ಯುವ ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದರ್ ಜೊತೆ ಕಾವ್ಯಾ ಮಾರನ್ ಮದುವೆ

Web 2025 06 14t160811.099

ಐಪಿಎಲ್ ಪ್ರಿಯರಿಗೆ ಕಾವ್ಯಾ ಮಾರನ್ ಹೆಸರು ಚಿರಪರಿಚಿತ. ಸನ್ ರೈಸರ್ಸ್ ಹೈದರಾಬಾದ್ (SRH) ತಂಡದ ಮಾಲಕಿಯಾಗಿರುವ ಕಾವ್ಯಾ, ದೇಶದ ಯಶಸ್ವಿ ಯುವ ಉದ್ಯಮಿಗಳಲ್ಲಿ ಒಬ್ಬರು. ಸನ್ ಗ್ರೂಪ್ಸ್‌ನ ಮಾಲೀಕ ಕಲಾನಿಧಿ ಮಾರನ್ ಅವರ ಪುತ್ರಿಯಾದ ಕಾವ್ಯಾ, ಸುಮಾರು 500 ಕೋಟಿ ರೂ. ಆಸ್ತಿಯ ಒಡತಿಯಾಗಿದ್ದಾರೆ. ಇದೀಗ, ಈ ಯುವ ಉದ್ಯಮಿ ದಕ್ಷಿಣ ಭಾರತದ ಖ್ಯಾತ ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದರ್ ಜೊತೆ ಮದುವೆಯಾಗಲಿದ್ದಾರೆ ಎಂಬ ಸುದ್ದಿ ಗಟ್ಟಿಯಾಗಿ ಕೇಳಿಬರುತ್ತಿದೆ.

ಕಾವ್ಯಾ ಮಾರನ್ (32) ಮತ್ತು ಅನಿರುದ್ಧ್ ರವಿಚಂದರ್ (34) ಕಳೆದ ಒಂದೆರಡು ವರ್ಷಗಳಿಂದ ಡೇಟಿಂಗ್‌ನಲ್ಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇಬ್ಬರೂ ಶೀಘ್ರವೇ ವಿವಾಹ ಬಂಧನಕ್ಕೆ ಒಡ್ಡಲಿದ್ದಾರೆ ಎಂಬ ಮಾಹಿತಿ ಇದೆ. ‘ಜೈಲರ್’, ‘ವಿಕ್ರಂ’ ಮುಂತಾದ ಬ್ಲಾಕ್‌ಬಸ್ಟರ್ ಚಿತ್ರಗಳಿಗೆ ಸಂಗೀತ ನೀಡಿರುವ ಅನಿರುದ್ಧ್, ತಮ್ಮ ಸಂಗೀತದಿಂದಲೇ ಸಿನಿಮಾಗಳನ್ನು ಯಶಸ್ವಿಗೊಳಿಸಿದ ಖ್ಯಾತಿಯವರು. ಇವರಿಬ್ಬರ ಜೋಡಿ ಒಳ್ಳೆಯದೆಂದು ಅಭಿಮಾನಿಗಳು ಭಾವಿಸಿದ್ದಾರೆ.


ಇತ್ತೀಚೆಗೆ ಕಾವ್ಯಾ ಮತ್ತು ಅನಿರುದ್ಧ್ ಡಿನ್ನರ್‌‌ಗೆ ಹೊರಗೆ ಹೋಗಿದ್ದಾಗ ಕ್ಯಾಮೆರಾ ಕಣ್ಣಿಗೆ ಸಿಕ್ಕಿದ್ದಾರೆ ಎಂಬ ಸುದ್ದಿ ಇದೆ. ರೆಡಿಟ್‌ನಲ್ಲಿ ಈ ಬಗ್ಗೆ ಚರ್ಚೆಯಾಗಿದ್ದು, ಕಳೆದ ವರ್ಷ ಇವರಿಬ್ಬರೂ ಲಾಸ್ ವೆಗಾಸ್‌ನ ಕಸಿನೊವೊಂದರಲ್ಲಿ ಆತ್ಮೀಯವಾಗಿ ಕಾಣಿಸಿಕೊಂಡಿದ್ದರೆಂದು ಓರ್ವ ಬಳಕೆದಾರ ಹೇಳಿದ್ದಾರೆ. ಈ ಗಾಸಿಪ್‌ಗ‌ಳು ಇವರ ಮದುವೆ ಸುದ್ದಿಗೆ ಇನ್ನಷ್ಟು ಉತ್ಸಾಹ ತಂದಿವೆ.

ಕಾವ್ಯಾ-ಅನಿರುದ್ಧ್‌ರ ವೃತ್ತಿಯ‌ ಸಂಗಮ

ಅನಿರುದ್ಧ್ ರವಿಚಂದರ್ ಕಾವ್ಯಾರ‌ ತಂದೆ ಕಲಾನಿಧಿ ಮಾರನ್ ನಿರ್ಮಿಸಿದ ‘ಜೈಲ’ ಚಿತ್ರಕ್ಕೆ ಸಂಗೀತ ನೀಡಿದ್ದರು. ಚಿತ್ರದ ಯಶಸ್ಸಿನ ಬಳಿಕ ಕಲಾನಿಧಿ ಅವರು ಅನಿರುದ್ದ್‌‌‌‌‌‌ಗೆ ಐಶಾರಾಮಿ ಕಾರೊಂದನ್ನ ಉಡುಗೊರೆಯಾಗಿ ನೀಡಿದ್ದರು. ಈಗ ‘ಜೈರ್‌ 2’ ಮತ್ತು ಅಲ್ಲು ಅರ್ಜುನ್‌-ಅಟ್ಲೀ ಚಿತ್ರಕ್ಕೂ ಅನಿರುದ್ಧ್ ಸಂಗೀತ ನೀಡುತ್ತಿದ್ದಾರೆ. ಕಾವ್ಯಾ ಮತ್ತು ಅನಿರುದ್ಧ್‌ರ ವೃತ್ತಿಯ ಸಂಗಮವೂ ಗಮನಾರ್ಹವಾಗಿದೆ.

Exit mobile version