌ದು ಆಗಿದ್ರೂ ಸಹ, ಟ್ರೈಲರ್‌‌ನಲ್ಲಿ ಅದರ ಸುಳಿವನ್ನು ಎಲ್ಲೂ ಬಿಟ್ಟುಕೊಟ್ಟಿಲ್ಲ ಡೈರೆಕ್ಟರ್ ಸುನಿ. ಇನ್ನೂ ಇದೊಂದು ಟ್ರಯಾಂಗಲ್ ಪ್ರೇಮ್ ಕಹಾನಿಯಂತಿದ್ದು, ಸುನಿ ಹುಡ್ಗ ಶೀಲಮ್ ಜೊತೆ ಸಾತ್ವಿಕಾ ಹಾಗೂ ಮೋಕ್ಷಾ ಕುಶಾಲ್ ಡಬಲ್ ಜೋಡಿ ಗ್ಲಾಮರ್ ರಂಗು ಚೆಲ್ಲಿದ್ದಾರೆ.

ರಿಲೀಸ್‌ಗೂ ಮೊದಲೇ ಸಿಂಗಾಪುರದಲ್ಲಿ ಮೋಡ ಕವಿದ ವಾತಾವರಣ ಚಿತ್ರದ ಸ್ಪೆಷಲ್ ಪ್ರೀಮಿಯರ್ ಕೂಡ ನಡೆಯಿತು. ಹೀರೋ ಶೀಲಮ್‌ಗೆ ಡೈರೆಕ್ಟರ್ ಸುನಿ ಹಾಗೂ ನಾಯಕನಟಿ ಮೋಕ್ಷಾ, ಪ್ರೊಡ್ಯೂಸರ್ಸ್ ಸಾಥ್ ನೀಡಿದ್ರು. ಚಿತ್ರ ವೀಕ್ಷಿಸಿದ ಸಿಂಗಾಪುರದಲ್ಲಿರೋ ಚಿತ್ರಪ್ರೇಮಿಗಳು ಫುಲ್ ಮಾರ್ಕ್ಸ್ ನೀಡಿದ್ದಾರೆ. ಸಿಕ್ಕಾಪಟ್ಟೆ ಹಾಡಿ ಹೊಗಳಿದ್ದಾರೆ.

ಟ್ರೈಲರ್ ಲಾಂಚ್‌ಗೆ ದೊಡ್ಮನೆ ಹುಡ್ಗ ವಿನಯ್ ರಾಜ್ ಹಾಗೂ ಗುಳ್ಟು ನವೀನ್ ಶಂಕರ್ ಬಂದು ಇಡೀ ಟೀಂಗೆ ಶುಭಹಾರೈಸಿದ್ದು ವಿಶೇಷ.

ಕನ್ನಡ ಹಾಗೂ ಮಲಯಾಳಂನಲ್ಲಿ ಈ ಸಿನಿಮಾ ಶುಕ್ರವಾರ ಪ್ರೇಕ್ಷಕರ ಮುಂದೆ ಬರ್ತಿದ್ದು, ಕರ್ನಾಟಕದಲ್ಲಿ ಕೆವಿಎನ್ ಪ್ರೊಡಕ್ಷನ್ಸ್ ಹಾಗೂ ಕೇರಳದಲ್ಲಿ ದುಲ್ಕರ್ ಸಲ್ಮಾನ್ ವಿತರಣೆ ಮಾಡ್ತಿದ್ದಾರೆ. ಸುನಿ ಸಿನಿಮಾಗಳು ಅಂದಾಗ ಅಲ್ಲೇನೋ ಹೊಸತನ ಇದ್ದೇ ಇರಲಿದೆ. ಈ ಸಿನಿಮಾ ಅದೆಷ್ಟು ಕಾಡುತ್ತೆ ಮತ್ತು ಕಲೆಕ್ಷನ್ ಮಾಡುತ್ತೆ ಅನ್ನೋದನ್ನ ಕಾದು ನೋಡಬೇಕಿದೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್  

Exit mobile version