ಚಿರುಸರ್ಜಾ ಅಕಾಲಿಕ ನಿಧನದ ಬಳಿಕ ಇತ್ತೀಚೆಗೆ ನಟಿ ಮೇಘನಾ ರಾಜ್ ಎರಡನೇ ಮದುವೆ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ಟಾಕ್ ಕ್ರಿಯೇಟ್ ಆಗಿದೆ. ಸಂದರ್ಶನವೊಂದರಲ್ಲಿ ಮೇಘನಾರಾಜ್ ಉತ್ತರ ಕಂಡು ಅಂದಿನಿಂದ ಅದು ಸಂಚಲನ ಮೂಡಿಸಿದೆ. ಈ ಬಗ್ಗೆ ನಮ್ಮ ಗ್ಯಾರಂಟಿ ಪಿಚ್ಚರ್ ಟೀಂ ಜೊತೆ ಎಕ್ಸ್‌ಕ್ಲೂಸಿವ್ ಆಗಿ ಮಾತನಾಡಿದ್ದಾರೆ ಮೇಘನಾ.
- 2ನೇ ಮದ್ವೆ ಬಗ್ಗೆ ಮೇಘನಾ ರಾಜ್ ಎಕ್ಸ್‌ಕ್ಲೂಸಿವ್ ಟಾಕ್..!
- ಲೈಫ್ ಪಾರ್ಟನರ್ ಬಗ್ಗೆ ಟಾಕ್.. ಕಮೆಂಟ್ಸ್ಗೆ ಡೋಂಟ್ ಕೇರ್
- ಸೆಲೆಬ್ರಿಟಿ ಆ್ಯಂಟಿ ಏಜಿಂಗ್ ಟ್ರೀಟ್ಮೆಂಟ್.. ಮೇಘನಾ ಟಿಪ್ಸ್..!
- ಕೇರಳ ರಾಣಿ ಪಾತ್ರದಲ್ಲಿ ಚಿರು ಸರ್ಜಾ ಪತ್ನಿ ಮೇಘನಾ ರಾಜ್
ಸಂಗೀತಾ ಬಾರ್ ಅಂಡ್ ರೆಸ್ಟೋರೆಂಟ್.. ಚಿರು ಸರ್ಜಾ ಪತ್ನಿ ಮೇಘನಾ ರಾಜ್ ನಾಯಕನಟಿಯಾಗಿ ಬಣ್ಣ ಹಚ್ಚುತ್ತಿರೋ ಹೊಚ್ಚ ಹೊಸ ಸಿನಿಮಾ. ಕೋಮಲ್ ಹೀರೋ ಆಗಿರೋ ಈ ಸಿನಿಮಾಗೆ ಗುಂಮ್ಟಿ ಸಿನಿಮಾ ಫೇಮ್ ಸಂದೇಶ್ ಶೆಟ್ಟಿ ಆ್ಯಕ್ಷನ್ ಕಟ್ ಹೇಳ್ತಿದ್ದು, ವಿಕಾಸ್ ಶೆಟ್ಟಿ ನಿರ್ಮಾಣ ಮಾಡ್ತಿದ್ದಾರೆ. ಎಂ ಕೆ ಮಠ ಸೇರಿದಂತೆ ಡೊದ್ದ ತಾರಾಗಣ ಚಿತ್ರಕ್ಕಿದ್ದು, ಇತ್ತೀಚೆಗೆ ಟೈಟಲ್ ಜೊತೆ ಕಾನ್ಸೆಪ್ಟ್ ಟೀಸರ್ ಕೂಡ ಬಿಡುಗಡೆ ಮಾಡಲಾಯಿತು.
ಕರ್ನಾಟಕ ಹಾಗೂ ಕೇರಳ ಚಿತ್ರರಂಗಗಳನ್ನ ಎರಡು ಕಣ್ಣುಗಳಂತೆ ಭಾವಿಸುವ ಹಾಗೂ ಗೌರವಿಸುವ ಮೇಘನಾ ರಾಜ್, ಈ ಚಿತ್ರದಲ್ಲಿ ಕೇರಳ ರಾಣಿಯಾಗಿ ಕಾಣಸಿಗಲಿದ್ದಾರಂತೆ.
ಇದೇ ಸಂದರ್ಭದಲ್ಲಿ ನಮ್ಮ ಗ್ಯಾರಂಟಿ ಪಿಚ್ಚರ್ ಟೀಂ ಜೊತೆ ಎಕ್ಸ್‌ಕ್ಲೂಸಿವ್ ಆಗಿ ಮಾತನಾಡಿರೋ ಮೇಘನಾ ರಾಜ್, ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡ್ತಿರೋ ತಮ್ಮ ಎರಡನೇ ಮದುವೆ ಬಗ್ಗೆ ಮೌನ ಮುರಿದಿದ್ದಾರೆ. ಲೈಫ್ ಪಾರ್ಟನರ್ ಹಾಗು 2ನೇ ಮದ್ವೆ ಬಗ್ಗೆ ಸಿಂಪಲ್ ಉತ್ತರ ನೀಡಿದ್ದು, ನೆಗೆಟೀವ್ ಕಾಮೆಂಟ್ಸ್ ಗೆ ಡೋಂಟ್ ಕೇರ್ ಅಂದಿದ್ದಾರೆ.
