ಧನುಷ್ ಹಾಗೂ ಕಿಂಗ್ ನಾಗಾರ್ಜುನ್.. ಇವರಿಬ್ಬರಲ್ಲಿ ಯಾರು ಕುಬೇರ ಅನ್ನೋ ಪ್ರಶ್ನೆಗೆ ಮತ್ತಷ್ಟು ಕಿಚ್ಚತ್ತಿಸೋ ಕಾರ್ಯ ಮಾಡಿದ್ದಾರೆ ಶೇಖರ್ ಕಮ್ಮುಲ. ಕುಬೇರನ ಜೊತೆ ಜೊತೆಗೆ ಮಿಡಲ್ ಕ್ಲಾಸ್ ಬದುಕು ಬದುಕ್ತಿರೋ ರಶ್ಮಿಕಾ ಮಂದಣ್ಣ, ಮತ್ತೊಂದು ಪ್ಯಾನ್ ಇಂಡಿಯಾ ಚಿತ್ರದಲ್ಲಿ ಮಿಂಚು ಹರಿಸಿದ್ದಾರೆ.
‘ಕುಬೇರ’ನ ಜೊತೆ ರಶ್ಮಿಕಾ ಮಿಡಲ್ ಕ್ಲಾಸ್ ಬದುಕು..!?
ಧನುಷ್ & ನಾಗಾರ್ಜುನ್.. ಇಬ್ಬರಲ್ಲಿ ಕುಬೇರ ಯಾರು..?
ಸೋಶಿಯಲ್ ಥ್ರಿಲ್ಲರ್ ಜೊತೆ ಡೈರೆಕ್ಟರ್ ಕಮ್ಮುಲ ಬ್ಯಾಕ್
ಛಾವಾ, ಸಿಕಂದರ್ ಬಳಿಕ ಮತ್ತೆ ಸೌತ್ಗೆ ಮರಳಿದ ರಶ್ಮಿಕಾ
ಇದು ಕುಬೇರ ಚಿತ್ರದ ಲೇಟೆಸ್ಟ್ ಟೀಸರ್ ಝಲಕ್. ಈ ಹಿಂದೆ ಜಸ್ಟ್ ಕ್ಯಾರೆಕ್ಟರ್ಸ್ನ ರಿವೀಲ್ ಮಾಡಿದ್ದ ನಿರ್ದೇಶಕ ಶೇಖರ್ ಕಮ್ಮುಲ, ಈ ಬಾರಿ ಪ್ರೇಕ್ಷಕರ ತಲೆಗೆ ಮತ್ತಷ್ಟು ಹುಳ ಬಿಡುವ ಕಾರ್ಯ ಮಾಡಿದ್ದಾರೆ. ಹೌದು.. ಕಾಲಿವುಡ್ ಸೂಪರ್ ಸ್ಟಾರ್ ಧನುಷ್ ಹಾಗೂ ಟಾಲಿವುಡ್ನ ಕಿಂಗ್ ನಾಗಾರ್ಜುನ್ ಜೊತೆ ರಶ್ಮಿಕಾ ಮಂದಣ್ಣ ಮುಖ್ಯ ತಾರಾಗಣದಲ್ಲಿರೋ ಕುಬೇರದಲ್ಲಿ ಅಸಲಿ ಕುಬೇರ ಯಾರು ಅನ್ನೋದೇ ಯಕ್ಷ ಪ್ರಶ್ನೆ.
ADVERTISEMENT
ADVERTISEMENT
ಸೋಶಿಯಲ್ ಥ್ರಿಲ್ಲರ್ ಜಾನರ್ ಸಿನಿಮಾನ ಕೈಗೆತ್ತಿಕೊಂಡಿರೋ ಶೇಖರ್ ಕಮ್ಮುಲ, ತಮ್ಮ ಈ ಹಿಂದಿನ ಎಲ್ಲಾ ಸಿನಿಮಾಗಳಿಗಿಂತ ಇದನ್ನ ವಿಭಿನ್ನವಾಗಿ ತೆರೆ ಮೇಲೆ ಪ್ರೆಸೆಂಟ್ ಮಾಡ್ತಿದ್ದಾರೆ. ನಾಗಚೈತನ್ಯ ಹಾಗೂ ಸಾಯಿ ಪಲ್ಲವಿ ಜೊತೆ ನಾಲ್ಕು ವರ್ಷಗಳ ಹಿಂದೆ ಲವ್ ಸ್ಟೋರಿ ಮಾಡಿದ್ದ ಈ ಡೈರೆಕ್ಟರ್, ಇದೀಗ ಮನೋವಿಕಾಸದ ಬೀಜ ಬಿತ್ತುವಂತಹ ಗಟ್ಟಿ ಕಥೆಯೊಂದಿಗೆ ಬರ್ತಿದ್ದಾರೆ.
ಅಂದಹಾಗೆ ಕುಬೇರ ಅಂದಾಕ್ಷಣ ದುಡ್ಡು, ಚಿನ್ನ, ಆಸ್ತಿ, ಅಂತಸ್ತು, ಶ್ರೀಮಂತಿಕೆ ಅನ್ನೋದು ಮೈಂಡ್ಗೆ ಬರಲಿದೆ. ಸದ ್ಯ ಈ ಸಿನಿಮಾದ ಕಥೆ ಕೂಡ ಅಂಥದ್ದೇ. ಇಲ್ಲಿ ನಾಗಾರ್ಜುನ್ ಸಾಫ್ಟ್ ವೇರ್ ಎಂಪ್ಲಾಯ್ ತರ ಕಾಣಲಿದ್ದು, ಒಮ್ಮೆ ಕಂತೆ ಕಂತೆ ಹಣವಿರೋ ಕಂಟೈನರ್ನಲ್ಲಿ ಹಣದ ರಾಶಿ ಮುಂದೆ ನಿಂತಿದ್ದಾರೆ. ಅತ್ತ ಧನುಷ್ ಶ್ರೀಮಂತನಾಗಲು ಧನಲಕ್ಷ್ಮೀಗೆ ಕೈ ಮುಗಿಯುತ್ತಿದ್ದಾರೆ.
ಭಿಕ್ಷುಕವಾಗಿ ಧನುಷ್ ಅಲ್ಲಲ್ಲಿ ಕಾಣಸಿಗಲಿದ್ದು, ಕಿಂಗ್ ನಾಗ್ ಹಾಗೂ ಧನುಷ್ ಪಾತ್ರಗಳ ನಡುವಿನ ಬ್ರಿಡ್ಜ್ ಆಗಿ ರಶ್ಮಿಕಾಮ ಬಿಂಬಿಸಲಾಗಿದೆ.
ನಾಗಾರ್ಜುನ್ ಹಾಗೂ ಧನುಷ್ ಇಬ್ಬರಲ್ಲಿ ಅಸಲಿ ಕುಬೇರ ಯಾರು ಅನ್ನೋದಕ್ಕೆ ನಾವು ಸಿನಿಮಾ ನೋಡಿದ್ರೆ ಉತ್ತರ ಸಿಗಬಹುದು. ಆದ್ರೆ ಚಿತ್ರದಲ್ಲಿ ಬಾಲಿವುಡ್ ನಟ ಜಿಮ್ ಸರಭ್, ದಲಿಪ್ ತಾಹಿಲ್, ಸಯಾಜಿ ಶಿಂದೆ ಸೇರಿದಂತೆ ಸಾಕಷ್ಟು ಮಂದಿ ಬಣ್ಣ ಹಚ್ಚಿದ್ದಾರೆ. ವಿಶೇಷ ಅಂದ್ರೆ ಬಾಲಿವುಡ್ನಲ್ಲಿ ಛಾವಾ ಹಾಗೂ ಸಿಕಂದರ್ ಬ್ಲಾಕ್ ಬಸ್ಟರ್ ಹಿಟ್ ಬಳಿಕ ಮತ್ತೆ ಸೌತ್ಗೆ ಮರಳಿದ್ದಾರೆ ರಶ್ಮಿಕಾ. ಯೆಸ್.. ಪುಷ್ಪ-2 ಬಳಿಕ ಇದು ನ್ಯಾಷನಲ್ ಕ್ರಶ್ ಮತ್ತೊಂದು ನಿರೀಕ್ಷಿತ ಸೌತ್ ಸಿನಿಮಾ.
ಸುಮಾರು 120 ಕೋಟಿ ಬಿಗ್ ಬಜೆಟ್ನಲ್ಲಿ ತೆಲುಗಿನ ಜೊತೆ ತಮಿಳು ಹಾಗೂ ಹಿಂದಿಯಲ್ಲಿ ಏಕಕಾಲದಲ್ಲಿ ಚಿತ್ರಿಸಿರೋ ಕುಬೇರ ಸಿನಿಮಾ, ಕನ್ನಡಕ್ಕೂ ಡಬ್ ಆಗಿ ರಿಲೀಸ್ ಆಗ್ತಿದೆ. ಸಿನಿಮಾ ಇದೇ ಜೂನ್ 20ಕ್ಕೆ ವಿಶ್ವದಾದ್ಯಂತ ತೆರೆಗೆ ಬರಲಿದ್ದು, ಧನುಷ್ ಎಫರ್ಟ್ಸ್ ಈ ಸಿನಿಮಾಗಾಗಿ ಎಷ್ಟರ ಮಟ್ಟಿಗೆ ಇದೆ ಅನ್ನೋದಕ್ಕೆ ಅಂದೇ ಉತ್ತರ ಸಿಗಲಿದೆ.