ಒಂದು ರಾತ್ರಿಗೆ 35 ಲಕ್ಷ ರೂ. ಪಡೆದು ಸಿಕ್ಕಿಬಿದ್ದ ಕನ್ನಡದ ನಟಿ!

ಆ ರಾತ್ರಿ ನಟಿ ಜೊತೆ ಯಾರ್ಯಾರು ಇದ್ರು ಗೊತ್ತಾ?

Befunky collage 2025 05 23t183441.710

ತಮಿಳು ಚಿತ್ರರಂಗದ ಚೆಲುವೆ ಕಯಾದು ಲೋಹರ್, ಇತ್ತೀಚಿನ ‘ಡ್ರ್ಯಾಗನ್’ ಸಿನಿಮಾದ ಬ್ಲಾಕ್‌ಬಸ್ಟರ್ ಯಶಸ್ಸಿನಿಂದ ಗಮನ ಸೆಳೆದಿದ್ದಾರೆ. ಆದರೆ, ಈಗ ಅವರು ಜಾರಿ ನಿರ್ದೇಶನಾಲಯದ (ಇಡಿ) ತನಿಖೆಯ ಕೇಂದ್ರಬಿಂದುವಾಗಿದ್ದಾರೆ. ಒಂದು ರಾತ್ರಿಯ ಹೈ ಪ್ರೊಫೈಲ್ ಪಾರ್ಟಿಗೆ ಹಾಜರಾಗಲು 35 ಲಕ್ಷ ರೂಪಾಯಿ ಪಡೆದಿರುವ ಆರೋಪದ ಮೇಲೆ ಕಯಾದು ಲೋಹರ್‌ರ ಹೆಸರು ಟಾಸ್ಮಾಕ್ (TASMAC) 1000 ಕೋಟಿ ಹಗರಣಕ್ಕೆ ಸಂಬಂಧಿಸಿದ ಚಾರ್ಜ್‌ಶೀಟ್‌ನಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ.

ಏನಿದು ಟಾಸ್ಮಾಕ್ ಹಗರಣ?

ತಮಿಳುನಾಡಿನ ಮದ್ಯ ವ್ಯವಹಾರವನ್ನು ನಿರ್ವಹಿಸುವ ಟಾಸ್ಮಾಕ್ ಕಾರ್ಪೊರೇಷನ್‌ಗೆ ಸಂಬಂಧಿಸಿದ 1000 ಕೋಟಿ ರೂಪಾಯಿಗಳ ಹಗರಣದ ತನಿಖೆಯನ್ನು ಇಡಿ ನಡೆಸುತ್ತಿದೆ. ಏಪ್ರಿಲ್‌ನಲ್ಲಿ ಟಾಸ್ಮಾಕ್‌ನ ಮುಖ್ಯ ಕಚೇರಿ ಸೇರಿದಂತೆ ಎಂಟು ಕಡೆಗಳಲ್ಲಿ ದಾಳಿ ನಡೆಸಿದ ಇಡಿ, ಹಲವು ದಾಖಲೆಗಳನ್ನು ವಶಪಡಿಸಿಕೊಂಡಿತ್ತು. ಈ ತನಿಖೆಯಲ್ಲಿ, ಹಗರಣಕ್ಕೆ ಸಂಬಂಧಿಸಿದ ಒಬ್ಬ ವ್ಯಕ್ತಿಯು ರಾಜಕಾರಣಿಗಳು ಮತ್ತು ಉದ್ಯಮಿಗಳಿಗಾಗಿ ಆಯೋಜಿಸಿದ್ದ ಹೈ ಪ್ರೊಫೈಲ್ ಪಾರ್ಟಿಗೆ ಕಯಾದು ಲೋಹರ್ 35 ಲಕ್ಷ ರೂಪಾಯಿಗಳನ್ನು ಪಡೆದು ಹಾಜರಾಗಿದ್ದಾರೆ ಎಂಬ ಮಾಹಿತಿ ಬೆಳಕಿಗೆ ಬಂದಿದೆ.

ADVERTISEMENT
ADVERTISEMENT

ಕಯಾದು ಲೋಹರ್‌ರ ಸಿನಿಮಾ ಜರ್ನಿ

2021ರಲ್ಲಿ ಕನ್ನಡ ಚಿತ್ರ ‘ಮುಗಿಲ್ ಪೇಟೆ’ಯ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ಕಯಾದು ಲೋಹರ್, 2022ರಲ್ಲಿ ಮಲಯಾಳಂ ಮತ್ತು ತೆಲುಗು, 2023ರಲ್ಲಿ ಮರಾಠಿ, ಮತ್ತು 2025ರಲ್ಲಿ ‘ಡ್ರ್ಯಾಗನ್’ ಚಿತ್ರದ ಮೂಲಕ ತಮಿಳು ಚಿತ್ರರಂಗದಲ್ಲಿ ಗುರುತಿಸಿಕೊಂಡರು.

‘ಡ್ರ್ಯಾಗನ್’ ಚಿತ್ರವು 152 ಕೋಟಿ ರೂಪಾಯಿಗಳ ಗಳಿಕೆಯೊಂದಿಗೆ ಬ್ಲಾಕ್‌ಬಸ್ಟರ್ ಆಗಿತ್ತು. ಪ್ರಸ್ತುತ, ಕಯಾದು ತಮಿಳಿನ ಮೂರು ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಆದರೆ, ಈಗ ಈ ಹಗರಣದ ಆರೋಪದಿಂದಾಗಿ ಅವರ ವೃತ್ತಿಜೀವನಕ್ಕೆ ಸವಾಲು ಎದುರಾಗಿದೆ.

ಕೆಲವು ನಟಿಯರ ‘ಕತ್ತಲ ವ್ಯವಹಾರ’ದ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಟಾಸ್ಮಾಕ್ ಹಗರಣ ತಮಿಳುನಾಡಿನ ರಾಜಕೀಯದಲ್ಲಿ ಸಂಚಲನ ಮೂಡಿಸಿದ್ದು, ಪ್ರಕರಣವು ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆಯಲ್ಲಿದೆ. ಮುಂದೇನಾಗುತ್ತದೆ ಎಂಬುದನ್ನು ಕಾದುನೋಡಬೇಕಿದೆ.

Exit mobile version