ಕಾಂತ ಅನ್ನೋ ಪ್ಯಾನ್ ಇಂಡಿಯಾ ಪ್ರಾಜೆಕ್ಟ್‌ಗೆ ಕೈ ಹಾಕಿದ್ದಾರೆ ದುಲ್ಕರ್ ಸಲ್ಮಾನ್. ಇದು ಸೂಪರ್ ಸ್ಟಾರ್ ಒಬ್ರು ಮರ್ಡರ್ ಕೇಸ್‌ನಲ್ಲಿ ಜೈಲಿಗೆ ಹೋಗುವ ನೈಜ ಘಟನೆ ಆಧಾರಿತ ಸಿನಿಮಾ. ಹೀಗೆ ಹೇಳ್ತಿದ್ದಂತೆ ಈ ಮರ್ಡರ್ ಮಿಸ್ಟರಿಯಲ್ಲಿ ದರ್ಶನ್ ಹಿಸ್ಟರಿ ಹೊರಬರುತ್ತಾ ಕಾಂತಾ ಅನ್ನೋ ಅನುಮಾನ ನಿಮಗೆ ಬಾರದೆ ಇರಲ್ಲ. ಆ ಕ್ಯೂರಿಯಾಸಿಟಿಗೆ ಉತ್ತರ ಇಲ್ಲಿದೆ.
- ಮರ್ಡರ್ ಮಿಸ್ಟರಿ ಕಾಂತ.. ಬೆಳ್ಳಿತೆರೆಯಲ್ಲಿ ದರ್ಶನ್ ಹಿಸ್ಟರಿ..?
- ಕೊಲೆ ಕೇಸ್‌ನಲ್ಲಿ ಜೈಲು ಸೇರುವ ಸೂಪರ್ ಸ್ಟಾರ್ ಕುರಿತ ಕಥೆ !
- ದುಲ್ಕರ್ ಸಲ್ಮಾನ್‌ಗೆ ಟಿಟೌನ್ ರಾಣಾ ದಗ್ಗುಬಾಟಿ ಕೂಡ ಸಾಥ್
ಕಲೆ, ಕೊಲೆ, ಬಲೆ.. ಈ ತರಹದ ಘಟನೆಗಳನ್ನ ನಾವು ಸಿನಿಮಾಗಳಲ್ಲಿ ನೋಡ್ತಿದ್ವಿ. ಆದ್ರೀಗ ಕಲಾವಿದನೊಬ್ಬ ಕೊಲೆ ಆರೋಪದಡಿ ಜೈಲಿಗೆ ಹೋಗಿದ್ದ ನೈಜ ಘಟನೆಯೇ ಸಿನಿಮಾ ಆಗ್ತಿದೆ. ಇಂಥದ್ದೊಂದು ಸಾಹಸಕ್ಕೆ ಮಲಯಾಳಂನ ಮೋಸ್ಟ್ ವರ್ಸಟೈಲ್ ಆ್ಯಕ್ಟರ್ ದುಲ್ಕರ್ ಸಲ್ಮಾನ್ ಕೈ ಹಾಕಿದ್ದಾರೆ. ಚಿತ್ರಕ್ಕೆ ಕಾಂತ ಅಂತಲೂ ಟೈಟಲ್ ಇಟ್ಟಿದ್ದು, ಪ್ಯಾನ್ ಇಂಡಿಯಾ ಪ್ರಾಜೆಕ್ಟ್ ಅಗಿ ಬರೋಬ್ಬರಿ ಐದು ಭಾಷೆಗಳಲ್ಲಿ ಈ ಸಿನಿಮಾ ದೊಡ್ಡ ಪರದೆಗೆ ದೊಡ್ಡದಾಗಿಯೇ ಎಂಟ್ರಿ ಕೊಡಲಿದೆ.
ದುಲ್ಕರ್ ಸಲ್ಮಾನ್‌ಗೆ ಟಾಲಿವುಡ್ ನಟ ರಾಣಾ ದಗ್ಗುಬಾಟಿ ಕೂಡ ಕೈ ಜೋಡಿಸಿದ್ದು, ಮುಖ್ಯಭೂಮಿಕೆಯಲ್ಲಿ ಇವರುಗಳು ನಟಿಸುವುದರ ಜೊತೆಗೆ ಈ ರಿಯಲ್ ಬೇಸ್ಡ್ ಕಥೆಗೆ ಬಂಡವಾಳ ಕೂಡ ಹೂಡುತ್ತಿರೋದು ಇಂಟರೆಸ್ಟಿಂಗ್. ಇಬ್ಬರೂ ಸ್ಟಾರ್‌ಗಳು ಬಹಳ ಇಷ್ಟಪಟ್ಟು ಈ ಸಿನಿಮಾ ಮಾಡ್ತಿರೋದು ವಿಶೇಷ. ಅಂದಹಾಗೆ ಇದೊಂದು ಸೂಪರ್ ಸ್ಟಾರ್ ಕೊಲೆ ಕೇಸ್‌ನಲ್ಲಿ ಜೈಲಿಗೆ ಹೋದ ಘಟನೆ ಆಧರಿಸಿ ತಯಾರಾಗಲಿದೆಯಂತೆ.
ಸೆಲ್ವಮಣಿ ಸೆಲ್ವರಾಜ್ ನಿರ್ದೇಶನದ ಕಾಂತ ಸಿನಿಮಾದ ಶೂಟಿಂಗ್ ಭರದಿಂದ ಸಾಗ್ತಿದ್ದು, ಭಾಗ್ಯಶ್ರೀ ಕೂಡ ಚಿತ್ರದ ತಾರಾಗಣದಲ್ಲಿದ್ದಾರೆ. ಇದೊಂದು ಸೂಪರ್ ಸ್ಟಾರ್ ಕೊಲೆ ಕೇಸ್ ವಿಚಾರ ಕಂಬಿ ಎಣಿಸಿದ ನೈಕ ಕಥೆ ಅಂತಿರೋದಕ್ಕೆ ನಮ್ಮ ಕನ್ನಡದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಮಿಸ್ಟರಿ ಸಿನಿಮಾ ಆಗ್ತಿದೆಯಾ ಅನ್ನೋ ಪ್ರಶ್ನೆ ಮೂಡದೇ ಇರಲ್ಲ.
ಯಾಕಂದ್ರೆ ಗೆಳತಿ ಪವಿತ್ರಾ ಗೌಡಗಾಗಿ, ಚಿತ್ರದುರ್ಗದಲ್ಲಿದ್ದ ರೇಣುಕಾಸ್ವಾಮಿಯನ್ನ ಬೆಂಗಳೂರಿಗೆ ಕರೆಸಿ, ಹಿಗ್ಗಾಮುಗ್ಗ ಥಳಿಸಿ, ಕೊಲೆ ಮಾಡಿದ್ದಾರೆ ಅನ್ನೋ ಆರೋಪ ಹೊತ್ತಿದ್ದಾರೆ ನಟ ದರ್ಶನ್. ಅದ್ರಿಂದ ಅರೆಸ್ಟ್ ಆಗಿ, ಆರು ತಿಂಗಳು ಬೆಂಗಳೂರಿನ ಪರಪ್ಪನ ಅಗ್ರಹಾರ ಹಾಗೂ ಬಳ್ಳಾರಿ ಜೈಲಿನ ಕಂಬಿಗಳನ್ನ ಕೂಡ ಎಣಿಸಿದ್ರು ಡಿಬಾಸ್ ದರ್ಶನ್. ಈ ಕಥೆಯನ್ನ ಏನಾದ್ರು ಸಿನಿಮಾ ಮಾಡ್ತಿದ್ದಾರಾ ದುಲ್ಕರ್-ರಾಣಾ ಅನ್ನೋ ಸಂದೇಹ ಎಲ್ಲರಲ್ಲೂ ಮೂಡಲಿದೆ. ಆದ್ರೆ ಅಸಲಿ ಮ್ಯಾಟರ್ ಬೇರೇನೇ ಇದೆ.
ಯೆಸ್.. ಸೂಪರ್ ಸ್ಟಾರ್ ಒಬ್ರು ಕೊಲೆ ಪ್ರಕರಣದಲ್ಲಿ ಜೈಲು ಸೇರುವುದೇ ಈ ಕಾಂತ ಚಿತ್ರದ ಅಸಲಿ ಕಥೆ. ಆದ್ರೆ ಅದು ದರ್ಶನ್‌ರದ್ದು ಅಲ್ಲ. 1950ರ ದಶಕದ ನಟ ಎಂ.ಕೆ. ತ್ಯಾಗರಾಜ ಭಾಗವತರ್ ದುರಂತ ಕಥೆ. ಹೌದು.. ತಮಿಳು ಚಿತ್ರರಂಗದ ಮೊಟ್ಟ ಮೊದಲ ಸೂಪರ್ ಸ್ಟಾರ್ ಅನಿಸಿಕೊಂಡಿದ್ದ ಎಂಕೆಟಿ ಭಾಗವತರ್, ನಟನೆಯ ಜೊತೆಗೆ ಒಳ್ಳೆಯ ಕಾರ್ನಾಟಿಕ್ ಗಾಯಕ ಕೂಡ ಹೌದು.
ಸ್ವತಂತ್ರ ಪೂರ್ವ ಭಾರತದಲ್ಲಿ, ತಮಿಳು ಚಿತ್ರರಂಗದ ಆರಂಭದ ದಿನಗಳಲ್ಲಿ ಸಾಲು ಸಾಲು ಬ್ಲಾಕ್ ಬಸ್ಟರ್ ಹಿಟ್ ಸಿನಿಮಾಗಳನ್ನ ನೀಡಿದ ಭಾಗವತರ್, ಯಶಸ್ಸಿನ ಉತ್ತುಂಗದಲ್ಲಿದ್ದರು. ತನ್ನ ವಿರುದ್ಧ ಲೇಖನ ಬರೆದ ಅನ್ನೋ ಕಾರಣಕ್ಕೆ ಫಿಲ್ಮ್ ಮ್ಯಾಗಜಿನ್ ಜರ್ನಲಿಸ್ಟ್ ಸಿ.ಎನ್. ಲಕ್ಷ್ಮೀಕಾಂತನ್ ಅನ್ನೋರ ಕೊಲೆಗೆ ಸುಪಾರಿ ನೀಡಿ, ಕೊಲೆಗಾರನ ಪಟ್ಟ ಕಟ್ಟಿಕೊಂಡು ಜೈಲು ಪಾಲಾಗ್ತಾರೆ. ದುರಂತ ಅಂದ್ರೆ ಆತ ಜೈಲಲ್ಲಿದ್ದಾಗ ಅದೇ ಜೈಲಿನ ಪಕ್ಕದಲ್ಲಿದ್ದ ಟೆಂಟ್‌ವೊಂದರಲ್ಲಿ ಬರೋಬ್ಬರಿ ಎರಡು ವರ್ಷಗಳ ಕಾಲ ಆತನದ್ದೇ ಸಿನಿಮಾ ಪ್ರದರ್ಶನ ಕಂಡಿದೆ.
ಇದೀಗ ಆ ಎಂಕೆಟಿ ಭಾಗವತರ್ ದುರಂತದ ಕಥೆ ಬೆಳ್ಳಿತೆರೆ ಬೆಳಗಲಿದ್ದು, 1950ರ ಕಾಲದ ಮದ್ರಾಸ್‌ನ ರೀ ಕ್ರಿಯೇಟ್ ಮಾಡಿ, ಬೃಹತ್ ಸೆಟ್ ಹಾಕಿ, ಸಿನಿಮಾನ ಸೆರೆ ಹಿಡಿಯಲಾಗ್ತಿದೆಯಂತೆ. ಒಟ್ಟಾರೆ ಭಾಗವತರ್ ಕಥೆ ಸಿನಿಮಾ ಕಥೆ ಆಗಿದೆ ಅಂದ್ರೆ ರೇಣುಕಾಸ್ವಾಮಿ ಕೊಲೆ ಪ್ರಕರಣ ಕೂಡ ಮುಂದೊಂದು ದಿನ ಬೆಳ್ಳಿಪರದೆ ಬೆಳಗುವುದರಲ್ಲಿ ಅಚ್ಚರಿಯಿಲ್ಲ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್