ಕಾಂತಾರ-1 ಯಶಸ್ಸು ಕಂಡು ಪ್ರಗತಿ ಭಾವುಕ, ಅಪ್ಪಿ ಸಮಾಧಾನಪಡಿಸಿದ ರಿಷಬ್ ಶೆಟ್ಟಿ

Untitled design 2025 10 02t135147.572

ಅಕ್ಟೋಬರ್ 2, 2025: ವಿಜಯದಶಮಿ ದಿನ ವಿಶ್ವಾದ್ಯಂತ ಭವ್ಯವಾಗಿ ಬಿಡುಗಡೆಯಾದ ‘ಕಾಂತಾರ: ಚಾಪ್ಟರ್ 1’ ಚಿತ್ರದ ಅದ್ಭುತ ಪ್ರದರ್ಶನ ಮತ್ತು ಪ್ರೇಕ್ಷಕರಿಂದ ಸಿಗುತ್ತಿರುವ ಅಪಾರ ಮೆಚ್ಚುಗೆ ಕಂಡು ರಿಷಬ್ ಶೆಟ್ಟಿ ಅವರ ಪತ್ನಿ ಪ್ರಗತಿ ಶೆಟ್ಟಿ ಭಾವುಕರಾದರು ನಂತರ ಇದನ್ನ ನೋಡಿದ ರಿಷಬ್‌ ಶೆಟ್ಟಿ ಪ್ತನಿಯನ್ನ ತಬ್ಬಿಕೊಂಡು ಸಮಾಧಾನ ಪಡಿಸಿದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಎಲ್ಲೆಡೆ ವೈರಲ್‌ ಆಗಿದೆ.

 ರಿಷಬ್ ಶೆಟ್ಟಿ ಅವರು ತಮ್ಮ ಪತ್ನಿ ಪ್ರಗತಿ ಶೆಟ್ಟಿ ಅವರೊಂದಿಗೆ ‘ಕಾಂತಾರ ಚಾಪ್ಟರ್ 1’ ಚಿತ್ರದ ಪ್ರದರ್ಶನಕ್ಕೆ ಬಂದಿದ್ದರು. ತಮ್ಮ ಮೂರು ವರ್ಷಗಳ ಕಠಿಣ ಪರಿಶ್ರಮದ ಫಲವಾಗಿ ತೆರೆಯ ಮೇಲೆ ಚಿತ್ರವು ಭವ್ಯವಾಗಿ ಮೂಡಿಬಂದಿದ್ದು ಮತ್ತು ಅದನ್ನು ಪ್ರೇಕ್ಷಕರು ಎಂದಿನಂತೇ ಉತ್ಸಾಹದಿಂದ ಸ್ವೀಕರಿಸಿದ್ದನ್ನು ಕಂಡ ಪ್ರಗತಿ ಶೆಟ್ಟಿ ಅವರು ಭಾವುಕರಾದರು. ಈ ಸಂದರ್ಭವನ್ನು ಸೆರೆಹಿಡಿದ ವೀಡಿಯೊಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಒಂದು ವೀಡಿಯೊದಲ್ಲಿ, ಪ್ರೇಕ್ಷಕರಿಗೆ ಧನ್ಯವಾದ ಹೇಳುತ್ತಾ ಭಾವುಕರಾಗುವ ರಿಷಬ್ ಶೆಟ್ಟಿ ಅವರ ಕ್ಷಣಗಳು ಕೂಡಾ ಕ್ಯಾಮರಾ ಬಿದ್ದಿವೆ. ಚಿತ್ರದಲ್ಲಿ ಕೆಲಸ ಮಾಡಿದ ಇಡೀ ತಂಡಕ್ಕೆ ರಿಷಬ್ ಶೆಟ್ಟಿ ಅಭಿನಂದನೆ ಸಲ್ಲಿಸಿದ್ದಾರೆ.

ಕಾಂತಾರ ಚಾಪ್ಟರ್-1 ಚಿತ್ರವು ಕ್ರಿ.ಶ. 4-5ನೇ ಶತಮಾನದ ಕದಂಬರ ಆಳ್ವಿಕೆಯ ಕಾಲಘಟ್ಟವನ್ನು ಹಿನ್ನೆಲೆಯಾಗಿ ಇಟ್ಟುಕೊಂಡಿದೆ. ಈ ಚಿತ್ರವು 2022ರಲ್ಲಿ ಬಿಡುಗಡೆಯಾದ ಮೂಲ ‘ಕಾಂತಾರ’ ಚಿತ್ರದ ಪೂರ್ವಭಾವಿ (ಪ್ರೀಕ್ವೆಲ್) ಆಗಿದೆ. ₹125 ಕೋಟಿ ಬಂಡವಾಳದಲ್ಲಿ ನಿರ್ಮಾಣಗೊಂಡ ಈ ಚಿತ್ರವನ್ನು ಹೊಂಬಾಳೆ ಫಿಲ್ಮ್ಸ್ ನಿರ್ಮಾಣ ಮಾಡಿದೆ. ರಿಷಬ್ ಶೆಟ್ಟಿ ಅವರು ನಿರ್ದೇಶನ ಮತ್ತು ನಟನೆ ಮಾಡಿರುವ ಈ ಚಿತ್ರದಲ್ಲಿ ಅವರು ಶಿವ ಮತ್ತು ಬೇರ್ಮೆ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ರುಕ್ಮಿಣಿ ವಸಂತ್ (ಕನಕವತಿ ಪಾತ್ರ), ಜಯರಾಮ್ (ರಾಜಶೇಖರ ಪಾತ್ರ) ಮತ್ತು ಗುಲ್ಶನ್ ದೇವಯ್ಯ (ಕುಲಶೇಖರ ಪಾತ್ರ) ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರವು 2 ಗಂಟೆ 48 ನಿಮಿಷಗಳ ಅವಧಿಯನ್ನು ಹೊಂದಿದೆ.

Exit mobile version