ಜಂಟನ್‌ಮನ್ ಚಿತ್ರದ ಮರಳಿ ಮನಸಾಗಿದೆ ಸಾಂಗ್ ಎವರ್‌ಗ್ರೀನ್. ಇದೀಗ ಅದೇ ಟೈಟಲ್‌ನಲ್ಲೊಂದು ಯೂತ್‌ಫುಲ್ ಪ್ರೇಮ ದೃಶ್ಯಕಾವ್ಯ ತೆರೆಗೆ ಬರ್ತಿದೆ. ಟೀಸರ್ ಸಖತ್ ಇಂಪ್ರೆಸ್ಸೀವ್ ಆಗಿದ್ದು, ಸಾಂಗ್ಸ್ ಕಣ್ಮನ ತಣಿಸುತ್ತಿವೆ. ಅದನ್ನ ನಾನು ಹೇಳೋದಕ್ಕಿಂತ ನೀವೇ ಒಮ್ಮೆ ಈ ಸ್ಟೋರಿ ನೋಡಿ.
ಪ್ರೀತಿ ಅಂದ್ರೆ ಸುರಿದು ಮರೆಯಾಗೋ ಮಳೆಯಲ್ಲ. ಅದು ಹಗಲಲ್ಲಿ ಕಣ್ಣಿಗೆ ಕಾಣದ ತಾರೆಯೂ ಅಲ್ಲ. ಅದೊಂದು ಸವಿಯಾದ ಭಾವನೆ. ನೀ ಬೇಕು ಅನ್ನೋದು ಅಟ್ರ್ಯಾಕ್ಷನ್. ಆದ್ರೆ ನೀನೇ ಬೇಕು ಅನ್ನೋದು ನಿಜವಾದ ಪ್ರೀತಿ. ಅದು ನನಗಾಯ್ತು. ಈ ರೀತಿ ಮನಸ್ಸು ಮುಟ್ಟುವ ಪದಪುಂಜಗಳಿಂದ ಕಟ್ಟಿರೋ ಪ್ರೇಮದೃಶ್ಯಕಾವ್ಯ ಮರಳಿ ಮನಸಾಗಿದೆ. ಇತ್ತೀಚೆಗೆ ಇದರ ಟೀಸರ್ ದಾವಣಗೆರೆಯ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ರಿವೀಲ್ ಆಯ್ತು. ಕರುನಾಡ ಸಮರ ಸೇನೆಯೊಂದಿಗೆ ನಡೆದ ಕಾರ್ಯಕ್ರಮದಲ್ಲಿ ಸಾವಿರಾರು ಮಂದಿ ಜನಸಾಗರದಲ್ಲಿ ಟೀಸರ್ ಗ್ರ್ಯಾಂಡ್ ಆಗಿ ರಿಲೀಸ್ ಆಯ್ತು.
ಪ್ರೀತ್ಸೋ ಹೃದಯಗಳ ಪಲ್ಲಕ್ಕಿ ಈ ‘ಮರಳಿ ಮನಸಾಗಿದೆ’..!
ಸಾಫ್ಟ್‌ವೇರ್ ಮಂದಿಯ ಸಿನಿಮಾ ಪ್ಯಾಷನ್ ಈ ವೆಂಚರ್
ಈ ಚಿತ್ರದ ಮೊದಲ ಹಾಡನ್ನ ಜಿಟಿ ಮಾಲ್‌ನಲ್ಲಿ ಮಾರ್ಚ್ 8ರಂದು ಮಾಜಿ ಡಿಸಿಎಂ ಅಶ್ವತ್ತ್ ನಾರಾಯಣ್, 2ನೇ ಹಾಡನ್ನ ಮಾರ್ಚ್ ತಿಂಗಳಾಂತ್ಯದಲ್ಲಿ ಕಲಬುರಗಿಯ ಸಂಗಮ್ ಥಿಯೇಟರ್‌ನಲ್ಲಿ, 3ನೇ ಗೀತೆಯನ್ನ ಉಡುಪಿಯ ಇನ್ಫೋಸಿಸ್ ಹಾಲ್‌ನಲ್ಲಿ ಹಾಗೂ 4ನೇ ಸಾಂಗ್‌ನ ಹಿರಿಯನಟಿ ಪ್ರೇಮಾ ಬಿಡುಗಡೆ ಮಾಡಿದ್ರು. ಎಲ್ಲಾ ಹಾಡುಗಳು ಒಂದಕ್ಕಿಂತ ಒಂದು ವಿಭಿನ್ನವಾಗಿದ್ದು, ಕಿವಿಗೂ ಇಂಪು, ಕಣ್ಣಿಗೂ ತಂಪು ಕೊಡ್ತಿವೆ. ಸಾಂಗ್ಸ್ ಸೂಪರ್ ಹಿಟ್ ಆದ ಬಳಿಕ ಟೀಂ ಇಂಪ್ರೆಸ್ಸೀವ್ ಟೀಸರ್‌ನಿಂದ ಸದ್ದು ಮಾಡ್ತಿದೆ.
ಜನವರಿಯಲ್ಲಿ ರಿಲೀಸ್‌ಗೆ ಸಜ್ಜಾಗಿರೋ ಮರಳಿ ಮನಸಾಗಿದೆ ಚಿತ್ರದಲ್ಲಿ ಲವ್, ಎಮೋಷನ್ಸ್, ಪ್ಯಾಮಿಲಿ ಸೆಂಟಿಮೆಂಟ್ಸ್, ಫೈಟ್ಸ್ ಹೀಗೆ ಎಲ್ಲಾ ಕಮರ್ಷಿಯಲ್ ಎಲಿಮೆಂಟ್ಸ್ ಇವೆ. ಇಲ್ಲಿ ನಟ ಮಿತ್ರ ಜೊತೆ ಪರಸಂಗದಲ್ಲಿ ನಟಿಸಿ, ರಿವೀಲ್ ಚಿತ್ರದಿಂದ ಸೋಲೋ ಹೀರೋ ಆಗಿದ್ದ ಅರ್ಜುನ್ ವೇದಾಂತ್ ಲೀಡ್‌ನಲ್ಲಿ ಕಾಣಸಿಗಲಿದ್ದು, ನಿರೀಕ್ಷಾ ಶೆಟ್ಟಿ ಹಾಗೂ ಸ್ಮೃತಿ ವೆಂಕಟೇಶ್ ಅನ್ನೋ ಇಬ್ಬರು ನಟಿಮಣಿಯರಿದ್ದಾರೆ. ನಿರೀಕ್ಷಾ ಶೆಟ್ಟಿ ತುಳು ಚಿತ್ರಗಳಲ್ಲಿ ಪಳಗಿದ್ದು, ರಿಲೀಸ್‌ಗೆ ಸಜ್ಜಾಗ್ತಿರೋ ಕರಿಕಾಡ ಚಿತ್ರಕ್ಕೂ ಇವರೇ ನಾಯಕಿ. ಇನ್ನು ಚೆಲುವೆ ಸ್ಮೃತಿ ವೆಂಕಟೇಶ್‌ಗೆ ಇದು ಡೆಬ್ಯೂ ಮೂವಿ.
ಸಾಂಗ್ಸ್ ಸೂಪರ್ ಹಿಟ್.. ಟೀಸರ್ ಸಖತ್ ಪ್ರಾಮಿಸಿಂಗ್..!
ನಿರೀಕ್ಷಾ, ಸ್ಮೃತಿ ಜೊತೆ ಅರ್ಜುನ್ ವೇದಾಂತ್ ಡಬಲ್ ಲವ್
ನಾಗರಾಜ್ ಶಂಕರ್ ಅನ್ನೋ ಡೆಬ್ಯೂ ಡೈರೆಕ್ಟರ್ ಈ ಮರಳಿ ಮನಸಾಗಿದೆ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದು, ಮುದೇಗೌಡ್ರು ನವೀನ್, ತೆಲಿಗಿ ಮಲ್ಲಿಕಾರ್ಜುನಪ್ಪ ಅನ್ನೋ ಬೆಣ್ಣೆನಗರಿ ದಾವಣಗೆರೆಯ ಇಬ್ಬರು ನಿರ್ಮಾಪಕರುಗಳು ಇದಕ್ಕೆ ಹಣ ಹೂಡಿದ್ದಾರೆ. ಸಾಫ್ಟ್‌ವೇರ್ ಇಂಜಿನಿಯರ್‌ಗಳಾಗಿರೋ ಇವರುಗಳೆಲ್ಲಾ ಒಟ್ಟಿಗೆ ಸೇರಿ, ಅಪಾರ ಸಿನಿಮೋತ್ಸಾಹದಿಂದ ಬಿಡುವಿನ ವೇಳೆ ಈ ಚಿತ್ರ ಕಟ್ಟಿದ್ದಾರೆ. ಇವರಿಗೆ ಚಿತ್ರಸಾಹಿತಿ ಕಮ್ ಅಸೋಸಿಯೇಟ್ ಡೈರೆಕ್ಟರ್ ಆಶಿತ್ ಸುಬ್ರಮಣ್ಯ, ಚಿತ್ರ ಸಾಹಿತಿ ಹರೀಶ್ ಎಸ್ ಎಂ, ಕಾರ್ಯಕಾರಿ ನಿರ್ಮಾಪಕ ವಿಜಯ್ ಕುಮಾರ್ ಎಸ್ ಕೂಡ ಸಾಥ್ ನೀಡಿದ್ದಾರೆ.
ಕಲೆ ಯಾರಪ್ಪನ ಸ್ವತ್ತೂ ಅಲ್ಲ. ಹಾಗಾಗಿ ಸಿನಿಮಾ ಮೇಲೆ ಭಕ್ತಿ ಜೊತೆ ಶ್ರದ್ಧೆ ಹಾಗೂ ನಿಷ್ಠೆ ಇದ್ದವನಿಗೆ ಅದು ಒಲಿದೇ ಒಲಿಯುತ್ತೆ ಅನ್ನೋದಕ್ಕೆ ಸಾಕಷ್ಟು ನಿದರ್ಶನಗಳಿವೆ. ಸದ್ಯ ಮರಳಿ ಮನಸಾಗಿದೆ ಚಿತ್ರತಂಡ ಪಕ್ಕಾ ಪ್ರೊಫೆಷನಲ್ ಆಗಿ ಸಿನಿಮಾನ ಮಾಡಿದೆ. ಪ್ರತಿ ಫ್ರೇಮ್‌ನಲ್ಲೂ ಅವ್ರ ಸಿನಿಮಾ ಪ್ಯಾಷನ್ ಎದ್ದು ಕಾಣ್ತಿದ್ದು, ಕನ್ನಡಿಗರು ಇಂತಹ ಪ್ರಾಮಾಣಿಕ ಪ್ರಯತ್ನಗಳನ್ನ ಕೈ ಹಿಡಿದಿರೋ ಸಾಕಷ್ಟು ಎಕ್ಸಾಂಪಲ್‌ಗಳಿವೆ. ಅಂತಹ ಸಾಲಿಗೆ ಇದು ಸೇರಲಿ. ದೊಡ್ಡ ಗೆಲುವಾಗಲಿ.
