ಸುದೀಪ್ ಟ್ವೀಟ್‌‌‌ಗೆ ರೀಟ್ವೀಟ್ ಮಾಡಿದ ರಾಕಿಭಾಯ್ ಯಶ್..!

BeFunky collage 2026 01 11T232513.597

ಕನ್ನಡ ಚಿತ್ರರಂಗದ ಎರಡು ದೊಡ್ಡ ನಟರು ಕಿಚ್ಚ ಸುದೀಪ್ ಮತ್ತು ರಾಕಿಂಗ್ ಸ್ಟಾರ್ ಯಶ್ ನಡುವಿನ ಸಂಬಂಧ ಮತ್ತೊಮ್ಮೆ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಗೆ ಕಾರಣವಾಗಿದೆ. ಯಶ್ ಅವರ ‘ಟಾಕ್ಸಿಕ್’ ಟೀಸರ್ ಬಿಡುಗಡೆಯಾದ ನಂತರ ಕಿಚ್ಚ ಸುದೀಪ್ ಅವರು ಟೀಸರ್‌ಗೆ ಭರ್ಜರಿ ಪ್ರಶಂಸೆ ಮಾಡಿ ಟ್ವೀಟ್ ಮಾಡಿದ್ದರು. ಆ ಟ್ವೀಟ್‌ಗೆ ರೀಟ್ವೀಟ್ ಮಾಡಿರುವ ಯಶ್ “ಸದ್ಯ ಸುದೀಪ್ ಪ್ರೋತ್ಸಾಹಕ್ಕೆ ಧನ್ಯವಾದಗಳು ಸರ್” ಎಂದು ಭಾವುಕರಾಗಿ ಪ್ರತಿಕ್ರಿಯಿಸಿದ್ದಾರೆ.

ಯಶ್ ತಮ್ಮ ರೀಟ್ವೀಟ್‌ನಲ್ಲಿ ಹೇಳಿರುವಂತೆ: “ನನ್ನ ಹಿರಿಯರಿಂದ, ಅದರಲ್ಲೂ ನಿಮ್ಮಿಂದ, ನಾನು ಕಲಿತ ಒಂದು ವಿಷಯ ಎಂದರೆ ಗಮನ, ಪ್ರಾಮಾಣಿಕತೆ ಮತ್ತು ಧೈರ್ಯದಿಂದ ನಮ್ಮ ಕೆಲಸವನ್ನು ಇನ್ನೂ ಉತ್ತಮವಾಗಿ ಮಾಡಬೇಕು.”

ಈ ಸಂದೇಶವು ಕೇವಲ ಧನ್ಯವಾದವಷ್ಟೇ ಅಲ್ಲ, ಯಶ್ ಅವರು ಕನ್ನಡ ಚಿತ್ರರಂಗದ ಸೀನಿಯರ್ ನಟರಾದ ಕಿಚ್ಚ ಸುದೀಪ್‌ರಿಂದ ಕಲಿತ ಪಾಠಗಳನ್ನು ಹಂಚಿಕೊಂಡಿರುವ ಭಾವನಾತ್ಮಕ ಕ್ಷಣವಾಗಿದೆ. ‘ಟಾಕ್ಸಿಕ್’ ಟೀಸರ್ ಬಿಡುಗಡೆಯಾದ ತಕ್ಷಣವೇ ಸುದೀಪ್ ಅವರು ಟ್ವೀಟ್ ಮಾಡಿ “ಇದು ಭಯಾನಕವಾಗಿದೆ ಯಶ್ ನೀನು ಇನ್ನೊಂದು ಲೆವೆಲ್‌ಗೆ ಹೋಗಿದ್ದೀಯಾ” ಎಂದು ಹೊಗಳಿದ್ದರು. ಈ ಪ್ರಶಂಸೆಗೆ ಯಶ್ ತಕ್ಷಣ ಪ್ರತಿಕ್ರಿಯಿಸಿ ತಮ್ಮ ಹಿರಿಯರಿಗೆ ಗೌರವ ಸಲ್ಲಿಸಿದ್ದಾರೆ.

ಯಶ್ ಅವರ ‘ಟಾಕ್ಸಿಕ್’ ಟೀಸರ್ ಸದ್ಯ ಟ್ರೆಂಡ್ ಆಗುತ್ತಿದ್ದು, ಫ್ಯಾನ್ಸ್ ಮಧ್ಯೆ ಭಾರಿ ಚರ್ಚೆಗೆ ಕಾರಣವಾಗಿದೆ. ಟೀಸರ್‌ನ ಇಂಟೆನ್ಸ್ ಆಕ್ಷನ್, ಡಾರ್ಕ್ ಥೀಮ್ ಮತ್ತು ಯಶ್‌ರ ಲುಕ್ ಎಲ್ಲವೂ ಭಾರಿ ಎಕ್ಸ್‌ಪೆಕ್ಟೇಷನ್ ಹುಟ್ಟುಹಾಕಿದೆ. ಇದೀಗ ಸುದೀಪ್ ಅವರ ಪ್ರಶಂಸೆ ಮತ್ತು ಯಶ್ ಅವರ ಭಾವನಾತ್ಮಕ ರೀಟ್ವೀಟ್ ಈ ಚಿತ್ರಕ್ಕೆ ಇನ್ನಷ್ಟು ಹೆಚ್ಚು ಗಮನ ಸೆಳೆದಿದೆ.

ಕನ್ನಡ ಚಿತ್ರರಂಗದಲ್ಲಿ ಸೀನಿಯರ್-ಜೂನಿಯರ್ ನಡುವಿನ ಈ ಸಂಬಂಧವು ಅಭಿಮಾನಿಗಳಿಗೆ ಸ್ಫೂರ್ತಿ ನೀಡುತ್ತಿದೆ. ಯಶ್ ಅವರು ತಮ್ಮ ಕೆಲಸದಲ್ಲಿ ಗಮನ, ಪ್ರಾಮಾಣಿಕತೆ ಮತ್ತು ಧೈರ್ಯವನ್ನು ಯಾವಾಗಲೂ ಮುಖ್ಯವೆಂದು ನಂಬುತ್ತಾರೆ. ಸುದೀಪ್ ಅವರಂತಹ ಸೀನಿಯರ್‌ನಿಂದ ಬಂದ ಪ್ರೋತ್ಸಾಹವು ಯಶ್ ಅವರಿಗೆ ಇನ್ನಷ್ಟು ಶಕ್ತಿ ತುಂಬಿದೆ ಎಂದು ಫ್ಯಾನ್ಸ್ ಹೇಳುತ್ತಿದ್ದಾರೆ.

‘ಟಾಕ್ಸಿಕ್’ ಚಿತ್ರವು ಯಶ್ ಅವರ ಕೆರಿಯರ್‌ನಲ್ಲಿ ಮತ್ತೊಂದು ದೊಡ್ಡ ಮೈಲಿಗಲ್ಲು ಆಗಲಿದೆ ಎಂಬ ನಿರೀಕ್ಷೆ ಇದೆ. ಈ ರೀಟ್ವೀಟ್ ಮತ್ತು ಸುದೀಪ್ ಪ್ರಶಂಸೆಯಿಂದ ಚಿತ್ರದ ಬಗ್ಗೆ ಇನ್ನಷ್ಟು ಉತ್ಸಾಹ ಹೆಚ್ಚಾಗಿದೆ. ಫ್ಯಾನ್ಸ್ ಈಗ ಟೀಸರ್‌ನ ಪೂರ್ಣ ಟ್ರೈಲರ್ ಮತ್ತು ರಿಲೀಸ್ ದಿನಾಂಕಕ್ಕಾಗಿ ಕಾಯುತ್ತಿದ್ದಾರೆ.

Exit mobile version