ಚಿತ್ರಪ್ರೇಮಿಗಳಿಗೆ ಗುಡ್‌ನ್ಯೂಸ್..ಫಿಲ್ಮ್ ಟಿಕೆಟ್ 200ರೂ ಪ್ಲಸ್ ಟ್ಯಾಕ್ಸ್

ಗೃಹ ಇಲಾಖೆಯಿಂದ ಅಧಿಕೃತ ಆದೇಶ..ಗೆಜೆಟ್ ಒಂದೇ ಬಾಕಿ

Web (12)

ಗುಡ್ ನ್ಯೂಸ್.. ಗುಡ್ ನ್ಯೂಸ್.. ಗುಡ್ ನ್ಯೂಸ್.. ಚಿತ್ರ ಪ್ರೇಮಿಗಳಿಗೆ ಗುಡ್‌ ನ್ಯೂಸ್. ಅಕ್ಕ ಪಕ್ಕದ ರಾಜ್ಯಗಳಂತೆ ಕರ್ನಾಟಕದಲ್ಲೂ ಏಕರೂಪ ಟಿಕೆಟ್ ದರ ನೀತಿ ಜಾರಿ ಆಗೇ ಬಿಡ್ತು. 200 ರೂಪಾಯಿ ಇದ್ರೆ ಸಿನಿಮಾ ನೋಡಬಹುದು. ಅರೇ ನಿಜಾನಾ..? ಕೊಟ್ಟ ಮಾತು ಉಳಿಸಿಕೊಂಡ್ರಾ ಸಿದ್ದರಾಮಯ್ಯ.

ಆಂಧ್ರ, ತಮಿಳುನಾಡು ಹಾಗೂ ಕೇರಳ ಮಾದರಿಯಲ್ಲಿ ಕರ್ನಾಟಕದಲ್ಲೂ ಏಕರೂಪ ಟಿಕೆಟ್ ದರ ನೀತಿ ಜಾರಿಗೆ ತರುವಲ್ಲಿ ಸರ್ಕಾರ ಯಶಸ್ವಿಯಾಗಿದೆ. ಮಲ್ಟಿಪ್ಲೆಕ್ಸ್ ಹಾಗೂ ಚಿತ್ರಮಂದಿರಗಳಲ್ಲಿ ಇನ್ಮೇಲೆ 200 ರೂಪಾಯಿ ಟೆಕೆಟ್ ದರ ಮೀರುವಂತಿಲ್ಲ. ಇದು ಇಂದಿನಿಂದಲೇ ಅಧಿಕೃತವಾಗಿ ಜಾರಿ ಆಗಲಿದ್ದು, ಗೃಹ ಇಲಾಖೆ ಮೂಲಕ ಕರ್ನಾಟಕ ಸರ್ಕಾರ ಅಧಿಸೂಚನೆ ಹೊರಡಿಸಿದೆ.

ಚಿತ್ರಪ್ರೇಮಿಗಳಿಗೆ ಗುಡ್‌ನ್ಯೂಸ್..ಫಿಲ್ಮ್ ಟಿಕೆಟ್ 200 ರೂ

ಆದ್ರೆ 200 ರೂಪಾಯಿ ಟಿಕೆಟ್‌ಗೆ ಕಟ್ಟಬೇಕಿದೆ ಎಕ್ಸ್ಟ್ರಾ ಟ್ಯಾಕ್ಸ್

ಚಿತ್ರಮಂದಿರಗಳಿಗೆ ಜನ ಬರ್ತಿಲ್ಲ. ಸಿನಿಮಾಗಳ ಬಾಕ್ಸ್ ಆಫೀಸ್ ಕಲೆಕ್ಷನ್ ಆಗ್ತಿಲ್ಲ. ನಿರ್ಮಾಪಕರಿಗೆ ಹಾಕಿರೋ ಬಂಡವಾಳ ಬರ್ತಿಲ್ಲ ಅನ್ನೋ ಆರೋಪಗಳಿಗೆಲ್ಲಾ ಶಾಶ್ವತ ಪರಿಹಾರ ದೊರಕಿದೆ. ಹೌದು.. ಆಂಧ್ರ, ತಮಿಳುನಾಡು, ಕೇರಳ ಮಾದರಿಯಲ್ಲಿ ಕರ್ನಾಟಕದಲ್ಲೂ ಏಕರೂಪ ಟಿಕೆಟ್ ದರ ನೀತಿ ಜಾರಿ ಆಗಿದೆ. ಇನ್ಮೇಲೆ ಮಲ್ಟಿಪ್ಲೆಕ್ಸ್‌‌ಗಳು ಸೇರಿದಂತೆ ಚಿತ್ರಮಂದಿರಗಳಲ್ಲಿ 200 ರೂಪಾಯಿ ಟಿಕೆಟ್ ದರ ಮೀರುವಂತಿಲ್ಲ. ಆದ್ರೆ ಅಲ್ಲೊಂದು ಕಂಡಿಷನ್ ಅಪ್ಲೈ ಆಗಲಿದೆ.

ಈ 200 ರೂಪಾಯಿ ಟಿಕೆಟ್ ಪ್ರೈಸ್ ಗೋಲ್ಡ್ ಕ್ಲಾಸ್ ಅಥ್ವಾ ರೆಕ್‌‌ಲೈನರ್‌‌ ಸೀಟ್‌ಗಳಿಗೆ ಅನ್ವಯ ಆಗಲ್ಲ. ಅಷ್ಟೇ ಅಲ್ಲ, 200 ರೂಪಾಯಿ ಟಿಕೆಟ್ ದರ ಟ್ಯಾಕ್ಸ್ ಹೊರತು ಪಡಿಸಿ ಅನ್ನೋದು ಶಾಕಿಂಗ್ ನ್ಯೂಸ್. 200 ರೂಪಾಯಿ ಜೊತೆ ಟ್ಯಾಕ್ಸ್ ಕೂಡ ಕಟ್ಟಬೇಕಾಗುತ್ತೆ. ಅಲ್ಲಿಗೆ 18 ಪರ್ಸೆಂಟ್ ಟ್ಯಾಕ್ಸ್ ಅಂದ್ರೆ 200ರೂಗೆ ಹೆಚ್ಚುವರಿ 36 ರೂಪಾಯಿ ನೀಡಿ ಟಿಕೆಟ್ ಖರೀದಿಸಬೇಕಾಗುತ್ತೆ. ಇದು ನಮ್ಮ ಕನ್ನಡ ಚಿತ್ರಗಳ ಜೊತೆಗೆ ಎಲ್ಲಾ ಪರಭಾಷಾ ಸಿನಿಮಾಗಳಿಗೂ ಅನ್ವಯ ಆಗಲಿದೆ ಅನ್ನೋದು ಖುಷಿಯ ವಿಚಾರ.

ಗೃಹ ಇಲಾಖೆಯಿಂದ ಅಧಿಕೃತ ಆದೇಶ.. ಗೆಜೆಟ್ ಒಂದೇ ಬಾಕಿ

ಬಜೆಟ್‌‌ನಲ್ಲಿ ಸಿಎಂ ಮಾತು.. ನುಡಿದಂತೆ ನಡೆದ ಸಿದ್ದರಾಮಯ್ಯ

ಸ್ಟೇಟ್ ಬಜೆಟ್‌‌ನಲ್ಲಿ ಸಿಎಂ ಸಿದ್ದರಾಮಯ್ಯನವರು ಏಕರೂಪ ಟಿಕೆಟ್ ದರ ನೀತಿಯನ್ನ ನೆರೆ ರಾಜ್ಯಗಳಂತೆ ಇಲ್ಲಿಯೂ ಜಾರಿಗೊಳಿಸಲಾಗುವುದು ಎಂದು ಘೋಷಿಸಿದ್ದರು. ನುಡಿದಂತೆ ನಡೆದ ಸಿಎಂ ಸಿದ್ದರಾಮಯ್ಯ, ಕ್ಯಾಬಿನೆಟ್‌‌‌ನಲ್ಲಿ ಒಮ್ಮತದ ನಿರ್ಧಾರದೊಂದಿಗೆ ಜುಲೈ 15ರಂದು ಸರ್ಕಾರ ರಾಜ್ಯ ಪತ್ರದಲ್ಲಿ ಪ್ರಕಟಿಸಿತ್ತು. ಅಲ್ಲದೆ, ಏನಾದ್ರೂ ಆಕ್ಷೇಪಣೆಗಳು ಇದ್ದಲ್ಲಿ ಸಲ್ಲಿಸಬಹುದು ಎಂದು ಚಿತ್ರರಂಗಕ್ಕೆ ಗಡುವು ನೀಡಿತ್ತು ಸರ್ಕಾರ. ಅದಕ್ಕೆ ಒಂದಷ್ಟು ಬದಲಾವಣೆಗಳನ್ನ ಸೂಚಿಸಿರೋ ನಿರ್ಮಾಪಕ, ವಿತರಕರು, 200 ರೂಪಾಯಿ ಪ್ಲಸ್ ಟ್ಯಾಕ್ಸ್‌ ಮಾಡುವಂತೆ ಗ್ರೀನ್ ಸಿಗ್ನಲ್ ನೀಡಿತ್ತು. ಅದರಂತೆ ಈಗ ಸರ್ಕಾರ ಅಧಿಸೂಚನೆ ಹೊರಡಿಸಿದೆ.

ಸಿಎಂ ಮುಖ್ಯ ಕಾರ್ಯದರ್ಶಿ ಸಹಿ ಹಾಕಿ, ಇದನ್ನು ರಾಜ್ಯಪಾಲರ ಅನುಮೋದನೆಗೆ ಕಳುಹಿಸಲಾಗುತ್ತದೆ. ಅಲ್ಲಿ ರಾಜ್ಯಪಾಲರ ಒಪ್ಪಿಗೆ ಮೇರೆಗೆ ರಾಜ್ಯಪತ್ರ ಹೊರಡಿಸಲಾಗುತ್ತೆ. ಅಲ್ಲಿಗೆ ಇದು ಅಧಿಕೃತ ಆಗಲಿದೆ. ಬಹುಶಃ ಇಂದು ಅಥವಾ ನಾಳೆಯಲ್ಲಿ ಗೆಜೆಟ್‌ಗೆ ಬೀಳಲಿದ್ದು, ಮುಂದಿನ ಸೋಮವಾರದಿಂದ ಈ ಏಕರೂಪ ಟಿಕೆಟ್ ದರ ನೀತಿ ಜಾರಿ ಆಗೋದ್ರಲ್ಲಿ ಯಾವುದೇ ಡೌಟ್ ಇಲ್ಲ.

ಇದರಿಂದ ಲಂಗು ಲಗಾಮು ಇಲ್ಲದೆ ಟಿಕೆಟ್ ದರ ನಿಗದಿ ಮಾಡ್ತಿದ್ದ ಪಿವಿಆರ್, ಐನಾಕ್ಸ್ ಅಂತಹ ಮುಂಬೈ ಬೇಸ್ಡ್ ಮಲ್ಟಿಪ್ಲೆಕ್ಸ್‌‌‌ಗಳ ಮೇಲೆ ಹಿಡಿತ ಸಾಧಿಸಿದಂತಾಗಲಿದೆ. ಅದರಲ್ಲೂ ಇದು ಕನ್ನಡ ಸಿನಿಮಾಗಳ ಮೇಲೆ ಹೆಚ್ಚು ಪ್ರಭಾವ ಬೀರಲ್ಲ. ಬದಲಿಗೆ ಪರಭಾಷಾ ಸೂಪರ್ ಸ್ಟಾರ್‌‌ಗಳ ಸಿನಿಮಾಗಳ ಬಾಕ್ಸ್ ಆಫೀಸ್ ಕಲೆಕ್ಷನ್‌ಗೆ ನೇರವಾಗಿ ಹೊಡೆತ ಕೊಡಲಿದೆ.

ಕರ್ನಾಟಕದಲ್ಲಿ ಹಗಲು ದರೋಡೆ ಮಾಡ್ತಿತ್ತು PVR, INOX

ಇನ್ಮೇಲೆ ಮನಸೋ ಇಚ್ಚೆ ಫಿಲ್ಮ್ ಟಿಕೆಟ್ ದರ ಇಡುವಂತಿಲ್ಲ

ಆಂಧ್ರ, ಕೇರಳ ಹಾಗೂ ತಮಿಳುನಾಡಿನಲ್ಲಿ ಕುಟುಂಬ ಸಮೇತ ಥಿಯೇಟರ್‌ಗಳಿಗೆ ಹೋಗಿ ಸಿನಿಮಾಗಳನ್ನ ನೋಡ್ತಾರೆ. ವಾರವಿಡೀ ಕೆಲಸ ಕಾರ್ಯಗಳನ್ನ ಮಾಡುವ ಜನ, ವಾರಾಂತ್ಯದಲ್ಲಿ ಮನರಂಜನೆಗಾಗಿ ಥಿಯೇಟರ್‌ಗೆ ಹೋಗ್ತಾರೆ. ಅಲ್ಲಿ ಟಿಕೆಟ್ ದರ ಕಮ್ಮಿ ಇರೋದ್ರಿಂದ ಎಲ್ಲರೂ ಒಟ್ಟಿಗೆ ಚಿತ್ರಗಳನ್ನು ವೀಕ್ಷಿಸ್ತಾರೆ. ಆದ್ರೆ ನಮ್ಮ ಕರ್ನಾಟಕದಲ್ಲಿ ಪರಭಾಷಾ ಸ್ಟಾರ್‌ಗಳ ಚಿತ್ರಗಳು ಬಂದ್ರೆ ಸಾಲು ಒಂದ್ಕಡೆ ಡಿಸ್ಟ್ರಿಬ್ಯೂಟರ್‌ಗಳು, ಮತ್ತೊಂದ್ಕಡೆ ಮಲ್ಟಿಪ್ಲೆಕ್ಸ್‌‌ಗಳು.. ಹೇಳೋರಿಲ್ಲ ಕೇಳೋರಿಲ್ಲ. ಇಷ್ಟ ಬಂದಷ್ಟು ಟಿಕೆಟ್ ದರ ಫಿಕ್ಸ್ ಮಾಡ್ತಿದ್ರು. ಆದ್ರೀಗ ಅದಕ್ಕೆಲ್ಲಾ ಬ್ರೇಕ್ ಬೀಳಲಿದೆ.

 

ಯಾವ್ಯಾವ ರಾಜ್ಯದಲ್ಲಿ ಎಷ್ಟಿದೆ ಟಿಕೆಟ್ ದರ..?

ರಾಜ್ಯ  ಟಿಕೆಟ್ ದರ
ಆಂಧ್ರ 195 ರೂಪಾಯಿ
ತಮಿಳುನಾಡು 196 ರೂಪಾಯಿ
ಕೇರಳ 190 ರೂಪಾಯಿ
ತೆಲಂಗಾಣ 190 ರೂಪಾಯಿ
ಕರ್ನಾಟಕ 236 ರೂಪಾಯಿ

 

ಅಂದಹಾಗೆ ಬಾಲಿವುಡ್ ಸೇರಿದಂತೆ ಸೌತ್ ಸಿನಿದುನಿಯಾದ ನೆರೆ ಚಿತ್ರರಂಗಗಳಿಗೆ ಬಿಗ್ ಮಾರ್ಕೆಟ್ ಅಂದ್ರೆ ಅದು ನಮ್ಮ ಕರ್ನಾಟಕ. ಕಾರಣ ಇಲ್ಲಿ ಏಕರೂಪ ಟಿಕೆಟ್ ದರ ನೀತಿ ಇಲ್ಲದಿರೋದು. ಈಗ 200 ರೂಪಾಯಿಗೆ ಟಿಕೆಟ್ ಸೀಮಿತಗೊಳಿಸಿರೋದ್ರಿಂದ ಇದು ಮುಂಬರುವ ಪರಭಾಷಾ ಬಿಗ್ ಸ್ಟಾರ್ಸ್‌ ಬಿಗ್ ಮೂವೀಸ್ ಮೇಲೆ ನೇರವಾಗಿ ಪರಿಣಾಮ ಬೀಳಲಿದೆ. ಇದರಿಂದಾಗಿ ಅವರುಗಳಿಂದ ಕನ್ನಡ ಚಿತ್ರರಂಗದ ಮೇಲೆ ಆಗ್ತಿದ್ದ ನೇರ ಪರಿಣಾಮಗಳು ತಪ್ಪಲಿವೆ.

ಒಟ್ಟಾರೆ ಈ ಎಲ್ಲಾ ಬೆಳವಣಿಗೆಗಳು ಚಿತ್ರ ಪ್ರೇಮಿಗಳಿಗೆ ಖುಷಿ ತಂದಿದೆ. ಪರಭಾಷಿಗರಿಗೆ, ಒಂದಷ್ಟು ಡಿಸ್ಟ್ರಿಬ್ಯೂಟರ್‌ಗಳಿಗೆ ಇದು ತಲೆ ನೋವಾಗಿ ಪರಿಣಮಿಸಿದ್ರೂ, ಚಿತ್ರಗಳನ್ನ ನೋಡುಗರ ಸಂಖ್ಯೆ ಇದ್ರಿಂದ ಗಣನೀಯವಾಗಿ ಹೆಚ್ಚಳ ಆಗಲಿದೆ. ಹಾಗಾಗಿ, ಏಕರೂಪ ಟಿಕೆಟ್ ದರ ನೀತಿಯನ್ನ ಜಾರಿಗೊಳಿಸಿದ ಸಿಎಂ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಸರ್ಕಾರಕ್ಕೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

Exit mobile version