ಜೈಲರ್‌‌ಗಿಂತ ಜೈಲರ್-2 ಅಬ್ಬರ ಜೋರು: ಶಿವಣ್ಣ ಉರಂ ಮಾಸ್

11 (5)

ದಿ ವೆಯ್ಟ್ ಈಸ್ ಓವರ್. ಟೈಗರ್ ಮುತ್ತುವೇಲ್ ಪಾಂಡಿಯನ್ ಆಗಿ ತಲೈವಾ ರಜನಿಕಾಂತ್ ಈಸ್ ಬ್ಯಾಕ್. ಜೈಲರ್‌‌ಗಿಂತ ಬಿಗ್‌‌ಸ್ಕ್ರೀನ್‌‌ನಲ್ಲಿ ಜೈಲರ್-2 ಅಬ್ಬರ ಜೋರಾಗಿದ್ದು, ಶಿವಣ್ಣನ ಉರಂ ಮಾಸ್ ಖದರ್‌ಗೆ ಪರಭಾಷಾ ಪ್ರೇಕ್ಷಕರು ಕೂಡ ಸ್ಟನ್ ಆಗಿಬಿಟ್ಟಿದ್ದಾರೆ.

ಜೈಲರ್‌‌ಗಿಂತ ಜೈಲರ್-2 ಅಬ್ಬರ ಜೋರು.. ಶಿವಣ್ಣ ಉರಂ ಮಾಸ್

ಫಸ್ಟ್ ಹಾಫ್ ಸೂಪರ್.. ಆದ್ರೆ ಸೆಕೆಂಡ್ ಹಾಫ್‌ಗೆ ಮಿಕ್ಸ್ಡ್ ರಿವ್ಯೂ..!

ರಜನಿ ಜೊತೆ ಶಿವಣ್ಣ, ಮೇಘನಾ ರಾಜ್ & ಚೇತನ್ ಡಿಸೋಜಾ..!

ಡಿಸ್ಟ್ರಿಬ್ಯೂಟರ್‌ ಕೆ ಮಂಜುಗೆ ಜಾಕ್‌ಪಾಟ್.. ಬಾಕ್ಸಾಫೀಸ್ ಬ್ಯಾಂಗ್

ಸೂರ್ಯನೊಬ್ಬ.. ಚಂದ್ರನೊಬ್ಬ.. 50 ವರ್ಷದಿಂದ ಸೂಪರ್ ಸ್ಟಾರ್ ಕೂಡ ಒಬ್ರೇ.. ಅದು ಒನ್ & ಓನ್ಲಿ ತಲೈವಾ ರಜನಿಕಾಂತ್. ಹೌದು.. 75ರ ಇಳಿವಯಸ್ಸಿನಲ್ಲೂ ಸ್ಟೈಲ್ ಕಿಂಗ್ ರಜನಿಕಾಂತ್ ಮನರಂಜನೆಯ ರಸದೌತಣ ಉಣಬಡಿಸ್ತಿರೋದು ವಿಶೇಷ. ಜೈಲರ್-2 ಇಂದು ವರ್ಲ್ಡ್‌ವೈಡ್ ಸಾವಿರಾರು ಸ್ಕ್ರೀನ್‌ಗಳಲ್ಲಿ ತೆರೆಗಪ್ಪಳಿಸಿದ್ದು, ಕರ್ನಾಟಕ, ಬೆಂಗಳೂರಲ್ಲೂ ಜೋರಿದೆ ರಿಲೀಸ್ ಕ್ರೇಜ್ & ಹವಾ.

ಮಾಗಡಿ ರಸ್ತೆಯ ಅಂಜನ್ ಥಿಯೇಟರ್‌‌ನಲ್ಲಿ ಫ್ಯಾನ್ಸ್ ಹಬ್ಬದ ರೀತಿ ಜೈಲರ್‌ನ ಸ್ವಾಗತಿಸಿದ್ದು ಹೈಲೈಟ್. ಎಲ್ಲೆಡೆ ರಜನಿ ಕಟೌಟ್‌‌ಗಳು ಮುಗಿಲೆತ್ತರ ತಲೆ ಎತ್ತಿವೆ. ಪಟಾಕಿ ಸಿಡಿಸಿ, ಹಾಲಿನ ಅಭಿಷೇಕ ಮಾಡಿ, ಹೂಮಳೆ ಸುರಿಸೋ ಮೂಲಕ ಟೈಗರ್ ಮುತ್ತುವೇಲ್ ಪಾಂಡಿಯನ್‌ಗೆ ವೆಲ್ಕಮ್ ಹೇಳಿದ್ದಾರೆ. ಮುಂಜಾನೆ 6 ಗಂಟೆಯಿಂದಲೇ ತಲೈವಾ ಫೆಸ್ಟ್ ಶುರುವಾಗಿದ್ದು, ಪರಭಾಷಾ ಸ್ಟಾರ್‌‌ಗಳ ಮೆಗಾ ಮಲ್ಟಿಸ್ಟಾರ್ ಮೂವಿ ಆಗಿರೋದ್ರಿಂದ ಸಹಜವಾಗಿಯೇ ಎಲ್ಲೆಡೆ ಬಿಗ್ ಓಪನಿಂಗ್ ಪಡೆದಿದೆ ಜೈಲರ್-2.

ಅದರಲ್ಲೂ ನಮ್ಮ ಶಿವರಾಜ್‌‌ಕುಮಾರ್ ನರಸಿಂಹನಾಗಿ ಲಾಂಗ್ ಹಿಡಿದಿರೋ ಪರಿ ಅಮೇಜಿಂಗ್. ಶಿವಣ್ಣನಿಂದ ಆ ಲಾಂಗ್‌ಗೆ ಒಂದು ಕಳೆ ಬಂದಂತಾಗಿದೆ. ಮೊದಲ ಭಾಗಕ್ಕಿಂತ ಈ ಬಾರಿ ಸ್ಕ್ರೀನ್ ಸ್ಪೇಸ್ ಕೂಡ ಜಾಸ್ತಿ ಇದ್ದು, ಶಿವಣ್ಣನ ಬೆಂಕಿ ಪರ್ಫಾಮೆನ್ಸ್‌ಗೆ ಪರಭಾಷಿಗರು ಥ್ರಿಲ್ ಆಗಿಬಿಟ್ಟಿದ್ದಾರೆ. ವಿಶೇಷ ಅಂದ್ರೆ ಮೇಘನಾ ರಾಜ್ ಕೂಡ ಒಂದು ವಿಶೇಷ ಪಾತ್ರದ ಮೂಲಕ ಗಮನ ಸೆಳೆದಿದ್ದಾರೆ. ಇನ್ನೂ ಮಾಸ್ ಫೈಟ್‌‌ಗಳ ಹಿಂದೆ ಕರಾವಳಿ ಕನ್ನಡಿಗ.. ಸೆನ್ಸೇಷನಲ್ ಸಾಹಸ ನಿರ್ದೇಶಕ ಚೇತನ್ ಡಿಸೋಜಾ ಕೈಚಳಕವಿದೆ. ಒಟ್ಟಾರೆ ಕನ್ನಡಿಗರಿಂದ ಜೈಲರ್-2 ಮತ್ತಷ್ಟು ಕಲರ್‌‌ಫುಲ್ ಆಗಿ ಹೊರಹೊಮ್ಮಿದೆ.

ಜೈಲರ್ ಸಿನಿಮಾಗಿಂತ ಜೈಲರ್-2 ಅದ್ಭುತ ಅಂತ ಎಲ್ಲೆಡೆ ಅದ್ಭುತ ರೆಸ್ಪಾನ್ಸ್ ಬರ್ತಿದೆ. ಆದ್ರೆ ಜೈಲರ್-2 ಮೊದಲಾರ್ಧ ಸೂಪರ್ ಆಗಿದ್ದು, ದ್ವಿತಿಯಾರ್ಧಕ್ಕೆ ಮಿಕ್ಸ್ಡ್ ರಿವ್ಯೂಸ್ ಬರ್ತಿವೆ. 2 ಗಂಟೆ 46 ನಿಮಿಷಗಳ ರನ್ ಟೈಂ ಇರೋ ಜೈಲರ್-2 ಸಿನಿಮಾ ಮೊದಲ ದಿನದ ಪ್ರೀ ಬುಕ್ಕಿಂಗ್ಸ್‌‌ನಿಂದಲೇ ಬರೋಬ್ಬರಿ 60 ಕೋಟಿ ರೂಪಾಯಿ ಬ್ಯುಸಿನೆಸ್ ಮಾಡಿತ್ತು. 350 ಕೋಟಿ ಥಿಯೇಟ್ರಿಕಲ್ ಪ್ರೀ-ಬ್ಯುಸಿನೆಸ್ ಮಾಡಿರೋ ಜೈಲರ್-2 ಬ್ರೇಕ್ ಈವನ್ ಆಗ್ಬೇಕು ಅಂದ್ರೆ 650ರಿಂದ 700 ಕೋಟಿ ಗಳಿಸಬೇಕಿದೆ.

ಕರ್ನಾಟಕದಲ್ಲಿ ಗಂಡುಗಲಿ ಕೆ ಮಂಜು ಡಿಸ್ಟ್ರಿಬ್ಯೂಷನ್ ರೈಟ್ಸ್ ಖರೀದಿಸಿದ್ದು, ಬಹಳ ದಿನಗಳ ನಂತರ ವಿತರಣೆಗೆ ಇಳಿದಿರೋ ಕೆ ಮಂಜುಗೆ ಒಂಥರಾ ಜಾಕ್‌ಪಾಟ್ ಹೊಡೆದಂತಾಗಿದೆ. ಯಾಕಂದ್ರೆ ರಜನಿಕಾಂತ್ ಸಿನಿಮಾಗಳು ಮಿನಿಮಮ್ ಗ್ಯಾರಂಟಿ. ಅದ್ರಲ್ಲೂ ಸಿನಿಮಾ ಕೊಂಚ ಚೆನ್ನಾಗಿದೆ ಅಂತ ರಿಪೋರ್ಟ್ ಬಂದ್ರೆ ಮುಗೀತು. ಬಾಕ್ಸ್ ಆಫೀಸ್‌‌ನಲ್ಲಿ ಹಬ್ಬವೋ ಹಬ್ಬ. ಆ ನಿಟ್ಟಿನಲ್ಲಿ ಜೈಲರ್-2ಗೆ ಬೊಂಬಾಟ್ ರೆಸ್ಪಾನ್ಸ್ ವ್ಯಕ್ತವಾಗ್ತಿದ್ದು, ವಿತರಕ ಮಂಜಣ್ಣ ದಿಲ್‌ಖುಷ್ ಆಗಿದ್ದಾರೆ.

 

Exit mobile version