ಕುಂಭಮೇಳದಲ್ಲೂ ಮೇಳೈಸಿದ “ಕುಲದಲ್ಲಿ ಕೀಳ್ಯಾವುದೋ” ಚಿತ್ರದ ಹಾಡು.‌.!

ಪ್ರಯಾಗರಾಜ್‌ನಲ್ಲಿ ಮಡೆನೂರ್ ಮನು!

Kuladalli keelyavudo movie

ಕೆ ರಾಮ್ ನಾರಾಯಣ್ ನಿರ್ದೇಶನದ, ಯೋಗರಾಜ್ ಭಟ್ ಕಥೆ ಹೊಂದಿರುವ, ಸಂತೋಷ್ ಕುಮಾರ್ ಮತ್ತು ವಿದ್ಯಾ ನಿರ್ಮಾಣದ, ಮಡೆನೂರು ಮನು ಹಾಗೂ ಮೌನ ಗುಡ್ಡೆಮನೆ ನಾಯಕ, ನಾಯಕಿಯಾಗಿ ನಟಿಸುತ್ತಿರುವ “ಕುಲದಲ್ಲಿ ಕೀಳ್ಯಾವುದೋ” ಚಿತ್ರಕ್ಕಾಗಿ ಯೋಗರಾಜ್ ಭಟ್ ಅವರು ಬರೆದು, ಮನೋಮೂರ್ತಿ ಅವರು ಸಂಗೀತ ನೀಡಿ ಹಾಗೂ ಅಂತೋನಿ ದಾಸ್ ಹಾಡಿರುವ “ನಮ್ ಪೈಕಿ ಒಬ್ಬ ಹೋಗ್ಬುಟ” ಹಾಡು ಇತ್ತೀಚಿಗೆ ಬಿಡುಗಡೆಯಾಗಿ, ಟ್ರೆಂಡಿಂಗ್ ನಲ್ಲಿದೆ.

ಪ್ರಯಾಗರಾಜ್‌ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳಕ್ಕೆ ಚಿತ್ರದ ನಾಯಕ ಮಡೆನೂರ್ ಮನು ಭೇಟಿ ನೀಡಿದ್ದರು. ಅಲ್ಲೂ ಸಹ ಈ ಹಾಡನ್ನು ಕೇಳಿದ ಜನರು ಮೆಚ್ಚುಗೆ ಸೂಚಿಸಿದರು. ಚಿತ್ರದ ಪೋಸ್ಟರ್ ಹಿಡಿದು ಮನು ಸಂಗಮದಲ್ಲಿ ಮುಳುಗಿ ಚಿತ್ರ ಯಶಸ್ವಿಯಾಗಲೆಂದು ಕ್ಷೇತ್ರದೇವತೆಯನ್ನು ಪ್ರಾರ್ಥಿಸಿದರು. ನಾಗಾಸಾಧುಗಳ ಆಶೀರ್ವಾದವನ್ನು ಸಹ ಪಡೆದುಕೊಂಡರು.

Exit mobile version