ಪಡ್ಡೆಹುಲಿ ಮಲ್ಟಿಸ್ಟಾರ್ ಲಾಜಿಕ್..‘ಮಾರುತ’ ಮ್ಯಾಜಿಕ್

ಹಾರ್ಡ್‌ವರ್ಕ್‌ ಜೊತೆ ಅಪ್ಪನ ಹವಾ ಶ್ರೇಯಸ್‌ಗೆ ವರ..!

Untitled design 2025 11 15T183323.644

ದಿ ವೆಯ್ಟ್ ಈಸ್ ಓವರ್.. ಪಡ್ಡೆಹುಲಿ ಶ್ರೇಯಸ್ ಮಂಜು ಮಾರುತನಾಗಿ ಬಿಗ್ ಸ್ಕ್ರೀನ್‌ಗೆ ಎಂಟ್ರಿ ಕೊಡೋಕೆ ಕೌಂಟ್‌ಡೌನ್ ಶುರುವಾಗಿದೆ. ಅದಕ್ಕೆ ಸ್ಯಾಂಡಲ್‌ವುಡ್ ಭೀಮ ದುನಿಯಾ ವಿಜಯ್ ಕೂಡ ಸಾಥ್ ನೀಡಿದ್ದಾರೆ. ಈ ವಾರ ಮಾರುತನ ಆಗಮನ ಆಗ್ತಿದ್ದು, ಪ್ರೀ- ರಿಲೀಸ್ ಇವೆಂಟ್ ಹೈಲೈಟ್ಸ್ ಇಲ್ಲಿದೆ.

50ಕ್ಕೂ ಅಧಿಕ ಸಿನಿಮಾಗಳನ್ನ ನಿರ್ದೇಶಿಸಿರೋ ಕಲಾಸಾಮ್ರಾಟ್ ಎಸ್ ನಾರಾಯಣ್ ನಿರ್ದೇಶನದ ಮಾರುತ ಸಿನಿಮಾ ಇದೇ ಶುಕ್ರವಾರ ಅಂದ್ರೆ ನವೆಂಬರ್ 21ರಿಂದ ತೆರೆಗೆ ಬರೋಕೆ ಸಜ್ಜಾಗಿದೆ. ನಿರ್ಮಾಪಕ ಕೆ ಮಂಜು ಪುತ್ರ ಶ್ರೇಯಸ್ ನಟನೆಯ ಈ ಸಿನಿಮಾದಲ್ಲಿ ಬೃಂದಾ ಆಚಾರ್ಯ ನಟಿಸಿದ್ದು, ದುನಿಯಾ ವಿಜಯ್ ಹಾಗೂ ಕ್ರೇಜಿಸ್ಟಾರ್ ರವಿಚಂದ್ರನ್ ಅಂತಹ ಬಿಗ್ ಸ್ಟಾರ್ಸ್‌ ಕೂಡ ಸ್ಪೆಷಲ್ ಅಪಿಯರೆನ್ಸ್ ನೀಡಿರೋದು ಇಂಟರೆಸ್ಟಿಂಗ್.

ಕೆ ಮಂಜು ಜೊತೆ ರಮೇಶ್ ಯಾದವ್ ಜಂಟಿಯಾಗಿ ನಿರ್ಮಾಣ ಮಾಡಿರೋ ಮಾರುತ, ಈ ಶುಕ್ರವಾರ ಬಾಕ್ಸ್ ಆಫೀಸ್‌‌ಗೆ ಚಂಡಮಾರುತದಂತೆ ಅಪ್ಪಳಿಸಲಿದೆ. ರಿಲೀಸ್‌ಗೂ ಮುನ್ನ ಚಿತ್ರತಂಡ ಪ್ರೀ ರಿಲೀಸ್ ಇವೆಂಟ್ ಮೂಲಕ ರಂಗೇರಿತು. ಅಲ್ಲಿ ಚಿತ್ರದ ಕಥೆ, ತಾರಾಗಣದ ಬಗ್ಗೆ ಮಾತನಾಡಿದ ಎಸ್ ನಾರಾಯಣ್, ದುನಿಯಾ ವಿಜಯ್ ಪಾತ್ರ ತುಂಬಾ ತೂಕವಾಗಿದೆ ಎಂದರು. ಶರತ್ ಲೋಹಿತಾಶ್ವ ಜೊತೆ ಮೊದಲ ಬಾರಿ ಕೆಲಸ ಮಾಡಿದೆ ಅಂತ ಎಲ್ಲಾ ಕಲಾವಿದರುಗಳ ಬಗ್ಗೆ ಮಾತನಾಡಿದ್ರು. ಅಲ್ಲದೆ, ಮಾರುತ-2 ಸಹ ಬರಲಿದೆ ಎಂದರು.

ಮನುಷ್ಯನಿಗೆ ಎಲ್ಲದಕ್ಕಿಂತ ಶಿಸ್ತು ಹಾಗೂ ಸಮಯ ಪರಿಪಾಲನೆ ಮುಖ್ಯ. ನಾನು ಅದನ್ನು ಕಲಿತದ್ದು ಎಸ್ ನಾರಾಯಣ್ ಅವರಿಂದ. ಇನ್ನೂ ಕೆ.ಮಂಜು ಅವರ ಜೊತೆಗೆ ಈಗಾಗಲೇ ಸಿನಿಮಾ ಮಾಡಿದ್ದೀನಿ. ರಮೇಶ್ ಯಾದವ್ ಅವರು ಮಂಜು ಅವರಿಗೆ ನಿರ್ಮಾಣಕ್ಕೆ ಸಾಥ್ ನೀಡಿದ್ದಾರೆ. ಶ್ರೇಯಸ್, ಬೃಂದಾ ಆಚಾರ್ಯ ಸೇರಿದಂತೆ ಎಲ್ಲಾ ಕಲಾವಿದರು ಅದ್ಭುತವಾಗಿ ನಟಿಸಿದ್ದಾರೆ. ನನ್ನ ಪಾತ್ರ‌ ಕೂಡ ಚೆನ್ನಾಗಿದೆ ಎಂದರು ದುನಿಯಾ ವಿಜಯ್.

ನಾರಾಯಣ್ ನಿರ್ದೇಶನದ 51 ನೇ ಸಿನಿಮಾ. ಹಾಗೆ ನನ್ನ ನಿರ್ಮಾಣದ 51 ನೇ ಚಿತ್ರ ಹಾಗೂ ರಮೇಶ್ ಯಾದವ್ ನಿರ್ಮಾಣದ 21ನೇ ಸಿನಿಮಾ ಇದು ಎಂದ ನಿರ್ಮಾಪಕ ಕೆ ಮಂಜು, ನವೆಂಬರ್ ತಿಂಗಳು ನಮಗೆ ಲಕ್ಕಿ. ಏಕೆಂದರೆ, ನನ್ನ ನಿರ್ಮಾಣದ ರಾಜಾಹುಲಿ ಹಾಗೂ ರಮೇಶ್ ಯಾದವ್ ನಿರ್ಮಾಣದ ದಾಸ ಚಿತ್ರಗಳು ನವೆಂಬರ್‌‌ನಲ್ಲೇ ಬಿಡುಗಡೆಯಾಗಿ ಸೂಪರ್ ಹಿಟ್ ಆಗಿದ್ದವು ಎಂದರು.

ಎಸ್ ನಾರಾಯಣ್ ಅಂತಹ ಅನುಭವಿ ನಿರ್ದೇಶಕರ ಬಳಿ ಕೆಲಸ ಮಾಡಿ ಸಾಕಷ್ಟು ಕಲಿತಿದ್ದೇನೆ. ಇನ್ನೂ, ಅನುಭವಿ ಕಲಾವಿದರ ದೊಡ್ಡ ತಾರಾಬಳಗವೇ ನಮ್ಮ ಚಿತ್ರದಲ್ಲಿದ್ದು, ಅವರೊಟ್ಟಿಗೆ ಅಭಿನಯಿಸಿದ್ದು, ಬಹಳ ಸಂತೋಷವಾಗಿದೆ ಎಂದ್ರು ಶ್ರೇಯಸ್. ಇನ್ನೂ ಡೈರೆಕ್ಟರ್‌‌ನಿಂದ ಶಿಸ್ತನ್ನು ಕಲಿತಿದ್ದೇನೆ. ಒಂದೊಳ್ಳೆ ಪಾತ್ರ ನೀಡಿದ ನಿರ್ಮಾಪಕರಿಗೆ ಹಾಗೂ ನಿರ್ದೇಶಕರಿಗೆ ಧನ್ಯವಾದ ಅಂದ್ರು ಬೃಂದಾ ಆಚಾರ್ಯ.

ಚಿತ್ರದಲ್ಲಿ ನಟಿಸಿರುವ ಹಿರಿಯ ನಟ ಶರತ್ ಲೋಹಿತಾಶ್ವ, ವಿನಯ್ ಬಿದ್ದಪ್ಪ, ರಣವ್ ಮುಂತಾದವರು ತಮ್ಮ ಪಾತ್ರದ ಕುರಿತು ಮಾತನಾಡಿದರು. ಅಂದಹಾಗೆ ಶ್ರೇಯಸ್‌ಗೆ ತನ್ನ ಹಾರ್ಡ್‌ ವರ್ಕ್‌ ಜೊತೆ ಮೊದಲ ಚಿತ್ರದಿಂದಲೂ ಸ್ಟಾರ್‌ಗಳ ಗೆಸ್ಟ್ ಅಪಿಯರೆನ್ಸ್ ಸಿಗ್ತಿದೆ. ಇಲ್ಲಿಯೂ ಸಹ ದುನಿಯಾ ವಿಜಯ್ ಜೊತೆ ಕ್ರೇಜಿಸ್ಟಾರ್ ಸಾಥ್ ನೀಡಿದ್ದು, ಶುಕ್ರವಾರ ಮಾರುತ ಅಸಲಿ ಕಥೆ ಹೊರಬೀಳಲಿದೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್

 

 

Exit mobile version