ಇತ್ತೀಚೆಗೆ ಭಾಷೆಯ ವಿಚಾರದಲ್ಲಿ ಕಮಲ್ ಹಾಸನ್ ಕನ್ನಡಿಗರನ್ನ ಕೆಣಕಿದ್ರು. ಅದ್ರ ಬೆನ್ನಲ್ಲೀಗ ಮಲಯಾಳಂ ಚಿತ್ರವೊಂದು ಬೆಂಗಳೂರು ಹುಡುಗಿಯರ ಬಗ್ಗೆ ಆಕ್ಷೇಪಾರ್ಹ ಪದ ಬಳಸಿ, ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದೆ. ಇಷ್ಟಕ್ಕೂ ಏನು ಈ ವಿವಾದ..? ಗ್ಯಾರಂಟಿ ನ್ಯೂಸ್ ಇಂಪ್ಯಾಕ್ಟ್ ಕೊನೆಗೆ ಕ್ಷಮೆ ಯಾಚಿಸಿದ ನಿರ್ಮಾಣ ಸಂಸ್ಥೆ ಹೇಳಿದ್ದೇನು ಅನ್ನೋದ್ರ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ ಓದಿ.
ಇದು ಲೋಕಾ ಅನ್ನೋ ಮಲಯಾಳಂನ ಸೂಪರ್ ಹೀರೋ ಮೂವಿ. ಖ್ಯಾತ ನಟ ದುಲ್ಕರ್ ಸಲ್ಮಾನ್ ನಿರ್ಮಾಣದ ಹಾಗೂ ಡೊಮಿನಿಕ್ ಅರುಣ್ ನಿರ್ದೇಶನದ ಚಿತ್ರ. ಕಲ್ಯಾಣಿ ಪ್ರಿಯದರ್ಶನ್ ಮುಖ್ಯಭೂಮಿಕೆಯ ಈ ಚಿತ್ರ ಆಗಸ್ಟ್ 28ಕ್ಕೆ ತೆರೆಕಂಡು, ಐದೇ ದಿನದಲ್ಲಿ 80ಕ್ಕೂ ಅಧಿಕ ಕೋಟಿ ಗಳಿಸಿದೆ. ಆದ್ರೆ ಈ ಚಿತ್ರದ ಆರಂಭದಲ್ಲೇ ಬೆಂಗಳೂರು ಹುಡ್ಗಿಯರನ್ನ ಅಸಭ್ಯ ಪದದಿಂದ ನಿಂದಿಸುವ ಡೈಲಾಗ್‌ವೊಂದು ಕನ್ನಡಿಗರ ಭಾವನೆಗಳಿಗೆ ಧಕ್ಕೆ ತಂದಿದೆ.
ಮೊನ್ನೆ ಕಮಲ್ ಹಾಸನ್.. ಈಗ ದುಲ್ಕರ್ ಬಿಗ್ ಎಡವಟ್
ಕನ್ನಡಿಗರ ಭಾವನೆಗಳಿಗೆ ಧಕ್ಕೆ ತಂದು.. ನಂತ್ರ ಕ್ಷಮೆ ಯಾಚನೆ
ಮಲಯಾಳಂ ಲೋಕಾದಲ್ಲಿ ಬೆಂಗಳೂರು ಹುಡ್ಗೀರ ನಿಂದನೆ
ಇಲ್ಲಿನ ಅನ್ನ ತಿಂದು.. ಇಲ್ಲಿಯವರಿಗೇ ದ್ರೋಹ ಬಗೆದ ಕಥೆ..!
ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕುವ ಮೂಲಕ, ಇದು ಉದ್ದೇಶಪೂರ್ವಕವಾಗಿ ಆಗಿರೋ ತಪ್ಪು ಅಲ್ಲ. ಕರ್ನಾಟಕದ ಜನತೆಗೆ ಈ ಮೂಲಕ ಕ್ಷಮೆ ಯಾಚಿಸುತ್ತಿದ್ದೇವೆ. ಕೂಡಲೇ ಆ ಆಕ್ಷೇಪಾರ್ಹ ಪದವನ್ನು ತೆಗೆದು ಹಾಕಲಾಗುವುದು ಎಂದು ಭರವಸೆ ನೀಡಿ, ಪೋಸ್ಟ್ ಹಾಕಿದೆ ಚಿತ್ರತಂಡ. ಆದ್ರೆ ಆ ಪದದ ಬದಲಿಗೆ ಡೇಂಜರ್ ಅನ್ನೋ ಪದ ಬಳಸಿ, ಬೆಂಗಳೂರು ಹುಡ್ಗೀರು ಡೇಂಜರ್ ಅನ್ನೋ ಅರ್ಥದಲ್ಲಿ ಬದಲಾಯಿಸೋಕೆ ಟೀಂ ಸಜ್ಜಾಗಿದೆಯಂತೆ. ಅದೇನೇ ಇರಲಿ, ಬೆಂಗಳೂರು ಡೇಸ್ ಸೇರಿದಂತೆ ಮಲಯಾಳಂನ ಸಾಕಷ್ಟು ಚಿತ್ರಗಳಿಗೆ ಕರ್ನಾಟಕ, ಬೆಂಗಳೂರು ಕೇಂದ್ರಬಿಂದು. ಹೀಗಿರುವಾಗ, ಇಲ್ಲಿನ ಜನರ ಭಾವನೆಗಳಿಗೆ ನೋವುಂಟು ಮಾಡೋಕೆ ಹೇಗೆ ಮನಸ್ಸು ಬಂತು..? ಇವರಿಗೆಲ್ಲಾ ಆ ಬಗ್ಗೆ ಕನಿಷ್ಟ ಜ್ಞಾನ ಇಲ್ಲದಿರೋದು ವಿಪರ್ಯಾಸ.
