ಶಿವಮೊಗ್ಗ, ದಾವಣಗೆರೆಯಲ್ಲೂ ಕರಾವಳಿಗೆ ಭರ್ಜರಿ ರೆಸ್ಪಾನ್ಸ್..!

ಪ್ರಜ್ವಲ್ ದೇವರಾಜ್- ರಾಜ್ ಶೆಟ್ರ ಅಭಿನಯಕ್ಕೆ ಕ್ಲೀನ್ ಬೋಲ್ಡ್

ಸ್ವ (62)

ಈ ವಾರ ತೆರೆಗಪ್ಪಳಿಸುತ್ತಿರೋ ಕರಾವಳಿ ಚಿತ್ರಕ್ಕೆ ಮಂಗಳೂರಿನಲ್ಲಷ್ಟೇ ಅಲ್ಲ ಶಿವಮೊಗ್ಗ ಹಾಗೂ ಬೆಣ್ಣೆ ನಗರಿ ದಾವಣಗೆರೆಯಲ್ಲಿ ಕೂಡ ಅಭೂತಪೂರ್ವ ಪ್ರಶಂಸೆ ಹಾಗೂ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಪ್ರಜ್ವಲ್ ದೇವರಾಜ್-ರಾಜ್ ಬಿ ಶೆಟ್ಟಿ ಜೋಡಿ ಸಿಕ್ಕಾಪಟ್ಟೆ ಮೋಡಿ ಮಾಡ್ತಿದೆ.

ಶಿವಮೊಗ್ಗ, ದಾವಣಗೆರೆಯಲ್ಲೂ ಕರಾವಳಿಗೆ ಭರ್ಜರಿ ರೆಸ್ಪಾನ್ಸ್..!

ಕರಾವಳಿ ಬರೀ ಚಿತ್ರವಲ್ಲ.. ಮಂಗಳೂರು, ಉಡುಪಿ ಎಮೋಷನ್

ಪ್ರಜ್ವಲ್ ದೇವರಾಜ್- ರಾಜ್ ಶೆಟ್ರ ಅಭಿನಯಕ್ಕೆ ಕ್ಲೀನ್ ಬೋಲ್ಡ್

ಮತ್ತೆ ಗೆದ್ದ ಗುರುದತ್ ಗಾಣಿಗ.. ಅಸಲಿ ಆಟ ಜು-24ರಿಂದ ಶುರು

ಸಿನಿಮಾ ಅನ್ನೋದು ಬರೀ ಮನರಂಜನೆಯಷ್ಟೇ ಅಲ್ಲ. ಅದು ಸಮಾಜದ ಕೈಗನ್ನಡಿಯೂ ಹೌದು. ಒಂದು ಭೌಗೋಳಿಕ ಪ್ರದೇಶದ ಜನರ ಎಮೋಷನ್ ಕೂಡ ಹೌದು. ಸದ್ಯ ಇದೇ ವಾರ ತೆರೆಗೆ ಬರ್ತಿರೋ ಕರಾವಳಿ ಸಿನಿಮಾ ಮಂಗಳೂರು, ಉಡುಪಿ ಮಂದಿಗೆ ಭಾವನಾತ್ಮಕವಾಗಿ ಜಾಸ್ತಿ ಕನೆಕ್ಟ್ ಆಗ್ತಿದೆ. ಕಾರಣ ಕಂಬಳ ಹಾಗೂ ಅದ್ರ ಸುತ್ತಲು ಸುತ್ತುವ ಕಥಾನಕ ಇದಾಗಿದೆ.

ನಾವೆಲ್ಲಾ ನೋಡಿ ಶಿಳ್ಳೆ, ಚಪ್ಪಾಳೆ ತಟ್ಟುವಂತಹ ಕಂಬಳ, ಕೆಸರುಗದ್ದೆ ಓಟ ನೋಡೋಕೆ ಚೆಂದ. ಆದ್ರೆ ಅದ್ರ ಹಿಂದೆ ಸಾಕಷ್ಟು ವಿಷಯಗಳು ಅಡಗಿರುತ್ತೆ ಅನ್ನೋದು ಸಿನಿಮಾ ನೋಡಿದ್ರೆ ಅರಿವಾಗುತ್ತೆ. ಅದ್ರಲ್ಲೂ ಅಂಬರೀಶ್-ಸುದೀಪ್ ಅಂತಹ ಅದ್ಭುತ ಕಲಾವಿದರಿಗೆ ಚೊಚ್ಚಲ ಚಿತ್ರದಲ್ಲೇ ಆ್ಯಕ್ಷನ್ ಕಟ್ ಹೇಳಿದ್ದ ಗುರುದತ್ ಗಾಣಿಗ, ಇದೀಗ ಕರಾವಳಿ ಚಿತ್ರದಿಂದ ಒನ್ಸ್ ಅಗೈನ್ ಗೆದ್ದಿದ್ದಾರೆ. ಭೇಷ್ ಅನ್ನುವಂತಹ ಕಂಟೆಂಟ್ ಬೇಸ್ಡ್ ಸಿನಿಮಾದಿಂದ ಪ್ರೇಕ್ಷಕರ ಹೃದಯ ಗೆಲ್ಲುತ್ತಿದ್ದಾರೆ. ಈ ಬಾರಿ ಕೂಡ ಪ್ರಜ್ವಲ್ ದೇವರಾಜ್ ಹಾಗೂ ರಾಜ್ ಬಿ ಶೆಟ್ಟಿ ಅಂತಹ ಅದ್ಭುತ ಕಲಾವಿದರೊಂದಿಗೆ ಸಿನಿಮಾ ಕಟ್ಟಿರೋದು ವಿಶೇಷ.

ಜುಲೈ 24ರಂದು.. ಅಂದ್ರೆ ಇದೇ ಶುಕ್ರವಾರ ಸಿನಿಮಾ ತೆರೆಗಪ್ಪಳಿಸುತ್ತಿದ್ದು, ಅದಕ್ಕೂ ಮುನ್ನ ನಡೆದ ಪ್ರೀಮಿಯರ್ ಶೋಗಳಲ್ಲಿ ಅಭೂತಪೂರ್ವ ಪ್ರಶಂಸೆ, ಪ್ರತಿಕ್ರಿಯೆಗಳು ವ್ಯಕ್ತವಾಗ್ತಿವೆ. ಮೊದಲಿಗೆ ಮಂಗಳೂರಲ್ಲಿ ಪ್ರೀಮಿಯರ್ ನಡೆಸಿದ ಚಿತ್ರತಂಡ, ಅಲ್ಲಿನ ಜನರ ಆರ್ಗ್ಯಾನಿಕ್ ರೆಸ್ಪಾನ್ಸ್ ಕಂಡು ಧನ್ಯತಾ ಭಾವದಿಂದ ಹಿರಬಂದಿತ್ತು. ಕರಾವಳಿ ಚಿತ್ರದ ಕಂಟೆಂಟ್ ಮಂಗಳೂರು, ಉಡುಪಿ ಜನಕ್ಕೆ ಹತ್ತಿರವಾದ ಅಂಶಗಳಿಂದ ಕೂಡಿತ್ತು. ಹಾಗಾಗಿ ಅವ್ರಿಗೆ ಇಷ್ಟ ಆಗೋದ್ರಲ್ಲಿ ಯಾವುದೇ ಡೌಟ್ ಇಲ್ಲ. ವಿಶೇಷ ಅಂದ್ರೆ ಶಿವಮೊಗ್ಗ, ದಾವಣಗೆರೆಯಲ್ಲಿ ಕೂಡ ಪ್ರೇಕ್ಷಕರು ವ್ಹಾವ್.. ವಾಟ್ ಎ ಮೂವಿ ಅಂತ ಹೊಗಳುತ್ತಿರೋದು ಇಂಟರೆಸ್ಟಿಂಗ್.

ಈ ತರಹದ ಕಥೆಗಳು ಹೇಗೆ ನಿಮ್ಮ ಮೈಂಡ್‌ಗೆ ಬರೋಕೆ ಸಾಧ್ಯ ಅಂತೆಲ್ಲಾ ಚಿತ್ರಪ್ರೇಮಿಗಳು ಪ್ರಶ್ನಿಸುತ್ತಿದ್ದಾರೆ. ಜನ ಕೇಳಿದ್ದು ಕೂಡ ಅದೇನೇ. ನಮಗೆ ಭಿನ್ನ ಅಲೆಯ ಸಿನಿಮಾ ಕೊಡಿ ಅಂತಿದ್ರು. ಚಿತ್ರತಂಡ ಕೊಟ್ಟಿದೆ. ಸೋ.. ಅದನ್ನ ಕಣ್ತುಂಬಿಕೊಂಡು ಗೆಲ್ಲಿಸೋ ಜವಾಬ್ದಾರಿ ಕೂಡ ಚಿತ್ರಪ್ರೇಮಿಗಳ ಮೇಲೆಯೇ ಇದೆ. ಇಂದು ಮೈಸೂರು, ನಾಳೆ ಬೆಂಗಳೂರಲ್ಲಿ ಚಿತ್ರದ ಪ್ರೀಮಿಯರ್ ನಡೆಯುತ್ತಿದೆ. ಶುಕ್ರವಾರದಿಂದ ರಾಜ್ಯಾದ್ಯಂತ ಕರಾವಳಿಯ ಅಸಲಿ ಆಟ ಶುರುವಾಗಲಿದೆ. ಪ್ರಜ್ವಲ್, ರಾಜ್ ಶೆಟ್ರ ನಟನೆ ಜೊತೆ ನಟಿ ಸಂಪದ, ನಟ ಮಿತ್ರ, ರಮೇಶ್ ಇಂದಿರಾ ಪಾತ್ರಗಳನ್ನೂ ಸಹ ಜನ ನೆಚ್ಚಿಕೊಂಡು ಭೇಷ್ ಅಂತಿದ್ದಾರೆ.

ಒಟ್ಟಾರೆ ಈ ವರ್ಷ ಸ್ಯಾಂಡಲ್‌ವುಡ್‌ಗೆ ನಿರೀಕ್ಷಿತ ಮಟ್ಟದ ಗೆಲುವು ಯಾವ ಸಿನಿಮಾನೂ ತಂದುಕೊಟ್ಟಿಲ್ಲ. ಆ ಕೊರತೆಯನ್ನ ಕರಾವಳಿ ನೀಗಿಸುತ್ತಾ ಅನ್ನೋದನ್ನ ಕಾದು ನೋಡಬೇಕಿದೆ. ವಿಭಿನ್ನ ಸಿನಿಮಾಗಳ ಸಾಲಿನಲ್ಲಿ ಗುರ್ತಿಸಿಕೊಳ್ತಿರೋ ಕರಾವಳಿ, ಬಾಕ್ಸ್ ಆಫೀಸ್‌‌ನಲ್ಲಿ ದೊಡ್ಡ ಮಟ್ಟದಲ್ಲೇ ಕಮಾಯಿ ಮಾಡುವ ಮುನ್ಸೂಚನೆ ನೀಡಿದೆ.

 

 

Exit mobile version