‘ಫ್ಲರ್ಟ್‌’ಗೆ ಆರಡಿ ಕಟೌಟ್ ‘ಮ್ಯಾಕ್ಸ್‌‌’ಮಮ್ ಸಪೋರ್ಟ್‌..!

ನಟನೆ ಜೊತೆ ನಿರ್ದೇಶನ & ನಿರ್ಮಾಣಕ್ಕೂ ಚಂದನ್ ಜೈ

Koodi (3)

ದೀಪಾವಳಿ ಹಬ್ಬದಲ್ಲಷ್ಟೇ ಅಲ್ಲ ಕಗ್ಗತ್ತಲನ್ನು ಹೊರದೋಡಿಸಿ, ಸದಾ ಬೆಳಕು ಕೊಡುತ್ತೆ ದೀಪ. ಅದ್ರಂತೆ ನಮ್ಮ ಬಾದ್‌ಷಾ ಕಿಚ್ಚ ಸುದೀಪ್ ಕೂಡ ಎಲ್ಲ ಕಾಲಕ್ಕೂ ಗೆಳೆಯರ ಬಳಗ ಬೆಳಗೋ ದೀಪವಾಗಿ ಕುಲಕೋಟಿ ಕನ್ನಡಿಗರ ಮನಸ್ಸು ಗೆದ್ದಿದ್ದಾರೆ. ಡಾರ್ಲಿಂಗ್ ಕೃಷ್ಣ ಬ್ರ್ಯಾಟ್ ಬಳಿಕ ಜೆಕೆಯ ಡಿ ವೀರ್, ಚಂದನ್‌ರ ಫ್ಲರ್ಟ್‌ಗೂ ಸಾಥ್ ನೀಡಿದ್ದಾರೆ. ಹಾಗಾದ್ರೆ ಫ್ಲರ್ಟ್‌ ಟ್ರೈಲರ್ ಹೇಗಿದೆ..? ಕಿಚ್ಚನ ಕಂಠದ ಜೊತೆ ಅದ್ರ ಕಂಪ್ಲೀಟ್ ಕಹಾನಿ ನಿಮ್ಮ ಮುಂದೆ.

ಇದು ಬಿಗ್‌ಬಾಸ್, ಸಿಸಿಎಲ್ ಹಾಗೂ ಲಕ್ಷ್ಮೀ ಬಾರಮ್ಮ ಖ್ಯಾತಿಯ ಚಂದನ್ ನಟನೆಯ ಬಹುನಿರೀಕ್ಷಿತ ಫ್ಲರ್ಟ್ ಸಿನಿಮಾದ ಟ್ರೈಲರ್ ಝಲಕ್. ಅಬ್ಬ್ಬಬ್ಬಾ.. ಟೈಟಲ್‌ಗೆ ತಕ್ಕನಾಗಿ ಕಂಟೆಂಟ್ ಕೂಡ ಮಸ್ತ್ ಮಜಾ ಕೊಡ್ತಿದೆ. ಹೌದು.. 99 ಮಂದಿ ಜೊತೆ ಫ್ಲರ್ಟ್ ಮಾಡಿರೋ ನಾಯಕನಟನನ್ನ ಪೆನ್‌ಡ್ರೈವ್ ಸಮೇತ ಕೋರ್ಟ್‌ ಕಟಕಟೆಯಲ್ಲಿ ನಿಲ್ಲಿಸಲಾಗುತ್ತೆ. ಅಂಥದ್ದೊಂದು ಸನ್ನಿವೇಶಕ್ಕೆ ಸಾಧುಕೋಕಿಲಾ, ಶ್ರುತಿ ಹಾಗೂ ಅವಿನಾಶ್ ಸಾಕ್ಷಿ ಆಗಿದ್ದಾರೆ.

ಕೃಷ್ಣ, ಚಂದನ್, ಜೆಕೆ.. ಗೆಳೆಯರ ಬಳಗ ಬೆಳಗೋ ದೀಪ ಕಿಚ್ಚ

‘ಫ್ಲರ್ಟ್‌’ಗೆ ಆರಡಿ ಕಟೌಟ್ ‘ಮ್ಯಾಕ್ಸ್‌‌’ಮಮ್ ಸಪೋರ್ಟ್‌

ಇದು ಕಾಮಿ ಪ್ರಜ್ವಲ್ ರೇವಣ್ಣನನ್ನ ನೆನಪಿಸೋ ದೃಶ್ಯವಾಗಿದ್ದು, ನಿನ್ನ ಭವಿಷ್ಯ ಉಜ್ವಲ ಕಣೋ ಅನ್ನೋ ಸಾಧು ಡೈಲಾಗ್ ಬಹುಬೇಗ ಹಾಸನದ ಯುವ ರಾಜಕಾರಣಿ ಪ್ರಜ್ವಲ್ ಪ್ರಕರಣಕ್ಕೆ ಹೋಲಿಕೆ ಆಗಿಬಿಡುತ್ತೆ. ಅದಾದ್ಮೇಲೆ, ಅದೇ ಕೋರ್ಟ್‌ನಲ್ಲಿ ನಾವು ಸೆಕ್ಸ್ ಮಾಡಿದ್ದು ನಿಜ ಅಂತ ಒಪ್ಪಿಕೊಳ್ಳೋ ಹೀರೋ, ಅದು ಮೀಟೂ ಅಲ್ಲ ಮೈ ಲಾರ್ಡ್‌, ಆಕೆಯ ಒಪ್ಪಿಗೆ ಮೇರೆಗೆ ಮಾಡಿದ್ದು ಅನ್ನೋ ಕ್ಲ್ಯಾರಿಟಿ ಕೊಡ್ತಾರೆ. ಅಲ್ಲಿಗೆ ಅದು ಮೀಟೂ ಆಗಲ್ಲ, ಬದಲಿಗೆ ವೀಟೂ ಆಗುತ್ತೆ.

ಕಮೆಡಿಯನ್ ಗಿರಿ ಹಾಸ್ಯದ ರಸದೌತಣ ಉಣಬಡಿಸಲಿದ್ದು, ಜಾಲಿ ಜಾಲಿಯಾಗೋ ಕಥೆ ಮುಂದೆ ತುಂಬಾ ಸೀರಿಯಸ್ ಆಗುತ್ತೆ. ಇದೆಲ್ಲಾ ಹುಡ್ಗೀರು ನಮ್ಮನ್ನ ಟ್ರ್ಯಾಪ್ ಮಾಡೋಕೆ ಬೀಸಿರುವ ಬಲೆ ಅನ್ನೋ ನಾಯಕನಟ, ಹುಡ್ಗೀರು ರಾತ್ರಿ ಆದ್ರೆ ಫ್ಲರ್ಟ್ ಮಾಡ್ತಾರೆ, ಮಾರ್ನಿಂಗ್ ಆದ್ರೆ ಕೋರ್ಟ್ ಅಂತಾರೆ ಅಂತ ಸೀರಿಯಸ್ ಆಗಿ ಕಥೆಗೆ ಟ್ವಿಸ್ಟ್ ಕೊಡ್ತಾರೆ. ಹನಿಟ್ರ್ಯಾಪ್, ಮನಿಟ್ರ್ಯಾಪ್, ಮೋಜು ಮಸ್ತಿ ಅಂಶಗಳ ಜೊತೆ ಇಲ್ಲಿ ಬ್ರೊಮ್ಯಾನ್ಸ್ ಕೂಡ ಹೈಲೈಟ್.

ನಟನೆ ಜೊತೆ ನಿರ್ದೇಶನ & ನಿರ್ಮಾಣಕ್ಕೂ ಚಂದನ್ ಜೈ

ಮಾಲ್ ಆಫ್ ಏಷ್ಯಾದಲ್ಲಿ ಬಿಗ್‌ಬಾಸ್‌ಗಾಗಿ ಜನಸಾಗರ

ದರ್ಶನ್ ಜೊತೆ ಐಟಂ ಹಾಡಿಗೆ ಸೊಂಟ ಬಳುಕಿಸಿದ್ದ ನಿಮಿಕಾ ರತ್ನಾಕರ್ ಈ ಫ್ಲರ್ಟ್ ಚಿತ್ರದ ನಾಯಕನಟಿ. ಇಲ್ಲಿ ಲವ್ ರೊಮ್ಯಾನ್ಸ್ ಜೊತೆ ಫ್ರೆಂಡ್‌‌ಶಿಪ್ ಮಹತ್ವ ಕೂಡ ಸಾರಲಾಗಿದೆ. ಗೆಳೆತನಕ್ಕೊಂದು ಆ್ಯಂಥೆಮ್ ಸಾಂಗ್ ಇದ್ದು, ಅದನ್ನ ಕಿಚ್ಚ ಸುದೀಪ್ ತಮ್ಮದೇ ಕಂಠದಲ್ಲಿ ಹಾಡಿರೋದು ಇಂಟರೆಸ್ಟಿಂಗ್. ಅಲ್ಲದೆ ಫ್ಲರ್ಟ್‌ ಟ್ರೈಲರ್‌ನ ಮಾಲ್ ಆಫ್ ಏಷ್ಯಾದಲ್ಲಿ ಸ್ವತಃ ಸುದೀಪ್ ಅವರೇ ಬಂದು ಲಾಂಚ್ ಮಾಡಿಕೊಟ್ಟಿದ್ದು ಮತ್ತೊಂದು ವಿಶೇಷ.

ವಿಶೇಷ ಅಂದ್ರೆ ಈ ಫ್ಲರ್ಟ್‌ ಮೂವಿಯಲ್ಲಿ ಚಂದನ್ ಬರೀ ನಟಿಸಿಲ್ಲ. ಅದನ್ನ ನಿರ್ದೇಶನ ಮಾಡುವ ಮೂಲಕ ಡೈರೆಕ್ಟರ್ ಕ್ಯಾಪ್ ಕೂಡ ತೊಟ್ಟಿದ್ದಾರೆ. ನಿರ್ಮಾಣಕ್ಕೂ ಕೈ ಹಾಕಿ, ಹೋಮ್ ಬ್ಯಾನರ್‌ನಡಿ ಬಂಡವಾಳ ಹಾಕಿ, ರಿಚ್ ಆಗಿ ಪ್ರೊಡ್ಯೂಸ್ ಕೂಡ ಮಾಡಿದ್ದಾರೆ. ನವೆಂಬರ್ 7ಕ್ಕೆ ಫ್ಲರ್ಟ್ ಮಾಡೋಕೆ ಸಜ್ಜಾಗಿ. ಸಾರಿ ಸಾರಿ ನೋಡೋಕೆ ರೆಡಿಯಾಗಿ.

ಅಂದಹಾಗೆ ಕೋಟಿಗೊಬ್ಬ ಕಿಚ್ಚ, ನಿಜಕ್ಕೂ ವರ್ಷಪೂರ ಬೆಳಗುವ ಸುದೀಪ. ಯಾಕಂದ್ರೆ ತನ್ನನ್ನ ನಂಬಿದವರಿಗಾಗಿ ಸದಾ ನಿಲ್ಲುವ ಮಾಣಿಕ್ಯ ಅವರು. ಮೊನ್ನೆಯಷ್ಟೇ ಸಿಸಿಎಲ್ ತಂಡದ ಹಾಗೂ ಆತ್ಮೀಯರಾದ ಡಾರ್ಲಿಂಗ್ ಕೃಷ್ಣ ನಟನೆಯ ಬ್ರ್ಯಾಟ್ ಚಿತ್ರದ ಟ್ರೈಲರ್ ಲಾಂಚ್ ಮಾಡಿ ಶುಭ ಕೋರಿದ್ದರು.

ಇದೀಗ ಚಂದನ್ ಹಾಗೂ ಜೆಕೆ ಸರದಿ. ಸೂಪರ್ ಸ್ಟಾರ್ ಜಯರಾಮ್ ಕಾರ್ತಿಕ್ ಕೂಡ ಡಿ ವೀರ್ ಅನ್ನೋ ಸಿನಿಮಾ ಮಾಡಿದ್ದು, ಅದಕ್ಕೂ ಸಹ ಶುಭ ಕೋರಿದ್ದಾರೆ ಬಾದ್‌ಷಾ. ಇದಲ್ಲವೇ ನಿಜವಾದ ಗೆಳೆತನ. ಇದು ದೊಡ್ಡ ಸ್ಟಾರ್ ಅನಿಸಿಕೊಂಡ ಸುದೀಪ್‌ರ ನಿಜವಾದ ದೊಡ್ಡತನ. ಅದೇ ಕಾರಣಕ್ಕೆ ಕಿಚ್ಚನನ್ನ ವಿಶ್ವದ ಮೂಲೆ ಮೂಲೆಯಲ್ಲಿರೋ ಕನ್ನಡಿಗರು ಅವರನ್ನ ಇಷ್ಟ ಪಡ್ತಾರೆ. ಆರಾಧಿಸ್ತಾರೆ, ಪ್ರೀತಿಸ್ತಾರೆ. ಎಲ್ಲಕ್ಕಿಂತ ಹೆಚ್ಚಾಗಿ ಗೌರವಿಸ್ತಾರೆ.

 

 

 

 

Exit mobile version