ಎಮರ್ಜೆನ್ಸಿ ಮೂವಿ ಚೆನ್ನಾಗಿಲ್ಲ.. ಕಂಗನಾ ವಿರುದ್ಧ ರಮ್ಯಾ ಗುಡುಗು..!

ಕಂಗನಾ ಎಮರ್ಜೆನ್ಸಿ ಚಿತ್ರವನ್ನ ನಾನು ನೋಡಿಲ್ಲ.. ಜನ ಕೂಡ ನೋಡಿಲ್ಲ..!

Befunky collage 2025 03 07t151419.897

ಇಂಡಿಯಾದ ಐಕಾನಿಕ್ ಲೀಡರ್ ಇಂದಿರಾ ಗಾಂಧಿ ಕುರಿತು ಬಾಲಿವುಡ್ ಕ್ವೀನ್ ಕಂಗನಾ ರಣಾವತ್ ಸಿನಿಮಾ ಮಾಡಿದ್ರು. ಸ್ವತಃ ಕಂಗನಾ ಅವರೇ ನಟಿಸೋದ್ರ ಜೊತೆಗೆ ಅದಕ್ಕೆ ಆ್ಯಕ್ಷನ್ ಕಟ್ ಕೂಡ ಹೇಳಿದ್ರು. ತಲೈವಿ ಸಿನಿಮಾ ಕ್ಲಿಕ್ ಆದ ಹಿನ್ನೆಲೆ ಇಂದಿರಾ ಗಾಂಧಿ ಬಯೋಪಿಕ್ ಕೂಡ ಹಿಟ್ ಆಗೋ ಭರವಸೆಯಲ್ಲಿದ್ರು. ಆದ್ರೆ ಸಿನಿಮಾ ಅಂದುಕೊಂಡಂತೆ ಆಗಲಿಲ್ಲ. ಇಂದಿರಾ ಗಾಂಧಿ ಆಗಿ ಬಣ್ಣ ಹಚ್ಚಿದ್ದ ಕಂಗನಾ ಕರಿಯರ್ ನ ಒನ್ ಆಫ್ ದಿ ಫ್ಲಾಪ್ ಮೂವಿ ಆಯ್ತು. ಈ ಕುರಿತು ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಮೋಹಕತಾರೆ ರಮ್ಯಾ ಮಾತನಾಡಿದ್ದಾರೆ.

ಕಂಗನಾ ರಣಾವತ್ ಎಮರ್ಜೆನ್ಸಿ ಒಂದು ಕೆಟ್ಟ ಸಿನಿಮಾ ಎಂದಿರೋ ರಮ್ಯಾ, ನಾನು ಅದನ್ನ ನೋಡಲೇ ಇಲ್ಲ. ಜನಕ್ಕೂ ಅದು ಇಷ್ಟವಾಗಿಲ್ಲ ಹಾಗಾಗಿ ಜನ ಕೂಡ ಸಿನಿಮಾನ ನೋಡಲಿಲ್ಲ ಎಂದಿದ್ದಾರೆ. ರಾಜಕೀಯದ ಕಥೆ ಆದ್ದರಿಂದ ಜನ ಇಷ್ಟ ಪಡಲ್ಲ ಅಂತ ತಮ್ಮ ಅಭಿಪ್ರಾಯ ಹೊರಹಾಕಿದ್ದಾರೆ. ಕಂಗನಾ ತುಂಬಾ ಸಕ್ಸಸ್ ಕಂಡಿದ್ದಾರೆ. ಅವರ ಮಣಿಕರ್ಣಿಕಾ ಸಿನಿಮಾ ತುಂಬಾ ಚೆನ್ನಾಗಿ ಮಾಡಿದ್ದರು. ಅದೇ ಕಾರಣಕ್ಕೆ ಜನ ಕೂಡ ನೋಡಿದ್ದರಷ್ಟೇ ಎಂದಿದ್ದಾರೆ.

ನಟೀಮಣಿಯರ ಸಂಭಾವನೆ, ರಶ್ಮಿಕಾ ಟ್ರೋಲ್, ಸಿನಿಮಾಗೆ ಕಂಬ್ಯಾಕ್ ಮಾಡೋದು, ಓಟಿಟಿಯಲ್ಲಿ ನಟಿಸೋದು, ಮದ್ವೆ ಹೀಗೆ ಹತ್ತಾರು ವಿಷಯಗಳ ಬಗ್ಗೆ ಫಿಲ್ಮ್ ಫೆಸ್ಟ್ ಗೆ ತೆರಳಿದ್ದ ರಮ್ಯಾ ಮಾತನಾಡಿದ್ದಾರೆ. ಸದ್ಯ ರಮ್ಯಾ ಮಾತನಾಡಿರೋ ಒಂದೊಂದು ಹೇಳಿಕೆಯೂ ಸಹ ಸಖತ್ ವೈರಲ್ ಆಗ್ತಿವೆ. ಸಿನಿಮಾಗಳ ಬಗ್ಗೆ ವಿಮರ್ಶೆ ಮಾಡುವ ರಮ್ಯಾ ಮೇಡಂ ಬೇಗ ಸಿನಿಮಾ ಮಾಡಲಿ. ಅವರ ಸಿನಿಮಾಗಳನ್ನ ನಾವೆಲ್ಲಾ ವಿಮರ್ಶಿಸುವ ಹಾಗೆ ಆಗಲಿ.

Exit mobile version