ಆಲ್ ಇಂಡಿಯಾ ಕಟೌಟ್ ಅಭಿನಯ ಚಕ್ರವರ್ತಿ ಬಾದ್‌ಷಾ ಕಿಚ್ಚ ಸುದೀಪ್ ಹೆಸರಿನ ಜೊತೆ ಮತ್ತೊಂದು ಬಿರುದು ಸೇರಿಕೊಳ್ಳೋ ಮುನ್ಸೂಚನೆ ಸಿಕ್ಕಿದೆ. ಹೌದು, ಕಾಲಿವುಡ್‌ಗೆ ಅಜಿತ್ ಕುಮಾರ್ ತಲಾ ಆದ್ರೆ, ಸ್ಯಾಂಡಲ್‌ವುಡ್ ಪಾಲಿಗೆ ತಲಾ ಸುದೀಪ್ ಅನ್ನಬಹುದು. ಅದ್ಯಾಕೆ ಅನ್ನೋದ್ರ ಜೊತೆಗೆ ತ್ರಿಬಲ್ ಡೋಸ್ ನೀಡಿರೋ ಕಿಚ್ಚನ ಮುಂದಿರೋ ಬ್ಯುಸಿ ಶೆಡ್ಯೂಲ್‌ನ ಎಕ್ಸ್‌ಕ್ಲೂಸಿವ್ ಆಗಿ ಪರಿಚಯಿಸ್ತೀವಿ..!
- ಕಾಲಿವುಡ್‌ಗೆ ಅಜಿತ್.. ಸ್ಯಾಂಡಲ್‌ವುಡ್‌ಗೆ ‘ತಲಾ’ ಸುದೀಪ್
- ರೇಸಿಂಗ್ ಫೀಲ್ಡ್‌ಗೆ ಕಿಚ್ಚ.. ಬೆಂಗಳೂರು ಟೀಮ್‌ಗೆ ಒಡೆಯ..!
ಕರ್ನಾಟಕ ಅಲ್ಲದೆ, ದೇಶ, ವಿದೇಶಗಳಲ್ಲೆಲ್ಲಾ ಅಭಿಮಾನಿ ಬಳಗ ಹೊಂದಿರೋ ಕನ್ನಡದ ಪ್ಯಾನ್ ಇಂಡಿಯಾ ಸೂಪರ್ ಸ್ಟಾರ್ ಅಂದ್ರೆ ಒನ್ ಅಂಡ್ ಓನ್ಲಿ ಕಿಚ್ಚ ಸುದೀಪ್. ಇವ್ರ ನಟನಾ ಗತ್ತು, ಸ್ಟೈಲು ಮ್ಯಾನರಿಸಂ ಗಮ್ಮತ್ತು, ಪರಭಾಷಾ ಕಲಾವಿದರು ಹಾಗೂ ತಂತ್ರಜ್ಞರ ಜೊತೆ ಹೊಂದಿರೋ ನಂಟಿನ ಗೈರತ್ತು ನೋಡಿದ್ರೆ ಸಾಕು, ಈ ಆಲ್ ಇಂಡಿಯಾ ಕಟೌಟ್‌ಗೆ ಸ್ಪೆಷಲ್ ಇಂಟ್ರಡಕ್ಷನ್ ಕೊಡೋ ಅವಶ್ಯಕತೆಯೇ ಇಲ್ಲ.
ಕ್ಲಾಸ್, ಮಾಸ್ ಯಾವುದೇ ಪಾತ್ರ ಕೊಟ್ಟರೂ ಅದಕ್ಕೆ ಜೀವ ತುಂಬುತ್ತಾರೆ ಕಿಚ್ಚ. ನಟನೆಯಷ್ಟೇ ಅಲ್ಲ, ತೆರೆಹಿಂದೆ ನಿಂತು ಬರೆಯುತ್ತಾರೆ, ಹಾಡ್ತಾರೆ, ಡೈರೆಕ್ಷನ್ ಮಾಡ್ತಾರೆ. ಅಷ್ಟೇ ಯಾಕೆ ನಿರ್ಮಾಣ ಕೂಡ ಮಾಡ್ತಾರೆ. ಸಿನಿಮಾದ ಹೊರತಾಗಿ ಕ್ರಿಕೆಟ್ ಅಂದ್ರೆ ಇವರಿಗೆ ಪಂಚಪ್ರಾಣ. ಇವೆಲ್ಲದರ ನಡುವೆ ಮತ್ತೊಂದು ಮಹಾನ್ ಸಾಹಸಕ್ಕೆ ಕೈ ಹಾಕಿದ್ದಾರೆ. ಅದೇ ಕಾರ್ ರೇಸಿಂಗ್ ಫೀಲ್ಡ್.
ಹೌದು, ಇಂಡಿಯನ್ ಕಾರ್ ರೇಸಿಂಗ್ ಫೆಸ್ಟಿವಲ್‌ಗೆ ಕೌಂಟ್‌ಡೌನ್ ಶುರುವಾಗಿದ್ದು, ಸುದೀಪ್ ಅವರ ಪತ್ನಿ ಪ್ರಿಯಾ ಸುದೀಪ್, ಕಿಚ್ಚಸ್ ಕಿಂಗ್ಸ್ ಬೆಂಗಳೂರು ಟೀಮ್‌ನ ಮಾಲೀಕರಾಗಿದ್ದಾರೆ. ಇದರಲ್ಲಿ ನಾಗಚೈತನ್ಯ, ಅರ್ಜುನ್ ಕಪೂರ್, ಸೌರವ್ ಗಂಗೂಲಿ, ಜಾನ್ ಅಬ್ರಾಹಂ ಅಂತಹ ಘಟಾನುಘಟಿಗಳು ರೇಸಿಂಗ್ ಟೀಮ್‌ಗಳ ಮಾಲೀಕರಾಗಿದ್ದು, ಕರ್ನಾಟಕದ ಟೀಮ್‌ಗೆ ಕಿಚ್ಚಸ್ ಕಿಂಗ್ಸ್ ಬೆಂಗಳೂರು ಟೈಟಲ್ ಇಡಲಾಗಿದೆ. ಅದರ ಒಡೆಯ, ಯಜಮಾನ ಎಲ್ಲವೂ ಬಾದ್‌ಷಾ ಸುದೀಪ್.
ಇತ್ತೀಚೆಗೆ ಕಿಚ್ಚನ ರೇಸಿಂಗ್ ಟೀಮ್‌ನ ಜೆರ್ಸಿ ಲಾಂಚ್ ಮಾಡಿದ ಬಳಿಕ ಮಾತನಾಡಿದ ಸುದೀಪ್, ನಾವು ಕ್ರಿಕೆಟ್ ಆಡಿದಷ್ಟು ಸುಲಭ ಈ ರೇಸಿಂಗ್ ಅಲ್ಲ. ತನ್ನದೇ ರೇಸ್ ಕಾರ್ ಹತ್ತಬೇಕು ಅಂದ್ರೂ ಅದಕ್ಕೆ ಲೈಸೆನ್ಸ್ ಬೇಕು ಅಂದಿದ್ದಾರೆ. ಆದ್ರೆ ಕಿಚ್ಚನ ಈ ನಡೆಗೆ ಇಡೀ ಕರುನಾಡೇ ಶಹಬ್ಬಾಸ್ ಸುದೀಪ್ ಅಂತ ಪ್ರಶಂಶಿಸುತ್ತಿದೆ.
ಅಂದಹಾಗೆ ಕಾಲಿವುಡ್‌ಗೆ ತಲಾ ಅಜಿತ್ ಆದ್ರೆ, ನಮ್ಮ ಸ್ಯಾಂಡಲ್‌ವುಡ್ ಪಾಲಿಗೆ ತಲಾ ಸುದೀಪ್ ಆಗಲಿದ್ದಾರೆ. ಯಾಕಂದ್ರೆ ಅಜಿತ್ ಬರೀ ನಟನಷ್ಟೇ ಅಲ್ಲ, ಪ್ರೊಫೆಷನಲ್ ಕಾರ್ ರೇಸರ್. ಅಂತಾರಾಷ್ಟ್ರೀಯ ರೇಸಿಂಗ್ ಕಾಂಪಿಟೇಷನ್‌ಗಳಲ್ಲಿ ಮಿಂಚು ಹರಿಸಿರೋ ಅಜಿತ್, ಸಿನಿಮಾಗಿಂತ ಜಾಸ್ತಿ ರೇಸಿಂಗ್‌ನ ಇಷ್ಟ ಪಡ್ತಾರೆ.
ತಮಿಳು ಚಿತ್ರರಂಗದ ಹೊರತಾಗಿ ಹೊರಭಾಗದಲ್ಲೂ ಅಪಾರ ಅಭಿಮಾನಿ ಬಳಗ ಹೊಂದಿರೋ ತಲಾ ಅಜಿತ್ ಕುಮಾರ್ ರೀತಿ, ಸುದೀಪ್ ರೇಸಿಂಗ್ ಇಂಡಸ್ಟ್ರಿಗೆ ಕಾಲಿಟ್ಟಿರೋದು ಇಂಟರೆಸ್ಟಿಂಗ್ ಹಾಗೂ ಇಂಪ್ರೆಸ್ಸೀವ್. ಸದ್ಯ ಬೆಂಗಳೂರು ಟೀಮ್‌ಗೆ ಮಾಲೀಕರಾಗಿರೋ ಕಿಚ್ಚ, ಮುಂದೊಂದು ದಿನ ರೇಸರ್ ಆದ್ರೂ ಅಚ್ಚರಿಯಿಲ್ಲ. ಯಾಕಂದ್ರೆ ಅವ್ರು ಯಾವುದನ್ನಾದ್ರೂ ಕಲಿಯಬೇಕು ಅಂತ ಮನಸ್ಸು ಮಾಡಿದ್ರೆ ಹಠಕ್ಕೆ ಬಿದ್ದು ಕಲೀತಾರೆ. ಸೋ, ಇಂದಿನಿಂದ ಕ್ರಿಕೆಟ್‌ಗೆ ಧೋನಿ ತಲಾ, ಕಾಲಿವುಡ್‌ಗೆ ಅಜಿತ್ ತಲಾ ಆದಂತೆ ನಮ್ಮ ಸ್ಯಾಂಡಲ್‌ವುಡ್‌ಗೆ ಸುದೀಪ್ ತಲಾ.
- ಆರಡಿ ಕಟೌಟ್ ತ್ರಿಬಲ್ ಡೋಸ್.. ‘ಕಿಚ್ಚ ನಾಮ ಸಂವತ್ಸರ’..!
- ಮ್ಯಾಕ್ಸ್ ಡೈರೆಕ್ಟರ್ ಜೊತೆ ನ್ಯೂ ಪ್ರಾಜೆಕ್ಟ್ ಅಫಿಶಿಯಲಿ ಅನೌನ್ಸ್
- ತಮಿಳು ಡೈರೆಕ್ಟರ್ ಜೊತೆ K47.. ಜುಲೈ-7 ರಿಂದ ಶೂಟಿಂಗ್..!
- ಆಷಾಢದಲ್ಲೇ ಬ್ಯಾಕ್ ಟು ಬ್ಯಾಕ್ ಕಿಚ್ಚ ಬಿಗ್ ಬ್ರೇಕಿಂಗ್ ನ್ಯೂಸ್
ಸಾಮಾನ್ಯವಾಗಿ ಆಷಾಢದಲ್ಲಿ ಶುಭಕಾರ್ಯಕ್ಕೆ ಕೈ ಹಾಕಬಾರದು ಅಂತಾರೆ. ಆದ್ರೆ ಕಿಚ್ಚ ಸುದೀಪ್ ಅದಕ್ಕೆಲ್ಲಾ ಗೋಲಿ ಹೊಡೆದು, ಒಂದಲ್ಲ ಎರಡಲ್ಲ ಮೂರು ಮೂರು ಬಿಗ್ ಬ್ರೇಕಿಂಗ್ ನ್ಯೂಸ್ ಕೊಟ್ಟಿದ್ದಾರೆ. ಹೌದು, ಇತ್ತೀಚೆಗೆ ಬಿಗ್‌ಬಾಸ್ ಸೀಸನ್-12 ನಿರೂಪಣೆ ಮಾಡೋದಾಗಿ ಸುದ್ದಿಗೋಷ್ಠಿ ಮೂಲಕ ಖಚಿತ ಪಡಿಸಿದ್ರು. ಅದೂ ಬರೀ ಸೀಸನ್-12 ಅಷ್ಟೇ ಅಲ್ಲ. ಸೀಸನ್-15ವರೆಗೂ ತಾವೇ ಬಿಗ್ ಬಾಸ್‌ಗೆ ಬಾಸ್ ಅನ್ನೋ ಬಿಗ್ ಮೆಸೇಜ್ ಕೂಡ ನೀಡಿದ್ರು.
ಹೌದು, K-47 ಅನ್ನೋ ಸಿನಿಮಾ ಫಸ್ಟ್ ಲುಕ್ ಮೂಲಕ ಲಾಂಚ್ ಆಗಿದ್ದು, ತಮಿಳಿನ ಖ್ಯಾತ ಪ್ರೊಡಕ್ಷನ್ ಹೌಸ್ ಸತ್ಯಜ್ಯೋತಿ ಫಿಲಂಸ್ ಈ ಚಿತ್ರಕ್ಕೆ ಬಂಡವಾಳ ಹೂಡುತ್ತಿದೆ. ಮ್ಯಾಕ್ಸ್ ಸಿನಿಮಾದ ಮೂಲಕ ಚಿತ್ರಪ್ರೇಮಿಗಳಿಗೆ ಕಿಚ್ಚನಿಂದ ಮ್ಯಾಕ್ಸಿಮಮ್ ಎಂಟರ್‌ಟೈನ್ಮೆಂಟ್ ನೀಡುವಂತೆ ಮಾಡಿದ ತಮಿಳು ಡೈರೆಕ್ಟರ್ ವಿಜಯ್ ಕಾರ್ತಿಕೇಯ ಅವರೇ ಈ ಪ್ರಾಜೆಕ್ಟ್‌ಗೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ.
ಇನ್ನು ಮ್ಯಾಕ್ಸ್ ಸಿನಿಮಾಗೂ ತಮಿಳಿನ ಖ್ಯಾತ ನಿರ್ಮಾಪಕ ಕಲೈಪುಲಿ ಎಸ್ ಥಾನು ಹಣ ಹೂಡಿದ್ರು. ಇದೀಗ ಈ ಚಿತ್ರಕ್ಕೂ ಸತ್ಯಜ್ಯೋತಿ ಫಿಲಂಸ್ ಬ್ಯಾನರ್ ನಿರ್ಮಾಣ ಮಾಡೋಕೆ ಮುಂದಾಗಿರೋದು ಇಂಟರೆಸ್ಟಿಂಗ್. ದಶಕಗಳ ಹಿಂದೆ ವಿಷ್ಣುವರ್ಧನ್ ಜೊತೆ ಸಿನಿಮಾ ಮಾಡಿದ್ದ ಇವರುಗಳು, ಇದೀಗ ಸುದೀಪ್‌ಗಾಗಿ ಮತ್ತೆ ಕನ್ನಡಕ್ಕೆ ಕಂಬ್ಯಾಕ್ ಮಾಡಿದ್ದಾರೆ. ಅಷ್ಟೇ ಅಲ್ಲ, ಕಿಚ್ಚನನ್ನ ಮೆಚ್ಚಿಸಲು ಕನ್ನಡದಲ್ಲಿ ಸ್ಕ್ರಿಪ್ಟ್ ಬರೆದುಕೊಂಡು ಬಂದು, ಕನ್ನಡದಲ್ಲೇ ವೇದಿಕೆ ಮೇಲೆ ಮಾತನಾಡಿದ್ದಾರೆ ನಿರ್ಮಾಪಕರು.
ದಾದಾ ಅಂತ ಕೆಲವರು ಸುದೀಪ್ ಅವರನ್ನ ಕರೆಯೋ ವಿಷಯಕ್ಕೆ ಸ್ಪಷ್ಟನೆ ನೀಡಿದ ಅಭಿನಯ ಚಕ್ರವರ್ತಿ, ನನ್ನ ತಂದೆ ತಾಯಿ ಇಟ್ಟಿರೋ ಹೆಸರಿನಿಂದ ಕಿಚ್ಚಗೆ ಹೋಗಿದ್ದೀನಿ. ನನಗೆ ದಾದಾ ಯಾವತ್ತಿದ್ರೂ ವಿಷ್ಣುವರ್ಧನ್. ಅವರ ಲೆವೆಲ್‌ಗೆ ನಾವ್ಯಾರೂ ರೀಚ್ ಕೂಡ ಆಗೋಕೆ ಆಗಲ್ಲ. ಅಪ್ಪ ಅಪ್ಪಾನೇ ಮಗ ಮಗಾನೇ ಅಂತ ವಿಷ್ಣುದಾದಾ ಅವರು ತಂದೆ ಸಮಾನ ಅನ್ನೋದನ್ನ ಸ್ಪಷ್ಟಪಡಿಸಿದ್ರು ಕಿಚ್ಚ.
ಇಷ್ಟೇ ಅಲ್ಲದೆ, ಕೆಡಿ ಸಿನಿಮಾದಲ್ಲಿ ಸುದೀಪ್ ನಟಿಸುವ ಕುರಿತು ಯಾವುದೇ ಕ್ಲ್ಯಾರಿಟಿ ಸಿಕ್ಕಿಲ್ಲ. ನಾನು ಕೆಡಿ ಚಿತ್ರದಲ್ಲಿ ಇದೀನೋ ಇಲ್ವೋ ಅನ್ನೋದನ್ನ ಪ್ರೇಮ್‌ಗೆ ಕೇಳಬೇಕು ಅಂತ ಜಾರಿಕೊಂಡಿದ್ದಾರೆ.
ಅಂದಹಾಗೆ ಕಿಚ್ಚ-47 ಚಿತ್ರಕ್ಕೆ ಅಜನೀಶ್ ಲೋಕನಾಥ್ ಅವರೇ ಸಂಗೀತ ಸಂಯೋಜಿಸುತ್ತಿದ್ದು, ಶೇಖರ್ ಚಂದ್ರ ಅವರೇ ಕ್ಯಾಮೆರಾ ಹಿಡಿಯಲಿದ್ದಾರಂತೆ. ಪರಭಾಷಾ ಡೈರೆಕ್ಟರ್ ಹಾಗೂ ಪ್ರೊಡ್ಯೂಸರ್ ಜೊತೆ ಕೆಲಸ ಮಾಡ್ತಿದ್ರೂ, ಕನ್ನಡ ತಂತ್ರಜ್ಞರನ್ನ ಮರೆಯದ ಕಿಚ್ಚನಿಗೆ ಸ್ಯಾಂಡಲ್‌ವುಡ್ ಬಹುಪರಾಕ್ ಅಂತಿದೆ. ಅದೇನೇ ಇರಲಿ, ಕಾಲಿಗೆ ಚಕ್ರ ಕಟ್ಟಿಕೊಂಡು ಈ ರೀತಿ 20 ಪ್ಲಸ್ ಯಂಗ್‌ಸ್ಟರ್‌ಗಳನ್ನ ಸಹ ನಾಚಿಸುವ ರೇಂಜ್‌ಗೆ ಸುದೀಪ್ ಬ್ಯುಸಿ ಆಗ್ತಿರೋದು ಗ್ರೇಟ್. ಅವರ ಎನರ್ಜಿ ಲೆವೆಲ್ ನಿಜಕ್ಕೂ ವ್ಹಾವ್ ಫೀಲ್ ತರಿಸುತ್ತೆ. ಇದನ್ನೆಲ್ಲಾ ನೋಡ್ತಿದ್ರೆ ಕಿಚ್ಚನಿಗೆ ಕಿಚ್ಚನೇ ಸಾಟಿ ಅನಿಸ್ತಿದೆ.