ತಲಾ ಅಜಿತ್ ಡೇರ್ ಡೆವಿಲ್‌‌ನಲ್ಲಿ ಬಾದ್‌ಷಾ ಸುದೀಪ್..?

ಇಬ್ಬರು ಸ್ಟೈಲಿಶ್ ಸ್ಟಾರ್‌‌ಗಳ ಮೆಗಾ ಮಲ್ಟಿಸ್ಟಾರರ್‌‌‌ ವೆಂಚರ್

Untitled design 2026 09 19T160342.421

ದರ್ಶನ್ ಡೆವಿಲ್ ಆದ್ರೆ ಸುದೀಪ್ ಡೇರ್ ಡೆವಿಲ್. ಹೌದು.. ತಲಾ ಅಜಿತ್ ನ್ಯೂ ಪ್ರಾಜೆಕ್ಟ್‌‌ಗೆ ನಮ್ಮ ಬಾದ್‌ಷಾ ಕಿಚ್ಚ ಸುದೀಪ್ ನ್ಯೂ ಎಂಟ್ರಿ ಎನ್ನಲಾಗ್ತಿದೆ. ಇಬ್ಬರಿಗೂ ಬಹುದೊಡ್ಡ ಫ್ಯಾನ್ ಫಾಲೋಯಿಂಗ್ ಇದ್ದು, ನಟನೆಯಲ್ಲಿ ಇಬ್ಬರೂ ರಾಕ್ಷಸರೇ. ಹಾಗಾಗಿ ಈ ಸುದ್ದಿ ಆದಷ್ಟು ಬೇಗ ಅಫಿಶಿಯಲ್ ಆಗಿ ಹೊರಬರಲಿ ಅಂತಿದ್ದಾರೆ ಚಿತ್ರಪ್ರೇಮಿಗಳು. ಹಾಗಾದ್ರೆ ಯಾವುದು ಆ ವೆಂಚರ್..? ಇಲ್ಲಿದೆ ಅಸಲಿ ಮ್ಯಾಟರ್.

ನಮ್ಮ ಬಾದ್‌ಷಾ ಕಿಚ್ಚ ಸುದೀಪ್ ಒನ್ಸ್ ಅಗೈನ್ ಪಕ್ಕದ ತಮಿಳು ಚಿತ್ರರಂಗದ ಮೂವಿಯಲ್ಲಿ ಕಾಣಿಸಿಕೊಳ್ಳುವ ಮುನ್ಸೂಚನೆ ಸಿಕ್ಕಿದೆ. ಯೆಸ್.. ದಳಪತಿ ವಿಜಯ್ ಹಾಗೂ ಶ್ರೀದೇವಿ ನಟನೆಯ ಪುಲಿ ಚಿತ್ರದ ಬಳಿಕ ಕಿಚ್ಚ ಮತ್ತೊಮ್ಮೆ ತಮಿಳು ಸಿನಿಮಾವೊಂದಕ್ಕೆ ಗ್ರೀನ್ ಸಿಗ್ನಲ್ ನೀಡುವ ಸಾಧ್ಯತೆಯಿದೆ. ಬಹುದೊಡ್ಡ ಅಭಿಮಾನಿ ಬಳಗ ಹೊಂದಿರೋ ತಲಾ ಅಜಿತ್ ಕುಮಾರ್ ನಟನೆಯ ಡೇರ್ ಡೆವಿಲ್ ಸಿನಿಮಾಗೆ ಖಡಕ್ ಖಳನಾಯಕನಾಗುವ ಲಕ್ಷಣಗಳು ಕಂಡು ಬರ್ತಿವೆ.

ಯೆಸ್.. ಇತ್ತೀಚೆಗೆ ಅಜಿತ್ ಡೇರ್ ಡೇವಿಲ್ ಮೂವಿಯ ಫಸ್ಟ್ ಲುಕ್ ರಿವೀಲ್ ಆಗಿದೆ. ವೈಟ್ ಸೂಟ್‌‌ನಲ್ಲಿ ಗನ್ ಹಿಡಿದು, ಸ್ಟೈಲ್ ಆಗಿ ಚೇರ್ ಮೇಲೆ ಕೂತಿರೋ ತಲಾ ಲುಕ್ ಸಖತ್ ಕಿಕ್ ಕೊಡೋದ್ರ ಜೊತೆ ಸಿಕ್ಕಾಪಟ್ಟೆ ವೈರಲ್ ಆಗ್ತಿದೆ. ಈ ಸಿನಿಮಾದಲ್ಲಿ ನಮ್ಮ ಆರಡಿ ಕಟೌಟ್, ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಕೂಡ ನಟಿಸಲಿದ್ದಾರೆ ಎನ್ನಲಾಗ್ತಿದೆ. ಅಂದಹಾಗೆ ಇದೊಂದು ಮೆಗಾ ಮಲ್ಟಿಸ್ಟಾರರ್ ಮೂವಿ ಆಗಿರಲಿದ್ದು, ಮಲಯಾಳಂ ಸೂಪರ್ ಸ್ಟಾರ್ ಮೋಹನ್‌ಲಾಲ್ ಕೂಡ ಈಗಾಗ್ಲೇ ಈ ಪ್ರಾಜೆಕ್ಟ್‌‌‌ಗೆ ಎಂಟ್ರಿ ಕೊಟ್ಟಾಗಿದೆ.

ಅಜಿತ್ ಹಾಗೂ ಸುದೀಪ್.. ಈ ಕಾಂಬೋನ ನೆನೆಸಿಕೊಂಡರೇನೇ ವ್ಹಾವ್ ಫೀಲ್ ತರಿಸುತ್ತೆ. ಇಬ್ಬರು ಸ್ಟೈಲಿಶ್ & ಮೈಂಡ್ ಬ್ಲೋಯಿಂಗ್ ಸೂಪರ್ ಸ್ಟಾರ್ಸ್ ಒಟ್ಟೊಟ್ಟಿಗೆ ಸ್ಕ್ರೀನ್ ಶೇರ್ ಮಾಡಿದ್ರೆ ಅದ್ರ ಮಜಾನೇ ಬೇರೆ. ಅಲ್ಲದೆ ಇದೊಂದು ಹೈ ವೋಲ್ಟೇಜ್ ಆ್ಯಕ್ಷನ್ ಥ್ರಿಲ್ಲರ್ ಮೂವಿ ಆಗಿರಲಿದೆ ಎನ್ನಲಾಗ್ತಿದೆ. ಅಜಿತ್ 64ನೇ ಸಿನಿಮಾ ಇದಾಗಲಿದ್ದು, ಇದೇ ನವೆಂಬರ್ 2ರಿಂದ ಶೂಟಿಂಗ್ ಕಿಕ್‌ಸ್ಟಾರ್ಟ್ ಆಗಲಿದೆ. 2027ರ ಸಮ್ಮರ್‌ಗೆ ಇದನ್ನ ಪ್ರೇಕ್ಷಕರ ಮುಂದೆ ತರೋ ಧಾವಂತದಲ್ಲಿದೆ ಟೀಂ.

ಅಧಿಕ್ ರವಿಚಂದ್ರನ್ ನಿರ್ದೇಶನದ ಡೇರ್ ಡೆವಿಲ್‌ಗೆ ಅನಿರುದ್ದ್ ರವಿಚಂದರ್ ಮ್ಯೂಸಿಕ್ ಕಂಪೋಸ್ ಮಾಡ್ತಿದ್ದು, ಎಲ್ಲೆಡೆ ಅಜಿತ್-ಸುದೀಪ್ ಸುದ್ದಿ ಹರಿದಾಡ್ತಿದೆ. ಇದು ಆದಷ್ಟು ಬೇಗ ಅಫಿಶಿಯಲ್ ನ್ಯೂಸ್ ಆಗಿ ಹೊರಹೊಮ್ಮಿದ್ರೆ ಇದಕ್ಕಿಂತ ಖುಷಿಯ ವಿಚಾರ ಮತ್ತೊಂದಿರಲಾರದು. ಯಾಕಂದ್ರೆ ಕಿಚ್ಚ ಈಗಾಗ್ಲೇ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ದೊಡ್ಡ ಮಟ್ಟಕ್ಕೆ ಸದ್ದು ಮಾಡಿದ್ದಾರೆ. ಆಡಿಯೆನ್ಸ್‌ಗೂ ರೀಚ್ ಆಗಿದ್ದಾರೆ. ಸೋ ಡೇರ್ ಡೆವಿಲ್ ಎರಡು ಮದ್ದಾನೆಗಳ ಕಾದಾಟದಂತೆ ಪ್ರೇಕ್ಷಕರಿಗೆ ಕಿಕ್ ಕೊಡೋದ್ರ ಜೊತೆ ಬಾಕ್ಸ್ ಆಫೀಸ್‌‌ ಬ್ಯಾಂಗ್ ಕೂಡ ಮಾಡೋದ್ರಲ್ಲಿ ಯಾವುದೇ ಅನುಮಾನವಿಲ್ಲ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್

Exit mobile version