‘ಕರಿಕಾಡ’ 30 ಶೋ ಹೌಸ್‌‌ಫುಲ್..ಇದು ಹೊಸಬರ ಗಮ್ಮತ್ತು

ಕೇರಳ, ತಮಿಳುನಾಡಲ್ಲಿ ಭರ್ಜರಿ ರೆಸ್ಪಾನ್ಸ್.. ನಟರಾಜ್ ಗತ್ತು..!

Untitled design 2026 02 10T144351.722

ಸಿನಿಮಾಗೆ ಸಿದ್ಧ ಸೂತ್ರಗಳು ಎಂದೂ ವರ್ಕ್ ಆಗಲ್ಲ. ಈ ಸ್ಪರ್ಧಾತ್ಮಕ ಯುಗದಲ್ಲಿ ವರ್ಕೌಟ್ ಮಾಡೋಕೆ ಅಂತ ಎಷ್ಟೇ ಟೆಕ್ನಿಕ್ಸ್ ಬಳಸಿದ್ರೂ ಪ್ರಯೋಜನ ಇಲ್ಲ. ಕಂಟೆಂಟ್ ಒಂದೇ ಕಿಂಗ್. ಸದ್ಯ ಹೊಸಬರಾದ್ರೂ ಸಹ ಕಥೆ, ಪಾತ್ರಗಳು, ನಟನೆ, ಮೇಕಿಂಗ್‌ನಿಂದ ಸೌತ್ ದುನಿಯಾದಲ್ಲಿ ಹುಬ್ಬೇರಿಸ್ತಿದೆ ಕರಿಕಾಡ. ಕನ್ನಡದ ಜೊತೆ ಎಲ್ಲೆಲ್ಲಾ ಸೌಂಡ್ ಮಾಡ್ತಿದೆ ಅಂತೀರಾ..? ಇಲ್ಲಿದೆ ಫುಲ್‌ ಡಿಟೈಲ್ಸ್‌…

ಔಟ್ ಆಫ್ ದಿ ಬಾಕ್ಸ್ ಸಿನಿಮಾಗಳು ಪ್ರೇಕ್ಷಕರಿಗೆ ಕೊಂಚ ಜಾಸ್ತಿನೇ ರುಚಿಸುತ್ತವೆ. ಅದ್ರಲ್ಲೂ ಮಲೆನಾಡಿನ ಬ್ಯಾಕ್‌ಡ್ರಾಪ್‌‌ನಲ್ಲಿ ತಯಾರಾಗಿರೋ ಕರಿಕಾಡ ಹಂದಿ ಬೇಟೆ, ಫ್ರೆಂಡ್ಶಿಪ್, ನವಿರಾದ ಪ್ರೇಮಕಥೆ, ಬಾಂಬ್‌ಗಳ ಅಬ್ಬರದಿಂದ ವಿಭಿನ್ನವಾಗಿ ಕಾಣ್ತಿದೆ. ಚೊಚ್ಚಲ ಚಿತ್ರದಲ್ಲೇ ನಟ ಕಾಟ ನಟರಾಜ್ ಹಾಗೂ ನಿರೀಕ್ಷಾ ಶೆಟ್ಟಿ ನೋಡುಗರಿಗೆ ವ್ಹಾವ್ ಫೀಲ್ ತರಿಸಿದ್ದಾರೆ. ಫೆಬ್ರವರಿ 6ರಂದು ತೆರೆಕಂಡ ಈ ಸಿನಿಮಾ ಯಶಸ್ವಿ ಎರಡನೇ ವಾರಕ್ಕೆ ಕಾಲಿಟ್ಟಿದ್ದು, ಕರ್ನಾಟಕ ಒಂದರಲ್ಲೆ 30ಕ್ಕೂ ಅಧಿಕ ಶೋಗಳು ಹೌಸ್‌‌ಫುಲ್ ಆಗ್ತಿರೋದು ವಿಶೇಷ.

ವೆಂಕಟೇಶ್ ನಿರ್ದೇಶನದ ಈ ಸಿನಿಮಾ, ಕನ್ನಡದ ಜೊತೆ ತಮಿಳು ಹಾಗೂ ಮಲಯಾಳಂನಲ್ಲೂ ತೆರೆಗಪ್ಪಳಿಸಿತ್ತು. ಕರ್ನಾಟಕದಲ್ಲಿ ಸುಮಾರು 115 ಥಿಯೇಟರ್‌‌ಗಳಲ್ಲಿ ಸಿನಿಮಾ ಪ್ರದರ್ಶನ ಕಾಣ್ತಿದ್ರೆ, ಕೇರಳದಲ್ಲಿ 60, ತಮಿಳುನಾಡಿನಲ್ಲಿ 78 ಥಿಯೇಟರ್‌‌ಗಳಲ್ಲಿ ಭರ್ಜರಿ ಪ್ರದರ್ಶನ ಕಾಣ್ತಿದೆ. ಬುಕ್ ಮೈ ಶೋನಲ್ಲಿ ಕೂಡ ಟಿಕೆಟ್ಸ್ ಫಾಸ್ಟ್ ಫಿಲ್ಲಿಂಗ್ ಆಗ್ತಿದ್ದು, ಚಿತ್ರ ವೀಕ್ಷಿಸಿದ ಪರಭಾಷಿಗರು ಹೊಸಬರ ಈ ವಿನೂತನ ಪ್ರಯೋಗವನ್ನ ಮೆಚ್ಚಿ, ಭೇಷ್ ಅಂತಿದ್ದಾರೆ.

ಸದ್ಯ ಎಲ್ಲೆಡೆ ಬೊಂಬಾಟ್ ಪ್ರಶಂಸೆ ಹಾಗೂ ಪ್ರತಿಕ್ರಿಯೆಗಳು ಬರ್ತಿರೋ ಹಿನ್ನೆಲೆ ನಟ ಕಮ್ ನಿರ್ಮಾಪಕ ಕಾಡ ನಟರಾಜ್, ತಮ್ಮ ಕರಿಕಾಡ ಸಿನಿಮಾನ ತೆಲುಗು ಹಾಗೂ ಹಿಂದಿಯಲ್ಲೂ ರಿಲೀಸ್ ಮಾಡೋಕೆ ಮುಂದಾಗ್ತಿದ್ದಾರೆ. ಸದ್ಯದಲ್ಲೇ ಆಂಧ್ರ ಹಾಗೂ ಮುಂಬೈನಲ್ಲೂ ಮಾರ್ದನಿಸಲಿದೆ ಕರಿಕಾಡ ಮೂವಿ. ಕಾಂತಾರ ಹಾಗೂ ಗಾಳಿಪಟ ಫ್ಲೇವರ್ ಸಿನಿಮಾಗಳು ಇವಾಗಿದ್ದು, ಇಲ್ಲಿ ಪ್ರಕೃತಿಯ ಜೊತೆ ನೈಜತೆ ಮನೆ ಮಾಡಿದೆ. ಹಾಗಾಗಿಯೇ ಚಿತ್ರಕ್ಕೆ ನಿರೀಕ್ಷೆಗೂ ಮೀರಿದ ಸಕ್ಸಸ್ ಸಿಕ್ಕಿದೆ. ಇದು ಹೊಸಬರ ಸಿನಿಮೋತ್ಸಾಹದ ಗತ್ತು, ಗೈರತ್ತಿನ ದರ್ಶನವೂ ಹೌದು.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್

Exit mobile version