ನನ್ನರಸಿ ರಾಧೆ ನಟಿ ಕೌಸ್ತುಭ ಮಣಿ ಬೇಬಿ ಬಂಪ್ ಲುಕ್ ವೈರಲ್!

Web 2025 06 14t183926.723

ಕನ್ನಡ ಕಿರುತೆರೆಯ ಜನಪ್ರಿಯ ಧಾರಾವಾಹಿ ‘ನನ್ನರಸಿ ರಾಧೆ’ ಮೂಲಕ ಖ್ಯಾತಿಯ ಶಿಖರವೇರಿರುವ ನಟಿ ಕೌಸ್ತುಭ ಮಣಿ ತಮ್ಮ ಜೀವನದ ಸಂತೋಷದ ಕ್ಷಣವನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ಮೊದಲ ಬಾರಿಗೆ ಬೇಬಿ ಬಂಪ್ ಲುಕ್‌ನಲ್ಲಿ ಫೋಟೋಶೂಟ್‌ನ ಚಿತ್ರಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಶೇರ್ ಮಾಡಿಕೊಂಡಿರುವ ಕೌಸ್ತುಭ, ತಾಯಿಯಾಗುವ ಖುಷಿಯಲ್ಲಿದ್ದಾರೆ.

ಕಿರುತೆರೆಯಲ್ಲಿ ‘ನನ್ನರಸಿ ರಾಧೆ’ ಧಾರಾವಾಹಿಯ ಮೂಲಕ ದೊಡ್ಡ ಸಂಖ್ಯೆಯ ಅಭಿಮಾನಿಗಳನ್ನು ಸಂಪಾದಿಸಿಕೊಂಡ ಕೌಸ್ತುಭ ಮಣಿ, ತಮ್ಮ ನಟನಾ ಕೌಶಲ್ಯದಿಂದ ಮನೆಮಾತಾಗಿದ್ದಾರೆ. ಆಗಾಗ್ಗೆ ತಮ್ಮ ಪತಿ ಸಿದ್ಧಾಂತ್ ಜೊತೆಗಿನ ಫೋಟೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುವ ಕೌಸ್ತುಭ, ಈಗ ತಮ್ಮ ಜೀವನದ ವಿಶೇಷ ಕ್ಷಣವನ್ನು ಅಭಿಮಾನಿಗಳೊಂದಿಗೆ ಶೇರ್ ಮಾಡಿಕೊಂಡಿದ್ದಾರೆ. ತಾಯಿಯಾಗುವ ಸಂತೋಷದಲ್ಲಿ ಮಿಂದಿರುವ ಈಕೆಯ ಫೋಟೋಶೂಟ್ ಚಿತ್ರಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ.


ಕೌಸ್ತುಭ ಮಣಿ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಬೇಬಿ ಬಂಪ್ ಫೋಟೋಶೂಟ್‌ನ ವಿಡಿಯೋ ಮತ್ತು ಚಿತ್ರಗಳನ್ನು ಶೇರ್ ಮಾಡಿಕೊಂಡಿದ್ದಾರೆ. ಈ ಫೋಟೋಗಳನ್ನು ನೋಡಿದ ಅಭಿಮಾನಿಗಳು, “ನಿಜಕ್ಕೂ ಅದೃಷ್ಟವಂತೆ” ಮತ್ತು “ನನ್ನರಸಿ ರಾಧೆ ಖ್ಯಾತಿಗೆ ಶುಭಾಶಯ” ಎಂದು ಕಾಮೆಂಟ್‌ಗಳ ಮೂಲಕ ತಮ್ಮ ಸಂತೋಷವನ್ನು ವ್ಯಕ್ತಪಡಿಸಿದ್ದಾರೆ. ಕೌಸ್ತುಭರ ಈ ಮುದ್ದಾದ ಲುಕ್‌ಗೆ ಜನ ಫಿದಾ ಆಗಿದ್ದಾರೆ.

ಕಳೆದ ವರ್ಷ ಏಪ್ರಿಲ್ 2024ರಲ್ಲಿ ಕೌಸ್ತುಭ ಮಣಿ, ಸಿದ್ಧಾಂತ್ ಜೊತೆ ಅದ್ಧೂರಿಯಾಗಿ ವಿವಾಹವಾದರು. ಗುರು-ಹಿರಿಯರ ಸಮ್ಮುಖದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಈ ಜೋಡಿ, ಈಗ ತಮ್ಮ ಕುಟುಂಬವನ್ನು ವಿಸ್ತರಿಸುವ ಖುಷಿಯಲ್ಲಿದ್ದಾರೆ. ವೃತ್ತಿಪರವಾಗಿ, ಕೌಸ್ತುಭ ಕಿರುತೆರೆಯ ಜೊತೆಗೆ ಬೆಳ್ಳಿತೆರೆಯಲ್ಲೂ ತಮ್ಮ ಛಾಪು ಮೂಡಿಸಿದ್ದಾರೆ. ಅರ್ಜುನ್ ಜನ್ಯ ನಿರ್ದೇಶನದ ‘45’ ಚಿತ್ರದಲ್ಲಿ ಶಿವರಾಜ್‌ಕುಮಾರ್, ಉಪೇಂದ್ರ, ಮತ್ತು ರಾಜ್ ಬಿ ಶೆಟ್ಟಿ ಜೊತೆ ನಟಿಸಿದ್ದಾರೆ. ಈ ಚಿತ್ರವು ಆಗಸ್ಟ್ 15, 2025ರಂದು ಬಹುಭಾಷೆಗಳಲ್ಲಿ ಬಿಡುಗಡೆಯಾಗಲಿದೆ.

Exit mobile version