ಮೆಗಾ ಫ್ಯಾಮಿಲಿಯಲ್ಲಿ ಪವನ್ ಕಲ್ಯಾಣ್ ಹಾಗೂ ಅಲ್ಲು ಅರ್ಜುನ್‌ಗಿರೋ ಕೋಲ್ಡ್ ವಾರ್ ಎಲ್ಲರಿಗೂ ಗೊತ್ತೇಯಿದೆ. ಸದ್ಯ ಡಿಸಿಎಂ ಆಗಿ ಪವನ್ ಒಂದು ಮೆಟ್ಟಿಲು ಮೇಲೇರಿದ್ದಾರೆ. ಇತ್ತ ಐಕಾನ್ ಸ್ಟಾರ್ ಕೂಡ ಪುಷ್ಪ ಚಿತ್ರದ ಸಕ್ಸಸ್‌ನಿಂದ ಮತ್ತಷ್ಟು ಸ್ಟಾರ್ಡಮ್ ಪಡ್ಕೊಂಡಿದ್ದಾರೆ. ಆದ್ರೀಗ ಇತ್ತೀಚೆಗೆ ಆದಂತಹ ಒಂದು ಸಾವು, ಇವರಿಬ್ಬರನ್ನ ಒಂದಾಗಿಸಿದೆ.
ಆ ಸಾವಿನಿಂದ ಮೆಗಾ ಫ್ಯಾಮಿಲಿಯಲ್ಲಿನ ರೈವಲ್ರಿಗೆ ಫುಲ್‌ಸ್ಟಾಪ್
ಮೆಗಾಸ್ಟಾರ್ ಫ್ಯಾಮಿಲಿಯಲ್ಲಿ ಎಲ್ಲಾ ಸ್ಟಾರ್‌ಗಳಿಗೂ ಚಿರಂಜೀವಿ ಅವರೇ ಗಾಡ್‌ಫಾದರ್. ಆದ್ರೀಗ ಚಿರು ಬಳಿಕ ಸಾಕಷ್ಟು ಮಂದಿ ಕಲಾವಿದರು ಆ ಕುಟುಂಬದಿಂದ ಬಂದು ಚಿತ್ರರಂಗ ಆಳುತ್ತಿದ್ದಾರೆ. ಆ ಪೈಕಿ ಪವನ್ ಕಲ್ಯಾಣ್, ರಾಮ್ ಚರಣ್ ಹಾಗೂ ಅಲ್ಲು ಅರ್ಜುನ್ ಮೊದಲ ಸಾಲಿನಲ್ಲಿ ನಿಲ್ಲುತ್ತಾರೆ. ಆದ್ರೆ ಪವನ್ ಕಲ್ಯಾಣ್ ಹಾಗೂ ಅಲ್ಲು ಅರ್ಜುನ್ ನಡುವೆ ಬಹಳ ದಿನಗಳಿಂದ ಶೀತಲ ಸಮರ ನಡೆಯುತ್ತಿದೆ. ಅದಕ್ಕೆ ಕಾರಣ ಫ್ಯಾನ್ಸ್ ಹಾಗೂ ರಾಜಕಾರಣ.
ಹೌದು, ಅಲ್ಲು ಅರ್ಜುನ್ ಹೋದ ಕಡೆ ಮಾತು ಶುರು ಮಾಡೋಕೆ ಮೊದಲೇ ಪವರ್ ಸ್ಟಾರ್ ಅನ್ನೋ ಘೋಷಣೆಗಳು ಮೊಗಳುತ್ತಿದ್ದವು. ಅದಕ್ಕೆ ಒಮ್ಮೆ ಟ್ರಿಗರ್ ಆದ ಅಲ್ಲು ಅರ್ಜುನ್, ಪವನ್ ಫ್ಯಾನ್ಸ್‌ಗೆ ಟಾಂಗ್ ಕೊಟ್ಟು ಮಾತನಾಡಿದ್ರು. ಅದ್ರಿಂದ ಪವನ್ ಫ್ಯಾನ್ಸ್ ಅಲ್ಲು ಅರ್ಜುನ್‌ನ ದ್ವೇಷಿಸೋಕೆ ಶುರು ಮಾಡಿದ್ರು. ಅದಕ್ಕೆ ತುಪ್ಪ ಸುರಿದಂತೆ, ಜನಸೇನಾ ಪಾರ್ಟಿಯ ಅಭ್ಯರ್ಥಿಗೆ ವಿರೋಧವಾಗಿ ನಿಂತಿದ್ದ ವೈಎಸ್‌ಆರ್‌ಸಿಪಿ ಪಕ್ಷದ ಅಭ್ಯರ್ಥಿ ಪರ ಎಲೆಕ್ಷನ್ ಕ್ಯಾಂಪೇನ್ ಮಾಡಿದ್ರು ಅಲ್ಲು ಅರ್ಜುನ್.
ಈ ಎಲ್ಲಾ ಬೆಳವಣಿಗೆಗಳಿಂದ ಮೆಗಾ ಫ್ಯಾಮಿಲಿಯ ಪವನ್-ಅಲ್ಲು ನಡುವೆ ದೊಡ್ಡ ಕಂದಕ ಸೃಷ್ಠಿಯಾಗಿತ್ತು. ಆದ್ರೀಗ ಪವನ್ ಕಲ್ಯಾಣ್ ಆಂಧ್ರ ಡಿಸಿಎಂ. ಅಲ್ಲು ಅರ್ಜುನ್ ನ್ಯಾಷನಲ್ ಅಲ್ಲ ಇಂಟರ್ ನ್ಯಾಷನಲ್. ಹೌದು ಪುಷ್ಪರಾಜ್ ಆಗಿ ಬಾಕ್ಸ್ ಆಫೀಸ್ ರೂಲ್ ಮಾಡಿದ್ದನ್ನು ನಾವು ನೋಡಿದ್ವಿ. ಫ್ಯಾಮಿಲಿ ಅಂದಾಗ ಈ ರೀತಿಯ ವೈಮನಸ್ಸುಗಳು ಸರ್ವೇ ಸಾಮಾನ್ಯ. ಇತ್ತೀಚೆಗೆ ಅಲ್ಲು ಅರವಿಂದ್ ಅವರ ತಾಯಿ ತೀರಿಕೊಂಡಿದ್ದು, ಆ ಒಂದು ಸಾವಿನಿಂದ ಪವನ್ ಕಲ್ಯಾಣ್ ಹಾಗೂ ಅಲ್ಲು ಅರ್ಜುನ್ ಬಾಂಧವ್ಯ ಮತ್ತೆ ಮೊದಲಿನಂತಾಗಿದೆ. ಅಲ್ಲು ಮನೆಗೆ ಬಂದಂತಹ ಪವನ್, ಪುಷ್ಪರಾಜ್ ಜೊತೆ ಅನ್ಯೋನ್ಯವಾಗಿರೋದು ಕಂಡುಬಂದಿದೆ. ಇದ್ರಿಂದ ಇಬ್ಬರ ಫ್ಯಾನ್ಸ್ ಜೊತೆ ಇಡೀ ಮೆಗಾ ಫ್ಯಾನ್ಸ್ ದಿಲ್‌ಖುಷ್ ಆಗಿದ್ದಾರೆ.