ಸ್ಯಾಂಡಲ್​ವುಡ್​ನಲ್ಲಿ ‘ಮಾರುತ’ನಾದ ಭೀಮ ವಿಜಯ್

ಅಖಾಡಕ್ಕಿಳಿದ ಕಲಾ ಸಾಮ್ರಾಟ್ ಎಸ್​ ನಾರಾಯಣ್..! ಸಲಗ ವಿಜಯ್ ಜೊತೆ ಶ್ರೇಯಸ್ ಮಂಜು ಸ್ಕ್ರೀನ್ ಶೇರ್..!

Web 2025 05 16t164709.051

ಸೂರ್ಯವಂಶ, ಜಮೀನ್ದಾರು, ಸಿಂಹಾದ್ರಿಯ ಸಿಂಹ, ಮೌರ್ಯ, ಸೇವಂತಿ ಸೇವಂತಿ, ಚೆಲುವಿನ ಚಿತ್ತಾರ ದಂತಹ ಬಾಕ್ಸ್ ಆಫೀಸ್ ಹಿಟ್ ಸಿನಿಮಾಗಳ ಕ್ಯಾಪ್ಟನ್ ಕಲಾ ಸಾಮ್ರಾಟ್​ ಎಸ್​ ನಾರಾಯಣ್​. ಸದ್ಯ ಸೂಪರ್ ಹಿಟ್ ಡೈರೆಕ್ಟರ್ ಮತ್ತೆ ನಿರ್ದೇಶನಕ್ಕೆ ಇಳಿದಿದ್ದಾರೆ. ಒಂದು ನ್ಯಾಷನಲ್​ ಇಷ್ಯೂವನ್ನು ಇಟ್ಟುಕೊಂಡು ಮಲ್ಟಿಸ್ಟಾರ್ಸ್​ಗಳ ಮೂಲಕ ಕಥೆಯನ್ನ ಹೇಳಲು ಬರ್ತಾಯಿದ್ದಾರೆ. ಆ ಸಿನಿಮಾದ ಹೆಸರೇ ‘ಮಾರುತ’ ಎಸ್​ ನಾರಾಯಣ್ ನಿರ್ದೇಶನದ ಮಾರುತ ಸಿನಿಮಾದಲ್ಲಿ ಸ್ಯಾಂಡಲ್​ವುಡ್​ ಸಲಗ ವಿಜಯ್ ಹಾಗು ಶ್ರೇಯಸ್​ ಮಂಜು ಸ್ಟೈಲಿಷ್​ ಲುಕ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಹಾಗಾದ್ರೆ ಮಾರುತ ಸಿನಿಮಾದ ಸ್ಟಪೆಷಲ್ ಏನು..?

ಎಸ್​. ನಾರಾಯಣ್ ಅವರು ಅಂದ್ರೆ ವರನಟ ಡಾ. ರಾಜ್​ ಕುಮಾರ್ ಅವರಿಂದ ಹಿಡಿದು ವಿಷ್ಣುವರ್ಧನ್, ಅಂಬರೀಷ್​, ಶಿವರಾಜ್​ ಕುಮಾರ್, ಪುನೀತ್ ರಾಜ್​ ಕುಮಾರ್​, ಸುದೀಪ್​, ಗಣೇಶ್​, ಅಮೂಲ್ಯ, ಶ್ರೀಮುರಳಿ ಸೇರಿದಂತೆ ಸ್ಯಾಂಡಲ್​ವುಡ್​ನ ಸ್ಟಾರ್​ ನಟ ನಟಿಯರ ಸಿನಿಮಾಗಳಿಗೆ ಡೈರೆಕ್ಷನ್ ಕ್ಯಾಪ್ ತೊಟ್ಟು ಆ್ಯಕ್ಷನ್ ಕಟ್​ ಹೇಳಿದ ಸ್ಟಾರ್ ನಿರ್ದೇಶಕರಲ್ಲಿ ಒಬ್ಬರು. 2024ರಲ್ಲಿ 5ಡಿ ಸಿನಿಮಾಗೆ ಆಕ್ಷನ್ ಕಟ್ ಹೇಳಿದ ಎಸ್ ನಾರಾಯಣ್ ಇದೀಗ 2025ರಲ್ಲಿ ಪವರ್ ಪ್ಯಾಕ್ಡ್ ಸಿನಿಮಾಗೆ ಡೈರೆಕ್ಷನ್ ಕ್ಯಾಪ್ ಹಾಕಿದ್ದಾರೆ.

ಚಿತ್ರರಂಗದಲ್ಲಿ ಯಾವುದೇ ಗ್ಯಾಪ್ ಕೊಡದೆ ಸತತವಾಗಿ ಡೈರೆಕ್ಷನ್ ಮಾಡುತ್ತಾ ಬಂದಿರೋ ಎಸ್​ ನಾರಾಯಣ್​ ಒಂದು ಸ್ಟ್ರಾಂಗ್ ಕಂಟೆಂಟ್​ ಮೂಲಕ  ಕಾಂಬೋ ಎಕ್ಸ್ಪೀರಿಮೆಂಟ್ ಮಾಡಿದ್ದಾರೆ. ಅದೇ ಮಾರುತ ಸಿನಿಮಾ. ಇತ್ತೀಚೆಗೆ ಮಾರುತ ಸಿನಿಮಾದ ಈವೆಂಟ್​ ನಡೆಯಿತು. ಟೈಟಲ್ ಹಾಗೂ ಒಂದು ಲಿರಿಕಲ್​ ಸಾಂಗ್​ ಲಾಂಚ್ ಮಾಡಿದ್ದ ಚಿತ್ರತಂಡ ಇದರ ಜೊತೆಗೆ ಪಾತ್ರಗಳ ಪರಿಚಯ ಕೂಡ ಮಾಡಿದ್ರು. ಸ್ಪೆಷಲ್ ರೋಲ್​ನಲ್ಲಿ ದುನಿಯಾ ವಿಜಯ್ ಕಾಣಿಸಿಕೊಂಡಿದ್ರೆ ನಾಯಕನಟನಾಗಿ ಶ್ರೇಯಸ್​ ಕೆ ಮಂಜು ನಟಿಸಿದ್ದಾರೆ. ಇನ್ನು ನಟಿ ಬೃಂದಾ ಆಚಾರ್ಯ ಶ್ರೇಯಸ್​ಗೆ ಜೋಡಿಯಾಗಿ ಕಾಣಿಸಿಕೊಂಡಿದ್ದಾರೆ. ಇದರ ಜೊತೆಗೆ ಕ್ರೇಜಿ ಸ್ಟಾರ್ ರವಿಚಂದ್ರನ್,ಶರತ್ ಲೋಹಿತಾಶ್ವ, ರಂಗಾಯಣ ರಘು ಸೇರಿದಂತೆ ಹಲವಾರು ಸೀನಿಯರ್ ಕಲಾವಿದರು ಮಾರುತ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ.

ಇನ್ನೂ ಈವೆಂಟ್​ನಲ್ಲಿ ನಿರ್ದೇಶಕ ಎಸ್​  ನಾರಾಯಣ್, ದುನಿಯಾ ವಿಜಯ್, ಶ್ರೇಯಸ್ ಮಂಜು, ನಟಿ ಬೃಂದಾ ಆಚಾರ್ಯ, ನಿರ್ಮಾಪಕರಾದ ಕೆ ಮಂಜು ಹಾಗು ರಮೇಶ್​ ಯಾದವ್​ ಸಿನಿಮಾ ಕುರಿತು ಮಾತನಾಡಿದ್ರು. ಅದ್ರಲ್ಲೂ ವಿಜಯ್ ನಿರ್ಮಾಪಕರಿಗೆ ಒಂದೊಳ್ಳೆ ಪ್ರಮೋಷನ್ ಸಲಹೆ ಕೊಟ್ಟಿದ್ದಾರೆ. ಏನು ಹೇಳಿದ್ದಾರೆ ಅನ್ನೋದನ್ನ ನೀವೇ ನೋಡಿ.

ಇನ್ನೂ ಮಾರುತ ಸಿನಿಮಾದಲ್ಲಿ ನಾಯಕನಾಗಿ ಕಾಣಿಸಿಕೊಂಡಿರುವ ಶ್ರೇಯಸ್ ಮಂಜು ಹಾಗೂ ನಟಿ ಬ್ರಿಂದಾ ಆಚಾರ್ಯ ಕೂಡ ತಮ್ಮ ಸಿನಿಮಾದ ಅನುಭವಗಳನ್ನು ಹಂಚಿಕೊಂಡ್ರು. ಇಷ್ಟು ಜನ ಹಿರಿಯ ಕಲಾವಿದರ ಸಿನಿಮಾದಲ್ಲಿ ನಟಿಸಿದ್ದು ನನ್ನ ಪುಣ್ಯ ಅಂತ ಬ್ರಿಂದಾ ಆಚಾರ್ಯ ಹೇಳಿಕೊಂಡ್ರು.. ಜೊತೆಗೆ ಬ್ರಿಂದಾ ಆಚಾರ್ಯ ಅವರ ಅಪ್ಪಟ ಕನ್ನಡ ಕೇಳಿ ಎಲ್ಲರೂ ಖುಷಿ ಪಟ್ರು. ಈ ಹಿಂದೆ ವಿಷ್ಣುಪ್ರಿಯಾ ಚಿತ್ರಕ್ಕೆ ಕೆ ಮಂಜು ಬಂಡವಾಳ ಹೂಡಿದ್ದು ಇದೀಗ ಮಗನ ಎರಡನೇ ಸಿನಿಮಾಗೂ ಕೆ ಮಂಜು ನಿರ್ಮಾಣಕ್ಕೆ ಕೈ ಹಾಕಿದ್ದಾರೆ.

ಇನ್ನೂ ಮಾರುತ ಸಿನಿಮಾಗೆ ಬಂಡವಾಳ ಹೂಡಿರೋದು ಕೆ ಮಂಜು ಹಾಗೂ ರಮೇಶ್​ ಯಾದವ್​. ಹೃದಯವಂತ, ವಾಲಿ, ಲಂಕೇಶ್ ಪತ್ರಿಕೆ, ರಾಮ ಶಾಮ, ಬಾಮ, ಅರಮನೆ, ರಾಜಹುಲಿ, ಸಂತು straight ಫಾರ್ವರ್ಡ್ ಸೇರಿದಂತೆ ಹಲವು ಹಿಟ್ ಸಿನಿಮಾಗಳಿಗೆ ಬಂಡವಾಳ ಹೂಡಿ ಸಿನಿ ದುನಿಯಾದಲ್ಲಿ ಸಕ್ಸಸ್ ಫುಲ್ ಜರ್ನಿ ಮಾಡಿರೋ ಕೆ ಮಂಜು ಮಾರುತ ಸಿನಿಮಾ ನಿರ್ಮಾಣ ಮಾಡೋಕೆ ಕೀ ಪಾಯಿಂಟ್ ಏನು ಅನ್ನೋದನ್ನ ತಿಳಿಸಿದ್ದಾರೆ.

ಮಾರುತ ಸಿನಿಮಾದ ಸಿಜಿ ವರ್ಕ್​ ಹಾಗೂ ಗ್ರಾಫಿಕ್ಸ್​ ಕೆಲಸಗಳು ನಡೀತಾಯಿವೆ. ಎಲ್ಲಾ ಅಂದುಕೊಂಡಂತೆ ಆದ್ರೆ ಇನ್ನೂ ಮೂರು ತಿಂಗಳಲ್ಲಿ ಸಿನಿಮಾ ರಿಲೀಸ್ ಆಗಲಿದೆ.

ಕೀರ್ತಿ ಪಾಟೀಲ್, ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್

Exit mobile version