ಪೆದ್ದಿ, ಜೈಲರ್ 2 ಬಗ್ಗೆ ಸಿನಿ ಲೋಕದಲ್ಲಿ ಈಗ ಸಿಕ್ಕಿರೋ ಅಪ್ಡೇಟ್ ಕೇಳಿದ್ರೆ ಫ್ಯಾನ್ಸ್ ಎಕ್ಸೈಟ್ ಆಗೋದು ಗ್ಯಾರಂಟಿ. ಎಸ್, ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಈ ಎರಡು ಚಿತ್ರದಲ್ಲಿ ಕೇವಲ ಜಸ್ಟ್ ಗೆಸ್ಟ್ ರೋಲ್ ಮಾಡ್ತಿಲ್ಲ ಅನ್ನೋದೇ ಲೇಟೆಸ್ಟ್ ಅಪ್ಡೇಟ್. ಹಾಗಾದ್ರೆ ಶಿವಣ್ಣನ ಪಾತ್ರ ಎಷ್ಟು ದೊಡ್ಡದು? ಸಿನಿಮಾದಲ್ಲಿ ಅವರ ಎಂಟ್ರಿ ಹೇಗಿರಬಹುದು? ಈ ಎಲ್ಲಾ ಪ್ರಶ್ನೆಗಳಿಗೂ ಉತ್ತರ ಕೊಡೋ ಎಕ್ಸ್ಕ್ಲೂಸಿವ್ ಡೀಟೇಲ್ಸ್ ಇಲ್ಲಿದೆ..
- ರಾಮ್ ಚರಣ್ ಜೊತೆ ಪೆದ್ದಿ, ರಜನಿ ಜೊತೆ ಜೈಲರ್ 2 ಶಿವಣ್ಣ ಹವಾ
- ಪೆದ್ದಿ, ಜೈಲರ್-2ನಲ್ಲಿ ಶಿವಣ್ಣ ಗೆಸ್ಟ್ ಅಲ್ಲ.. 20-25 ನಿಮಿಷ ಅಪಿಯರ್
- ಶಿವಣ್ಣ ಫ್ಯಾನ್ಸ್‌ಗೆ ಡಬಲ್ ಟ್ರೀಟ್…ಪೆದ್ದಿ & ಜೈಲರ್ 2 ಕಮಿಂಗ್
- ತಮಿಳು ಪ್ರೇಕ್ಷಕರ ಮನ ಗೆದ್ದ ಶಿವಣ್ಣ ಸ್ಟೈಲ್.. ನಮ್ ಬಾಸು ಎಂದ ಫ್ಯಾನ್ಸ್
ಸಿನಿ ಲೋಕದಲ್ಲಿ ಈಗ ಭಾರೀ ಚರ್ಚೆ ಆಗ್ತಿರೋ ಎರಡು ದೊಡ್ಡ ಸಿನಿಮಾಗಳು ಅಂದ್ರೆ ರಾಮ್ ಚರಣ್ ಅಭಿನಯದ ಪೆದ್ದಿ ಮತ್ತು ರಜನಿಕಾಂತ್ ಅಭಿನಯಿಸುತ್ತಿರುವ ಜೈಲರ್ 2. ಈ ಎರಡೂ ಸಿನಿಮಾಗಳಲ್ಲೂ ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಅವರ ಪಾತ್ರವೇ ಈಗ ಸಿನಿ ವಲಯದಲ್ಲಿ ಕುತೂಹಲ ಹೆಚ್ಚಿಸಿದೆ . ಶಿವಣ್ಣ ಹಾಗು ರಜನಿಕಾಂತ್ ಕಾಂಬಿನೇಶನ್ ನ ಜೈಲರ್ ಚಿತ್ರ ಭರ್ಜರಿ ಯಶಸ್ಸಿನ ಬಳಿಕ ಅದರ ಮುಂದುವರಿದ ಭಾಗವಾಗಿ ಬರುತ್ತಿರೋ ಜೈಲರ್ 2 ಮೇಲೆ ಈಗಾಗಲೇ ಭಾರೀ ನಿರೀಕ್ಷೆ ಇದೆ.
ಮೊದಲ ಭಾಗದಂತೆ ಈ ಸಿನಿಮಾವನ್ನೂ ನಿರ್ದೇಶಕ ನೆಲ್ಸನ್ ದಿಲೀಪ್ ಕುಮಾರ್ ನಿರ್ದೇಶನ ಮಾಡ್ತಿದ್ದು, ಈಗ ಸಿಕ್ಕಿರೋ ಲೇಟೆಸ್ಟ್ ಮಾಹಿತಿಯ ಪ್ರಕಾರ, ಈ ಸಿನಿಮಾದಲ್ಲಿ ಶಿವಣ್ಣ ಜಸ್ಟ್ ಗೆಸ್ಟ್ ರೋಲ್ ಅಲ್ಲ ಅನ್ನೋ ಗುಸುಗುಸು ಸಿನಿ ವಲಯದಲ್ಲಿ ಹರಿದಾಡ್ತಿದೆ. ಅಂದರೆ ಸುಮಾರು 20ರಿಂದ 25 ನಿಮಿಷಗಳಷ್ಟು ಪವರ್‌ಫುಲ್ ಸ್ಕ್ರೀನ್ ಪ್ರೆಸೆನ್ಸ್ ಶಿವಣ್ಣಗೆ ಕೊಡಲಾಗಿದೆಯಂತೆ. ಎಸ್.. ಕೇವಲ ಜೈಲರ್ 2ನಲ್ಲಿ ಮಾತ್ರವಲ್ಲದೆ ಪೆದ್ದಿ ಸಿನಿಮಾದಲ್ಲೂ ಶಿವಣ್ಣ ಪವರ್ ಫುಲ್ ಸೀನ್ ನಲ್ಲಿ ಲಾಂಗ್ duration ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ.
ಜೈಲರ್ ಮೊದಲ ಭಾಗದಲ್ಲಿ ಶಿವಣ್ಣನ ಎಂಟ್ರಿ ಹೇಗೆ ಥಿಯೇಟರ್‌ನಲ್ಲಿ ಸದ್ದು ಮಾಡಿತ್ತೋ ಅದನ್ನ ಸಿನಿ ಅಭಿಮಾನಿಗಳು ಇನ್ನೂ ಮರೆತಿಲ್ಲ. ಕೇವಲ ಕೆಲವು ನಿಮಿಷಗಳ ಸ್ಕ್ರೀನ್ ಟೈಮ್ ಇದ್ದರೂ ಅವರ ಸ್ಟೈಲ್ ಮತ್ತು ಪ್ರೆಸೆನ್ಸ್ ತಮಿಳು ಪ್ರೇಕ್ಷಕರ ಮನಸ್ಸು ಗೆದ್ದಿತ್ತು. ಅದೇ ಕಾರಣಕ್ಕೆ ಈಗ ಜೈಲರ್ 2ನಲ್ಲಿ ಶಿವಣ್ಣ ಪಾತ್ರ ಇನ್ನಷ್ಟು ದೊಡ್ಡದಾಗಿ ಕಾಣಿಸಿಕೊಳ್ಳಬಹುದು ಅನ್ನೋ ನಿರೀಕ್ಷೆ ಹೆಚ್ಚಾಗಿದೆ.
ಇನ್ನೊಂದು ಕಡೆ ರಾಮ್ ಚರಣ್ ಪೆದ್ದಿ ಸಿನಿಮಾದ ಮೇಲೂ ಭಾರೀ ಹೈಪ್ ಸೃಷ್ಟಿಯಾಗಿದೆ. ಈ ಸಿನಿಮಾವನ್ನು ನಿರ್ದೇಶಕ ಬುಚಿ ಬಾಬು ಸನ ನಿರ್ದೇಶನ ಮಾಡ್ತಿದ್ದು, ಈಗಾಗಲೇ ಈ ಸಿನಿಮಾದ ಟ್ರೇಲರ್, ಟೀಸರ್ ಮತ್ತು ಸಾಂಗ್ಸ್ ಆಡಿಯೆನ್ಸ್ ನ ಅಟ್ರಾಕ್ಟ್ ಮಾಡಿದೆ. ಅದ್ರಲ್ಲೂ ಶಿವಣ್ಣ ಫಸ್ಟ್ ಲುಕ್ ನೋಡಿದ ಫ್ಯಾನ್ಸ್ ಇದಪ್ಪ ಲುಕ್ ಅಂದ್ರೆ ಏನು ಗತ್ತು ಗಮತ್ತು ಒನ್ ಅಂಡ್ ಓನ್ಲಿ ಶಿವಣ್ಣ ಎಂದೆಲ್ಲ ಕಾಮೆಂಟ್ ಮಾಡಿದ್ರು.
ಇದರ ನಡುವೆ ವಿಶೇಷವಾಗಿ ತಮಿಳು ಪ್ರೇಕ್ಷಕರಲ್ಲೂ ಶಿವಣ್ಣ ಕ್ರೇಜ್ ದಿನೇ ದಿನೇ ಹೆಚ್ಚಾಗ್ತಿದೆ ಅನ್ನೋದು ಗಮನಿಸಬೇಕಾದ ವಿಚಾರ. ಜೈಲರ್ ಸಿನಿಮಾದಲ್ಲಿನ ಅವರ ಮಾಸ್ ಎಂಟ್ರಿ ತಮಿಳುನಾಡಿನ ಥಿಯೇಟರ್‌ಗಳಲ್ಲಿ ಭಾರೀ ರೆಸ್ಪಾನ್ಸ್ ಪಡೆದಿತ್ತು. ಅದೇ ಕಾರಣಕ್ಕೆ ಈಗ ಜೈಲರ್ 2ನಲ್ಲಿ ಶಿವಣ್ಣ ಪಾತ್ರ ಇನ್ನಷ್ಟು ಮಾಸ್ ಆಗಿರಬಹುದು ಅನ್ನೋ ನಿರೀಕ್ಷೆ ಸಿನಿ ವಲಯದಲ್ಲಿ ಜೋರಾಗಿದೆ. ಹೀಗಾಗಿ ಎಲ್ಲರಲ್ಲೂ ಒಂದೇ ಕುತೂಹಲ… ಜೈಲರ್ 2 ಹಾಗು ಪೆದ್ದಿ ಸಿನಿಮಾದಲ್ಲಿ ಶಿವಣ್ಣನ ನಿಜವಾದ ಪಾತ್ರ ಏನು? ಸುಮಾರು 20-25 ನಿಮಿಷಗಳ ಸ್ಕ್ರೀನ್ ಪ್ರೆಸೆನ್ಸ್ ಇದ್ದರೆ ಕಥೆಯಲ್ಲಿ ಅವರ ಪಾತ್ರ ಯಾವ ರೀತಿಯಲ್ಲಿ ಟ್ವಿಸ್ಟ್ ಕೊಡಬಹುದು? ಕಾದು ನೋಡಬೇಕು..
ಕೀರ್ತಿ ಪಾಟೀಲ್, ಫಿಲಂ. ಬ್ಯೂರೋ ಗ್ಯಾರಂಟಿ ನ್ಯೂಸ್..
| Reported by: ಕೀರ್ತಿ ಪಾಟೀಲ್, ಫಿಲ್ಮ್ ಬ್ಯೂರೋ, ಗ್ಯಾರಂಟಿ ನ್ಯೂಸ್