ಪ್ರೀತಿ.. ಎಮೋಷನ್ಸ್.. ಫೈಟ್.. ಬ್ರೇಕಪ್ : ಇದು ‘ಲವ್ ಮ್ಯಾಟ್ರು’

'ಲವ್ ಮ್ಯಾಟ್ರು' ಸಿನಿಮಾ ಟ್ರೇಲರ್‌ನಲ್ಲಿ ಕಾಡಿದ ಲವ್ ಸ್ಟೋರಿ

Untitled design (70)

ಲವ್ ಸ್ಟೋರಿಗಳನ್ನ ಕೇಳೋಕೇನೆ ಚೆಂದ. ಆದ್ರೆ ಕೆಲವೊಂದು ಲವ್ ಸ್ಟೋರಿಗಳು ಮನಸ್ಸಿನ ಆಳದಲ್ಲಿ ಇಳಿದು ಕೇಳುಗರಿಗೂ, ನೋಡುಗರಿಗೂ ನೋವನ್ನ ಕೊಡುತ್ತವೆ. ಈಗ್ಯಾಪ್ಪ ಲವ್ ಸ್ಟೋರಿ ನೋವಿನ ಕಥೆ ಅಂತೀರಾ. ಅಂಥದ್ದೊಂದು ಟ್ರೇಲರ್ ನೋಡಿದೆ. ಕಣ್ಣಲ್ಲಿ ನೀರು ಬಂತು, ಮನಸ್ಸು ಭಾರವಾಯ್ತು. ಆ ಸಿನಿಮಾದ ಹೆಸರೇ ಲವ್ ಮ್ಯಾಟ್ರು.

ವಿರಾಟ ಬಿಲ್ವ ನಟಿಸಿ, ನಿರ್ದೇಶನ ಮಾಡಿರುವಂತ ಸಿನಿಮಾ ಲವ್ ಮ್ಯಾಟ್ರು. ಸದ್ಯ ಟ್ರೇಲರ್ ರಿಲೀಸ್ ಆಗಿದೆ. ಆಗಸ್ಟ್ 1 ರಂದು ರಾಜ್ಯಾದ್ಯಂತ ತೆರೆಗೆ ಬರೋದಕ್ಕೆ ಸಿದ್ಧವಾಗಿದೆ. ಟ್ರೇಲರ್ ನೋಡಿನೇ ಅದೆಷ್ಟೋ ಜನ ಸಿನಿಮಾ ನೋಡೋಕೆ ಥಿಯೇಟರ್ ಬಾಗಿಲು ತಟ್ಟೋದು. ಹಾಗಾದ್ರೆ ಟ್ರೇಲರ್ ಹೇಗಿದೆ ಅನ್ನೋದನ್ನ ನೋಡಿದ್ರೆ, ಪ್ರೇಮಿಯೊಬ್ಬ ಸಿನಿಮಾದ ಡೈರೆಕ್ಟರ್ ಆದಾಗ ಸ್ಮಶಾನದಲ್ಲಿಯೇ ಪ್ರೆಸ್ ಮೀಟ್ ಮಾಡ್ತಾನೆ. ತನ್ನ ಪ್ರೀತಿ ಮಲಗಿರುವ ಜಾಗ ಎಂಬ ಕಾರಣಕ್ಕೆ.

ಲವ್, ಫೈಟ್, ಜಗಳ, ಮುನಿಸು, ಮತ್ತೊಬ್ಬ ಪ್ರೇಮಿಯ ಆಗಮನ, ಎರಡು ಬ್ಯೂಟಿಫುಲ್ ಲವ್ ಸ್ಟೋರಿ ಟ್ರೇಲರ್ ನಲ್ಲಿ ತೆರೆದುಕೊಂಡಿದೆ. ಅಚ್ಯುತ್ ಕುಮಾರ್ ಹಾಗೂ ಸುಮನ್ ರಂಗನಾಥ್ ಅವರ ಪ್ರೀತಿಯನ್ನು ನೋಡುವುದಕ್ಕೂನು ಚೆಂದ ಅನ್ನಿಸುತ್ತೆ. ಈ ಹೊಸ ಪ್ರೇಮಕಥೆಯನ್ನು ಜನರಿಗೆ ತೋರಿಸುವುದಕ್ಕೂ ಮುನ್ನ ಅದ್ದೂರಿಯಾಗಿ ಟ್ರೇಲರ್ ರಿಲೀಸ್ ಮಾಡಲಾಗಿದೆ. ನಟ ಅಭಿಜಿತ್ ಅವರು ಜ್ಯೋತಿ ಬೆಳಗಿಸಿ, ಇಡೀ ತಂಡಕ್ಕೆ ಶುಭಕೋರಿದರು. ಇದೆ ಅಚ್ಯುತ್ ಕುಮಾರ್, ಸುಮನ್ ರಂಗನಾಥ, ಸೋನಲ್ ಸೇರಿದಂತೆ ಹಲವರು ಭಾಗಿಯಾಗಿದ್ದರು.

ಅಭಿಜಿತ್ ಮಾತನಾಡಿ, ಲವ್ ಎಂಬ ಮ್ಯಾಟ್ರು ಬಂದಾಗ ಇದನ್ನ ಅಷ್ಟು ಈಸಿಯಾಗಿ ಹೇಳೋದಕ್ಕೆ ಆಗಲ್ಲ. ಈ ಲವ್ ಮ್ಯಾಟ್ರಲ್ಲಿ ನಂಬಿಕೆ ತುಂಬಾ ಇಂಪಾರ್ಟೆಂಟ್. ಲವ್ ಮ್ಯಾಟ್ರು ಹಿಂದೆ ಬಹಳ ಜನರ ಲೈಫ್ ಮ್ಯಾಟ್ರಿದೆ. ಸಿನಿಮಾ ನೋಡಿ ಗೆಲ್ಲಿಸಿ ಎಂದಿದ್ದಾರೆ.

ಈ ವೇಳೆ ನಟ ಕಂ ನಿರ್ದೇಶಕ ವಿರಾಟ ಬಿಲ್ವ ಮಾತನಾಡಿ, ಲವ್ ಮ್ಯಾಟ್ರು ಅಂತ ಬಂದಾಗ ಒಂದಷ್ಟು ಸಿನಿಮಾಗಳನ್ನ ನೋಡಿರ್ತೀರಾ. ಆದ್ರೆ ನಾನು ತುಂಬಾ ಬಲವಾಗಿ ಹೇಳ್ತೀನಿ, ನೀವಂದುಕೊಂಡಿದ್ದ ಕಥೆ ಇದಾಗಿರಲ್ಲ. ಒಂದೊಳ್ಳೆ ಬ್ಯೂಟಿಫುಲ್ ಕಥೆಯನ್ನ ತೆರೆಮೇಲೆ ನೋಡ್ತೀರಿ ಎಂದಿದ್ದಾರೆ.

ಇದೆ ವೇಳೆ ಅಚ್ಯುತ್ ಕುಮಾರ್ ಮಾತನಾಡಿ, ನನ್ನ ಪಾತ್ರಕ್ಕೂ ಹಲವು ಮ್ಯಾಟರ್ ಇದೆ. ಇಬ್ಬರ ಜೊತೆಯಲ್ಲಿ ಒಂದು ಪ್ರೇಮ ಪ್ರಕರಣವಿದೆ. ಅದ್ಯಾಕೆ, ಹೇಗೆ ಅನ್ನೋದನ್ನ ತೆರೆಮೇಲೆ ನೋಡಿ. ವಿರಾಟ್ ಮತ್ತೆ ನಾನು ಹಲವು ಸಿನಿಮಾಗಳಲಗಲಿ ಜೊತೆಗೆ ಕೆಲಸ ಮಾಡಿದ್ದೀವಿ.

ನಟಿ ಸೋನಲ್ ಮಾತನಾಡಿ, ಈ ಸಿನಿಮಾದಲ್ಲಿ ವರ್ಷ ಎಂಬ ಪಾತ್ರವನ್ನ ಮಾಡಿದ್ದೀನಿ. ಚಿಕ್ಕ ವಯಸ್ಸಿನಲ್ಲಿಯೇ ಅಪ್ಪ ಅವಳಿಂದ ದೂರ ಆಗಿರ್ತಾರೆ. ಆದರೆ ಆ ಹುಡುಗಿ ಬಾಳಲ್ಲಿ ಏನೆಲ್ಲಾ ಆಗುತ್ತೆ ಅನ್ನೋ ಪಾತ್ರ. ಈ ಪಾತ್ರಕ್ಕೆ ವಿರಾಟ್ ಗೆ ಧನ್ಯವಾದ ಹೇಳಬೇಕು. ಈ ಸಿನಿಮಾ ವಿಚಾರದಲ್ಲಿ ನಿರ್ಮಾಪಕಿ ವಂದನಾ ಅವರಿಗೆ ಧನ್ಯವಾದ ತಿಳಿಸಲೇಬೇಕು ಎಂದು ಇಡೀ ತಂಡದ ಬಗ್ಗೆ ಮಾತನಾಡಿದ್ದಾರೆ.

ಒಟ್ಟಾರೆ ಸಿನಿಮಾದ ಟ್ರೇಲರ್ ಒಂದೊಳ್ಳೆ ಬ್ಯೂಟಿಫುಲ್ ಲವ್ ಸ್ಟೋರಿಯನ್ನು ತೋರಿಸಿದೆ. ಅದರಲ್ಲೂ ಅಚ್ಯುತ್ ಕುಮಾರ್ ಅವರು ವಿಭಿನ್ನವಾಗಿ ಕಾಣಿಸಿಕೊಂಡಿದ್ದಾರೆ. ಆಗಸ್ಟ್ 1ರಂದು ಸಿನಿಮಾ ರಿಲೀಸ್ ಆಗ್ತಾ ಇದೆ.

Exit mobile version