ಪ್ರಧಾನಿ ಮೋದಿಗೆ ಕಿಚ್ಚ ಸುದೀಪ್‌-ರಿಷಬ್ ವಿಶ್..ಕನ್ನಡ ಸ್ಟಾರ್ಸ್‌ಗೆ BJP ಗಾಳ..?

ಜೈ ಹನುಮಾನ್ ಚಿತ್ರದ ಬಳಿಕ ರಾಜಕಾರಣದತ್ತ ರಿಷಬ್..!!

Untitled design 2026 06 11T155757.272

ದಿನೇ ದಿನೆ ಕೇಸರಿಮಯ ಆಗ್ತಿದೆ ಇಂಡಿಯಾ. ಅದ್ರಲ್ಲೂ ಸೌತ್ ಇಂಡಿಯಾದಲ್ಲಿ ಕಮಲ ಅರಳಿಸಲು ಬಿಜೆಪಿ ದೊಡ್ಡ ಮಟ್ಟದಲ್ಲಿ ಕಸರತ್ತು ಮಾಡ್ತಿದೆ. ಪವನ್ ಕಲ್ಯಾಣ್ ಹಾಗೂ ವಿಜಯ್ ಡಿಸಿಎಂ, ಸಿಎಂ ಆಗ್ತಿದ್ದಂತೆ ಸ್ಯಾಂಡಲ್‌ವುಡ್‌‌ನಲ್ಲೀಗ ಇಬ್ಬರು ಸ್ಟಾರ್‌‌ಗಳಿಗೆ ಗಾಳ ಹಾಕಿದೆ ಬಿಜೆಪಿ ಹೈ ಕಮಾಂಡ್. ಅದ್ಯಾರು..? ಮೋದಿಗೂ ಅವರಿಗೂ ಇರೋ ನಂಟಿನ ಗುಟ್ಟಾದ್ರೂ ಏನು ಅಂತೀರಾ..? ಈ ಇನ್‌ಸೈಡ್ ಸ್ಟೋರಿ ಇಲ್ಲಿದೆ ನೋಡಿ.

ಆಂಧ್ರ ಹಾಗೂ ತಮಿಳುನಾಡು ಪಾಲಿಟಿಕ್ಸ್‌ನ ಗೇಮ್ ಚೇಂಜರ್‌‌ಗಳಾಗಿ ಮಿಂಚು ಹರಿಸುತ್ತಿದ್ದಾರೆ ಪವನ್ ಕಲ್ಯಾಣ್ ಹಾಗೂ ದಳಪತಿ ವಿಜಯ್. ಜನಸೇನಾ ಪಕ್ಷ ಆಂಧ್ರದಲ್ಲಿ ಹಂಡ್ರೆಡ್ ಪರ್ಸೆಂಟ್ ರಿಸಲ್ಟ್‌‌ನಿಂದ ಪಿಕೆ ಡಿಸಿಎಂ ಆಗುವಂತೆ ಮಾಡಿದೆ. ಈ ಕಡೆ ತಮಿಳುನಾಡಿಗೆ ದಳಪತಿ ಸರ್ಕಾರ್ ಬರೋಕೆ ವಿಜಯ್ ಟಿವಿಕೆ ಪಕ್ಷ ಕಾರಣವಾಗಿದ್ದು ಗೊತ್ತೇಯಿದೆ. ಆದ್ರೀಗ ಕರ್ನಾಟಕದಲ್ಲೂ ಅಂಥದ್ದೇ ಕ್ರಾಂತಿ ಆಗುವ ಮುನ್ಸೂಚನೆ ಸಿಕ್ಕಿದೆ. ಅದೂ ರಿಷಬ್ ಶೆಟ್ಟಿ ಹಾಗೂ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್‌ರಿಂದ ಅನ್ನೋದು ಇಂಟರೆಸ್ಟಿಂಗ್ ವಿಷಯ.

ಯೆಸ್.. ಇಡೀ ದೇಶ ಕೇಸರಿಮಯ ಆಗ್ತಿರೋ ಈ ಹೊಸ ಪರ್ವದಲ್ಲಿ ನಮ್ಮ ಕರ್ನಾಟಕದ ಇಬ್ಬರು ಪ್ಯಾನ್ ಇಂಡಿಯಾ ಸೂಪರ್ ಸ್ಟಾರ್ಸ್‌‌ಗೆ ಗಾಳ ಹಾಕ್ತಿದೆ ಬಿಜೆಪಿ ಹೈ ಕಮಾಂಡ್. ಕಾಂತಾರ ಹಾಗೂ ಕಾಂತಾರ-1 ಚಿತ್ರಗಳಿಂದ ದೇಶಾದ್ಯಂತ ಸಂಚಲನ ಮೂಡಿಸಿರೋ ರಿಷಬ್ ಶೆಟ್ಟಿಯನ್ನ ಕಳೆದ ತಿಂಗಳು ಡೆಲ್ಲಿಗೆ ಕರೆಸಿಕೊಂಡು, ಬಿಜೆಪಿ ಪಕ್ಷದ ಮೂಲಕ ರಾಜಕಾರಣಕ್ಕೆ ಆಮಂತ್ರಣ ನೀಡಿದೆ ಬಿಜೆಪಿ. ಹೌದು.. ಹೋಮ್ ಮಿನಿಸ್ಟರ್ ಅಮಿತ್ ಶಾ ಜೊತೆ ಡೆಲ್ಲಿಯಲ್ಲಿ ಸುಮಾರು 2 ಗಂಟೆಗಳ ಕಾಲ ಸುದೀರ್ಘ ಸಮಾಲೋಚನೆ ನಡೆಸಿದ್ದಾರೆ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ.

ಆ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಕೂಡ ಮಾಡಿದ್ದ ರಿಷಬ್, ಸಿನಿಮಾಗೆ ಸಿಕ್ಕ ಪ್ರಶಂಸೆ ಬಗ್ಗೆಯಷ್ಟೇ ಬಹಿರಂಗ ಪಡಿಸಿದ್ರು. ಆದ್ರೆ ರಾಜಕಾರಣಕ್ಕೆ ಅಮಿತ್ ಶಾ ಆಮಂತ್ರಿಸಿದಾಗ ಗ್ರೀನ್ ಸಿಗ್ನಲ್ ನೀಡಿರೋ ಶೆಟ್ರು, ಜೈ ಹನುಮಾನ್ ಹಾಗೂ ಛತ್ರಪತಿ ಶಿವಾಜಿ ಮಹಾರಾಜ್ ಸಿನಿಮಾಗಳನ್ನ ಮುಗಿಸಿ ಬರೋದಾಗಿ ಭರವಸೆ ನೀಡಿದ್ದಾರಂತೆ. ಆಗ ಅವರ ವರ್ಚಸ್ಸು ಮತ್ತಷ್ಟು ಹೆಚ್ಚಲಿದ್ದು, ರಾಜಕೀಯ ನಡೆಗೆ ಪ್ಲಸ್ ಆಗಲಿದೆ ಅನ್ನೋ ಲೆಕ್ಕಾಚಾರವಿದೆ ಎನ್ನಲಾಗ್ತಿದೆ.

ಇನ್ನೂ ಸುದೀಪ್ ಅವರು ಕನ್ನಡದ ಜೊತೆ ತೆಲುಗು, ತಮಿಳು ಹಾಗೂ ಹಿಂದಿಯಲ್ಲೆಲ್ಲಾ ನಟಿಸೋ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ದಶಕಗಳೇ ಕಳೆದಿದೆ. ಅಲ್ಲದೆ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಸೇರಿದಂತೆ ಸಾಕಷ್ಟು ಬಿಜೆಪಿ ಲೀಡರ್‌‌ಗಳಿಗೆ ಪರಮಾಪ್ತರು ಕಿಚ್ಚ. ಸದ್ಯ ಜೆಡಿಎಸ್ ಬಿಜೆಪಿ ಜೊತೆ ಮೈತ್ರಿಗೊಂಡಿದ್ದು, ಕುಮಾರಸ್ವಾಮಿ ಜೊತೆಗೂ ಚೆನ್ನಾಗಿದ್ದಾರೆ ಕಿಚ್ಚ. ಮತ್ತೊಂದೆಡೆ ಚಿತ್ರದುರ್ಗದ ವಾಲ್ಮೀಕಿ ಸಮುದಾಯದಿಂದ ಕಂಟೆಸ್ಟ್ ಮಾಡಲು ಸುದೀಪ್‌ಗೆ ಈ ಹಿಂದೆಯೇ ರಾಜ್ಯದ ಮೂರೂ ಪ್ರಮುಖ ಪಕ್ಷಗಳು ಒತ್ತಾಯ ಮಾಡಿದ್ವು. ಅದಕ್ಕೆ ಪೂರಕವಾಗಿ ಕಿಚ್ಚ ಆ ಭಾಗದಲ್ಲಿ ಶಾಲೆಗಳನ್ನ ದತ್ತು ಪಡೆದು ಅವುಗಳ ಏಳಿಗೆಗೆ ಸಾಕಷ್ಟು ಶ್ರಮಿಸಿದ್ದಾರೆ. ಇದನ್ನೆಲ್ಲಾ ಗಮನಿಸುತ್ತಿದ್ರೆ ಬಿಜೆಪಿಗೆ ಪದಾರ್ಪಣೆ ಮಾಡೋಕೆ ಸುದೀಪ್ ಹೆಚ್ಚಿನ ಸಮಯ ತೆಗೆದುಕೊಳ್ಳಲ್ಲ ಅನಿಸ್ತಿದೆ.

ಸೋ.. ಮುಂದಿನ ವಿಧಾನಸಭಾ ಚುನಾವಣೆ ಅಥ್ವಾ ಲೋಕಸಭಾ ಚುನಾವಣೆ ವೇಳೆಗೆ ರಿಷಬ್ ಶೆಟ್ಟಿ ಹಾಗೂ ಸುದೀಪ್ ಇಬ್ಬರೂ ಬಿಜೆಪಿಗೆ ಬರೋದು ಬಹುತೇಕ ಖಚಿತ ಎನ್ನಲಾಗ್ತಿದೆ. ಅಲ್ಲದೆ, ಪ್ರಧಾನಿಯಾಗಿ ಯಶಸ್ವೀ 12 ವರ್ಷ ಪೂರೈಸಿರೋ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಸಾಧನೆ, ನಡೆಯನ್ನ ಶ್ಲಾಘಿಸಿ ಈ ಇಬ್ಬರೂ ಸ್ಟಾರ್‌‌ಗಳು ಶಹಬ್ಬಾಸ್‌‌ಗಿರಿ ಮೂಲಕ ಪೋಸ್ಟ್‌ ಮಾಡಿರೋದು ಸಿನಿ ಪಾಲಿಟಿಕ್ಸ್‌ಗೆ ಮುನ್ನುಡಿ ಬರೆದಂತಾಗಿದೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್

Exit mobile version