ಮಹಾವತಾರ್ ನರಸಿಂಹ.. ಭಾರತದ ಮೊದಲ ಸಿನಿಮ್ಯಾಟಿಕ್ ಯೂನಿವರ್ಸ್. ನಮ್ಮ ಹೆಮ್ಮೆಯ ಹೊಂಬಾಳೆ ಫಿಲಂಸ್ ನಿರ್ಮಾಣದ ಈ ಸಿನಿಮಾ ಮಕ್ಕಳಿಂದ ಮುದುಕರವರೆಗೆ ಎಲ್ಲರ ಮನಸ್ಸು ಗೆಲ್ಲುತ್ತಿದೆ. ಥಿಯೇಟರ್‌ಗಳು ತುಂಬಿ ತುಳುಕುತ್ತಿವೆ. ಬಾಕ್ಸ್ ಆಫೀಸ್‌ನಲ್ಲಿ 60 ಕೋಟಿಗೂ ಅಧಿಕ ಮೊತ್ತ ಗಳಿಸೋ ಮೂಲಕ ಎಲ್ಲರ ಹುಬ್ಬೇರಿಸಿದೆ.
- ನರಸಿಂಹ ನಾಟ್‌ಔಟ್.. ಮಹಾವತಾರಕ್ಕೆ ಪ್ರೇಕ್ಷಕರು ಫಿದಾ
- ಹೊಂಬಾಳೆ ಫಿಲಂಸ್‌ನ ಸಿನಿಮ್ಯಾಟಿಕ್ ಯೂನಿವರ್ಸ್ ಚಿತ್ರ
- ವಿಷ್ಣುವಿನ ಮೈಥಲಾಜಿಕಲ್ ಅನಿಮೇಟೆಡ್ ಆ್ಯಕ್ಷನ್ ಫಿಲ್ಮ್..!
- ಬಾಕ್ಸ್ ಆಫೀಸ್‌ನಲ್ಲಿ 60Cr ಕಲೆಕ್ಷನ್.. ಎಲ್ಲೆಡೆ ಹೌಸ್‌ಫುಲ್
ಕನ್ನಡ ಚಿತ್ರರಂಗದ ಹೆಮ್ಮೆಯ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್, ಭಾರತೀಯ ಸಿನಿಮಾರಂಗದಲ್ಲಿ ಕ್ರಾಂತಿಕಾರಿ ಹೆಜ್ಜೆ ಇಟ್ಟಿದೆ. ಅವರ ಹೊಸ ಅನಿಮೇಷನ್ ಚಿತ್ರ ‘ಮಹಾವತಾರ ನರಸಿಂಹ’, ಅಶ್ವಿನ್ ಕುಮಾರ್ ನಿರ್ದೇಶನದಲ್ಲಿ ಮೂಡಿಬಂದಿದ್ದು, ಭಾರತದಲ್ಲೇ ಅತಿ ಹೆಚ್ಚು ಗಳಿಸಿದ ಅನಿಮೇಟೆಡ್ ಮೂವಿ ಅನ್ನೋ ಇತಿಹಾಸ ಬರೆದಿದೆ. ಸನಾತನ ಮೌಲ್ಯಗಳ ಜೊತೆಗೆ ಜಾಗತಿಕ ಗುಣಮಟ್ಟದ ಕಥಾ ನಿರೂಪಣೆಯನ್ನು ಬೆಸೆದು, ಈ ಚಿತ್ರ ಮಕ್ಕಳಿಂದ ಮುದುಕರವರೆಗೆ ಎಲ್ಲರ ಮನಸೂರೆಗೊಂಡಿದೆ. ಪುರಾಣ ಕಥೆಗಳಿಗೆ ಹೊಸ ದೃಶ್ಯವೈಭವ ನೀಡಿ, ಈ ಚಿತ್ರ ಎಲ್ಲರ ಹೃದಯದಲ್ಲಿ ಶಾಶ್ವತವಾಗಿ ಉಳಿಯುವಂತೆ ಮಾಡಿದೆ.
ಹೊಂಬಾಳೆ ಫಿಲ್ಮ್ಸ್ ಸಂಸ್ಥೆ ಹುಟ್ಟಿದ್ದು ಕರ್ನಾಟಕದ ಮಣ್ಣಿನಲ್ಲಿ. ‘ರಾಜಕುಮಾರ’ ಚಿತ್ರದ ಮೂಲಕ ಯಶಸ್ಸಿನ ಹಾದಿ ಆರಂಭಿಸಿದ ಈ ಸಂಸ್ಥೆ, ತನ್ನ ಮೂಲ ಬೇರುಗಳಿಗೆ ಸದಾ ಅಂಟಿಕೊಂಡಿದೆ. ಕೌಟುಂಬಿಕ ಮೌಲ್ಯಗಳು, ಸಂಪ್ರದಾಯ ಮತ್ತು ಭಾವನಾತ್ಮಕ ಕಥೆಗಳಿಗೆ ಒತ್ತು ನೀಡುತ್ತಲೇ, ಭಾರತೀಯ ಕಥೆಗಳನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ದಿದೆ. ಕರ್ನಾಟಕದ ಹೃದಯದಿಂದ ಹೊರಟ ಈ ಸಂಸ್ಥೆ, ಇಂದು ವಿಶ್ವಾದ್ಯಂತ ಭಾರತೀಯ ಸಿನಿಮಾದ ಹೊಸ ಶಕ್ತಿಯಾಗಿ ಗುರುತಿಸಿಕೊಂಡಿದೆ.
ಹೊಂಬಾಳೆ ಫಿಲ್ಮ್ಸ್ ಕೇವಲ ಒಂದೇ ಬಗೆಯ ಸಿನಿಮಾಗಳನ್ನು ನಿರ್ಮಿಸಿಲ್ಲ. ಭಿನ್ನ, ವಿಭಿನ್ನ ಯೂನಿವರ್ಸ್‌ಗಳನ್ನು ರೂಪಿಸಿದೆ. ಅದಕ್ಕೆ ಕೆಜಿಎಫ್, ಸಲಾರ್ ಸಿನಿಮಾಗಳು ಮತ್ತು ಅವುಗಳ ಜನ ಮನ್ನಣೆ ಹಾಗೂ ಕಲೆಕ್ಷನ್ ಸಾಕ್ಷಿಯಾಗಿದೆ. ‘ಕಾಂತಾರ’ ಮೂಲಕ ನಮ್ಮ ನೆಲದ ದೈವಿಕ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ವಿಶ್ವಕ್ಕೆ ಪರಿಚಯಿಸಿದೆ. ಕಾಂತಾರ-1ನಿಂದ ಮತ್ತಷ್ಟು ದೈವಿಕ ಅಂಶಗಳನ್ನ ಪ್ರೇಕ್ಷಕರಿಗೆ ಉಣಬಡಿಸಲಿದೆ.
ಇದೀಗ ‘ಮಹಾವತಾರ ನರಸಿಂಹ’ ಮೂಲಕ ಆಧ್ಯಾತ್ಮಿಕ ಮತ್ತು ಅದ್ಭುತ ದೃಶ್ಯವೈಭವದ ಪೌರಾಣಿಕ ಯೂನಿವರ್ಸ್‌ಗೆ ಅಡಿಪಾಯ ಹಾಕಿದೆ. ಇವು ಕೇವಲ ಚಲನಚಿತ್ರಗಳಲ್ಲ. ಇದು ಭಾರತೀಯ ಕಥೆಗಳ ನಿರೂಪಣಾ ಶೈಲಿಯನ್ನು ಬದಲಿಸಿದ ಒಂದು ಅಭೂತಪೂರ್ವ ಪ್ರಯೋಗ. ಪ್ರತಿ ಹೆಜ್ಜೆಯಲ್ಲೂ ಹೊಂಬಾಳೆ ಫಿಲ್ಮ್ಸ್ ಹೊಸ ಮಾನದಂಡಗಳನ್ನು ಸ್ಥಾಪಿಸುತ್ತಿದೆ. ಇದು ಕರ್ನಾಟಕದ ಹೆಮ್ಮೆಯನ್ನು ಹೊತ್ತು, ಭಾರತೀಯ ಸಿನಿಮಾವನ್ನು ಹೊಸ ಪಥದತ್ತ ಕೊಂಡೊಯ್ಯುತ್ತಿದೆ. ಇದು ಕೇವಲ ಯಶಸ್ಸಲ್ಲ, ಇದು ನಮ್ಮ ಸಂಸ್ಕೃತಿಯನ್ನು ಆಚರಿಸುತ್ತಿರುವ ಒಂದು ಪರಂಪರೆ.
ಲಾರ್ಡ್ ವಿಷ್ಣು ನರಸಿಂಹನ ಅವತಾರದ ಮೊದಲ ಸಿನಿಮಾ ಇದಾಗಿದ್ದು, ಮೈಥಲಾಜಿಕಜಲ್ ಆ್ಯಕ್ಷನ್ ಜಾನರ್‌ನಿಂದ ಕೂಡಿದೆ. ಮಹಾವತಾರ್ ಸಿನಿಮ್ಯಾಟಿಕ್ ಯೂನಿವರ್ಸ್‌ನ ಮೊದಲ ಸಿನಿಮಾ ಇದಾಗಿದ್ದು, ಮುಂದೆ ಇದರ ಸಾಲು ಸಾಲು ಸೀರೀಸ್ ಸಿನಿಮಾಗಳು ಪ್ರೇಕ್ಷಕರನ್ನ ರಂಜಿಸಲಿವೆ. ಹಿರಣ್ಯ ಕಶಪ ತನ್ನ ಮಗ ಪ್ರಹ್ಲಾದನ ಭಕ್ತಿಯಿಂದಾಗಿ ನರಸಿಂಹನಿಂದ ಕೊಲ್ಲಲ್ಪಡುವ ಈ ಸಿನಿಮಾ ಸುಮಾರು 60 ಕೋಟಿಗೂ ಅಧಿಕ ಮೊತ್ತ ಗಳಿಸಿದೆ. ಎಲ್ಲೆಡೆ ಹೌಸ್‌ಫುಲ್ ಆಗಿದ್ದು, ಇಂತಹ ಸಿನಿಮಾನ ಕಾಣಿಕೆಯಾಗಿ ನೀಡಿದ್ದಕ್ಕೆ ಹೊಂಬಾಳೆ ಫಿಲಂಸ್ ಸಾರ್ಥಕ ಭಾವದಲ್ಲಿದೆ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್