ಕರಾವಳಿ ಕಾಂತಾರ ಚಿತ್ರಗಳಂತೆ ತುಳುನಾಡಿನ ಆಚಾರ, ವಿಚಾರಗಳನ್ನು ಹೊತ್ತು ಬರ್ತಿರೋ ಕನ್ನಡದ ಮತ್ತೊಂದು ಬಹು ನಿರೀಕ್ಷಿತ ಕಂಟೆಂಟ್ ಬೇಸ್ಡ್ ಮೂವಿ. ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್-ರಾಜ್ ಬಿ ಶೆಟ್ಟಿ ಕಾಂಬೋನ ಈ ಚಿತ್ರ ಶೂಟಿಂಗ್ ಮುಗಿಸಿದ್ದು, ಪ್ರಜ್ಜು ನಮ್ಮ ಗ್ಯಾರಂಟಿ ಪಿಚ್ಚರ್ ಟೀಂ ಜೊತೆ ಎಕ್ಸ್‌ಕ್ಲೂಸಿವ್ ಆಗಿ ಮಾತನಾಡಿದ್ದಾರೆ. ಒಂದಷ್ಟು ಸಿಹಿ ವಿಚಾರಗಳ ಜೊತೆ ಕಹಿ ಅನುಭವಗಳನ್ನ ಕೂಡ ಮುಕ್ತವಾಗಿ ಹಂಚಿಕೊಂಡಿದ್ದಾರೆ.
ಭಾರೀ ನಿರೀಕ್ಷೆ ಮೂಡಿಸಿರೋ ಕರಾವಳಿ ಅನ್ನೋ ಕನ್ನಡದ ಮತ್ತೊಂದು ಸಿನಿಮಾ ರಿಲೀಸ್‌ಗೆ ರೆಡಿಯಾಗಿದೆ. ಸದ್ಯ ಶೂಟಿಂಗ್ ಕಂಪ್ಲೀಟ್ ಮಾಡುವ ಮೂಲಕ ಥಿಯೇಟರ್ ಅಂಗಳಕ್ಕೆ ಲಗ್ಗೆ ಇಡಲು ಸಜ್ಜಾಗಿದೆ. ಗುರುದತ್ ಗಾಣಿಗ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಕರಾವಳಿ ಸಿನಿಮಾದ ಚಿತ್ರೀಕರಣ ಸಂಪೂರ್ಣವಾಗಿ ಮುಗಿದಿದೆ. ಇತ್ತೀಚೆಗಷ್ಟೇ ಮಾಧ್ಯಮದ ಮುಂದೆ ಹಾಜರಾಗಿದ್ದ ಸಿನಿಮಾತಂಡ ಚಿತ್ರೀಕರಣ ಮುಗಿದ ಖುಷಿಯನ್ನು ಹಂಚಿಕೊಡಿದೆ.
ಕಾಂತಾರ ಶೈಲಿಯ ಕರಾವಳಿ.. ಪ್ರಿನ್ಸ್ ಸಿಹಿ-ಕಹಿ ಖಾಸ್‌ಬಾತ್
ಡೈನಾಮಿಕ್ ಪ್ರಿನ್ಸ್ ಜೊತೆ ಮಾವೀರ ರಾಜ್ ಬಿ ಶೆಟ್ಟಿ ರಾಕ್ಸ್..!!
ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಪ್ರಮುಖ ಪಾತ್ರದಲ್ಲಿ ನಟಿಸಿರೋ ಕರಾವಳಿ, ಈಗಾಗಲೇ ಪೋಸ್ಟರ್ ಮತ್ತು ಟೀಸರ್‌ಗಳ ನೋಡುಗರ ನಾಡಿಮಿಡಿತ ಹೆಚ್ಚಿಸಿದೆ. ಸಿನಿಮಾ ಯಾವಾಗ ಎಂದು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದರು. ಕೊನೆಗೂ ಚಿತ್ರಮಂದಿರಕ್ಕೆ ಎಂಟ್ರಿ ಕೊಡುವ ಸಮಯ ಹತ್ತಿರ ಬಂದಿದೆ. ಸಿನಿಮಾದ ಬಹುತೇಕ ಕೆಲಸಗಳು ಮುಗಿದಿದ್ದು, ಚಿತ್ರ ಪ್ರೇಮಿಗಳ ಮುಂದೆ ಬರುವುದೊಂದೇ ಬಾಕಿ ಉಳಿದಿದೆ.
ಶೂಟಿಂಗ್ ಕಂಪ್ಲೀಟ್.. ಥಿಯೇಟರ್‌ಗೆ ಬರೋಕೆ ತಯಾರು
ಪ್ರಜ್ವಲ್ ಕರಿಯರ್‌ನ ಬಿಗ್ಗೆಸ್ಟ್ ಪ್ಯಾನ್ ಮೂವಿ ಈ ಕರಾವಳಿ
ಕರಾವಳಿ ಹೆಸರೇ ಹೇಳುವಂತೆ ತುಳುನಾಡಿನ ಸಂಸ್ಕೃತಿ, ಸೊಗಡು, ಸೊಬಗು ಇರೋ ಸಿನಿಮಾ. ಬೆಂಗಳೂರಿನ ದೊಡ್ಡ ಆಲದ ಮರದ ಬಳಿ ಸೆಟ್ ಹಾಕಿ, ಕೊನೆಯ ದಿನದ ಚಿತ್ರೀಕರಣ ಮಾಡಲಾಯಿತು. ಯಕ್ಷಗಾನ ರಂಗಸ್ಥಳ, ಕರಾವಳಿ ಶೈಲಿ ಊಟ ಕೊನೆಯ ದಿನದ ಶೂಟಿಂಗ್‌ನ ಹೈಲೆಟ್ ಆಗಿತ್ತು. ಚಿತ್ರದ ಫೈಟಿಂಗ್ ದೃಶ್ಯಗಳನ್ನು 2 ಬಾರಿ ರಾಷ್ಟ್ರ ಪ್ರಶಸ್ತಿ ಪಡೆದಿರೋ ವಿಕ್ರಮ್ ಮೋರ್ ಮಾಡುತ್ತಿದ್ದರು. ಪ್ರಜ್ವಲ್ ದೇವರಾಜ್ ಮಹಿಷಾಸುರನ ಅವತಾರವೆತ್ತಿದ್ದರು.
ಚಿತ್ರದ ಪ್ರಮುಖ ಪಾತ್ರದಲ್ಲಿ ಸು ಫ್ರಮ್ ಸೋ ಸ್ಟಾರ್ ರಾಜ್ ಬಿ ಶೆಟ್ಟಿ ಕಾಣಿಸಿಕೊಂಡಿರೋದು ಇಂಟರೆಸ್ಟಿಂಗ್. ಮಾವೀರ ಎನ್ನುವ ಪ್ರಮುಖ ಪಾತ್ರದಲ್ಲಿ ನಟಿಸಿದ್ದು, ಫಸ್ಟ್ ಲುಕ್ ಕೂಡ ಇಂಟ್ರೆಸ್ಟಿಂಗ್ ಆಗಿದೆ. ರಾಜ್ ಬಿ ಎಂಟ್ರಿ ಚಿತ್ರದ ಮೇಲಿನ ನಿರೀಕ್ಷೆಯನ್ನು ದುಪ್ಪಟ್ಟು ಮಾಡಿದೆ. ಇನ್ನೂ ಉಳಿದಂತೆ ಸಿನಿಮಾದ ಪವರ್‌ಫುಲ್ ಪಾತ್ರದಲ್ಲಿ ನಟ ಮಿತ್ರ, ರಮೇಶ್ ಇಂದಿರ, ಶ್ರೀಧರ್ ಹಾಗೂ ನಾಯಕಿಯಾಗಿ ಸಂಪದಾ ಕಾಣಸಿಗಲಿದ್ದಾರೆ.
ಗುರುದತ್ ಗಾಣಿಗ ನಿರ್ದೇಶನದ ಜೊತೆಗೆ ವಿಕೆ ಫಿಲ್ಮ್ ಅಸೋಸಿಯೇಷನ್ ನಲ್ಲಿ ಗಾಣಿಗ ಫಿಲ್ಮ್ಸ್‌ನಲ್ಲಿ ನಿರ್ಮಾಣ ಕೂಡ ಮಾಡುತ್ತಿದ್ದಾರೆ. ಕರಾವಳಿ ಸಿನಿಮಾ ಮನುಷ್ಯ ಹಾಗೂ ಪ್ರಾಣಿ ಮಧ್ಯೆ ನಡೆಯುವ ಸಂಘರ್ಷದ ಕಥೆಯಾಗಿದ್ದು, ಪಕ್ಕಾ ಹಳ್ಳಿ ಬ್ಯಾಕ್ ಡ್ರಾಪ್ ನಲ್ಲಿ ಸಿನಿಮಾ ಮೂಡಿ ಬರಲಿದೆ. ಈ ಚಿತ್ರಕ್ಕೆ ಸಚಿನ್ ಬಸ್ರೂರು ಸಂಗೀತ ಸಂಯೋಜನೆ ಮಾಡ್ತಿದ್ದು, ಅಭಿಮನ್ಯು ಸದಾನಂದನ್ ಕ್ಯಾಮೆರಾ ಕೈಚಳಕವಿದೆ.
ಕಾಂತಾರ ರೀತಿ ಕರಾವಳಿ ಕೂಡ ಪ್ರೇಕ್ಷಕರಿಗೆ ರುಚಿಸುವ ಮುನ್ಸೂಚನೆ ಮೇಕಿಂಗ್ ಹಂತದಲ್ಲೇ ನೀಡ್ತಿರೋದು ಇಂಟರೆಸ್ಟಿಂಗ್.