ಮ್ಯಾಕ್ಸ್-2 ಕ್ಯಾನ್ಸಲ್.. ಆದ್ರೆ ಡೈರೆಕ್ಟರ್‌ಗೆ ಕೈ ಕೊಟ್ಟಿಲ್ಲ ಕಿಚ್ಚ

ಬಿಲ್ಲ ರಂಗ ಬಾಷ ಜೊತೆ ಮತ್ತೊಂದು ಮೆಗಾ ಪ್ರಾಜೆಕ್ಟ್!

Kalaburagi man attempts suicide in public (7)

ಮ್ಯಾಕ್ಸಿಮಮ್ ಎಂಟರ್‌ಟೈನ್ಮೆಂಟ್ ಕೊಟ್ಟ ಮ್ಯಾಕ್ಸ್ ಬಳಿಕ, ಮಾಕ್ಸ್-2 ಕಿಕ್‌‌ಸ್ಟಾರ್ಟ್ ಮಾಡ್ತಾರಾ ಆಲ್ ಇಂಡಿಯಾ ಕಟೌಟ್ ಕಿಚ್ಚ ಸುದೀಪ್ ಅನ್ನೋ ಕ್ಯೂರಿಯಾಸಿಟಿಯಲ್ಲಿದ್ರು ಚಿತ್ರಪ್ರೇಮಿಗಳು. ಆದ್ರೆ ಬಿಲ್ಲ ರಂಗ ಬಾಷ ಶುರುವಾಗಿ ಈಗಾಗ್ಲೇ ಒಂದು ಶೆಡ್ಯೂಲ್ ಕಂಪ್ಲೀಟ್ ಆಗಿದೆ. ಹಾಗಂತ ಮ್ಯಾಕ್ಸ್ ಡೈರೆಕ್ಟರ್‌ಗೆ ಕೈ ಕೊಟ್ಟಿಲ್ಲ ಕಿಚ್ಚ. ಈ ಕುರಿತ ಇಂಟರೆಸ್ಟಿಂಗ್ ಸುದ್ದಿ ಇಲ್ಲಿದೆ.

ಅರ್ಜುನ್ ಮಹಾಕ್ಷಯ್ ಅಕಾ ಮ್ಯಾಕ್ಸ್ ಬಿಗ್‌‌ಸ್ಕ್ರೀನ್‌ಗೆ ಎಂಟ್ರಿ ಕೊಟ್ಟು ಆರು ತಿಂಗಳಾಯ್ತು. 50 ಕೋಟಿಯಲ್ಲಿ ತಯಾರಾದ ಮ್ಯಾಕ್ಸ್ ಬಾಕ್ಸ್ ಆಫೀಸ್‌‌ನಲ್ಲಿ ಒನ್ ಟು ಡಬಲ್ ಕಲೆಕ್ಷನ್ ಮಾಡಿತು. ಹೌದು, ನೂರು ಕೋಟಿ ಕ್ಲಬ್ ಸೇರುವ ಮೂಲಕ ಎಲ್ಲರ ಹುಬ್ಬೇರಿಸಿತು. ಅದಕ್ಕೆ ಕಾರಣ ಕಿಚ್ಚನ ಅಭಿನಯದಲ್ಲಿದ್ದ ಧಮ್, ಡೈರೆಕ್ಟರ್ ಕಥೆಯಲ್ಲಿದ್ದ ರಿಧಮ್ ಹಾಗೂ ಪ್ರೊಡಕ್ಷನ್ ಹೌಸ್‌ಗಿದ್ದ ಸಿನಿಮಾ ಪ್ಯಾಷನ್.

ADVERTISEMENT
ADVERTISEMENT

ಒಂದೇ ಒಂದು ನೈಟ್‌ನಲ್ಲಿ ನಡೆಯುವ ಕಥೆ ಮ್ಯಾಕ್ಸ್, ನೋಡುಗರಿಗೆ ಸಿಕ್ಕಾಪಟ್ಟೆ ಮನರಂಜನೆ ನೀಡಿತು. ಆಲ್ ಇಂಡಿಯಾ ಕಟೌಟ್ ಕಿಚ್ಚನ ಅಭಿನಯ ನೋಡೋಕೆ ಎರಡು ಕಣ್ಣು ಸಾಲದು. ಅವ್ರ ಹೈಟು, ವೆಯ್ಟು, ಸ್ಟೈಲು ಮ್ಯಾನರಿಸಂಗೆ ತಕ್ಕನಾಗಿ ಸಿನಿಮಾನ ತನ್ನ ಎರಡೂ ಭುಜಗಳ ಮೇಲೆ ಹೊತ್ತಿದ್ದರು ಕಿಚ್ಚ. ಅದೇ ಕಾರಣದಿಂದ ಪ್ರೇಕ್ಷಕರು ಆ ಸಿನಿಮಾನ ಹೊತ್ತು ಮೆರೆಸಿದರು.

ಅಂದಹಾಗೆ ಮ್ಯಾಕ್ಸ್ ಆಗ್ತಿದ್ದಂತೆ ಅದೇ ಡೈರೆಕ್ಟರ್ ವಿಜಯ್ ಜೊತೆ ಮ್ಯಾಕ್ಸ್ ಸೀಕ್ವೆಲ್ ಸಿನಿಮಾ ಸೆಟ್ಟೇರಲಿದೆ ಎನ್ನಲಾಗ್ತಿತ್ತು. ಅಷ್ಟರಲ್ಲೇ ಬಿಲ್ಲ ರಂಗ ಬಾಷ ಪ್ರಾಜೆಕ್ಟ್‌‌ಗೆ ಚಾಲನೆ ನೀಡಿದ್ರು ಸುದೀಪ್. ಹೌದು.. ಈ ಹಿಂದೆ ವಿಕ್ರಾಂತ್ ರೋಣ ಸಿನಿಮಾ ಮಾಡಿದ್ದ ರಂಗಿತರಂಗ ಫೇಮ್ ಡೈರೆಕ್ಟರ್ ಅನೂಪ್ ಭಂಡಾರಿ ಜೊತೆ ಬಿಆರ್‌‌ಬಿ ಕಿಕ್‌ಸ್ಟಾರ್ಟ್‌ ಆಯ್ತು.

ಅಂದಹಾಗೆ ಬಿಲ್ಲ ರಂಗ ಬಾಷ ಚಿತ್ರದ ಶೂಟಿಂಗ್ ಭರದಿಂದ ಸಾಗ್ತಿದೆ. ಕಿಚ್ಚ ಈಗಾಗ್ಲೇ ಬರೋಬ್ಬರಿ 20 ದಿನಗಳ ಕಾಲ ಶೂಟಿಂಗ್‌ನಲ್ಲಿ ಭಾಗಿಯಾಗಿದ್ದಾರೆ. ಕಂಠೀರವ ಸ್ಟುಡಿಯೋದಲ್ಲಿನ ಸೆಟ್‌‌ಗಳಲ್ಲಿ ಚಿತ್ರೀಕರಣ ಮಾಡಲಾಗಿದೆ. ಎರಡನೇ ಹಂತದ ಶೂಟಿಂಗ್‌ಗೆ ನಿರ್ದೇಶಕ ಅನೂಪ್ ಭಂಡಾರಿ ಯೋಜನೆ ರೂಪಿಸುತ್ತಿದ್ದು, ಜುಲೈನಲ್ಲಿ ವಿಎಫ್‌ಎಕ್ಸ್‌‌ ರಿಲೇಟೆಡ್ ದೃಶ್ಯಗಳ ಚಿತ್ರೀಕರಣ ಮಾಡಲಿದ್ದಾರಂತೆ. ಬೆಂಗಳೂರಿನಿಂದ ಹೊರಗಡ ಹೋಗಿ ಇದನ್ನ ಸೆರೆ ಹಿಡಿಯೋ ಧಾವಂತದಲ್ಲಿರೋ ಬಿಆರ್‌ಬಿ ಸಾರಥಿ, ಆಗಸ್ಟ್‌‌ನಿಂದ ಮೂರನೇ ಶೆಡ್ಯೂಲ್‌ಗೆ ಪ್ಲಾನ್ ಮಾಡಿದ್ದಾರೆ.

ಈ ಮಧ್ಯೆ ಪುಷ್ಪ-2 ಬಿಗ್ಗೆಸ್ಟ್ ಸಕ್ಸಸ್ ಬಳಿಕ ದಿಲ್‌ರಾಜು ನಿರ್ಮಾಣದ ಐಕಾನ್ ಸಿನಿಮಾಗೆ ಕೈಕೊಟ್ಟ ಅಲ್ಲು ಅರ್ಜುನ್ ರೀತಿ, ನಮ್ಮ ಬಾದ್‌ಷಾ ಸುದೀಪ್ ಮ್ಯಾಕ್ಸ್ ಡೈರೆಕ್ಟರ್‌ಗೆ ಕೈ ಕೊಟ್ಟಿಲ್ಲ. ಮ್ಯಾಕ್ಸ್-2 ಬದಲಿಗೆ ಮತ್ತೊಂದು ಮೆಗಾ ಪ್ರಾಜೆಕ್ಟ್‌ಗೆ ಕೈ ಹಾಕ್ತಿದ್ದಾರೆ. ಹೈ ವೋಲ್ಟೇಜ್ ಮಾಸ್ ಮಸಾಲ ಎಂಟರ್‌ಟೈನರ್‌ಗೆ ಬಿಲ್ಲ ರಂಗ ಬಾಷ ಸಿನಿಮಾದ ಜೊತೆ ಜೊತೆಗೆ ಬಣ್ಣ ಹಚ್ಚಲಿದ್ದಾರಂತೆ ಅಭಿನಯ ಚಕ್ರವರ್ತಿ ಸುದೀಪ್.

ಸ್ಟಾರ್ ನಟರು ವರ್ಷಕ್ಕೆ ಎರಡು ಸಿನಿಮಾ ಮಾಡಿದ್ರೆ ಇಂಡಸ್ಟ್ರಿಗೆ ಒಳ್ಳೆಯದಾಗಲಿದೆ ಅನ್ನೋ ಮಾತನ್ನು ನಿಜ ಮಾಡ್ತಿದ್ದಾರೆ ಬಾದ್‌ಷಾ ಸುದೀಪ್. ಒಂದ್ಕಡೆ ಕಿರುತೆರೆಯಲ್ಲಿ ಬಿಗ್‌ಬಾಸ್ ನಿರೂಪಣೆ, ಮತ್ತೊಂದ್ಕಡೆ ಹಿರಿತೆರೆಯಲ್ಲಿ ಒಳ್ಳೆಯ ಸಿನಿಮಾಗಳನ್ನ ಮಾಡ್ತಿರೋ ಕಿಚ್ಚ ಸದ್ಯ ಬಿಗ್‌ಬಾಸ್ ಸೀಸನ್-12 ಜೊತೆ ಜೊತೆಗೆ ಎರಡೆರಡು ಸಿನಿಮಾಗಳಲ್ಲಿ ಬ್ಯುಸಿ ಆಗಲಿದ್ದಾರೆ.

Exit mobile version