ಈ ಬಾರಿ ವಿಜಯ್ ದೇವರಕೊಂಡ ಮೇಲಿನ ನಿರೀಕ್ಷೆ ಸುಳ್ಳಾಗಲಿಲ್ಲ. ಅಂದುಕೊಂಡಂತೆ ಬ್ಲಾಕ್ ಬಸ್ಟರ್ ಹಿಟ್ ನೀಡಿ, ವಿಜಯದ ಹಾದಿ ಹಿಡಿದಿದ್ದಾರೆ ವಿಜಯ್. ಕಿಂಗ್‌ಡಮ್‌ಗೆ ಎಲ್ಲೆಡೆ ಭರ್ಜರಿ ರೆಸ್ಪಾನ್ಸ್ ಸಿಗ್ತಿದ್ದು, ಬಾಕ್ಸ್ ಆಫೀಸ್‌ನಲ್ಲಿ ಕೋಟಿ ಕೋಟಿ ಲೂಟಿ ಮಾಡ್ತಿದೆ. ಹಾಗಾದ್ರೆ ಸಿನಿಮಾ ಹೇಗಿದೆ..? ಚಿತ್ರಕ್ಕೆ ಏನೆಲ್ಲಾ ಪ್ಲಸ್ ಆಗಿದೆ ಅನ್ನೋದಕ್ಕೆ ಈ ರಿಪೋರ್ಟ್ ನೋಡಿ.
ಟಾಲಿವುಡ್‌ನ ಮೋಸ್ಟ್ ಎಕ್ಸ್‌ಪೆಕ್ಟೆಡ್ ಮೂವಿ ಕಿಂಗ್‌ಡಮ್ ಇಂದು ವಿಶ್ವದಾದ್ಯಂತ ಬಿಗ್‌ಸ್ಕ್ರೀನ್‌ಗೆ ಎಂಟ್ರಿ ಕೊಟ್ಟಿದೆ. ಒಂದು ಬಿಗ್ ಬ್ರೇಕ್‌ಗಾಗಿ ಫ್ಯಾನ್ಸ್‌ಗಿಂತ ತಾನೇ ಕಾತರದಿಂದ ಕಾಯ್ತಿದ್ದ ರೌಡಿ ವಿಜಯ್ ದೇವರಕೊಂಡಗೆ ನಿರೀಕ್ಷೆಯಂತೆ ಇದು ಖುಷಿ ಕೊಟ್ಟಿದೆ. ಸಿನಿಮಾ ನೋಡಿದ ಬಹುತೇಕ ಮಂದಿ ಚಿತ್ರಕ್ಕೆ ಫುಲ್ ಮಾರ್ಕ್ಸ್ ಕೊಟ್ಟು ಭೇಷ್ ಅಂತಿದ್ದಾರೆ. ಅಷ್ಟೇ ಅಲ್ಲ ಇದು ವಿಜಯ್ ಕರಿಯರ್‌ನ ದಿ ಬೆಸ್ಟ್ ಪರ್ಫಾಮೆನ್ಸ್ ಮೂವಿ ಅಂತಿದ್ದಾರೆ.
ಈ ಚಿತ್ರಕ್ಕಾಗಿ ಬೆವರಿನ ಜೊತೆ ರಕ್ತ ಕೂಡ ಹರಿಸಿರೋ ದೇವರಕೊಂಡ ಕಿಲ್ಲಿಂಗ್ ಪರ್ಫಾಮೆನ್ಸ್‌ಗೆ ಎಲ್ಲರೂ ಫಿದಾ ಆಗ್ತಿದ್ದಾರೆ. ವಿಜಯ್ ಕರಿಯರ್‌ನಲ್ಲಿ ಹೊಸ ಅಧ್ಯಾಯ ಬರೆದಿದ್ದಾರೆ ಅಂತೆಲ್ಲಾ ಮೆಚ್ಚುಗೆ ವ್ಯಕ್ತವಾಗ್ತಿದೆ. ಪಾತ್ರಕ್ಕಾಗಿ ಪರಕಾಯ ಪ್ರವೇಶ ಮಾಡಿರೋ ವಿಜಯ್‌ಗೆ ಅಭಿನಯಕ್ಕೆ ತಕ್ಕನಾಗಿ ಚಿತ್ರದ ಮೇಕಿಂಗ್, ಕಥೆ, ಪಾತ್ರಗಳಿವೆ ಅನ್ನೋದು ಪ್ರೇಕ್ಷಕರ ರಿವ್ಯೂ ಆಗಿದೆ.
ಗೌತಮ್ ತಿನ್ನನೂರಿ ನಿರ್ದೇಶನದ ಈ ಚಿತ್ರದಲ್ಲಿ ಭಾಗ್ಯಶ್ರೀ ಬೋರ್ಸೆ ನಾಯಕನಟಿಯಾಗಿ ಕಾಣಸಿಗಲಿದ್ದು, ಸತ್ಯದೇವ್ ಸೆಕೆಂಡ್ ಲೀಡ್‌ನಲ್ಲಿ ಮಿಂಚುತ್ತಿದ್ದಾರೆ. ಸಿನಿಮಾ ಸಖತ್ ರಾಯಲ್ ಆಗಿದ್ದು, ಅಷ್ಟೇ ರೆಬೆಲಿಯನ್ ಹಾಗೂ ರಾ ಎಮೋಷನ್ಸ್‌ನಿಂದ ಕೂಡಿದೆಯಂತೆ. ಟೆಕ್ನಿಕಲಿ ಸಿನಿಮಾ ಸಖತ್ ಸೌಂಡಿಂಗ್ ಆಗಿದ್ದು, ಓಪನಿಂಗ್ ಹಾಗೂ ಕ್ಲೈಮ್ಯಾಕ್ಸ್ ನೋಡುಗರಿಗೆ ಮಸ್ತ್ ಮನರಂಜನೆ ನೀಡ್ತಿದೆ.
ವಿಶೇಷವಾಗಿ ಬ್ಯಾಗ್ರೌಂಡ್ ಮ್ಯೂಸಿಕ್‌ಗೆ ಮೆಚ್ಚಿಗೆಯ ಮಹಾಪೂರವೇ ಹರಿದು ಬರ್ತಿದ್ದು, ನಾವು ಹೊಡೆದಿದ್ದೇವೆ ಅಂತ ತಮ್ಮ ಭಾವಿಪತಿಗೆ ರಶ್ಮಿಕಾ ಮಂದಣ್ಣ ಕೂಡ ಪೋಸ್ಟ್ ಮಾಡಿ ಶುಭಾಶಯ ಕೋರಿದ್ದಾರೆ. ವಿಜಯ್ ದೇವರಕೊಂಡ ಫ್ಯಾನ್ಸ್ ಇಂತಹ ಅಭೂತಪೂರ್ವ ಯಶಸ್ಸಿಗೆ ಸಖತ್ ಖುಷಿ ಆಗಿದ್ದು, ತಮ್ಮ ನೆಚ್ಚಿನ ನಾಯಕನಟನಿಗೆ ಶುಭಾಶಯ ಕೋರುತ್ತಿದ್ದಾರೆ.
ಸಿನಿಮಾಗೆ ನಾಯಕನಟ ಹೀರೋ ಅಲ್ಲ. ಕಂಟೆಂಟ್ ಅನ್ನೋದು ಆಗಾಗ ಪ್ರೂವ್ ಆಗ್ತಿದೆ. ಸದ್ಯ ಈ ಕಿಂಗ್‌ಡಮ್ ಚಿತ್ರದಲ್ಲಿ ದೇವರಕೊಂಡ ರಾಕ್ಷಸರ ನಾಡಿಗೆ ರಾಜನಾಗಿದ್ದು, ಬಾಕ್ಸ್ ಆಫೀಸ್ ಕಲೆಕ್ಷನ್ ಕೂಡ ಚೆನ್ನಾಗಿ ಆಗ್ತಿರೋದು ಆತನ ಸಿನಿಮೋತ್ಸಾಹವನ್ನು ಮತ್ತಷ್ಟು ಹೆಚ್ಚಿಸಿದೆ. ಐದಕ್ಕೆ 4.7 ಗೂಗಲ್ ರೇಟಿಂಗ್ಸ್ ಬಂದಿದ್ದು, ಆರ್ಗ್ಯಾನಿಕ್ ಆಗಿ ಸಿನಿಮಾಗೆ ಎಲ್ಲೆಡೆ ಪಾಸಿಟಿವ್ ರೆಸ್ಪಾನ್ಸ್ ಸಿಗ್ತಿದೆ.