ಸುದೀಪ್ ಪತ್ನಿ ಸಾಮಾಜಿಕ ಕಾರ್ಯಕ್ಕೆ ಜನ ಶಹಬ್ಬಾಸ್‌‌ಗಿರಿ

ಅಂಗ ಹಾಗೂ ಅಂಗಾಂಶ ದಾನ ಮಾಡಿ ಮಾದರಿ ಆದ ಪ್ರಿಯಾ

Your paragraph text (9)

ಬಾದ್‌ಷಾ ಕಿಚ್ಚ ಸುದೀಪ್‌‌ಗೆ ಅವರ ಅರ್ಧಾಂಗಿ ಪ್ರಿಯಾ ಅವ್ರೇ ಅಸಲಿ ಸ್ಟ್ರೆಂಥ್. ಒಂದ್ಕಡೆ ಕಿಚ್ಚ ಸಿನಿಮಾ, ಬಿಗ್‌ಬಾಸ್ ಅಂತ ಬ್ಯುಸಿ ಆಗಿದ್ರೆ, ಮತ್ತೊಂದ್ಕಡೆ ಕಿಚ್ಚ ಫೌಂಡೇಷನ್‌‌ ಜವಾಬ್ದಾರಿಯನ್ನ ತಾನು ಹೊತ್ತಿದ್ದಾರೆ ಪತ್ನಿ ಪ್ರಿಯಾ. ಅಲ್ಲದೆ, ಅಂಗ ಹಾಗೂ ಅಂಗಾಂಶಗಳನ್ನ ದಾನ ಮಾಡುವ ಮೂಲಕ ರೋಲ್ ಮಾಡೆಲ್ ಕೂಡ ಆಗಿದ್ದಾರೆ.

ಇತ್ತೀಚೆಗೆ ಕಿಚ್ಚ ಸುದೀಪ್ 52ನೇ ಬರ್ತ್ ಡೇ ಸೆಲೆಬ್ರೇಟ್ ಮಾಡಿಕೊಂಡರು. ನಂದಿ ಲಿಂಕ್ಸ್ ಗ್ರೌಂಡ್‌‌‌ನಲ್ಲಿ ಸಹಸ್ರಾರು ಅಭಿಮಾನಿಗಳ ಜೊತೆ ಅರ್ಥಪೂರ್ಣ ಹಾಗೂ ಅಭಿಮಾನದ ಹೊಳೆಯಲ್ಲಿ ಮಿಂದೆದ್ದರು ಬಾದ್‌ಷಾ ಸುದೀಪ್. ಅದಕ್ಕೆ ಕಿಚ್ಚನ ಕುಟುಂಬವಾದ ಪ್ರಿಯಾ ಸುದೀಪ್, ಸಾನ್ವಿ ಸುದೀಪ್, ಸಂಚಿತ್ ಸೇರಿದಂತೆ ಸಿಸಿಎಲ್ ಗೆಳೆಯರ ಬಳಗ, ವೀರಕಪುತ್ರ ಶ್ರೀನಿವಾಸ್ ಹೀಗೆ ಸಾಕಷ್ಟು ಮಂದಿ ಸಾಕ್ಷಿ ಆಗಿದ್ರು.

ಕಳೆದ ವರ್ಷ ಮ್ಯಾಕ್ಸ್ ಅನ್ನೋ ಬ್ಲಾಕ್ ಬಸ್ಟರ್ ಹಿಟ್ ನೀಡಿದ್ದ ಕಿಚ್ಚ, ಈ ಬಾರಿ ಮತ್ತೊಂದು ಅಂಥದ್ದೇ ಅದೇ ಡೈರೆಕ್ಟರ್ ಜೊತೆ ಹೈ ವೋಲ್ಟೇಜ್ ಮಾಸ್ ವೆಂಚರ್ ಮಾರ್ಕ್ ಜೊತೆ ಬರ್ತಿದ್ದಾರೆ. ಅದರ ಟೀಸರ್ ಟಾಕ್ ಆಫ್ ದಿ ಟೌನ್ ಆಗಿದೆ. ಸದ್ಯ ಕಿಚ್ಚ ಮಾರ್ಕ್‌ ಚಿತ್ರದ ಶೂಟಿಂಗ್ ಜೊತೆ ಬಿಗ್‌ಬಾಸ್ ಶೋ ಕೂಡ ಹೋಸ್ಟ್ ಮಾಡೋಕೆ ಸಜ್ಜಾಗಿದ್ದಾರೆ. ಪ್ರತಿಯೊಬ್ಬ ಯಶಸ್ವಿ ಪುರುಷನ ಹಿಂದೆ ಒಬ್ಬ ಮಹಿಳೆ ಇದ್ದೇ ಇರ್ತಾಳೆ ಅನ್ನೋ ಮಾತಿದೆ. ಕಿಚ್ಚನ ಹಿಂದಿನ ಅಸಲಿ ಶಕ್ತಿ ಕೂಡ ಅವ್ರ ಅರ್ಧಾಂಗಿ ಪ್ರಿಯಾ ಸುದೀಪ್.

ಹೌದು, ಪತಿ ಮಾಡಿದ ನೇಮು, ಫೇಮ್‌ನ ಉಳಿಸಿಕೊಂಡು ಹೋಗೋದು ಕೂಡ ದೊಡ್ಡ ಜವಾಬ್ದಾರಿ. ಸದ್ಯ ಪ್ರಿಯಾ ಸುದೀಪ್ ಅವರು ಬರೀ ಹೆಸರು ಉಳಿಸ್ತಿಲ್ಲ. ಅದನ್ನ ಮತ್ತಷ್ಟು ಎತ್ತರಕ್ಕೆ ಬೆಳೆಸೋಕೆ ಮುಂದಾಗಿದ್ದಾರೆ. ಅಲ್ಲದೆ, ತಾನು ಕೂಡ ಸಮಾಜಕ್ಕೆ ಏನಾದ್ರು ಮಾಡಬೇಕು ಅನ್ನೋ ಮಹದಾಸೆಯಿಂದ ಕಿಚ್ಚ ಸುದೀಪ ಕೇರ್ ಫೌಂಡೇಷನ್ ವತಿಯಿಂದ ಹೊಸ ಅಭಿಯಾನ ಶುರು ಮಾಡಿದ್ದಾರೆ. ಅದೇ ಅಂಗ ಹಾಗೂ ಅಂಗಾಂಶ ದಾನ.

ಪ್ರಿಯಾ ಸುದೀಪ್ ಅವರು ಅಂಗ ಹಾಗೂ ಅಂಗಾಂಶಗಳನ್ನ ಡೊನೇಟ್ ಮಾಡಿ ಅಂತ ಜಸ್ಟ್ ಬಾಯಿ ಮಾತಲ್ಲಿ ಹೇಳ್ತಿಲ್ಲ. ಸ್ವತಃ ಅವರೇ ದಾನ ಮಾಡಿ, ನಂತರ ಉಳಿದವರಿಗೂ ಮಾಡಲು ಮನವಿ ಮಾಡಿದ್ದಾರೆ. ನಿಮ್ಮ ಒಂದು ಸಣ್ಣ ನಿರ್ಧಾರದಿಂದ ಜೀವ ಉಳಿಸಿದ್ರೆ, ಅದಕ್ಕಿಂತ ಮಹತ್ವದ ಕಾರ್ಯ ಮತ್ತೇನಿದೆ ಎಂದಿದ್ದಾರೆ ಅಭಿನಯ ಚಕ್ರವರ್ತಿ ಸುದೀಪ್ ಪತ್ನಿ.

ಈಗಾಗ್ಲೇ ಸುದೀಪ್ ಚಾರಿಟಬಲ್ ಟ್ರಸ್ಟ್‌ನಿಂದ ಸಾಕಷ್ಟು ಸಾಮಾಜಿಕ ಕಾರ್ಯಗಳು ನಡೆಯುತ್ತಿವೆ. ಅದೆಷ್ಟ     ೋ ಮಂದಿ ಅಸಹಾಯಕರ ಬಾಳಿಗೆ ಟ್ರಸ್ಟ್ ಬೆಳಕಾಗಿದೆ. ಇದೀಗ ಪ್ರಿಯಾ ಸುದೀಪ್ ಅವರು ಅದನ್ನ ಮುಂದುವರೆಸಿಕೊಂಡು ಹೋಗ್ತಿರೋದು ಕಿಚ್ಚನ ಉತ್ಸಾಹವನ್ನು ಇಮ್ಮಡಿಗೊಳಿಸಿದಂತಾಗಿದೆ. ಈ ತಿಂಗಳಾಂತ್ಯಕ್ಕೆ ಬಿಗ್‌ಬಾಸ್ ಶುರು, ಕ್ರಿಸ್‌ಮಸ್‌ಗೆ ಮಾರ್ಕ್, ಇದೊಂಥರಾ ಡಬಲ್ ಧಮಾಕ.

Exit mobile version