ನಮ್ಮ ಬುಲ್ಡೋಜರ್ಸ್ ಮುಂದೆ ಬೆಂಗಾಲ್ ಟೈಗರ್ಸ್ ಠುಸ್

12ವರ್ಷದ ಬಳಿಕ CCL ಕಪ್ ಹಿಡಿದು ಘರ್ಜಿಸಿದ ಟೀಂ ಕಿಚ್ಚ

BeFunky collage 2026 02 02T153810.234

ಕಿಚ್ಚ ಬರೀ ಹೆಸರಲ್ಲ. ಇಟ್ಸ್ ಎ ಬ್ರ್ಯಾಂಡ್.  ಸಿನಿಮಾ, ಕ್ರಿಕೆಟ್, ಬಿಗ್ ಮನೆ..ಎಲ್ಲೇ ಹೋದ್ರು ಸಹ ಕಿಚ್ಚನೇ ಕಿಂಗ್. ಸಕ್ಸಸ್‌‌ಗೆ ಕೇರ್ ಆಫ್ ಅಡ್ರೆಸ್ ಈ ಬಾದ್‌ಷಾ ಸುದೀಪ್. 30 ವರ್ಷಗಳ ಯಶಸ್ವಿ ಸಿನಿಜರ್ನಿ ಮುಗಿಸಿರೋ ಸಂಭ್ರಮದಲ್ಲಿರೋ ಅಭಿನಯ ಚಕ್ರವರ್ತಿಗೆ ಸಿಎಂ ಸಮೇತ ಇಡೀ ಚಿತ್ರರಂಗ ವಿಶ್ ಮಾಡ್ತಿದೆ. ಈ ಮಧ್ಯೆ ಸಿಸಿಎಲ್ ಕಪ್ ಗೆದ್ದ ಕರ್ನಾಟಕ ಬುಲ್ಡೋಜರ್ಸ್ ಟೀಂ, ಭರ್ಜರಿ ಗಿಫ್ಟ್ ನೀಡಿದೆ. ದಾದಾ ಯಾರ್ ಗೊತ್ತಾ ಅಂತಿದ್ದವ್ರಿಗೆ ತಮಿಳರ ನಾಡಲ್ಲಿ ಕನ್ನಡದ ಬಾವುಟ ಹಾರಿಸಿದವ್ರೇ ದಾದಾ ಅನ್ನೋ ಉತ್ತರ ಕೂಡ ಸಿಕ್ಕಾಗಿದೆ. ಇವೆಲ್ಲದರ ಕುರಿತ ಇಂಟರೆಸ್ಟಿಂಗ್ ಸ್ಟೋರಿಯನ್ನ ಎಳೆ ಎಳೆಯಾಗಿ ಬಿಚ್ಚಿಡ್ತೀವಿ.

ದಿ ವೆಯ್ಟ್ ಈಸ್ ಓವರ್..ದಿ ಲಯನ್ ಈಸ್ ಬ್ಯಾಕ್.  2026ರ ಸಿಸಿಎಲ್ ಚಾಂಪಿಯನ್ಸ್ ಯಾರು ಅಂದ್ರೆ ಒನ್ ಅಂಡ್ ಓನ್ಲಿ ನಮ್ಮ ಕರ್ನಾಟಕ ಬುಲ್ಡೋಜರ್ಸ್. ಅರ್ಥಾತ್ ಅಭಿನಯ ಚಕ್ರವರ್ತಿ ಬಾದ್‌ಷಾ ಕಿಚ್ಚ ಸುದೀಪ್ ಪಡೆ. ಸೀಸನ್-3 ಹಾಗೂ ಸೀಸನ್-4ರಲ್ಲಿ ಕಪ್ ಗೆದ್ದಿದ್ದ ಕಿಚ್ಚನ ಟೀಂ, ಬರೋಬ್ಬರಿ 12 ವರ್ಷಗಳ ಬಳಿಕ ಸೀಸನ್-12ರಲ್ಲಿ ಈ ಸಲ ಕಪ್ ಗೆದ್ದು ಚಾಂಪಿಯನ್ಸ್ ಪಟ್ಟಕ್ಕೇರಿದ್ದಾರೆ.

ನಮ್ಮ ಬುಲ್ಡೋಜರ್ಸ್ ಮುಂದೆ ಬೆಂಗಾಲ್ ಟೈಗರ್ಸ್ ಠುಸ್

12ವರ್ಷದ ಬಳಿಕ CCL ಕಪ್ ಹಿಡಿದು ಘರ್ಜಿಸಿದ ಟೀಂ ಕಿಚ್ಚ

ತಮಿಳುನಾಡಿನ ಕೊಯಂಬತ್ತೂರಿನಲ್ಲಿ ನಡೆದ ಗ್ರ್ಯಾಂಡ್ ಫಿನಾಲೆಯಲ್ಲಿ ಬೆಂಗಾಲ್ ಟೈಗರ್ಸ್ ವಿರುದ್ಧ ಭರ್ಜರಿ ಜಯ ಸಾಧಿಸಿರೋ ನಮ್ಮ ಸುದೀಪ್ ಟೀಂ, 129ರನ್‌‌ಗಳ ಟಾರ್ಗೆಟ್‌ನ ಕೇವಲ 16.4 ಓವರ್‌‌ಗಳಲ್ಲಿ ಮುಗಿಸಿ, ವಿಕ್ಟರಿ ಸಾಧಿಸಿದೆ. ಆ ಪೈಕಿ ರಾಜೀವ್‌ ಸ್ಫೋಟಕ ಬ್ಯಾಟಿಂಗ್‌‌ನಿಂದ ಬಂದ 69 ರನ್, ಮಂಜುನಾಥ್, ಜೆಕೆ ನಾಟ್‌‌ ಔಟ್ ಆಗಿ ಗೆಲ್ಲಿಸಿದ ಪರಿ ಇಂಪ್ರೆಸ್ಸೀವ್. ಎಲ್ಲಕ್ಕಿಂತ ಮಿಗಿಲಾಗಿ ಇಡೀ ಟೀಂನ ಚೆನ್ನಾಗಿ ಪಳಗಿಸಿ, ಗೆಲುವಿನ ಟ್ರ್ಯಾಕ್‌ಗೆ ತಂದ ಕಿಚ್ಚನ ಎಫರ್ಟ್ ಸಿಕ್ಕಾಪಟ್ಟೆ ಇದೆ. ಹಾಗಾಗಿಯೇ 55ರ ಹರೆಯದಲ್ಲೂ 25ರ ಹುಡುಗನಂತೆ ಗೇಮ್ ಸ್ಪಿರಿಟ್‌‌ನಿಂದ ಆಟ ಆಡಿ ಸಿಸಿಎಲ್ ಕಿರೀಟ ಕರುನಾಡಿಗೆ ತಂದಿದ್ದಾರೆ.

WPL, IPL, CCL.. ಅಂದು ರೋಹಿತ್ ಇಂದು K7 ಕಿಚ್ಚ

RCB ಮೆನ್-ವುಮೆನ್ ಬಳಿಕ ಕರುನಾಡಿಗೆ CCL ಸರದಿ..!

 

2024ರಲ್ಲಿ ವುಮೆನ್ ಐಪಿಎಲ್‌‌ನಲ್ಲಿ ನಮ್ಮ ಆರ್‌ಸಿಬಿ ಚಾಂಪಿಯನ್ಸ್ ಆಗುವ ಮೂಲಕ ಕಪ್ ಗೆದ್ದಿದ್ರು. ಅದಾದ ಬಳಿಕ ಕಳೆದ ವರ್ಷ ಸುಮಾರು 18 ವರ್ಷಗಳ ನಂತ್ರ ಪುರುಷರ ಐಪಿಎಲ್‌‌ನಲ್ಲಿ ನಮ್ಮ ಆರ್‌ಸಿಬಿ ಕಪ್ ಗೆದ್ದು ಚಾಂಪಿಯನ್ಸ್ ಅನಿಸಿಕೊಂಡ್ರು. ಇದೀಗ ಬ್ಯಾಕ್ ಟು ಬ್ಯಾಕ್ ಕ್ರಿಕೆಟ್ ಚಾಂಪಿಯನ್ಸ್‌‌ ಲಿಸ್ಟ್‌ಗೆ ಸಿಸಿಎಲ್ ಕೂಡ ಸೇರಿಕೊಂಡಿದೆ. ಕಿಚ್ಚನ ಟೀಂ ಕರ್ನಾಟಕಕ್ಕೆ ಸಿಸಿಎಲ್ ಟ್ರೋಫಿ ತರೋ ಮೂಲಕ ಚಾಂಪಿಯನ್ಸ್ ಪಟ್ಟಕ್ಕೇರಿದ್ದಾರೆ. ಸ್ಮೃತಿ ಮಂದಾನ, ವಿರಾಟ್ ಕೊಹ್ಲಿ ಬಳಿಕ ಅದೇ ಹಾದಿಯಲ್ಲಿ ಕಿಚ್ಚ ಸುದೀಪ್ ಟೀಂ ಕೂಡ ಸಾಗ್ತಿರೋದು ಖುಷಿಯ ವಿಚಾರ.

ವೆರಿ ವೆರಿ ಇಂಟರೆಸ್ಟಿಂಗ್ ವಿಷಯ ಏನಪ್ಪಾಂದ್ರೆ ಸಿಸಿಲ್ ಚಾಂಪಿಯನ್ಸ್ ಟ್ರೋಫಿ ಪಡೆಯಲು ಕಿಚ್ಚ ಸುದೀಪ್, ಥೇಟ್ ರೋಹಿತ್ ಶರ್ಮಾ ಸ್ಟೈಲ್‌ನಲ್ಲಿ ಬಂದಿರೋದು ಸಿಕ್ಕಾಪಟ್ಟೆ ಸಂಚಲನ ಮೂಡಿಸಿದೆ.  ಐಸಿಸಿ ಮೆನ್ಸ್ ಟಿ20 ಚಾಂಪಿಯನ್ಸ್ ಆದ ನಮ್ಮ ಇಂಡಿಯಾ ಟೀಂ ಪರ ರೋಹಿತ್ ಕಪ್ ಸ್ವೀಕರಿಸಿದ್ರು. ಆದ ರೋಹಿತ್ ತುಂಬಾ ಸ್ಟೈಲಿಶ್ ಆಗಿ ನಡೆದುಕೊಂಡು ಹೋಗಿ ಕಪ್ ಸ್ವೀಕಾರ ಮಾಡಿದ್ರು. ಇದೀಗ ಅವ್ರಂತೆ ಕಿಚ್ಚ ಕೂಡ ಅದೇ ಸ್ಟೈಲ್‌‌ನಲ್ಲಿ ಪಡೆದುಕೊಂಡಿರೋದು ಇಂಟರೆಸ್ಟಿಂಗ್ ಆಗಿದೆ.

30 ವರ್ಷ ಸಿನಿ ಜರ್ನಿ.. ಕಿಚ್ಚನ ಪಡೆಯಿಂದ ಸ್ಪೆಷಲ್ ಗಿಫ್ಟ್

ದಾದಾ ಯಾರ್ ಗೊತ್ತಾ..?

                  ತಮಿಳುನಾಡಲ್ಲಿ ಕನ್ನಡ ಬಾವುಟ ಹಾರಿಸಿದವ್ರು

 

ಸ್ಪರ್ಶ ಚಿತ್ರದಿಂದ ಮಾರ್ಕ್ ವರೆಗೆ ಬರೋಬ್ಬರಿ 30 ವರ್ಷಗಳ ಸಿನಿಯಾನ ಸವೆಸಿ ಬಂದಿರೋ ಸುದೀಪ್, ಇಂದಿಗೂ ಮೋಸ್ಟ್ ಡಿಮ್ಯಾಂಡಿಂಗ್ ಪ್ಯಾನ್ ಇಂಡಿಯಾ ಸ್ಟಾರ್. ಅವ್ರ ಆ ಅಭೂತಪೂರ್ವ ಸಿನಿಜರ್ನಿಗೆ ನಮ್ಮ ಕರ್ನಾಟಕ ಬುಲ್ಡೋಜರ್ಸ್ ಟೀಂ ಭರ್ಜರಿ ಗಿಫ್ಟ್‌ನೇ ನೀಡಿದೆ. ಈ ಮೂಲಕ ದಾದಾ ಯಾರ್ ಗೊತ್ತಾ ಅನ್ನೋ ಸಾಂಗ್‌ಗೆ ಉತ್ತರ ಕೂಡ ಸಿಕ್ಕಂತಾಗಿದೆ. ಮೀನ್ಸ್.. ತಮಿಳರ ನಾಡಲ್ಲಿ ಕನ್ನಡದ ಬಾವುಟ ರಾರಾಜಿಸುವಂತೆ ಮಾಡಿದವರೇ ದಾದಾ ಅನ್ನೋದನ್ನ ಇಡೀ ಸಿನಿದುನಿಯಾಗೆ ಸಾರಿದ್ದಾರೆ ಬಾದ್‌ಷಾ ಸುದೀಪ್.

ಅಂದಹಾಗೆ ಸಿನಿಮಾ, ಕ್ರಿಕೆಟ್, ಬಿಗ್‌ಬಾಸ್..ಹೀಗೆ ಯಾವುದೇ ಇರಲಿ, ಎಲ್ಲಕ್ಕೂ ಬಾಸ್ ಮಾತ್ರ ಸುದೀಪ್. ಯಾಕಂದ್ರೆ ಅವ್ರು ಎಲ್ಲಕ್ಕೂ ಸಿಕ್ಕಾಪಟ್ಟೆ ಏಫರ್ಟ್ ಹಾಕ್ತಾರೆ. ಬಹಳ ಶ್ರದ್ಧೆಯಿಂದ ಕೆಲಸ ಮಾಡ್ತಾರೆ. ಅವ್ರ ವರ್ಕ್‌ ಡಿಟರ್ಮಿನೇಷನ್ ಬಗ್ಗೆ ಪ್ರತ್ಯೇಕವಾಗಿ ಹೇಳಬೇಕಿಲ್ಲ. ಯಾಕಂದ್ರೆ ಕಣ್ಣೆದುರೇ ಇರುವ ಸಕ್ಸಸ್‌‌ಗಳೇ ಅದಕ್ಕೆ ಪ್ರತ್ಯಕ್ಷ ಸಾಕ್ಷಿ. ಸದ್ಯ ಸಕ್ಸಸ್‌ಗೆ ಕೇರ್ ಆಫ್ ಅಡ್ರೆಸ್ ಆಗಿ ಬದಲಾಗಿದ್ದಾರೆ ಆಲ್ ಇಂಡಿಯಾ ಕಟೌಟ್ ಕಿಚ್ಚ.

ಸಿನಿಮಾ, ಕ್ರಿಕೆಟ್, ಬಿಗ್‌ಮನೆ..ಎಲ್ಲಕ್ಕೂ ಇವ್ರೇ ಬಿಗ್‌ಬಾಸ್

ಸಿಎಂ ಸಿದ್ದರಾಮಯ್ಯ ಸಮೇತ ಇಡೀ ಚಿತ್ರರಂಗ ಶುಭಾಶಯ

ಚಿತ್ರರಂಗದಲ್ಲಿ 3 ದಶಕಗಳ ಜರ್ನಿ ಮಾಡಿ ಬಂದಿರೋ ಕಿಚ್ಚನಿಗೆ ಸಿಎಂ ಸಿದ್ದರಾಮಯ್ಯರಿಂದ ಹಿಡಿದು, ಎಲ್ಲಾ ಸ್ಟಾರ್‌ಗಳು, ಅಭಿಮಾನಿಗಳು ಹಾಗೂ ಸಾಕಷ್ಟು ಮಂದಿ ರಾಜಕಾರಣಿಗಳು ಶುಭಾಶಯಗಳ ಸುರಿಮಳೆಗೈಯುತ್ತಿದ್ದಾರೆ. ಇದು ಸುದೀಪ್ ಸಂಪಾದಿಸಿರೋ ಆಸ್ತಿ ಅನ್ನೋದು ಕೂಡ ಅಷ್ಟೇ ಸತ್ಯ. ಮ್ಯಾಕ್ಸ್, ಮಾರ್ಕ್‌ ಚಿತ್ರಗಳ ಸಕ್ಸಸ್‌ ಬೆನ್ನಲ್ಲೇ ಬಿಗ್‌ಬಾಸ್, ಅದ್ರ ಹಿಂದೆಯೇ ಸಿಸಿಎಲ್ ಗರಿ ಸಿಕ್ಕಿದ್ದು ಖುಷಿ ಮೇಲೆ ಖುಷಿ ತಂದಿದೆ.

ಅಂದಹಾಗೆ ಸುದೀಪ್‌ರ ಈ ಬಿಗ್ ಬಿಗ್ ಸಕ್ಸಸ್‌‌ಗಳ ಹಿಂದೆ ಒಂದು ದೊಡ್ಡ ಶಕ್ತಿ ಇದೆ ಅವ್ರ ಕುಟುಂಬ.  ಪತ್ನಿ ಪ್ರಿಯಾ ಸುದೀಪ್ ಹಾಗೂ ಮಗಳು ಸಾನ್ವಿ ಸುದೀಪ್ ಸದಾ ಕಿಚ್ಚನ ಬೆನ್ನಿಗೆ ನಿಂತಿದ್ದಾರೆ. ಇದೇ ಅವ್ರ ಸಕ್ಸಸ್ ಸೀಕ್ರೆಟ್ ಅಂದ್ರೂ ತಪ್ಪಾಗಲ್ಲ. ಒಟ್ಟಾರೆಯಾಗಿ 3 ದಶಕದ ಸಿನಿಮಾ ಸಾಧನೆಗೆ ಹಾಗೂ ಸಿಸಿಎಲ್ ಚಾಂಪಿಯನ್ಸ್ ಆಗಿರೋ ಸುದೀಪ್‌ಗೆ ಅಭಿನಂದನೆ ಸಲ್ಲಿಸೋಣ. ಈ ಸಕ್ಸಸ್ ಪರ್ವ ನಿತ್ಯ, ನಿರಂತರವಾಗಿರಲಿ ಅಂತ ಹಾರೈಸೋಣ.

Exit mobile version