ರಾಕಿಭಾಯ್ ಯಶ್ ತಾಯಿ ಪುಷ್ಪ ನಿರ್ಮಾಣದ ಚೊಚ್ಚಲ ಸಿನಿಮಾ ಕೊತ್ತಲವಾಡಿ ರಿಲೀಸ್‌ಗೆ ಕೌಂಟ್‌ಡೌನ್ ಶುರುವಾಗಿದೆ. ನಿರ್ಮಾಪಕಿ ಪಟ್ಟ ಪಡೆದ ಪುಷ್ಪ ಅವ್ರಿಗೆ ನಾಳೆ ಬಹುದೊಡ್ಡ ಅದೃಷ್ಠ ಪರೀಕ್ಷೆಯಿದೆ. ಆದ್ರೆ ಅದರ ಪ್ರಮೋಷನ್ಸ್ ವೇಳೆ ರಾಕಿ ಮದರ್ ಕೊಟ್ಟ ಸ್ಟೇಟ್‌ಮೆಂಟ್ ಎಲ್ಲರೂ ಮಾತಾಡಿಕೊಳ್ಳುವಂತಾಗಿದೆ. ಏನದು ಅನ್ನೋ ಕ್ಯೂರಿಯಾಸಿಟಿಗೆ ಉತ್ತರ ಈ ಪ್ಯಾಕೇಜ್.
ದಿ ವೆಯ್ಟ್ ಈಸ್ ಓವರ್.. ಇದೇ ಆಗಸ್ಟ್ 1ಕ್ಕೆ ಅಂದ್ರೆ ನಾಳೆ ಕೊತ್ತಲವಾಡಿ ಸಿನಿಮಾ ತೆರೆಗಪ್ಪಳಿಸುತ್ತಿದೆ. ಇದು ಪೃಥ್ವಿ ಅಂಬರ್‌ಗೆ ಸಾಮಾನ್ಯ ಅನಿಸಿದ್ರೂ, ನಿರ್ಮಾಪಕಿ ಪುಷ್ಪ ಅ ರುಣ್ ಕುಮಾರ್‌ಗೆ ಅದೃಷ್ಠ ಪರೀಕ್ಷೆ. ಹೌದು.. ನಾಳೆ ಸಿನಿಮಾನ ಜನ ಒಪ್ಪುತ್ತಾರೋ ಇಲ್ವೋ ಅನ್ನೋ ಟೆನ್ಷನ್. ಸಾಮಾನ್ಯವಾಗಿ ಹಣ ಹೂಡಿಕೆ ಮಾಡಿದಂತಹ ಪ್ರತಿಯೊಬ್ಬ ಪ್ರೊಡ್ಯೂಸರ್‌ಗೂ ಅದೊಂದು ಅಳುಕು ಇದ್ದೇ ಇರುತ್ತೆ.
ಆದ್ರೆ ಪುಷ್ಪ ಬೇರೆಯವರ ರೀತಿ ಅಲ್ಲ, ಡೈರೆಕ್ಟರ್ ಶ್ರೀರಾಜ್‌ಗಿಂತ ಜಾಸ್ತಿ ಆ್ಯಕ್ಟೀವ್ ಆಗಿದ್ದಾರೆ. ಕಾಲಿಗೆ ಚಕ್ರ ಕಟ್ಟಿಕೊಂಡು ಸಿನಿಮಾದ ಪ್ರಮೋಷನ್ಸ್ ಮಾಡ್ತಿದ್ದಾರೆ. ಬಹುತೇಕ ಎಲ್ಲಾ ಸಂದರ್ಶನಗಳು ಸೇರಿದಂತೆ ಎಲ್ಲೆಡೆ ಓಡಾಡ್ಕೊಂಡು ಭರ್ಜರಿ ಪ್ರಚಾರ ಕಾರ್ಯಗಳನ್ನ ಮಾಡ್ತಿದ್ದಾರೆ. ಇಂಟರೆಸ್ಟಿಂಗ್ ಅಂದ್ರೆ ಯಶ್ ಚೊಚ್ಚಲ ಚಿತ್ರದ ಪ್ರಮೋಷನ್ಸ್ ಮಾಡಿದ್ದ ಅದೇ ಬಸ್‌ನಲ್ಲಿ ತಮ್ಮ ಸಿನಿಮಾ ಕೊತ್ತಲವಾಡಿ ಕೂಡ ಪ್ರಚಾರ ಮಾಡಿದ್ದಾರೆ ಪುಷ್ಪ.
ಪೃಥ್ವಿ ಅಂಬರ್ ಹಾಗೂ ಕಾವ್ಯ ಶೈವಾ ಜೋಡಿಯ ಈ ಸಿನಿಮಾ ಕಥೆ, ಮೇಕಿಂಗ್‌ನಿಂದ ಗೆಲ್ಲೋ ಲಕ್ಷಣ ತೋರಿದ್ದು, ಮರಳು ದಂಧೆ ಹಾಗೂ ವ್ಯವಸ್ಥೆಯ ಸುತ್ತ ಸುತ್ತಲಿದೆ. ಗೋಪಾಲಕೃಷ್ಣ ದೇಶಪಾಂಡೆ ಪ್ರಮುಖ ಪಾತ್ರ ನಿರ್ವಹಿಸಿದ್ದು, ರಾಜೇಶ್ ನಟರಂಗ, ಅವಿನಾಶ್ ಕೂಡ ತಾರಾಗಣದಲ್ಲಿದ್ದಾರೆ. ಸಾಂಗ್ಸ್ ಜೊತೆ ಟೀಸರ್, ಟ್ರೈಲರ್ ನೋಡುಗರ ಹುಬ್ಬೇರಿಸಿದ್ದು, ಸಿನಿಮಾ ಕೂಡ ಅದೇ ಶೈಲಿಯಲ್ಲಿ ಮೂಡಿಬಂದಿರೋ ಭರವಸೆ ಇದೆ.
ಅಂದಹಾಗೆ ನಿರ್ಮಾಪಕಿ ಪುಷ್ಪ ಅವರ ಮಾತುಗಳನ್ನ ಸಂದರ್ಶನಗಳಲ್ಲಿ ನೋಡ್ತಿದ್ರೆ, ಅಮ್ಮ-ಮಗನ ಮಧ್ಯೆ ಏನೋ ಆಗಿದೆ ಅಂತೆಲ್ಲಾ ಮಾತಾಡಿಕೊಳ್ತಿದ್ರು ಜನ. ಅದಕ್ಕೆಲ್ಲಾ ಇತ್ತೀಚೆಗೆ ಟ್ರೈಲರ್ ಲಾಂಚ್ ಇವೆಂಟ್‌ನಲ್ಲಿ ನಾನು ಚಿತ್ರ ನಿರ್ಮಿಸೋಕೆ ನನ್ನ ಮಗ ಯಶ್ ಸ್ಫೂರ್ತಿ ಅಂದಿದ್ರು. ಆದ್ರೀಗ ಇತ್ತೀಚೆಗೆ ಮಾತನಾಡಿರೋ ಪುಷ್ಪ ಅರುಣ್‌ಕುಮಾರ್, ನಾನು ಯಶ್ ತಾಯಿ ಅಂತ ಗುರ್ತಿಸಿಕೊಳ್ಳೋದಕ್ಕಿಂತ ಬಸ್ ಡ್ರೈವರ್ ಹೆಂಡ್ತಿ ಅಂತ ಗುರ್ತಿಸಿಕೊಳ್ಳುವುದೇ ಇಷ್ಟ ಅನ್ನೋ ಮಾತನ್ನ ಹೇಳಿದ್ದಾರೆ.
ಇದು ಮತ್ತೊಮ್ಮೆ ಪ್ರೇಕ್ಷಕರು ಸೇರಿದಂತೆ ಕನ್ನಡಿಗರನ್ನ ಕನ್ಫ್ಯೂಸ್ ಮಾಡ್ತಿದೆ. ರಾಕಿಭಾಯ್ ಸದ್ಯ ನ್ಯಾಷನಲ್ ಸ್ಟಾರ್, ಅವ್ರ ಸಿನಿಮಾಗಳು ನ್ಯಾಷನಲ್, ಇಂಟರ್‌ನ್ಯಾಷನಲ್ ಲೆವೆಲ್‌ನಲ್ಲಿ ಸದ್ದು ಮಾಡ್ತಿವೆ. ಹೀಗಿರುವಾಗ ಯಶ್ ತಾಯಿ ಅಂತ ಕರೆಸಿಕೊಳ್ಳೋದ್ರಲ್ಲಿ ತಪ್ಪೇನಿದೆ ಅಲ್ಲವೇ..? ಅದೆಲ್ಲಾ ಏನೇ ಇರಲಿ, ಕೊತ್ತಲವಾಡಿ ಗ್ರ್ಯಾಂಡ್ ಸಕ್ಸಸ್ ಕಾಣಲಿ. ಪುಷ್ಪ ಅವರಿಂದ ಮತ್ತಷ್ಟು ಸಿನಿಮಾಗಳು ನಿರ್ಮಾಣವಾಗಲಿ. ಚಿತ್ರರಂಗದಲ್ಲಿ ನೂರಾರು ಮಂದಿಗೆ ಊಟ ಸಿಗುವಂತಾಗಲಿ ಅನ್ನೋದು ನಮ್ಮ ಆಶಯ.