ಕೂಲಿ ಕ್ಲೈಮ್ಯಾಕ್ಸ್‌‌ನಲ್ಲಿ 4 ಮಂದಿ ಸೂಪರ್ ಸ್ಟಾರ್ಸ್‌ !

ರಜನಿ ಜೊತೆ ಆಮೀರ್, ಉಪ್ಪಿ & ನಾಗ್ ಹೊಡೆದಾಟ

123 (72)

ಹೈ ವೋಲ್ಟೇಜ್ ಆ್ಯಕ್ಷನ್ ವೆಂಚರ್ ಕೂಲಿ ಇದೇ ಆಗಸ್ಟ್ 14ಕ್ಕೆ ಮಾಸ್ ಮೀಲ್ಸ್ ಉಣಬಡಿಸೋಕೆ ಬರ್ತಿದೆ. ಚಿತ್ರದಲ್ಲಿ ತಲೈವಾ ರಜನೀಕಾಂತ್ ಜೊತೆ ಇನ್ನೂ ಮೂವರು ಸೂಪರ್ ಸ್ಟಾರ್‌ಗಳಿರಲಿದ್ದು, ಕ್ಲೈಮ್ಯಾಕ್ಸ್ ಆಫ್ ದಿ ಟೌನ್ ಆಗಿದೆ. ಹಾಗಾದ್ರೆ ಹೇಗಿರಲಿದೆ ಕೂಲಿ ಅಖಾಡ ಅಂತೀರಾ..?

ದಳಪತಿ ವಿಜಯ್ ಜೊತೆಗಿನ ಲಿಯೋ ಬಳಿಕ ಲೋಕೇಶ್ ಕನಕರಾಜ್ ಸಿನಿಮ್ಯಾಟಿಕ್ ಯೂನಿವರ್ಸ್‌ನಿಂದ ಬರ್ತಿರೋ ಮತ್ತೊಂದು ಹೈ ವೋಲ್ಟೇಜ್ ಸಿನಿಮಾ ಕೂಲಿ. ಟೈಟಲ್‌ಗೆ ತಕ್ಕನಾಗಿ ಇದೊಂದು ಆ್ಯಕ್ಷನ್ ಥ್ರಿಲ್ಲರ್ ಜಾನರ್ ಸಿನಿಮಾ ಆಗಿರಲಿದ್ದು, ಸುಮಾರು ಎರಡು ವರ್ಷಗಳು ಕಾಲಾವಕಾಶ ತಗೊಂಡು ಅಚ್ಚುಕಟ್ಟಾಗಿ ಪ್ರೇಕ್ಷಕರ ಮುಂದೆ ತರ್ತಿದ್ದಾರೆ ಸೆನ್ಸೇಷನಲ್ ಡೈರೆಕ್ಟರ್ ಲೋಕೇಶ್ ಕನಕರಾಜ್.

ADVERTISEMENT
ADVERTISEMENT

ತಲೈವಾ ರಜನೀಕಾಂತ್ ನಟನೆಯ 171 ಸಿನಿಮಾ ಇದಾಗಿದ್ದು, ಇದೇ ಆಗಸ್ಟ್ 14ಕ್ಕೆ ವರ್ಲ್ಡ್ ವೈಡ್ ತೆರೆಗೆ ಬರ್ತಿದೆ. ಅಂದಹಾಗೆ ಇದು ಒನ್ ಆಫ್ ದಿ ಬಿಗ್ಗೆಸ್ಟ್ ಮಲ್ಟಿ ಸ್ಟಾರರ್ ಮೂವಿ. ಸೂಪರ್ ಸ್ಟಾರ್ ರಜನೀಕಾಂತ್ ಜೊತೆ ತೆಲುಗು, ಕನ್ನಡ ಹಾಗೂ ಬಾಲಿವುಡ್ ಸೂಪರ್ ಸ್ಟಾರ್ಸ್‌ ಕೂಡ ಬಣ್ಣ ಹಚ್ಚಿರೋದು ಇಂಟರೆಸ್ಟಿಂಗ್.

ದೇವ ಪಾತ್ರವನ್ನು ಪೋಷಿಸಿರೋ ತಲೈವಾಗೆ ಸೈಮನ್ ಪಾತ್ರದಲ್ಲಿ ಟಾಲಿವುಡ್ ಕಿಂಗ್ ನಾಗಾರ್ಜುನ್, ಕಲೀಶ ರೋಲ್‌‌ನಲ್ಲಿ ಸ್ಯಾಂಡಲ್‌ವುಡ್ ಸೂಪರ್ ಸ್ಟಾರ್ ಉಪೇಂದ್ರ ಹಾಗೂ ಸಸ್ಪೆನ್ಸ್ ಪಾತ್ರವೊಂದರಲ್ಲಿ ಬಾಲಿವುಡ್‌ನ ಮಿಸ್ಟರ್ ಪರ್ಫೆಕ್ಷನಿಸ್ಟ್ ಆಮೀರ್ ಖಾನ್ ಸಾಥ್ ನೀಡಿದ್ದಾರೆ. ಅಲ್ಲಿಗೆ ಈ ಚಿತ್ರದಲ್ಲಿ ಮಾಸ್ ಮೀಲ್ಸ್ ಫಿಕ್ಸ್. ನೋಡುಗರಿಗೆ ಒಂದಲ್ಲ ಎರಡೆರಡು ಗುಂಡಿಗೆ ಇರಲೇಬೇಕು ಅನ್ನುವಂತಾಗಿದೆ.

ಇಲ್ಲಿಯವರೆಗೂ ರಿವೀಲ್ ಆಗಿರೋ ಟೀಸರ್ ಝಲಕ್‌ಗಳು, ಮೇಕಿಂಗ್ ಹಾಗೂ ಸ್ಟಿಲ್ ಫೋಟೋಸ್ ನೋಡ್ತಿದ್ರೆ ಈ ಸಿನಿಮಾ ಲೋಕೇಶ್ ಕನಕರಾಜ್‌ರ ಈ ಹಿಂದಿನ ಎಲ್ಲಾ ಸಿನಿಮಾಗಳಿಗಿಂತ ನೆಕ್ಸ್ಟ್ ಲೆವೆಲ್ ಆ್ಯಕ್ಷನ್ ಹೊಂದಿರಲಿದೆ. ಅದ್ರಲ್ಲೂ ಕ್ಲೈಮ್ಯಾಕ್ಸ್‌ನಲ್ಲಿ ಇವರೆಲ್ಲಾ ಒಟ್ಟಿಗೆ ಕಾಣಿಸಿಕೊಂಡ್ರೆ ಮುಗೀತು. ಕಣ್ಣಿಗೆ ಹಬ್ಬವೋ ಹಬ್ಬ. ಅಲ್ಲದೆ, ಸ್ಟಂಟ್ ಮಾಸ್ಟರ್, ಅದೆಷ್ಟು ಗನ್, ಬುಲೆಟ್ಸ್, ಬಾಂಬ್ ಬ್ಲಾಸ್ಟ್‌‌‌ಗಳನ್ನ ಇಟ್ಟಿರ್ತಾರೋ ಅನ್ನೋ ಅನುಮಾನ ಶುರುವಾಗಿದೆ.

ಬರೀ ಇಷ್ಟಕ್ಕೇ ನಿಲ್ಲದ ಕೂಲಿ ತಾರಾಗಣದಲ್ಲಿ ಮಲಯಾಳಂನ ಸೌಬಿನ್ ಶಾಶಿರ್, ಸತ್ಯರಾಜ್, ಶ್ರುತಿ ಹಾಸನ್, ಪೂಜಾ ಹೆಗ್ಡೆ, ನಮ್ಮ ಡಿಂಪಲ್ ಕ್ವೀನ್ ರಚಿತಾರಾಮ್ ಕೂಡ ಇರಲಿದ್ದಾರೆ. ಒಟ್ಟಾರೆ ಈ ಸಿನಿಮಾ ಬಾಕ್ಸ್ ಆಫೀಸ್‌‌ನಲ್ಲಿ ಕನಿಷ್ಟ ಸಾವಿರ ಕೋಟಿ ಗಳಿಸೋ ಲೆಕ್ಕಾಚಾರಗಳು ನಡೆಯುತ್ತಿದ್ದು, ರೊಟೀನ್ ಬಿಟ್ಟು ಹೊಸತೇನನ್ನ ಟ್ರೈ ಮಾಡಿದ್ದಾರೆ ಡೈರೆಕ್ಟರ್ ಅನ್ನೋದನ್ನ ಕೂಡ ಕಾದು ನೋಡಬೇಕಿದೆ. ಅಲ್ಲದೆ, ಈ ಚಿತ್ರದ ಬಳಿಕ ಲೋಕೇಶ್ ಕನಕರಾಜ್, ತಮ್ಮ ಡ್ರೀಮ್ ಪ್ರಾಜೆಕ್ಟ್‌ವೊಂದನ್ನ ಆಮೀರ್ ಜೊತೆ ಮಾಡೋ ಪ್ಲ್ಯಾನ್ ನಲ್ಲಿದ್ದಾರೆ ಎನ್ನಲಾಗ್ತಿದೆ.

 

Exit mobile version