ದರ್ಶನ್‌ಗೆ ನೆಮ್ಮದಿ ಇಲ್ವಾ..? ಡೆವಿಲ್ ಹೀಗೆ ಅಂತಿರೋದೇಕೆ..?

ರೇಣುಕಾಸ್ವಾಮಿ ಮರ್ಡರ್ ಕೇಸ್‌‌ನಲ್ಲಿ ನೆಮ್ಮದಿ ಕಳ್ಕೊಂಡ ದಚ್ಚು

Untitled design 2025 08 11t175201.532

ಡಿಬಾಸ್ ದರ್ಶನ್‌ಗೆ ಯಾಕೋ ನೆಮ್ಮದಿನೇ ಇಲ್ಲದಂತಾಗಿದೆ. ಅದಕ್ಕೆ ಕಾರಣಗಳನ್ನ ನಾವು ಪದೇ ಪದೆ ಹೇಳ್ತಿದ್ರೆ ಫ್ಯಾನ್ಸ್ ಜೊತೆ ಅವರು ಕೂಡ ಉರ್ಕೋತಾರೆ. ಇಷ್ಟು ದಿನ ನಾವ್ ಹೇಳ್ತಿದ್ದ ಆ ಡೈಲಾಗ್‌ನ ಖುದ್ದು ದರ್ಶನ್ ಅವರೇ ಹೇಳೋಕೆ ಶುರು ಮಾಡಿದ್ದಾರೆ. ಇದ್ರೆ ನೆಮ್ದಿ ಆಗಿರ್ಬೇಕ್ ಅಂತಿದ್ದಾರೆ. ಇಷ್ಟಕ್ಕೂ ಏನಾಯ್ತು..? ಯಾಕೆ ಹೀಗಂದ್ರು ಅನ್ನೋದಕ್ಕೆ ಈ ಸ್ಟೋರಿ ನೋಡಿ.

ಚಾಲೆಂಜಿಂಗ್ ಸ್ಟಾರ್ ದರ್ಶನ್.. 55 ಸಿನಿಮಾ ಮಾಡಿ ಸೂಪರ್ ಸ್ಟಾರ್ ಪಟ್ಟಕ್ಕೇರಿದ್ರೂ ಸಹ ಇಂದಿಗೂ ಚಾಲೆಂಜ್‌‌ಗಳನ್ನ ಫೇಸ್ ಮಾಡೋದು ತಪ್ಪಿಲ್ಲ. ಒಂದರ ನಂತರ ಒಂದರಂತೆ ಬೇತಾಳನಂತೆ ಬೆನ್ನಿಗೆ ಬಿದ್ದಿವೆ ವಿವಾದಗಳು. ಸದ್ಯ ರೇಣುಕಾಸ್ವಾಮಿ ಮರ್ಡರ್ ಪ್ರಕರಣದಲ್ಲಿ ಪ್ರಮುಖ ಆರೋಪಿ ಆಗಿರೋ ದಾಸ ದರ್ಶನ್, ಮತ್ತೆ ಜೈಲೂಟ ಸವಿಯೋದು ಪಕ್ಕಾ ಎನ್ನಲಾಗ್ತಿದೆ.

ಹೌದು.. ಸುಪ್ರೀಂ ಕೋರ್ಟ್‌ನಲ್ಲಿ ದರ್ಶನ್ ಬೇಲ್ ಕ್ಯಾನ್ಸಲ್ ಆಗೋ ಸಾಧ್ಯತೆಯಿದ್ದು, ಇದು ದಚ್ಚು ಜೊತೆ ಅವ್ರ ಕುಟುಂಬ ಹಾಗೂ ಅಪಾರ ಅಭಿಮಾನಿ ಬಳಗಕ್ಕೂ ಟೆನ್ಷನ್ ಕೊಡ್ತಿದೆ. ಅದರ ಮಧ್ಯೆ ದಚ್ಚು ಡೆವಿಲ್ ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕಾರ್ಯಗಳು ಭರದಿಂದ ಸಾಗ್ತಿದ್ದು, ನಿರ್ಮಾಪಕರು ಒಂದು ಹಂತಕ್ಕೆ ಸೇಫ್. ಅಂತೂ ಇಂತೂ ಕೊನೆಗೂ ಶೂಟಿಂಗ್ ಮುಗಿಸಿ, ಡೆವಿಲ್ ರಿಲೀಸ್ ಮಾಡೋಕೆ ಸಜ್ಜಾಗ್ತಿದ್ದಾರೆ.

ಡೆವಿಲ್ ಸಿನಿಮಾ ಒಂದಷ್ಟು ಟೀಸರ್ ಝಲಕ್‌ಗಳು ಹಾಗೂ ಮೇಕಿಂಗ್ ವಿಡಿಯೋಗಳಿಂದ ಅತೀವ ನಿರೀಕ್ಷೆ ಮೂಡಿಸಿದ್ದು, ದಚ್ಚು ಸ್ಟೈಲಿಶ್ ಲುಕ್ಸ್‌‌ನಲ್ಲಿ ಮಿಂಚುತ್ತಿದ್ದಾರೆ. ಅದ್ರಲ್ಲೂ ಸ್ವಿಟ್ಜರ್ಲೆಂಡ್‌‌‌‌ಗೆ ಹೋಗಿ ಸಾಂಗ್ಸ್ ಶೂಟಿಂಗ್ ಮುಗಿಸಿ ಬಂದಂತಹ ಡೈರೆಕ್ಟರ್ ಕಮ್ ಪ್ರೊಡ್ಯೂಸರ್ ಮಿಲನ ಪ್ರಕಾಶ್, ಇದೀಗ ಪ್ರಮೋಷನ್ಸ್‌ಗೆ ಮುಹೂರ್ತ ಇಟ್ಟಿದ್ದಾರೆ. ಇದೇ ಆಗಸ್ಟ್ 15ರಂದು ಡೆವಿಲ್ ಫಸ್ಟ್ ಸಾಂಗ್ ರಿವೀಲ್ ಆಗ್ತಿದೆ.

ಆ ಹಾಡು ಯಾವುದು..? ಹೇಗಿರಲಿದೆ ಅನ್ನೋದೇ ಕ್ಯೂರಿಯಾಸಿಟಿ. ಯಾಕಂದ್ರೆ ಈ ಹಿಂದೆ ದರ್ಶನ್ ಅಮಲಿನ ಮತ್ತಲ್ಲೆ ಹೇಳಿದ್ದ ಡೈಲಾಗ್‌ವೊಂದರಿಂದ ಆರಿಸಿದ ಸಾಲುಗಳಿಂದಲೇ ಆ ಹಾಡು ಶುರುವಾಗ್ತಿದೆ. ಇದ್ರೆ ನೆಮ್ಮದಿಯಾಗ್ ಇರಬೇಕ್ ಅನ್ನೋ ಸಾಂಗ್ ಅದಾಗಿದ್ದು, ಸ್ವಾತಂತ್ರ್ಯೋತ್ಸವ ಹಿನ್ನೆಲೆ ಆಗಸ್ಟ್ 15ಕ್ಕೆ ಹಾಡು ಬಿಡುಗಡೆ ಆಗಲಿದೆ. ಅದನ್ನ ಚಿತ್ರತಂಡ ಅಫಿಶಿಯಲಿ ಅನೌನ್ಸ್ ಮಾಡಿದ್ದು, ಫ್ಯಾನ್ಸ್ ಖುಷಿಯಿಂದ ಅದನ್ನ ಶೇರ್ ಮಾಡ್ತಿ ಕಾತರದಿಂದ ಕಾಯ್ತಿದ್ದಾರೆ. ಗುಡ್ or ಬ್ಯಾಡ್.. ನಾವು ನಿಮ್ಮೊಂದಿಗೆ ಬಾಸ್ ಅಂತೆಲ್ಲಾ ಸಾಥ್ ಕೊಡ್ತಿದ್ದಾರೆ.

ರಾಬರ್ಟ್‌, ಕಾಟೇರ ಚಿತ್ರಗಳ ಬಳಿಕ ಬರ್ತಿರೋ ದರ್ಶನ್‌ರ ಸಿನಿಮಾ ಈ ಡೆವಿಲ್. ಈ ಹಿಂದಿನ ಎರಡೂ ಚಿತ್ರಗಳು ಹಂಡ್ರೆಡ್ ಕ್ರೋರ್ ಕ್ಲಬ್ ಸೇರುವ ಮೂಲಕ ಬ್ಲಾಕ್ ಬಸ್ಟರ್ ಹಿಟ್ ಆಗಿದ್ದವು. ಹಾಗಾಗಿ ಈ ಡೆವಿಲ್ ಕೂಡ ಹಂಡ್ರೆಡ್ ಪರ್ಸೆಂಟ್ ಕ್ಲಿಕ್ ಆಗಲಿದೆ. ಬಾಕ್ಸ್ ಆಫೀಸ್ ಸುಲ್ತಾನನಿಗೆ ಹ್ಯಾಟ್ರಿಕ್ ಹಿಟ್ ಪಟ್ಟ ತಂದುಕೊಂಡಲಿದೆ ಅನ್ನೋ ಭರವಸೆಯಲ್ಲಿದೆ ಚಿತ್ರರಂಗ ಹಾಗೂ ಡಿ ಭಕ್ತಗಣ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್

Exit mobile version