ಕನ್ನಡ ಕಿರುತೆರೆಯ ಸೀರಿಯಲ್ಗಳ ಪೈಪೋಟಿ ವಾರದಿಂದ ವಾರಕ್ಕೆ ಹೆಚ್ಚು ಕಡಿಮೆ ಆಗುತ್ತಲೇ ಇರುತ್ತದೆ. ಯಾವ ಧಾರಾವಾಹಿಗಳನ್ನು ವೀಕ್ಷಕರು ಎಷ್ಟು ಜನ ನೋಡುತ್ತಿದ್ದಾರೆ ಎಂದು ಟಿಆರ್ಪಿ ಮೂಲಕ ತಿಳಿಯಲಿದೆ. ಒಳ್ಳೆಯ ಕ್ವಾಲಿಟಿ ಕಂಟೆಂಟ್ ಕೊಟ್ಟರೇ ವೀಕ್ಷಕರು ಖಂಡಿತ ಕೈ ಬಿಡೋದಿಲ್ಲ ಅನ್ನೋದಕ್ಕೆ ಈ ಸೀರಿಯಲ್ ಸಾಕ್ಷಿಯಾಗಿದೆ.
ಹೌದು ಈಗ ಕಿರುತೆರೆ ಲೋಕದಲ್ಲಿ ಒಂದಿಷ್ಟು ಹೊಸ ಧಾರಾವಾಹಿವಾಗಳು ಈಗಾಗಲೇ ಜನಪ್ರಿಯತೆ ಪಡೆದಿರೋ ಧಾರಾವಾಹಿಗಳಿಗೆ ಸಾಕಷ್ಟು ಸ್ಪರ್ಧೆ ಕೊಡುತ್ತಿವೆ. ಇನ್ನು ಕೆಲ ಹೊಸ ಸ್ಟೋರಿಗಳು ಮುಂದಿನ ವಾರ ಬಿಡುಗಡೆ ಆಗೋದಕ್ಕೆ ಕಾಯ್ತಾ ಇವೆ. ಕೆಲ ಧಾರಾವಾಹಿಗಳು ಅಂತ್ಯ ಕಂಡಿವೆ. ಈ ನಡುವೆ ನಾವು ಇರೋದೇ ಹೀಗೆ ಅಂತ ವರ್ಷ ತುಂಬಿರೋ ಧಾರಾವಾಹಿಗಳು ಹಿಗ್ಗುತ್ತಿವೆ.
ಬ್ಯಾಕ್ ಟು ಬ್ಯಾಕ್ ಶ್ರಾವಣಿ ಸುಬ್ರಮಣ್ಯ ನಂಬರ್ ಒನ್ ಸ್ಥಾನ ಅಲಂಕರಿಸಿದೆ. 8.2 ರೇಟಿಂಗ್ ಪಡೆಯೋದರ ಮೂಲಕ ಘಟಾನುಘಟಿ ಧಾರಾವಾಹಿಗಳಿಗೆ ಟಕ್ಕರ್ ಕೊಡುತ್ತಿದೆ. ಎರಡನೇ ಸ್ಥಾನದಲ್ಲಿ ಲಕ್ಷ್ಮೀ ನಿವಾಸ 8, ಮೂರನೇ ಸ್ಥಾನದಲ್ಲಿ ನಾ ನಿನ್ನ ಬಿಡಲಾರೆ 7.8, ನಾಲ್ಕನೇ ಸ್ಥಾನದಲ್ಲಿ ಅಣ್ಣಯ್ಯ 7.2 ಐದನೇ ಸ್ಥಾನದಲ್ಲಿ ಅಮೃತಧಾರೆ 6.6, ಆರನೇ ಸ್ಥಾನದಲ್ಲಿ ಬ್ರಹ್ಮಗಂಟು 5.9, ಏಳನೇ ಸ್ಥಾನದಲ್ಲಿ ಲಕ್ಷ್ಮೀ ಬಾರಮ್ಮ 5.3, ಎಂಟನೇ ಸ್ಥಾನದಲ್ಲಿ ಭಾಗ್ಯಲಕ್ಷ್ಮೀ 5, ಒಂಭತ್ತನೇ ಸ್ಥಾನದಲ್ಲಿ ಪುಟ್ಟಕ್ಕನ ಮಕ್ಕಳು 4.7, ಹತ್ತನೇ ಸ್ಥಾನದಲ್ಲಿ ಆಸೆ 4.6 ಟಿಆರ್ಪಿ ಪಡೆದುಕೊಂಡಿವೆಯಾದರೂ ಮುಂದಿನ ಪೈಪೋಟಿಗೆ ಸಿದ್ಧತೆ ನಡೆಸಿವೆ.





