ಲ್ಯಾಂಡ್‌ಲಾರ್ಡ್ ದುನಿಯಾದಿಂದ ಇತ್ತೀಚೆಗೆ ಯಾವುದೇ ಅಪ್ಡೇಟ್ಸ್ ಸಿಕ್ಕಿರಲಿಲ್ಲ. ಆದ್ರೀಗ ಬಿಗ್ ಬ್ರೇಕಿಂಗ್ ನ್ಯೂಸ್ ಹೊರಬಿದ್ದಿದೆ. ದಾಖಲೆ ಮೊತ್ತಕ್ಕೆ ಆಡಿಯೋ ರೈಟ್ಸ್ ಸೋಲ್ಡ್ ಔಟ್ ಆಗಿದೆ. ಹಾಗಾದ್ರೆ ದುನಿಯಾ ವಿಜಯ್ ಫ್ಯಾನ್ಸ್‌ಗೆ ಲ್ಯಾಂಡ್‌ಲಾರ್ಡ್ ದರ್ಶನ ಯಾವಾಗ..? ಸಿನಿಮಾ ಯಾವ ಹಂತದಲ್ಲಿದೆ ಅನ್ನೋದ್ರ ಇನ್‌ಸೈಡ್ ಸ್ಟೋರಿ ಇಲ್ಲಿದೆ.
- ದೀಪಾವಳಿಗೆ ಲ್ಯಾಂಡ್‌ಲಾರ್ಡ್.. ಆ-15ಕ್ಕೆ ಡಬ್ಬಿಂಗ್ ಟೀಸರ್
- ಆನಂದ್ ಆಡಿಯೋಗೆ ದಾಖಲೆ ಮೊತ್ತಕ್ಕೆ ಮ್ಯೂಸಿಕ್ ರೈಟ್ಸ್..!
- ಟಾಕಿ ಪೋರ್ಷನ್ ಫುಲ್ ಕಂಪ್ಲೀಟ್.. ಸಾಂಗ್ಸ್ ಒಂದೇ ಬಾಕಿ
- ಸಾರಥಿ ಪ್ರೊಡ್ಯೂಸರ್, ಕಾಟೇರ ರೈಟರ್, ವಿಜಯ್ ಕಾಂಬೋ
ಯೆಸ್.. ಲ್ಯಾಂಡ್ ಲಾರ್ಡ್ ಸಿನಿಮಾ ಸದ್ಯ ಸ್ಯಾಂಡಲ್‌ವುಡ್‌ನ ಮೋಸ್ಟ್ ಎಕ್ಸ್‌ಪೆಕ್ಟೆಡ್ ಬಿಗ್ ಬಜೆಟ್, ಬಿಗ್ ಸ್ಟಾರ್ ಮೂವಿಗಳ ಸಾಲಿನಲ್ಲಿರೋ ಸಿನಿಮಾ. ಪರಭಾಷೆಗಳಲ್ಲಿ ಡಿಮ್ಯಾಂಡ್ ಹೆಚ್ಚಿಸಿಕೊಂಡು, ಕನ್ನಡದಲ್ಲಿ ನಟನೆ ಜೊತೆ ನಿರ್ದೇಶನ, ನಿರ್ಮಾಣದಲ್ಲೂ ಬ್ಯುಸಿಯಾಗಿರೋ ದುನಿಯಾ ವಿಜಯ್ ಲೀಡ್‌ನಲ್ಲಿ ನಟಿಸ್ತಿರೋ ಪೀರಿಯಾಡಿಕ್ ಡ್ರಾಮಾ.
ಸಲಗ, ಭೀಮ, ವೀರಸಿಂಹಾರೆಡ್ಡಿ ಸಿನಿಮಾಗಳ ಸಕ್ಸಸ್ ಬಳಿಕ ದುನಿಯಾ ವಿಜಯ್ ನಟಿಸ್ತಿರೋ ಸಿನಿಮಾ ಈ ಲ್ಯಾಂಡ್‌ಲಾರ್ಡ್. ಹಾಗಾಗಿ ಸಹಜವಾಗಿಯೇ ನಿರೀಕ್ಷೆಗಳು ಗರಿಗೆದರಿವೆ. ವಿಜಯದ ಮೇಲೆ ವಿಜಯ ಸಾಧಿಸ್ತಿರೋ ದುನಿಯಾ ವಿಜಯ್ ಸಿನಿದುನಿಯಾದ ಬಿಗ್ಗೆಸ್ಟ್ ವೆಂಚರ್‌ನ ಈ ಹಿಂದೆ ದರ್ಶನ್‌ಗೆ ಸಾರಥಿ ಸಿನಿಮಾ ಪ್ರೊಡ್ಯೂಸ್ ಮಾಡಿದ್ದ ಸತ್ಯ ಪ್ರಕಾಶ್ ಹಾಗೂ ಅವರ ಪುತ್ರ ಸೂರಜ್ ನಿರ್ಮಿಸ್ತಿದ್ದಾರೆ.
ಅಂದಹಾಗೆ ಲ್ಯಾಂಡ್‌ಲಾರ್ಡ್‌ಗೆ ಆ್ಯಕ್ಷನ್ ಕಟ್ ಹೇಳ್ತಿರೋದು ಗುರುಶಿಷ್ಯರು ಚಿತ್ರದ ನಿರ್ದೇಶಕ, ಕಾಟೇರ ಚಿತ್ರದ ಕಥೆಗಾರ ಜಡೇಶ್ ಕೆ ಹಂಪಿ. ಈ ಮೂವರ ಬೆಸ್ಟ್ ಕಾಂಬೋದಲ್ಲಿ ತಯಾರಾಗ್ತಿರೋ ಚಿತ್ರ ಇದಾಗಿದ್ದು, ಬಹುತೇಕ ಶೂಟಿಂಗ್ ಕಂಪ್ಲೀಟ್ ಆಗಿದೆ. ಟಾಕಿ ಪೋರ್ಷನ್ ಮುಗಿದಿದ್ದು, ಹಾಡುಗಳ ಚಿತ್ರೀಕರಣ ಮಾತ್ರ ಬಾಕಿ ಉಳಿದಿದೆ. ಇತ್ತೀಚೆಗೆ ದುನಿಯಾ ವಿಜಯ್ ತಮ್ಮ ಮಗಳೊಂದಿಗೆ ಡಬ್ಬಿಂಗ್ ಆರಂಭಿಸಿದ್ದರು. ಆದ್ರೀಗ ಡಬ್ಬಿಂಗ್ ಕೂಡ ಮುಗೀತಾ ಬಂದಿದ್ದು, ಆಗಸ್ಟ್-15ರಂದು ಡಬ್ಬಿಂಗ್ ವಿಡಿಯೋನ ಬಿಡುಗಡೆ ಮಾಡೋ ಯೋಜನೆಯಲ್ಲಿದೆ ಟೀಂ.
ಸದ್ಯ ಆಡಿಯೋ ರೈಟ್ಸ್ ದಾಖಲೆ ಮೊತ್ತಕ್ಕೆ ಪ್ರತಿಷ್ಠಿತ ಆನಂದ್ ಆಡಿಯೋ ಪಾಲಾಗಿದ್ದು, ಎಷ್ಟು ಮೊತ್ತದ ಹಣ ಅನ್ನೋದನ್ನ ಪ್ರೊಡಕ್ಷನ್ ಹೌಸ್ ಆಗಲಿ, ಆನಂದ್ ಆಡಿಯೋ ಶ್ಯಾಮ್ ಆಗಲಿ ರಿವೀಲ್ ಮಾಡಿಲ್ಲ. ಇನ್ನು ಸಿನಿಮಾದಲ್ಲಿ ರಚಿತಾ ರಾಮ್, ರಾಜ್ ಬಿ ಶೆಟ್ಟಿ, ಡೇರ್‌ಡೆವಿಲ್ ಮುಸ್ತಫಾ ಚಿತ್ರದ ನಾಯಕನಟ, ವಿಜಯ್ ಹಿರಿಯ ಮಗಳು ರಿತನ್ಯ ವಿಜಯ್ ಸೇರಿದಂತೆ ಸಾಕಷ್ಟು ಮಂದಿ ಕಲಾವಿದರಿದ್ದಾರೆ.
ಇತ್ತೀಚೆಗೆ ನೆಲಮಂಗಲದ ಬರದಿ ಬೆಟ್ಟದಲ್ಲಿ ಹಳ್ಳಿ ಸೆಟ್ ಹಾಕಿ, ದೊಡ್ಡ ಮಟ್ಟದಲ್ಲಿ ಚಿತ್ರೀಕರಣ ನಡೆಸಿತ್ತು ಚಿತ್ರತಂಡ. ಆ ಬೃಹತ್ ಸೆಟ್‌ಗಳಿಗಾಗಿ ಕೋಟ್ಯಂತರ ರೂಪಾಯಿ ವ್ಯಯಿಸಿತ್ತು. ಸದ್ಯ ಸಾಂಗ್ಸ್ ಶೂಟಿಂಗ್‌ಗೆ ಯೋಜನೆ ರೂಪಿಸ್ತಿದ್ದು, ಆದಷ್ಟು ಬೇಗ ಕುಂಬಳಕಾಯಿ ಒಡೆದು, ದಸರಾ ಅಥ್ವಾ ದೀಪಾವಳಿಗೆ ತೆರೆಗಪ್ಪಳಿಸೋಕೆ ಸಜ್ಜಾಗ್ತಿದೆ ಲ್ಯಾಂಡ್‌ಲಾರ್ಡ್.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್