• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Wednesday, September 17, 2025
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
  • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
  • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ಕದಂಬರ ಕಾಲದ ಕಾಂತಾರ-1..ನಾಗಸಾಧು ಆಗಿ ರಿಷಬ್..?

1725 ವರ್ಷಗಳ ಹಿಂದಿನ ಕದಂಬ ಸಾಮ್ರಾಜ್ಯ ಮರುಸೃಷ್ಠಿ..!

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
September 15, 2025 - 4:42 pm
in ಸಿನಿಮಾ
0 0
0
Web (44)

ಕಾಂತಾರ-1 ಸಿನಿಮಾಗಾಗಿ ರಿಷಬ್ ಶೆಟ್ಟಿ ಒಂದು ಹೊಸ ಪ್ರಪಂಚವನ್ನೇ ಕಟ್ಟಿದ್ದಾರೆ.  ಕದಂಬ ಸಾಮ್ರಾಜ್ಯವನ್ನು ಮರುಸೃಷ್ಠಿಸಿರೋ ಶೆಟ್ರು, ನಾಗಸಾಧು ಆಗಿ ನೋಡುಗರಿಗೆ ರೋಮಾಂಚಕ ವಿಷಯಗಳ ಜೊತೆ ಬರ್ತಿದ್ದಾರೆ ಎನ್ನಲಾಗಿದೆ. ಇಷ್ಟಕ್ಕೂ ಸಿನಿಮಾದ ರನ್ ಟೈಂ ಎಷ್ಟು..? ಚಿತ್ರದಲ್ಲಿರೋ ಟಾಪ್ ಮೋಸ್ಟ್ ಸೀಕ್ರೆಟ್‌‌‌ಗಳು ಏನು ಅನ್ನೋದ್ರ ಎಕ್ಸ್‌‌ಕ್ಲೂಸಿವ್ ಸ್ಟೋರಿ ನಿಮಗಾಗಿ ಕಾಯ್ತಿದೆ.

ದಂತಕಥೆ ಕಾಂತಾರ ನಿಮಗೆಲ್ಲಾ ಗೊತ್ತೇಯಿದೆ. ಇದೀಗ ಅದರ ಹಿಂದಿರೋ ಅಸಲಿ ವಿಷಯಗಳನ್ನ ಪ್ರೀಕ್ವೆಲ್ ಮೂಲಕ ಪ್ರೇಕ್ಷಕರ ಮುಂದೆ ತರ್ತಿದ್ದಾರೆ ನಟ, ನಿರ್ದೇಶಕ ರಿಷಬ್ ಶೆಟ್ಟಿ. ಇದೇ ಅಕ್ಟೋಬರ್ 2ಕ್ಕೆ ಕಾಂತಾರ ಚಾಪ್ಟರ್-1 ನಿಮ್ಮನ್ನ ರಂಜಿಸಲು ಬರ್ತಿದೆ. ಇದು ಬರೀ ಮನರಂಜನೆ ಅಷ್ಟೇ ಅಲ್ಲ, ನೋಡುಗರಿಗೆ ರೋಮಾಂಚನ ನೀಡಬಲ್ಲಂತಹ ದೈವಿಕ ಅಂಶಗಳಿಂದ ಕೂಡಿರೋ ದೃಶ್ಯಕಾವ್ಯ.

RelatedPosts

“ಅರಸಯ್ಯನ ಪ್ರೇಮ ಪ್ರಸಂಗ” ಚಿತ್ರದ “ಪೋಸ್ಟ್ ಕಾರ್ಡ್” ಹಾಡು ಬಿಡುಗಡೆ

UI ಉಪ್ಪಿಗೆ UPI ಕಾಟ..ಲಕ್ಷ ಲಕ್ಷ ಪೀಕಿದ ಹ್ಯಾಕರ್ಸ್‌..!!

ಶ್ರೇಯಸ್ ಜೊತೆ ಬೇಟೆಗೆ ಹೊರಟ ದುನಿಯಾ ವಿಜಯ್

ಮಾರುತ ಚಿತ್ರ ಅಕ್ಟೋಬರ್ 31ಕ್ಕೆ ರಿಲೀಸ್: ಡಾ. ಎಸ್ ನಾರಾಯಣ್ ನಿರ್ದೇಶನ

ADVERTISEMENT
ADVERTISEMENT

ಕದಂಬರ ಕಾಲದ ಕಾಂತಾರ-1.. ನಾಗಸಾಧು ಆಗಿ ರಿಷಬ್..?

1725 ವರ್ಷಗಳ ಹಿಂದಿನ ಕದಂಬ ಸಾಮ್ರಾಜ್ಯ ಮರುಸೃಷ್ಠಿ..!

ಸುಮಾರು 1725 ವರ್ಷಗಳಷ್ಟು ಹಳೆಯದಾದ ಕದಂಬ ಸಾಮ್ರಾಜ್ಯರ ಕಾಲದ ಕಥಾನಕ ಇದು ಎನ್ನಲಾಗ್ತಿದೆ. ಈ ಸಿನಿಮಾಗಾಗಿ ಸುಮಾರು 25 ಎಕರೆಯಷ್ಟು ವಿಸ್ತಾರವಾದ ಭೂಮಿಯಲ್ಲಿ ಇಡೀ ಕದಂಬ ಸಾಮ್ರಾಜ್ಯವನ್ನು ಮರುಸೃಷ್ಠಿಸಿದ್ರಾ ರಿಷಬ್ ಶೆಟ್ಟಿ ಅಂತ ಎಲ್ಲರೂ ಮಾತಾಡಿಕೊಳ್ತಿದ್ದಾರೆ. ಅಂದಹಾಗೆ ಕದಂಬ ಕನ್ನಡದ ಮೊಟ್ಟ ಮೊದಲ ರಾಜ ವಂಶ. ಹಲ್ಮಿಡಿ ಶಾಸನಕ್ಕಿಂತಲೂ ಹಳೆಯದಾದ ತಾಳಗುಂದ ಕಲ್ಲಿನ ಬರಹ ಈ ಕದಂಬರ ಆಳ್ವಿಕೆಗೆ ಸೇರಿದ್ದಾಗಿದೆ.

481191895 1210420077308207 3079259990918835700 n

ಮನುಷ್ಯ ಹಾಗೂ ದೈವ ಶಕ್ತಿಯ ಶ್ರೇಷ್ಠ ಸಂಬಂಧದ ಕುರಿತ ಕಥೆ

2 ಗಂಟೆ 45 ನಿಮಿಷ ರನ್ ಟೈಂ.. ಏನೆಲ್ಲಾ ಅಂಶಗಳು ಅಡಗಿವೆ ?

ಬನವಾಸಿಯ ದಟ್ಟ ಕಾಡುಗಳಲ್ಲಿ ಚಿತ್ರಿಸಿರೋ ಈ ಕಾಂತಾರ-1, ಕದಂಬರ ರಾಜಧಾನಿ ಬನವಾಸಿ ಆಗಿರೋದಕ್ಕೂ ಲಿಂಕ್ ಇದೆ. ಅಂದಹಾಗೆ ಮಯೂರ ಚಿತ್ರದಲ್ಲಿ ನಟಸಾರ್ವಭೌಮ ಡಾ ರಾಜ್‌‌ಕುಮಾರ್, ನಾವು ಕದಂಬರು ಅಂತ ಹೊಡೆಯುವ ಮಾಸ್ ಡೈಲಾಗ್ ಈ ಸಂದರ್ಭದಲ್ಲಿ ನೆನೆಸಿಕೊಳ್ಳಬಹುದು.

ಅಂದು ಅಣ್ಣಾವ್ರು ಬನವಾಸಿಯ ಕದಂಬರ ಚಕ್ರವರ್ತಿ ಮುಯೂರಶರ್ಮನಾಗಿ ಅಬ್ಬರಿಸಿ, ಆರ್ಭಟಿಸಿದ್ರು. ಅದಾದ ಬಳಿಕ ಇದೀಗ ಕಾಂತಾರ-1 ಚಿತ್ರದಲ್ಲಿ ಅದೇ ಕದಂಬ ಸಾಮ್ರಾಜ್ಯಕ್ಕೆ ಲಿಂಕ್ ಕೊಟ್ಟು ಸಿನಿಮಾ ಮಾಡಿದ್ದಾರೆ ರಿಷಬ್ ಶೆಟ್ಟಿ. ಕಾಂತಾರ ಚಾಪ್ಟರ್-1 ಒಬ್ಬ ನಾಗಸಾಧು ಕುರಿತ ಕಥಾನಕ ಆಗಿರಲಿದ್ದು, ಸ್ವತಃ ರಿಷಬ್ ಶೆಟ್ಟಿಯೇ ನಾಗಸಾಧು ಪಾತ್ರದಲ್ಲಿ ಮಿಂಚಲಿದ್ದಾರೆ ಎನ್ನಲಾಗ್ತಿದೆ. ಅಷ್ಟೇ ಅಲ್ಲ, ಆತ ಮನುಷ್ಯ ಹಾಗೂ ದೈವಿಕ ಶಕ್ತಿಗಳಿಗೆ ಕೊಂಡಿಯಾಗಿದ್ದುಕೊಂಡು ಆ ಪವಿತ್ರವಾದ ಸಂಬಂಧಗಳನ್ನ ಎಳೆ ಎಳೆಯಾಗಿ ಬಿಚ್ಚಿಡೋ ಕಾರ್ಯ ಮಾಡಿದ್ದಾರಂತೆ.

530447582 1329489622067918 5512378365035199873 n

ಆಧ್ಯಾತ್ಮ ಹಾಗೂ ಧಾರ್ಮಿಕ ಬದ್ದತೆಯಿಂದ ಕೂಡಿರೋ ಅಂಶಗಳ ಜೊತೆಗೆ ನಂಬಿಕೆ, ಭಕ್ತಿ, ಧಾರ್ಮಿಕ ಸಂಬಂಧಗಳ ಅನಾವರಣವೂ ಇಲ್ಲಿ ಆಗಲಿದೆಯಂತೆ. ಅಂದಹಾಗೆ ಕಾಂತಾರ ಸಿನಿಮಾ ಕ್ಲಿಕ್ ಆಗಿದ್ದೇ ಆ ಗುಳಿಗ ದೈವ ಹಾಗೂ ಅದ್ರ ಹಿಂದಿರೋ ಶಕ್ತಿಯಿಂದಾಗಿ. ಅದ್ರಲ್ಲೂ ರಿಷಬ್ ಶೆಟ್ಟಿಗೆ ಸ್ವತಃ ಆ ದೈವವೇ ಮೈ ಮೇಲೆ ಬಂದಂತೆ ವರ್ತಿಸಿದ್ರು. ಈಗಲೂ ಕೂಡ ನಾಗಸಾಧು ರೋಲ್‌‌ನಲ್ಲಿ ದೈಹಿಕ ಹಾಗೂ ಮಾನಸಿಕವಾಗಿ ಬಲಿಷ್ಠವಾದ ಪಾತ್ರಧಾರಿಯಾಗಿ ರಿಷಬ್ ಹೊರಹೊಮ್ಮಲಿದ್ದಾರೆ.

ಕಾಂತಾರ ಚಾಪ್ಟರ್-1 ರನ್ ಟೈಮ್ ಎಷ್ಟಿದೆ ಅನ್ನೋ ಕ್ಯೂರಿಯಾಸಿಟಿಗೂ ತೆರೆ ಬಿದ್ದಿದ್ದು, 2 ಗಂಟೆ 45 ನಿಮಿಷಗಳಷ್ಟು ದೊಡ್ಡ ಸಿನಿಮಾ ಅಂತಿದ್ದಾರೆ. ಹೊಂಬಾಳೆ ಫಿಲಂಸ್ ಈ ಸಿನಿಮಾನ ತುಂಬಾ ರಿಚ್ ಆಗಿ ನಿರ್ಮಾಣ ಮಾಡಿದ್ದು, ತುಂಬಾ ಸ್ವಾಭಾವಿಕ ಹಾಗೂ ಸಹಜತೆಯಿಂದ ದೃಶ್ಯಗಳು ಕೂಡಿರಲಿದೆಯಂತೆ. ಇಲ್ಲಿ ರಿಷಬ್‌ಗೆ ಜೋಡಿಯಾಗಿ ರುಕ್ಮಿಣಿ ವಸಂತ್ ನಟಿಸಿದ್ದು, ಮಲಯಾಳಂನ ಜಯರಾಮ್, ಬಾಲಿವುಡ್‌ನ ಗುಲ್ಶನ್ ದೇವಯ್ಯ ಸೇರಿದಂತೆ ಬಹುಭಾಷಾ ಕಲಾವಿದರ ದಂಡು ಈ ಚಿತ್ರದಲ್ಲಿರಲಿದೆ. ಅಕ್ಟೋಬರ್ 2ಕ್ಕೆ ವಿಶ್ವದಾದ್ಯಂತ ಕಾಂತಾರ-1 ಗ್ರ್ಯಾಂಡ್ ರಿಲೀಸ್ ಆಗ್ತಿದ್ದು, ಪ್ರೀ-ರಿಲೀಸ್ ಬ್ಯುಸಿನೆಸ್ ಮೂಲಕ ಎಲ್ಲರ ಹುಬ್ಬೇರಿಸಿದೆ.

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

Web (84)

“ಅರಸಯ್ಯನ ಪ್ರೇಮ ಪ್ರಸಂಗ” ಚಿತ್ರದ “ಪೋಸ್ಟ್ ಕಾರ್ಡ್” ಹಾಡು ಬಿಡುಗಡೆ

by ಶ್ರೀದೇವಿ ಬಿ. ವೈ
September 16, 2025 - 7:44 pm
0

Web (81)

ವಿರೋಧ ಪಕ್ಷದ ಶಾಸಕರಿಗೆ ಸಿಎಂ ಸಿದ್ದರಾಮಯ್ಯ ಉಡುಗೊರೆ: 25 ಕೋಟಿ ಅನುದಾನ ಬಿಡುಗಡೆ

by ಶ್ರೀದೇವಿ ಬಿ. ವೈ
September 16, 2025 - 7:35 pm
0

Web (83)

UI ಉಪ್ಪಿಗೆ UPI ಕಾಟ..ಲಕ್ಷ ಲಕ್ಷ ಪೀಕಿದ ಹ್ಯಾಕರ್ಸ್‌..!!

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
September 16, 2025 - 7:32 pm
0

Web (80)

ಲಂಚ ಪಡೆದು ಅಕ್ರಮ ಎಸಗಿದ ಮೂವರು ವೈದ್ಯರ ಅಮಾನತು

by ಶ್ರೀದೇವಿ ಬಿ. ವೈ
September 16, 2025 - 7:04 pm
0

ಸಂಬಂಧಿಸಿದ ಪೋಸ್ಟ್‌ಗಳು

  • Web (84)
    “ಅರಸಯ್ಯನ ಪ್ರೇಮ ಪ್ರಸಂಗ” ಚಿತ್ರದ “ಪೋಸ್ಟ್ ಕಾರ್ಡ್” ಹಾಡು ಬಿಡುಗಡೆ
    September 16, 2025 | 0
  • Web (83)
    UI ಉಪ್ಪಿಗೆ UPI ಕಾಟ..ಲಕ್ಷ ಲಕ್ಷ ಪೀಕಿದ ಹ್ಯಾಕರ್ಸ್‌..!!
    September 16, 2025 | 0
  • Web (78)
    ಶ್ರೇಯಸ್ ಜೊತೆ ಬೇಟೆಗೆ ಹೊರಟ ದುನಿಯಾ ವಿಜಯ್
    September 16, 2025 | 0
  • Web (76)
    ಮಾರುತ ಚಿತ್ರ ಅಕ್ಟೋಬರ್ 31ಕ್ಕೆ ರಿಲೀಸ್: ಡಾ. ಎಸ್ ನಾರಾಯಣ್ ನಿರ್ದೇಶನ
    September 16, 2025 | 0
  • Web (75)
    ಗಂಡು ಮಗುವಿಗೆ ಜನ್ಮ ನೀಡಿದ ಲವ್ ಮಾಕ್ಟೇಲ್ ನಟಿ ಸುಷ್ಮಿತಾ
    September 16, 2025 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
  • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version