ಹೃತಿಕ್‌‌ ರೋಷನ್‌ಗೆ ಭಯ.. ತಂದೆಯಿಂದ ಅಭಯ

ಕ್ರಿಶ್-4ಗೆ ಹೃತಿಕ್ ಡೈರೆಕ್ಟರ್.. 25 ವರ್ಷದ ನಂತ್ರ ಸಾಹಸ

Untitled design 2025 04 11t173850.593

ಬಾಲಿವುಡ್ ಗ್ರೀಕ್ ಗಾಡ್ ಹೃತಿಕ್ ರೋಷನ್‌‌ಗೆ ಅದ್ಯಾಕೋ ಎಲ್ಲಿಲ್ಲದ ಭಯ ಕಾಡ್ತಿದೆಯಂತೆ. ತಂದೆ ಅಭಯ ನೀಡಿದ್ರೂ ಸಹ ಹೆದರುತ್ತಾ ಇರೋದ್ಯಾಕೆ ನೀಲಿ ಕಂಗಳ ಸಿಕ್ಸ್ ಪ್ಯಾಕ್ ಹೀರೋ..? ಅಂಥದ್ದೇನಾಯ್ತು ಬಿಟೌನ್ ಸೂಪರ್ ಸ್ಟಾರ್‌ಗೆ ಅನ್ನೋ ನಿಮ್ಮ ಕ್ಯೂರಿಯಾಸಿಟಿಗೆ ಉತ್ತರ ಇಲ್ಲಿದೆ..

ಹಿಂದಿ ಚಿತ್ರರಂಗದಲ್ಲಷ್ಟೇ ಅಲ್ಲ, ಇಡೀ ಭಾರತೀಯ ಚಿತ್ರರಂಗದ ಹ್ಯಾಂಡ್ಸಮ್ ಹಂಕ್‌‌ಗಳಲ್ಲಿ ಮೊದಲ ಸಾಲಿನಲ್ಲಿ ನಿಲ್ಲೋ ಸ್ಟಾರ್ ಅಂದ್ರೆ ಅದು ಹೃತಿಕ್ ರೋಷನ್. ಅಬ್ಬಬ್ಬಾ.. ಈತನ ಸಿಕ್ಸ್ ಪ್ಯಾಕ್ ಮೈಕಟ್ಟು, ಆರ್ಟಿಫಿಶಿಯಲ್ ಲೆನ್ಸ್‌ನೂ ಮೀರಿಸೋ ನ್ಯಾಚುರಲ್ ನೀಲಿ ಕಣ್ಣುಗಳು.. ರೊಮ್ಯಾಂಟಿಕ್, ಕ್ಲಾಸ್ ಅಥ್ವಾ ಮಾಸ್.. ಯಾವುದೇ ಪಾತ್ರ ಕೊಟ್ಟರೂ ಲೀಲಾಜಾಲವಾಗಿ ನಟಿಸಬಲ್ಲ ಅದ್ಭುತ ಕಲಾವಿದ. ಈತನ ಅಂದ ಚೆಂದಕ್ಕೆ ಚಿತ್ರರಂಗ ಪ್ರೀತಿಯಿಂದ ಗ್ರೀಕ್ ಗಾಡ್ ಅಂತಲೇ ಕರೆಯುತ್ತೆ.

ಹೃತಿಕ್ ವೃತ್ತಿ ಜೀವನದ ದಿ ಬೆಸ್ಟ್ ಸಿನಿಮಾಗಳು ಅಂದ್ರೆ ಕಹೋ ನಾ ಪ್ಯಾರ್ ಹೈ, ಕಭಿ ಖುಷಿ ಕಭಿ ಘಮ್, ಕೋಯಿ ಮಿಲ್ ಗಯಾ, ಕ್ರಿಶ್, ಕ್ರಿಶ್ 3, ಜೋಧಾ ಅಕ್ಬರ್, ಬ್ಯಾಂಗ್ ಬ್ಯಾಂಗ್, ಸೂಪರ್ 30, ವಾರ್, ಫೈಟರ್. ಹೀಗೆ ಒಂದಲ್ಲ ಎರಡಲ್ಲ. ಆದ್ರೀಗ ವಾರ್ ಸೀಕ್ವೆಲ್ ವಾರ್-2 ಬರೋಕೆ ಸಜ್ಜಾಗ್ತಿದೆ. ಅದರಲ್ಲಿ ನಮ್ಮ ತ್ರಿಬಲ್ ಆರ್ ಸ್ಟಾರ್ ಜೂನಿಯರ್ ಎನ್‌ಟಿಆಋ್ ಜೊತೆ ಹೃತಿಕ್ ಜುಗಲ್ಬಂದಿ ಜೋರಿರಲಿದೆ.

ವಿಶೇಷ ಅಂದ್ರೆ ಹೃತಿಕ್ ಬರೀ ನಟನಷ್ಟೇ ಅಲ್ಲ, ಅವರ ತಂದೆ ರಾಕೇಶ್ ರೋಷನ್ ಗರಡಿಯಲ್ಲಿ ಪಳಗಿರೋ ಬಾಲನಟ, ಬರಹಗಾರ, ಅಸಿಸ್ಟೆಂಡ್ ಡೈರೆಕ್ಟರ್ ಕೂಡ ಹೌದು. 200ನೇ ಇಸವಿಯಲ್ಲಿ ಕಹೋ ನಾ ಪ್ಯಾರ್ ಹೈ ಚಿತ್ರದಲ್ಲಿ ಹೃತಿಕ್‌‌ನ ಹೀರೋ ಆಗಿ ಲಾಂಚ್ ಮಾಡಿದ್ದು ಇವ್ರ ತಂದೆ ರಾಕೇಶ್ ರೋಷನ್. ಇದೀಗ ಬರೋಬ್ಬರಿ 25 ವರ್ಷಗಳ ನಂತ್ರ ಅದೇ ಹೃತಿಕ್ ರೋಷನ್‌‌ನ ನಿರ್ದೇಶಕರಾಗಿಯೂ ಲಾಂಚ್ ಮಾಡ್ತಿದ್ದಾರೆ ನಿರ್ಮಾಪಕ ರಾಕೇಶ್ ರೋಷನ್.

ಹೌದು.. ಕ್ರಿಶ್ ಸೀರೀಸ್‌ನ ನಾಲ್ಕನೇ ಸಿನಿಮಾ ಕ್ರಿಶ್-4ಗೆ ಮುಹೂರ್ತ ಇಟ್ಟಾಗಿದೆ. ವಿಶೇಷ ಅಂದ್ರೆ ಕ್ರಿಶ್-4 ಚಿತ್ರದಲ್ಲಿ ಹೃತಿಕ್ ಬರೀ ನಟಿಸುತ್ತಿಲ್ಲ. ನಟನೆ ಜೊತೆ ಅದಕ್ಕೆ ಅವರೇ ಆ್ಯಕ್ಷನ್ ಕಟ್ ಕೂಡ ಹೇಳ್ತಿದ್ದಾರೆ. ಆ ಮೂಲಕ ಡೈರೆಕ್ಟರ್ ಕ್ಯಾಪ್ ತೊಡಲು ಮುಂದಾಗಿದ್ದಾರೆ. 25 ವರ್ಷಗಳ ಹಿಂದೆ ಹೀರೋ ಆಗಿ ಲಾಂಚ್ ಆಗಿದ್ದ ಹೃತಿಕ್, ಇದೀಗ ಡೈರೆಕ್ಟರ್ ಆಗಿ ಲಾಂಚ್ ಆಗ್ತಿರೋದಕ್ಕೆ ಸಿಕ್ಕಾಪಟ್ಟೆ ಭಯ ಆಗ್ತಿದೆ ಎಂದಿದ್ದಾರೆ. ಅಲ್ಲದೆ, ಕಲಿಕಾ ಕೇಂದ್ರಕ್ಕೆ ಮತ್ತೆ ಹೋಗುವಂತಾಗಿದೆ ಎಂದಿದ್ದಾರೆ.

ಮಗ ಹೃತಿಕ್ ಆ ಭಯಕ್ಕೆ ತಂದೆ ರಾಕೇಶ್ ರೋಷನ್ ಅಭಯ ನೀಡಿದ್ದು, ನಾ ನಿನ್ನೊಂದಿಗೆ ಇರುವಾಗ ಭಯವೇಕೆ ಎಂದಿದ್ದಾರೆ. ಸೂಪರ್ ಹೀರೋ ಫಿಲ್ಮ್ ಕ್ರಿಶ್ ಸೀರೀಸ್‌‌ನ ನಾಲ್ಕನೇ ಚಿತ್ರ ಈ ಹಿಂದಿನ ಚಿತ್ರಗಳಿಗಿಂತ ವಿಭಿನ್ನವಾಗಿರಲಿದ್ದು, ಟೆಕ್ನಿಕಲಿ ಸಖತ್ ಸ್ಟ್ರಾಂಗ್ ಇರಲಿದೆಯಂತೆ. ಒಟ್ಟಾರೆ ಸದಾ ಭಿನ್ನ ವಿಭಿನ್ನ ಪಾತ್ರಗಳಿಗಾಗಿ ಹಾತೊರೆಯೋ ಹೃತಿಕ್, ಇದೀಗ ನಿರ್ದೇಶನಕ್ಕೆ ವಾಲಿರುವುದು ಇಂಟರೆಸ್ಟಿಂಗ್ ಅನಿಸಿದೆ. ಕ್ರಿಶ್-4 ನಿರೀಕ್ಷೆಗೂ ಮೀರಿದ ಸಕ್ಸಸ್ ಪಡೆಯಲಿ ಅಂತ ಫ್ಯಾನ್ಸ್ ಮತ್ತು ಹೃತಿಕ್ ಹಿತೈಷಿಗಳು ಹಾರೈಸುತ್ತಿದ್ದಾರೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್

ನಿಮ್ಮ ನೆಚ್ಚಿನ ಗ್ಯಾರಂಟಿ ನ್ಯೂಸ್ ಈ ಕೆಳಕಂಡ ಕೇಬಲ್ & ಡಿಟಿಎಚ್ ನೆಟ್ ವರ್ಕ್ ಗಳಲ್ಲಿ ಲಭ್ಯ..
Exit mobile version