ರಿಷಬ್ ಶೆಟ್ಟಿಗೆ ಅವತಾರ್ ಸೆಡ್ಡು..ರಿಯಾಲಿಟಿ v/s ಫ್ಯಾಂಟಸಿ

33 ತಿಂಗಳ ನಂತ್ರ 3Dನಲ್ಲಿ ಅವತಾರ್-ವೇ ಆಫ್ ವಾಟರ್..!

Web (79)

ಸ್ಯಾಂಡಲ್‌‌ವುಡ್‌‌ನ ಬಿಗ್ಗೆಸ್ಟ್ ಬ್ಲಾಕ್ ಬಸ್ಟರ್ ಹಿಟ್ ಕಾಂತಾರ ಚಿತ್ರದ ಪ್ರೀಕ್ವೆಲ್, ಕಾಂತಾರ ಚಾಪ್ಟರ್‌‌-1 ರಿಲೀಸ್‌ಗೆ ಕೌಂಟ್‌ಡೌನ್ ಶುರುವಾಗಿದೆ. ಆದ್ರೆ ಅದೇ ಡೇಟ್‌ಗೆ ಹಾಲಿವುಡ್ ಲೆಜೆಂಡ್ ಜೇಮ್ಸ್ ಕ್ಯಾಮೆರಾನ್‌ರ ಮಾಸ್ಟರ್‌ಪೀಸ್ ಕೂಡ ಬಿಡುಗಡೆ ಆಗ್ತಿದೆ. ರಿಯಲ್ ವರ್ಸಸ್ ಫ್ಯಾಂಟಸಿ ವರ್ಲ್ಡ್ ಕುರಿತ ಇಂಟರೆಸ್ಟಿಂಗ್ ಸ್ಟೋರಿ ನಿಮಗಾಗಿ ಕಾಯ್ತಿದೆ.

ಹೊಂಬಾಳೆ ಫಿಲಂಸ್ ನಿರ್ಮಾಣದ, ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸಿರೋ ಕಾಂತಾರ ಚಾಪ್ಟರ್-1 ಸಿನಿಮಾ ಇದೇ ಅಕ್ಟೋಬರ್ 2ಕ್ಕೆ ವರ್ಲ್ಡ್‌ವೈಡ್ ತೆರೆಗೆ ಬರಲಿದೆ. 2022ರ ಬ್ಲಾಕ್‌ಬಸ್ಟರ್ ಕಾಂತಾರದ ಈ ಬಹು ನಿರೀಕ್ಷಿತ ಪ್ರೀಕ್ವೆಲ್ ಈಗಾಗಲೇ ದೇಶಾದ್ಯಂತ ದೊಡ್ಡ ಮಟ್ಟದ ನಿರೀಕ್ಷೆ ಹುಟ್ಟುಹಾಕಿದೆ. ಕರಾವಳಿ ಮಣ್ಣಿನ ಸೊಗಡಿನ ಕಥೆಯನ್ನ ವಿಶ್ವಸಂಸ್ಥೆವರೆಗೂ ಕೊಂಡೊಯ್ದಿದ್ದ ಶೆಟ್ರು, ಈ ಬಾರಿಯೂ ಕೂಡ ಅದನ್ನ ಮೀರಿಸೋ ದಾಖಲೆಗಳನ್ನ ಬರೆಯೋ ಧಾವಂತದಲ್ಲಿದ್ದಾರೆ.

ರಿಷಬ್ ಶೆಟ್ಟಿಗೆ ಅವತಾರ್ ಸೆಡ್ಡು.. ರಿಯಾಲಿಟಿ v/s ಫ್ಯಾಂಟಸಿ

33 ತಿಂಗಳ ನಂತ್ರ 3Dನಲ್ಲಿ ಅವತಾರ್- ವೇ ಆಫ್ ವಾಟರ್..!

ಕಾಂತಾರ-1 ನಾರ್ತ್ ಇಂಡಿಯಾ ಡಿಸ್ಟ್ರಿಬ್ಯೂಷನ್‌‌‌ನ AA ಫಿಲಂಸ್‌ನ ಅನಿಲ್ ತದಾನಿ ವಹಿಸಿಕೊಂಡಿದ್ದು, ಕೆಜಿಎಫ್ ಬಳಿಕ ಕಾಂತಾರಗೆ ಕೈ ಹಾಕಿದ್ದಾರೆ. ಹಿಂದಿ ಮಾತನಾಡುವ ಪ್ರದೇಶಗಳಲ್ಲೂ ಈ ಚಿತ್ರ ದೊಡ್ಡ ಪರದೆಯ ಮೇಲೆ ಪ್ರದರ್ಶನಗೊಳ್ಳಲಿದೆ. ವಿಜಯ್ ಕಿರಗಂದೂರು ಅವರ ಹೊಂಬಾಳೆ ಫಿಲಂಸ್ ಬ್ಯಾನರ್‌‌ನಡಿಯಲ್ಲಿ ನಿರ್ಮಾಣವಾಗಿರುವ ಈ ಚಿತ್ರದಲ್ಲಿ, ಕ್ರಿ.ಶ 4ನೇ ಶತಮಾನದ ಸಂಸ್ಕೃತಿ ಮತ್ತು ವೈಭವವನ್ನು ತೆರೆಯ ಮೇಲೆ ತರಲು ತುದಿಗಾಲಲ್ಲಿ ನಿಂತಿದೆ.

ಈ ಚಿತ್ರ ಕನ್ನಡ, ಹಿಂದಿ, ತೆಲುಗು, ತಮಿಳು, ಮಲಯಾಳಂ, ಬೆಂಗಾಲಿ ಮತ್ತು ಇಂಗ್ಲಿಷ್. ಹೀಗೆ ಬರೋಬ್ಬರಿ 7 ಭಾಷೆಗಳಲ್ಲಿ ಬಿಡುಗಡೆಯಾಗಲಿದ್ದು, ಪ್ರಾದೇಶಿಕ ಕಥೆಗಳನ್ನ ಜಾಗತಿಕ ಮಟ್ಟಕ್ಕೆ ಕೊಂಡೊಯ್ಯುವ ಹೊಂಬಾಳೆ ಫಿಲಂಸ್‌ನ ಆಶಯ ಹಾಗೂ ಜವಾಬ್ದಾರಿಯನ್ನು ಮತ್ತಷ್ಟು ಹೆಚ್ಚಿಸಲಿದೆ. ತನ್ನ ಅದ್ಭುತ ಕಥೆ, ದೃಶ್ಯ ವೈಭವ ಮತ್ತು ಮನಮುಟ್ಟುವ ಸಂಗೀತದೊಂದಿಗೆ, ಕಾಂತಾರ ಚಾಪ್ಟರ್- 1 ಚಿತ್ರ ಈ ವರ್ಷದ ಬಹು ನಿರೀಕ್ಷಿತ ಚಿತ್ರಗಳಲ್ಲಿ ಒಂದಾಗಿದೆ.

ಅಕ್ಟೋಬರ್ 2ಕ್ಕೆ ಬಿಗ್ ಬಾಕ್ಸ್ ಆಫೀಸ್ ಕ್ಲ್ಯಾಶ್‌ಗೆ ಮುಹೂರ್ತ

ಪ್ರೀ- ರಿಲೀಸ್ ಬ್ಯುಸಿನೆಸ್‌‌ನಿಂದ ಹುಬ್ಬೇರಿಸಿದ ಶೆಟ್ರ ಕಾಂತಾರ-1

ಅಂದಹಾಗೆ ಹಾಲಿವುಡ್‌ ಲೆಜೆಂಡರಿ ಡೈರೆಕ್ಟರ್ ಜೇಮ್ಸ್ ಕ್ಯಾಮೆರಾನ್ ನಿರ್ದೇಶನದ ಅವತಾರ್ ಸೀರೀಸ್‌ನ ದಿ ವೇ ಆಫ್ ವಾಟರ್ ಸಿನಿಮಾ ಕೂಡ ಕಾಂತಾರ-1 ರಿಲೀಸ್ ಡೇಟ್‌ಗೆ ರಿಲೀಸ್ ಆಗ್ತಿದೆ. ಅರೇ ಅವತಾರ್- ದಿ ವೇ ಆಫ್ ವಾಟರ್ ಈಗಾಗ್ಲೇ ರಿಲೀಸ್ ಆಗಿದೆಯಲ್ವಾ ಅಂತ ಹುಬ್ಬೇರಿಸಬೇಡಿ. 2022ರ ಡಿಸೆಂಬರ್ 16ರಂದೇ ಈ ಚಿತ್ರ ರಿಲೀಸ್ ಆಗಿ, ಬೆಳ್ಳಿ ಪರದೆ ಬೆಳಗಿತ್ತು. ಆದ್ರೀಗ ತ್ರೀಡಿ ವರ್ಷನ್‌‌ನಲ್ಲಿ ಮತ್ತೆ ಎಲ್ಲೆಡೆ ನೋಡುಗರನ್ನ ರೋಮಾಂಚನಗೊಳಿಸಲು ಬರ್ತಿದೆ. ಅದೂ ಅಕ್ಟೋಬರ್ 2ರಂದೇ ಅನ್ನೋದು ಶಾಕಿಂಗ್ ನ್ಯೂಸ್.

ಕಾಂತಾರ-1 ನಮ್ಮ ಕರಾವಳಿ ಮಣ್ಣಿನ ಸೊಗಡು, ಸೊಬಗಿನ ರಿಯಲ್ ಕಥೆ ಆದ್ರೆ, ಅವತಾರ್ ಅನ್ನೋದು ಫ್ಯಾಂಟಸಿ ವರ್ಲ್ಡ್‌‌ನಿಂದ ರಂಜಿಸೋಕೆ ಬರ್ತಿರೋ ಸಿನಿಮಾ. ಒಂದ್ಕಡೆ ರಿಯಾಲಿಟಿ, ಮತ್ತೊಂದ್ಕಡೆ ಫ್ಯಾಂಟಸಿ.. ಪ್ರೇಕ್ಷಕ ವರ್ಗ ಯಾವುದಕ್ಕೆ ಹೆಚ್ಚಿನ ಒಲವು ತೋರಿಸ್ತಾರೆ ಅನ್ನೋದನ್ನ ನಿರೀಕ್ಷಿಸಬೇಕಿದೆ. ಆದ್ರೆ ಅವತಾರ್ ಬರ್ತಿರೋದು ತ್ರೀಡಿ ವರ್ಷನ್‌‌ನಲ್ಲಿ. ಹಾಗಾಗಿ ಥಿಯೇಟರ್‌‌‌ ಕ್ಲ್ಯಾಶ್ ಒಂದು ಮಟ್ಟಿಗೆ ಆಗಲಿದೆ ಅನ್ನೋದು ಬಿಟ್ರೆ, ಎರಡಕ್ಕೂ ಅದರದ್ದೇ ಆದಂತಹ ಪ್ರೇಕ್ಷಕ ವರ್ಗಗಳಿವೆ. ನಮ್ಮ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಅಂಡ್ ಟೀಂಗೆ ಆಲ್ ದಿ ಬೆಸ್ಟ್ ಹೇಳೋಣ.

Exit mobile version