ಬರ್ತ್ ಡೇ ಸಂಭ್ರಮದಲ್ಲಿರೋ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ, ಕಾಂತಾರ ವರ್ಲ್ಡ್‌ನಿಂದ ದೊಡ್ಡದಾಗಿಯೇ ಸಿಗ್ನಲ್ ನೀಡಿದ್ದಾರೆ. ದಂತಕಥೆಯ ಮುನ್ನುಡಿ.. ಆ ನುಡಿಗೊಂದು ಪರಿಚಯ.. ಮನದಾಳದ ಕಥೆಗೆ ಮತ್ತೊಮ್ಮೆ ಸ್ವಾಗತ ಅನ್ನೋ ಸಂದೇಶದೊಂದಿಗೆ ಕಾಂತಾರ ಪ್ರೀಕ್ವೆಲ್‌ನ ಹೊಚ್ಚ ಹೊಸ ಪೋಸ್ಟರ್ ರಿವೀಲ್ ಆಗಿದೆ. ಈ ಬಾರಿ ಕಾಂತಾರ ಗಮ್ಮತ್ತು ಅದಕ್ಕಿಂತ ಹತ್ತು ಪಟ್ಟು ಜೋರಿರಲಿದೆ.
- 3 ಸಾವಿರ ಆರ್ಟಿಸ್ಟ್.. 25 ಎಕರೆ ಸೆಟ್.. ಕಾಂತಾರ ಗಮ್ಮತ್ತು
- ಕಳರಿಪಯಟ್ಟು ಲುಕ್‌ನಲ್ಲಿ ರಿಷಬ್ ಅದ್ಧೂರಿ ಬೆಳಕಿನ ದರ್ಶನ
- ಡಿವೈನ್ ಮತ್ತು ಅಡ್ವೆಂಚರ್ ಮಿಶ್ರಿತ ಧಮಾಕೇದಾರ್ ಮೂವಿ
- ಅ-2ಕ್ಕೆ ಪಂಚಭಾಷೆಯಲ್ಲಿ ಕಾಂತಾರ ಪ್ರೀಕ್ವೆಲ್ ಬಿಡುಗಡೆ..!
41 ವರ್ಷ ಪೂರೈಸಿ, 42ನೇ ವಸಂತಕ್ಕೆ ಕಾಲಿಟ್ಟಿರುವ ರಿಷಬ್ ಶೆಟ್ಟಿ ಇಂದು ಬರ್ತ್ ಡೇ ಸಂಭ್ರಮದಲ್ಲಿದ್ದಾರೆ. ಭಿನ್ನ ಅಲೆಯ ಸಿನಿಮಾಗಳಿಂದಲೇ ಗುರ್ತಿಸಿಕೊಂಡಿದ್ದ ಡಿವೈನ್ ಸ್ಟಾರ್, ಕಾಂತಾರ ಬಳಿಕ ಕಾಂತಾರ ಪ್ರೀಕ್ವೆಲ್‌ಗೆ ಕೈ ಹಾಕಿದ್ರು. ಅದರ ಚಿತ್ರೀಕರಣ ಬಹುತೇಕ ಕಂಪ್ಲೀಟ್ ಆಗಿದ್ದು, ಅಂದುಕೊಂಡಂತೆ ಅಕ್ಟೋಬರ್ 2ಕ್ಕೆ ಕನ್ನಡದ ಜೊತೆ ಹಿಂದಿ, ತೆಲುಗು, ತಮಿಳು ಹಾಗೂ ಮಲಯಾಳಂನಲ್ಲಿ ಅದ್ದೂರಿಯಾಗಿ ರಿಲೀಸ್ ಮಾಡೋ ಧಾವಂತದಲ್ಲಿದ್ದಾರೆ.
2022ರಲ್ಲಿ ಬಿಡುಗಡೆಯಾದ ಕಾಂತಾರ ಭಾರತೀಯ ಚಿತ್ರರಂಗದಲ್ಲಿ ಹೊಸ ದಾಖಲೆ ಬರೆದಿತ್ತು. ಪ್ರಕೃತಿ, ಸಂಸ್ಕೃತಿ ಮತ್ತು ಆಧ್ಯಾತ್ಮದ ಹಿನ್ನೆಲೆಯಲ್ಲಿ ಮೂಡಿಬಂದ ಕಾಂತಾರ ಚಿತ್ರಕ್ಕೆ ಎಲ್ಲೆಡೆಯಿಂದ ದೊಡ್ಡ ಮಟ್ಟದ ಮೆಚ್ಚುಗೆ ಸಿಕ್ಕಿತ್ತು. ಬಾಕ್ಸ್ ಆಫೀಸ್‌ನಲ್ಲಿಯೂ 450 ಕೋಟಿ ಗಳಿಕೆಯಿಂದ ಹವಾ ಸೃಷ್ಟಿಸಿತ್ತು. ಆರಂಭದಲ್ಲಿ ಕನ್ನಡದಲ್ಲಿ ಮಾತ್ರ ತೆರೆಕಂಡಿದ್ದ ಈ ಸಿನಿಮಾ, ಪ್ಯಾನ್ ಇಂಡಿಯಾ ಅವತಾರ ತಾಳಿತ್ತು. ಇದೀಗ ಇದೇ ಕಾಂತಾರ ಸಿನಿಮಾದ ಪ್ರೀಕ್ವೆಲ್ ಆಗಮನಕ್ಕೆ ಹೆಚ್ಚು ದಿನ ಉಳಿದಿಲ್ಲ. ಶೆಟ್ರ ಬರ್ತ್ ಡೇ ವಿಶೇಷ ನ್ಯೂ ಪೋಸ್ಟರ್‌ನಿಂದ ಮೆಸೇಜ್ ನೀಡಲಾಗಿದೆ.
ಆಧ್ಯಾತ್ಮ ಹಾಗೂ ಸಾಹಸಗಾಥೆಯ ಸಮ್ಮಿಶ್ರಣದ ಕಾಂತಾರ-1 ಚಿತ್ರ ಹಲವು ವಿಶೇಷತೆಗಳಿಂದ ಕೂಡಿದೆ. ಈಗಾಗಲೇ ಬಿಡುಗಡೆ ಆಗಿರುವ ಸಿನಿಮಾಗೆ ಹೋಲಿಕೆ ಮಾಡಿದ್ರೆ, ಹಲವು ಹೊಸತನಗಳಿರುವ ಚಿತ್ರ ಇದಾಗಲಿದೆ. ಈ ಹಿಂದಿನ ಟೀಸರ್‌ನಲ್ಲಿಯೇ ಕುತೂಹಲಕ್ಕೆ ಒಗ್ಗರಣೆ ಹಾಕಿತ್ತು ಕಾಂತಾರ-1. ಇದೀಗ ಈ ಭವ್ಯಕಥೆ ತೆರೆಮೇಲೆ ಬರಲು ಸಿದ್ಧವಾಗಿದೆ.
ಬರೋಬ್ಬರಿ 25 ಎಕರೆಯ ಬಹುದೊಡ್ಡ ಭೂ ಪ್ರದೇಶದಲ್ಲಿ ಬೃಹತ್ ಸೆಟ್ ಹಾಕಿ. ಕಾಲ್ಪನಿಕ ಊರೊಂದನ್ನ ಸೃಷ್ಟಿಸಿ, ಇಡೀ ಕಾಂತಾರ ಚಾಪ್ಟರ್ 1 ಸಿನಿಮಾನ ಅದರಲ್ಲಿಯೇ ಸೆರೆಹಿಡಿಯಲಾಗಿದೆ. ಭಾರತವಷ್ಟೇ ಅಲ್ಲದೆ ಅಂತಾರಾಷ್ಟ್ರೀಯ ತಂತ್ರಜ್ಞರು ಕೂಡ ಈ ಸಿನಿಮಾಗೆ ಕೈ ಜೋಡಿಸಿದ್ದಾರೆ. 45 ರಿಂದ 50 ದಿನಗಳ ಕಾಲ ಸುಮಾರು 500 ತರಬೇತಿದಾರರು, 3000ಕ್ಕೂ ಹೆಚ್ಚು ಜೂನಿಯರ್ ಆರ್ಟಿಸ್ಟ್‌ಗಳಿಂದ ಈ ಸಿನಿಮಾ ತಯಾರಾಗಿದೆ. ಹತ್ತು, ಹಲವು ವಿಘ್ನಗಳ ನಡುವೆಯೂ ಕಾಂತಾರ ಒಂದು ದೊಡ್ಡ ಭರವಸೆ ಮೂಡಿಸಿರೋದು ಇಂಟರೆಸ್ಟಿಂಗ್. ಈ ಬಾರಿ ದೈವ ಈ ಸಿನಿಮಾನ ಎಷ್ಟರ ಮಟ್ಟಿಗೆ ಕೊಂಡೊಯ್ಯಲಿದೆ ಅನ್ನೋದನ್ನ ಇನ್ನಷ್ಟೇ ನಿರೀಕ್ಷಿಸಬೇಕಿದೆ.