ಸ್ಯಾಂಡಲ್‌ವುಡ್‌ನ ಎವರ್‌ಗ್ರೀನ್ ದುನಿಯಾದ ಲೂಸ್‌ಮಾದ ಈಸ್ ಬ್ಯಾಕ್. ಯೆಸ್.. ಯೋಗೇಶ್ ತಮ್ಮ ಚೊಚ್ಚಲ ಚಿತ್ರದ ಕ್ಯಾರೆಕ್ಟರ್ ಟೈಟಲ್‌ನಲ್ಲೇ ಸಿನಿಮಾ ಮಾಡ್ತಿದ್ದಾರೆ. ಇತ್ತೀಚೆಗೆ ಲೂಸ್‌ಮಾದ ಚಿತ್ರಕ್ಕೆ ಬಂಡೆ ಮಹಾಕಾಳಿ ಆಶೀರ್ವದಿಸಿದ್ರು. ಈ ಕುರಿತ ಕಂಪ್ಲೀಟ್ ಕಹಾನಿ ಇಲ್ಲಿದೆ.
- ಯೋಗೇಶ್ ದುನಿಯಾದಲ್ಲಿ ಮತ್ತೆ ‘ಲೂಸ್‌ಮಾದ’ ಸೌಂಡ್
- ಲೂಸ್‌ಮಾದ ಯೋಗಿಗೆ ಬಂಡೆ ಮಹಾಕಾಳಿಯ ಆಶೀರ್ವಾದ
- ಫಸ್ಟ್ಲುಕ್ನಲ್ಲಿ ಗುಳಿಗ ದೈವ.. ಕೋಳಿ ಕಾಳಗ.. ಹಳ್ಳಿ ಸೊಗಡು
- ಕರಾವಳಿ ಭಾಗದಲ್ಲಿ ನಡೆಯೋ ಮತ್ತೊಂದು ಚಂದದ ಕಥಾನಕ
ಸ್ಯಾಂಡಲ್‌ವುಡ್ ಅಂಗಳದ ಎವರ್‌ಗ್ರೀನ್ ಸಿನಿಮಾಗಳಲ್ಲಿ ದುನಿಯಾ ಕೂಡ ಒಂದು. ಇದು ಕನ್ನಡ ಚಿತ್ರರಂಗಕ್ಕೆ ದುನಿಯಾ ವಿಜಯ್, ಲೂಸ್‌ಮಾದ ಯೋಗಿ ಅಂತಹ ಕಲಾವಿದರನ್ನ ನೀಡಿದ ಸಿನಿಮಾ. ದುನಿಯಾಗೆ ಹೀರೋ ವಿಜಯ್ ಆದ್ರೂ, ಲೂಸ್‌ಮಾದ ಪಾತ್ರದಿಂದ ಯೋಗಿ ಯೋಗ ಕೂಡ ಬದಲಾಯ್ತು. ನೆಗೆಟೀವ್ ಶೇಡ್‌ನಲ್ಲಿ ಕಾಣಿಸಿಕೊಂಡಂತಹ ಯೋಗಿಗೆ ಲೂಸ್‌ಮಾದ ಅನ್ನೋದು ಬಿರುದಾಗಿ ಹೆಸರಿನ ಜೊತೆ ಬೆರೆತು ಹೋಯ್ತು.
ಸದ್ಯ ಲೂಸ್ ಮಾದ ಟೈಟಲ್‌ನಲ್ಲಿ ಸಿನಿಮಾವೊಂದು ಬರ್ತಿದೆ. ಈ ಚಿತ್ರದ ನಾಯಕನಾಗಿ ಒನ್ಸ್ ಅಗೈನ್ ಅದೇ ಯೋಗೇಶ್ ಅವ್ರೇ ಕಾಣಿಸಿಕೊಳ್ತಿದ್ದಾರೆ. ಜಾನಕಿ ಕಂಬೈನ್ಸ್ ಲಾಂಛನದಲ್ಲಿ ಧರ್ಮೇಂದ್ರ ನಿರ್ಮಿಸ್ತಿರೋ ಈ ಚಿತ್ರವನ್ನು ರಂಜಿತ್ ಕುಮಾರ್ ಗೌಡ ನಿರ್ದೇಶಿಸುತ್ತಿದ್ದಾರೆ. ಇತ್ತೀಚೆಗೆ ಈ ಚಿತ್ರದ ಮುಹೂರ್ತ ಸಮಾರಂಭ ಬಂಡೆ ಮಹಾಂಕಾಳಿ ದೇವಸ್ಥಾನದಲ್ಲಿ ನೆರವೇರಿತು. ಯೋಗಿ ತಂದೆ, ನಿರ್ಮಾಪಕ ಟಿ.ಪಿ.ಸಿದ್ದರಾಜು ಮೊದಲ ಸನ್ನಿವೇಶಕ್ಕೆ ಆರಂಭ ಫಲಕ ತೋರಿಸಿದ್ರು. ನಿರ್ಮಾಪಕ ಧರ್ಮೇಂದ್ರ ಕ್ಯಾಮೆರಾ ಚಾಲನೆ ಮಾಡಿದ್ರು.
ಉದಯ್ ಶೆಟ್ಟಿ, ಉಮೇಶ್ ಶೆಟ್ಟಿ, ರಘು ಗುಜ್ಜಲ್ ಮುಂತಾದ ಗಣ್ಯರು ಹಾಗೂ ಚಿತ್ರತಂಡದ ಸದಸ್ಯರು ಮುಹೂರ್ತ ಸಮಾರಂಭದಲ್ಲಿ ಉಪಸ್ಥಿತರಿದ್ದರು. ವಿಶೇಷ ಅಂದ್ರೆ ಯೋಗಿ ಪತ್ನಿ ಸಾಹಿತ್ಯ ಕೂಡ ಮುಹೂರ್ತ ಸಮಾರಂಭಕ್ಕೆ ಆಗಮಿಸಿದ್ದರು. ಮಂಗಳೂರು ಮೂದವರಾದ ನಿರ್ಮಾಪಕರು ಲೂಸ್ ಮಾದ ಯೋಗೇಶ್ ಅವ್ರ ಅಭಿಮಾನಿಯಂತೆ. ಹಾಗಾಗಿ ಅವ್ರೇ ನಮ್ಮ ಚಿತ್ರದ ನಾಯಕರಾಗಿರುವುದು ಖುಷಿಯಾಗಿದೆ ಎಂದರು.
ಲೂಸ್ ಮಾದ ನನ್ನ ನಿರ್ದೇಶನದ ಮೂರನೇ ಚಿತ್ರ. ಈ ಚಿತ್ರಕ್ಕೆ The Wolf ಅನ್ನೋ ಟ್ಯಾಗ್‌ಲೈನ್ ಇದೆ. ಇದೊಂದು ಕರಾವಳಿ ಭಾಗದಲ್ಲಿ ನಡೆಯುವ ಕಥೆ. ಉಡುಪಿ, ಸುರತ್ಕಲ್ ಹಾಗೂ ಮಂಗಳೂರಿನಲ್ಲಿ ಚಿತ್ರೀಕರಣವಾಗಲಿದೆ. ಆಗಸ್ಟ್ 25 ರಿಂದ ಚಿತ್ರೀಕರಣ ಆರಂಭವಾಗಲಿದೆ ಎಂದ್ರು ಡೈರೆಕ್ಟರ್.
ನಟ ಕಿಶೋರ್ ಅವರು ಸಹ ಈ ಚಿತ್ರದ ಮುಖ್ಯಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಆದಿ ಲೋಕೇಶ್, ಅಚ್ಯುತ್ ಕುಮಾರ್, ಗೋಪಾಲಕೃಷ್ಣ ದೇಶಪಾಂಡೆ ಮುಂತಾದವರು ತಾರಾಬಳಗದಲ್ಲಿದ್ದಾರೆ. ಈ ಹಿಂದೆ ನಮ್ಮಿಬ್ಬರ ಕಾಂಬಿನೇಶನ್ ನಲ್ಲಿ ಕಂಸ ಅನ್ನೋ ಸಿನಿಮಾ ಆರಂಭವಾಗಬೇಕಿತ್ತು. ಕಾರಣಾಂತರದಿಂದ ಆ ಸಿನಿಮಾ ವಿಳಂಬವಾಯಿತು. ಈಗ ಲೂಸ್ ಮಾದ ಸಿನಿಮಾ ಶುರುವಾಗಿದೆ ಅಂತ ಯೋಗಿ ಖುಷಿ ಹಂಚಿಕೊಂಡರು.
ಪ್ರದೀಪ್ ರೆಡ್ಡಿ ಛಾಯಾಗ್ರಹಣ, ರಂಜನ್ ಸಂಕಲನ, ಶಶಾಂಕ್ ಶೇಷಗಿರಿ ಸಂಗೀತ ನಿರ್ದೇಶನ, ವಿನೋದ್ ಸಾಹಸ ನಿರ್ದೇಶನ ಹಾಗೂ ಸಚಿನ್ ಪೂಜಾರಿ ಅವರ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ. ಅನುಭವಿ ಕಲಾವಿದರ ತಾರಾಬಳಗವಿರುವ ಲೂಸ್ ಮಾದ ಚಿತ್ರ ನೋಡುಗರಿಗೆ ಮನೋರಂಜನೆಯ ರಸದೌತಣ ನೀಡುವುದು ಖಂಡಿತ ಎಂದು ನಾಯಕ ಲೂಸ್ ಮಾದ ಅಭಿಪ್ರಾಯ ಪಟ್ಟರು.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್
