ಭಾರತೀಯ ಚಿತ್ರರಂಗದ ಬಿಗ್ಗೆಸ್ಟ್ ಬ್ಲಾಕ್‌ಬಸ್ಟರ್ ಧುರಂಧರ್.. ಮೂರು ಸಾವಿರಕ್ಕೂ ಅಧಿಕ ಕೋಟಿ ಲೂಟಿ ಮಾಡಿ, ವಿಶ್ವ ಸಿನಿದುನಿಯಾದ ಹುಬ್ಬೇರಿಸಿತ್ತು. ಅಂತಹ ಸಿನಿಮಾ ಆಸ್ಕರ್ ಅಂಗಳದಲ್ಲಿ ಹೀನಾಯವಾಗಿ ಸೋಲುಂಡಿದೆ. ಅರೇ ವಿಶ್ವದ ಮೂಲೆ ಮೂಲೆಯಲ್ಲಿ ಭರ್ಜರಿಯಾಗಿ ಸೌಂಡ್ ಮಾಡಿದ ಈ ಎವರ್‌ಗ್ರೀನ್ ಸಿನಿಮಾಗೆ ಹಿನ್ನಡೆ ಆಗಿದ್ದಾದ್ರೂ ಯಾಕೆ..? ಆ ಕ್ಯೂರಿಯಾಸಿಟಿಗೆ ಉತ್ತರ ಇಲ್ಲಿದೆ.
- ಧುರಂಧರ್‌ಗೆ ಮರ್ಮಾಘಾತ.. 3000Cr ಚಿತ್ರಕ್ಕೆ 4 ವೋಟ್
- ಚಿತ್ರ ಭಾರತೀಯ ಸಂಸ್ಕೃತಿಯನ್ನ ಎತ್ತಿ ಹಿಡಿದಿಲ್ಲ ಎಂದ ಜ್ಯೂರಿ
- 14 ಮಂದಿಯಲ್ಲಿ ಧುರಂಧರ್ ದಿಲ್ ದೋಚಿದ್ದು ನಾಲ್ವರನ್ನಷ್ಟೇ
- ಆಸ್ಕರ್ನಲ್ಲಿ ಬಿಗ್ಗೆಸ್ಟ್ ಗ್ಲೋಬಲ್ ಬ್ಲಾಕ್ಬಸ್ಟರ್ಗೆ ಬಿಗ್ ಹಿನ್ನಡೆ
2025ರ ಡಿಸೆಂಬರ್‌ನಲ್ಲಿ ಮೊದಲ ಭಾಗ.. 2026ರ ಮಾರ್ಚ್‌ನಲ್ಲಿ ಎರಡನೇ ಭಾಗ.. ಹೀಗೆ ಬ್ಯಾಕ್ ಟು ಬ್ಯಾಕ್ ತೆರೆಕಂಡು ಭಾರತೀಯರ ಜೊತೆ ವಿಶ್ವದಾದ್ಯಂತ ಎಲ್ಲರಿಂದ ಮೆಚ್ಚುಗೆಗೆ ಪಾತ್ರವಾಯ್ತು ಧುರಂಧರ್. ಎರಡೂ ಸಿನಿಮಾಗಳಿಂದ ಬಾಕ್ಸ್ ಆಫೀಸ್‌ನಲ್ಲಿ ಬರೋಬ್ಬರಿ 3 ಸಾವಿರಕ್ಕೂ ಅಧಿಕ ಕೋಟಿ ಕಮಾಯಿ ಕೂಡ ಮಾಡ್ತು. ಆದಿತ್ಯ ಧಾರ್ ನಿರ್ದೇಶನದ ಈ ಸಿನಿಮಾದಲ್ಲಿ ರಣ್ವೀರ್ ಸಿಂಗ್ ಲೀಡ್‌ನಲ್ಲಿ ನಟಿಸಿದ್ರು.
ಪಾಕಿಸ್ತಾನ ಸೇರಿದಂತೆ ಈ ಸಿನಿಮಾನ ಅರಬ್ ದೇಶಗಳಲ್ಲಿ ಬ್ಯಾನ್ ಕೂಡ ಮಾಡಿದ್ರು. ಯಾಕಂದ್ರೆ ಇದು ಇಂಡಿಯಾದ ಸ್ಪೈ ಏಜೆಂಟ್ ಒಬ್ಬನ ಕುರಿತ ಇಂಡೋ-ಪಾಕ್ ಕದನದ ದೇಶಪ್ರೇಮದ ಕುರಿತ ಸಿನಿಮಾ ಆಗಿತ್ತು. ಸಿಕ್ಕಾಪಟ್ಟೆ ರಾ & ರಗಡ್ ಆಗಿದ್ದ ಈ ಸಿನಿಮಾ, ರಣ್ವೀರ್ ಸಿಂಗ್ ಸಿನಿ ಕರಿಯರ್ ಗ್ರಾಫ್‌ನ ಬದಲಿಸಿಬಿಟ್ಟಿತ್ತು. ಇಂತಹ ಸಿನಿಮಾ ಆಸ್ಕರ್‌ಗೆ ಹೋಗಬೇಕು, ಆಸ್ಕರ್ ಗೆಲ್ಲಬೇಕು ಅನ್ನೋದು ಅದೆಷ್ಟೋ ಮಂದಿ ಚಿತ್ರಪ್ರೇಮಿಗಳ ಆಶಯ ಆಗಿತ್ತು.
ಅದ್ರಂತೆ ಆಸ್ಕರ್ ಅಕಾಡೆಮಿ ವೇದಿಕೆಗೆ ಧುರಂಧರ್ ಎಂಟ್ರಿ ಕೂಡ ನೀಡಿತ್ತು. ಆದ್ರೆ ಜ್ಯೂರಿ ಕಮಿಟಿ ಈ ಸಿನಿಮಾನ ಮೊದಲ ರೌಂಡ್‌ನಲ್ಲೇ ತಿರಸ್ಕರಿಸಿದೆ. ಇದು ಆಸ್ಕರ್ ಅಂಗಳಕ್ಕೆ ಬರುವ ಸಿನಿಮಾನೇ ಅಲ್ಲ ಅಂದಿದ್ದಾರೆ ಜೂರಿಗಳು. ಅಷ್ಟೇ ಅಲ್ಲ.. ಭಾರತೀಯ ಸಂಸ್ಕೃತಿಯನ್ನ ಪ್ರತಿನಿಧಿಸುವ ಕಂಟೆಂಟ್ ಇದರಲ್ಲಿ ಇಲ್ಲವೇ ಇಲ್ಲ ಎಂದಿದ್ದಾರೆ. ಅಚ್ಚರಿ ಅಂದ್ರೆ ಮೂರು ಸಾವಿರ ಕೋಟಿ ಗಳಿಸಿದ ಸಿನಿಮಾಗೆ ಬಂದ ವೋಟ್ಸ್ ನಾಲ್ಕೇ ನಾಲ್ಕು.
ಹೌದು.. 14 ಮಂದಿ ಇರೋ ಜ್ಯೂರಿ ಕಮಿಟಿಯಲ್ಲಿ ಧುರಂಧರ್ ಇಷ್ಟ ಆಗಿರೋದು ನಾಲ್ಕೇ ಮಂದಿ ಜ್ಯೂರಿಗಳಿಗೆ. ಉಳಿದ ಹತ್ತು ಮಂದಿ ನಮ್ಮ ಇಂಡಿಯಾದ ಈ ಗ್ಲೋಬಲ್ ಬ್ಲಾಕ್‌ಬಸ್ಟರ್ ಧುರಂಧರ್‌ನ ರಿಜೆಕ್ಟ್ ಮಾಡಿದ್ದಾರೆ. ಈ ಸುದ್ದಿ ಹೊರಬೀಳುತ್ತಿದ್ದಂತೆ ರಣ್ವೀರ್ ಸಿಂಗ್ ಅಭಿಮಾನಿಗಳು ಕಿಡಿಕಾರುತ್ತಿದ್ದಾರೆ. ಇಷ್ಟಕ್ಕೂ ಜ್ಯೂರಿಗಳಿಗೆ ಇನ್ನೆಂಥಾ ಕಂಟೆಂಟ್ ಬೇಕಂತೆ..? ಅವ್ರ ಮಾನದಂಡಗಳಾದ್ರೂ ಏನೇನು ಅಂತೆಲ್ಲಾ ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಇದರ ಮಧ್ಯೆ ಮರಾಠಿಯ ಗೊಂಡಾಲ್ ಸಿನಿಮಾ 2027ರ ಆಸ್ಕರ್ ಎಂಟ್ರಿ ಪಡೆದ ಚಿತ್ರವಾಗಿ ಸದ್ದು ಮಾಡ್ತಿದೆ. ಆದ್ರೆ ಧುರಂಧರ್‌ಗೆ ಈ ಪಾಟಿ ಹಿನ್ನಡೆ ಆಗಿರೋದು ಸಿನಿದುನಿಯಾದಲ್ಲಿ ಸಿಕ್ಕಾಪಟ್ಟೆ ಚರ್ಚೆಗೆ ಕಾರಣವಾಗಿದೆ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್
