ದೇವರಿಗಷ್ಟೇ ಹಬ್ಬ ಮಾಡಲ್ಲ.. ಡೆವಿಲ್‌ಗೂ ಹಬ್ಬ ಮಾಡ್ತಾರೆ.. ಮಾಡ್ತಿದ್ದಾರೆ ಡಿಬಾಸ್ ದರ್ಶನ್ ಫ್ಯಾನ್ಸ್. ಯೆಸ್.. ಡಿಸೆಂಬರ್ 11ಕ್ಕೆ ರಿಲೀಸ್ ಆಗ್ತಿರೋ ಮೋಸ್ಟ್ ಎಕ್ಸ್‌ಪೆಕ್ಟೆಡ್ ಡೆವಿಲ್ ಸಿನಿಮಾದ ಸೆಲೆಬ್ರೇಷನ್ ರಾಜ್ಯಾದ್ಯಂತ ಸಖತ್ ಜೋರಿದೆ. ಎಲ್ಲೆಲ್ಲೂ ಡೆವಿಲ್ ಹವಾ ಎಬ್ಬಿಸಿದ್ದು, ಆನೇಕಲ್‌ನಲ್ಲಿ ಸುಮಾರು 20ಕ್ಕೂ ಅಧಿಕ ಕುರಿಗಳನ್ನ ಬಲಿ ನೀಡಿ, ಗ್ರಾಮದೇವತೆಗೆ ವಿಶೇಷ ಪೂಜೆ ಸಲ್ಲಿಸಲಾಗಿದೆ. ಇತ್ತ ಲೇಡಿ ಫ್ಯಾನ್ಸ್ ಹಾಗೂ ನಾಯಕನಟಿ ರಚನಾ ರೈ ಬಂಡೆ ಮಹಾಕಾಳಿ ಆಲಯದಲ್ಲಿ ಸಿನಿಮಾ ಸಕ್ಸಸ್‌ಗಾಗಿ ವಿಜಯದುರ್ಗಾ ಹೋಮ, ಹವನ ಮಾಡಿಸಿದ್ದಾರೆ. ರಾಜ್ಯದ ಮೂಲೆ ಮೂಲೆಗಳಲ್ಲಿ ಆಗ್ತಿರೋ ಸೆಲೆಬ್ರೇಷನ್‌ಗಳ ಎಕ್ಸ್‌ಕ್ಲೂಸಿವ್ ರಿಪೋರ್ಟ್ ಇಲ್ಲಿದೆ..
- ಎಲ್ಲೆಲ್ಲೂ ಡೆವಿಲ್ ಹವಾ.. ರಾಜ್ಯಾದ್ಯಂತ ಫ್ಯಾನ್ಸ್ ಸೆಲೆಬ್ರೇಷನ್
- ಡೆವಿಲ್ ಸಕ್ಸಸ್‌ಗೆ 20 ಕುರಿ ಬಲಿ.. ವಿಜಯದುರ್ಗಾ ಹೋಮ
- ಅತ್ತಿಬೆಲೆಯಲ್ಲಿ ಡೆವಿಲ್ ಹಬ್ಬ.. 2000 ಮಂದಿಗೆ ಬಾಡೂಟ..!
- ಲೇಡಿ ಫ್ಯಾನ್ಸ್ ವಿಶೇಷ ಹೋಮ.. ಡೆವಿಲ್ ಕ್ವೀನ್ ರಚ್ಚು ಸಾಥ್
ದರ್ಶನ್ ಬರೀ ನಟ ಅಷ್ಟೇ ಅಲ್ಲ. ನಮ್ಮ ಕನ್ನಡ ಚಿತ್ರರಂಗದ ಆಸ್ತಿ. ಝೀರೋದಿಂದ ಹೀರೋ ಆಗೋಕೆ ಸಾಕಷ್ಟು ಕಷ್ಟ ಪಟ್ಟಿದ್ದಾರೆ. ದೊಡ್ಡದೊಂದು ಸಾಮ್ರಾಜ್ಯ ಕಟ್ಟಿ, ಬಾಕ್ಸ್ ಆಫೀಸ್ ಸುಲ್ತಾನನಾಗಿ, ಅಭಿಮಾನಿಗಳ ಹೃದಯ ಸಿಂಹಾಸನದ ಚಕ್ರವರ್ತಿಯಾಗಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ರಾರಾಜಿಸ್ತಿದ್ದಾರೆ. ಕೊಲೆ ಕೇಸ್‌ನಲ್ಲಿ ಜೈಲೊಳಗೆ ಇದ್ದರೂ ಸಹ ಡೆವಿಲ್ ಅಬ್ಬರ, ಆರ್ಭಟ ನಿರೀಕ್ಷೆಗೂ ಮೀರಿದ ರೇಂಜ್‌ಗಿದೆ.
ಯೆಸ್.. ನಿನ್ನೆಯಷ್ಟೇ ಡೆವಿಲ್ ಟ್ರೈಲರ್ ಲಾಂಚ್ ಆಯ್ತು. ದಚ್ಚು ಕರಿಯರ್‌ನಲ್ಲೇ ಇಲ್ಲಿಯವರೆಗೆ ಯಾರೂ ತೋರಿಸಿರದಷ್ಟು ರಿಚ್, ಲ್ಯಾವಿಶ್ ಹಾಗೂ ಸ್ಟೈಲಿಶ್ ಆಗಿ ದರ್ಶನ್‌ನ ತೋರಿಸಲಾಗಿದೆ. ಮೇಕಿಂಗ್ ಜೊತೆ ಪಾತ್ರಗಳು, ಡೈಲಾಗ್ಸ್, ಲೊಕೇಷನ್ಸ್ ಎಲ್ಲವೂ ಬೊಂಬಾಟ್ ಅನಿಸಿವೆ. ಟ್ರೈಲರ್‌ನಲ್ಲಿರೋ ಧಮ್ಮು, ರಿಧಮ್‌ಗೆ ಡಿ ಬಾಸ್ ಡೈಹಾರ್ಡ್ ಫ್ಯಾನ್ಸ್ ಸಖತ್ ಫಿದಾ ಆಗಿದ್ದಾರೆ. ಅದೇ ಕಾರಣಕ್ಕೆ ರಾಜ್ಯದ ಮೂಲೆ ಮೂಲೆಗಳಲ್ಲಿ ನೀವು ಜೈಲಲ್ಲಿದ್ರೆ ಏನಂತೆ ಬಾಸ್, ನಾವು ಡೆವಿಲ್‌ನ ತಲೆ ಮೇಲೆ ಹೊತ್ತು ಮೆರೆಸುತ್ತೇವೆ ಅಂತ ಸೆಲೆಬ್ರೇಷನ್‌ಗೆ ಇಳಿದಿದ್ದಾರೆ.
ಡೆವಿಲ್ ರಿಲೀಸ್ ಡಿಸೆಂಬರ್ 11ಕ್ಕೆ. ಆದ್ರೆ ಡಿಸೆಂಬರ್ 5ರಿಂದಲೇ ಸಂಭ್ರಮಾಚರಣೆ ಎಲ್ಲೆಡೆ ಶುರುವಾಗಿದೆ. ಎಲ್ಲೆಲ್ಲೂ ಡೆವಿಲ್ ಹವಾ ಜೋರಿದೆ. ಅದ್ರಲ್ಲೂ ಆನೇಕಲ್‌ನ ಅತ್ತಿಬೆಲೆಯಲ್ಲಿ ಡೆವಿಲ್ ಸಿನಿಮಾದ ಸಕ್ಸಸ್‌ಗಾಗಿ ಫ್ಯಾನ್ಸ್ ಮಾಡಿರೋ ಸೆಲೆಬ್ರೇಷನ್ ನೋಡಿದ್ರೆ ಹುಬ್ಬೇರಿಸುತ್ತೀರಿ. ಹೌದು.. ಅತ್ತಿಬೆಲೆಯ ಪಟಾಲಮ್ಮ ಟೆಂಪಲ್‌ನಲ್ಲಿ ಪಟಾಲಮ್ಮ ದೇವಿಗೆ ದರ್ಶನ್ ಫೋಟೋ ಇಟ್ಟು ವಿಶೇಷ ಪೂಜೆ ಸಲ್ಲಿಸಲಾಗಿದೆ. 20ಕ್ಕೂ ಅಧಿಕ ಕುರಿಗಳನ್ನ ಕಡಿದು, ಬಾಡೂಟ ಹಾಕಿಸಿದ್ದಾರೆ ಅಭಿಮಾನಿಗಳು. ಸುಮಾರು ಎರಡು ಸಾವಿರಕ್ಕೂ ಅಧಿಕ ಮಂದಿ ದರ್ಶನ್ ಹಾಗೂ ಡೆವಿಲ್ ಚಿತ್ರದ ಹೆಸರಲ್ಲಿ ಬಾಡೂಟ ಸವಿದಿದ್ದಾರೆ.
ಈ ಹಿಂದೆ ಕಾಟೇರ, ಕ್ರಾಂತಿ ಸಿನಿಮಾಗಳ ಸಮಯದಲ್ಲೂ ಇದೇ ರೀತಿ ಕುರಿಗಳನ್ನ ಕಡಿದು ಬಾಡೂಟ ಹಾಕಿಸಲಾಗಿತ್ತಂತೆ. ಅತ್ತಿಬೆಲೆಯ ಫೇಮಸ್ ಥಿಯೇಟರ್‌ಗಳಲ್ಲಿ ಒಂದಾದ ಗೌರಿಶಂಕರ್ ಚಿತ್ರಮಂದಿರದಲ್ಲಿ ಡೆವಿಲ್ ಟ್ರೈಲರ್ ಪ್ರದರ್ಶನ ಕೂಡ ಮಾಡಲಾಯಿತು. ಫ್ಯಾನ್ಸ್ ಪಟಾಕಿ ಸಿಡಿಸಿ, ದರ್ಶನ್ ಸಾಂಗ್ಸ್ ಗೆ ಡ್ಯಾನ್ಸ್ ಮಾಡ್ತಾ ಸಂಭ್ರಮಿಸಿದ್ರು. ನಾಳೆಯಿಂದ 3 ದಿನಗಳ ಕಾಲ.. ಸರ್ಕಾರಿ ಆಸ್ಪತ್ರೆಗಳ ಬಡ ರೋಗಿಗಳಿಗೆ ಹಣ್ಣು, ಹಂಪಲು, ಹೆಲ್ತ್ ಕಿಟ್ ನೀಡಲಾಗುತ್ತಂತೆ. ಡೆವಿಲ್ ಸಿನಿಮಾ ರಿಲೀಸ್ ದಿನ ಸಾಲುಮರದ ತಿಮ್ಮಕ್ಕನ ಹೆಸರಲ್ಲಿ ಪ್ರೇಕ್ಷಕರಿಗೆ ಸಸಿಗಳ ವಿತರಣೆ ಕೂಡ ಮಾಡಲಾಗುತ್ತೆ. ದರ್ಶನ್‌ರ 50 ಅಡಿ ಬೃಹತ್ ಕಟೌಟ್ ಹಾಕಿ ರಿಲೀಸ್ ದಿನ ನೆಕ್ಸ್ಟ್ ಲೆವೆಲ್ ಸೆಲೆಬ್ರೇಷನ್‌ಗೆ ಯೋಜನೆ ರೂಪಿಸಿದ್ದಾರೆ.
ಇದಲ್ಲದೆ, ದರ್ಶನ್ ಮಹಿಳಾ ಅಭಿಮಾನಿಗಹಳ ಬಳಗವೊಂದು ಬೆಂಗಳೂರಿನಲ್ಲಿರೋ ಪ್ರಖ್ಯಾತ ಬಂಡೆ ಮಹಾಕಾಳಿ ಆಲಯದಲ್ಲಿ ಡೆವಿಲ್ ಸಿನಿಮಾದ ಸಕ್ಸಸ್‌ಗಾಗಿ ವಿಜಯ ದುರ್ಗಾ ಹೋಮ ಮಾಡಿಸಿದ್ದಾರೆ. ಅಷ್ಟೇ ಅಲ್ಲ, ದರ್ಶನ್ ಬೇಗ ಹೊರಗೆ ಬರುವಂತಾಗಲಿ ಅಂತ ದೊಡ್ಡ ಮಟ್ಟದಲ್ಲಿ ದೇವಿಯ ಮೊರೆ ಹೋಗಿದ್ದಾರೆ. ದರ್ಶನ್ ಅಭಿಮಾನಿಗಳ ಈ ಮಹಾ ಕಾರ್ಯಕ್ಕೆ ಡೆವಿಲ್ ಕ್ವೀನ್ ರಚನಾ ರೈ ಕೂಡ ಸಾಥ್ ನೀಡಿದ್ದು, ದೇವರ ಮೇಲೆ ಹಾಕಿದ ನೀರನ್ನ ಸೇವಿಸಿ, ಹರಕೆ ಹೊತ್ತಿದ್ದಾರೆ. ಹೋಮ ಕುಂಡದ ಸುತ್ತ ಪ್ರದಕ್ಷಿಣೆ ಹಾಕಿ, ಬಂಡೆ ಮಹಾಕಾಳಿಗೆ ಒಳಿತು ಮಾಡಲು ಮನವಿ ಮಾಡಿದ್ದಾರೆ.
ಇದೇ ಸಂದರ್ಭದಲ್ಲಿ ಸಾವಿರಾರು ಮಂದಿಗೆ ಅಲ್ಲಿ ಅನ್ನದಾನ ಮಾಡಲಾಯಿತು. ಸ್ವತಃ ಡೆವಿಲ್ ಚಿತ್ರದ ನಾಯಕನಟಿ ರಚನಾ ರೈ ಒಂದಷ್ಟು ಮಂದಿಗೆ ಕೈಯ್ಯಾರೆ ಅಡುಗೆ ಬಡಿಸಿದ್ದು ವಿಶೇಷ. ಇದು ನಿಜಕ್ಕೂ ದರ್ಶನ್ ಡೆವಿಲ್ ಚಿತ್ರತಂಡ ಹಾಗೂ ಡೈ ಹಾರ್ಡ್ ಫ್ಯಾನ್ಸ್‌ಗೆ ಅವರ ಮೇಲಿರೋ ಪ್ರೀತಿ, ಗೌರವ ಹಾಗೂ ಅಭಿಮಾನದ ಪ್ರತೀಕವಾಗಿದೆ.
ಇದು ಜಸ್ಟ್ ಸ್ಯಾಂಪಲ್ ಅಷ್ಟೇ.. ಪಿಕ್ಚರ್ ಅಭಿ ಬಾಕಿ ಹೈ. ಯೆಸ್.. ಡಿಸೆಂಬರ್ 11ಕ್ಕೆ ಮುಂಜಾನೆ 6.30ಕ್ಕೆ ಫ್ಯಾನ್ಸ್ ಶೋಗಳು ಶುರುವಾಗಲಿದ್ದು, ಇಂದಿನಿಂದಲೇ ಆನ್‌ಲೈನ್ ಟಿಕೆಟ್ ಬುಕ್ಕಿಂಗ್ ಓಪನ್ ಮಾಡಲಾಗಿದೆ. ಬುಕ್ಕಿಂಗ್ಸ್ ಬಿಟ್ಟ ಒಂದೆರಡು ತಾಸುಗಳಲ್ಲೇ ಬಹುತೇಕ ಎಲ್ಲಾ ಶೋಗಳ ಟಿಕೆಟ್ಸ್ ಸೋಲ್ಡ್‌ಔಟ್ ಆಗಿರೋದು ಮತ್ತೊಂದು ಹೈಲೈಟ್.
ಇದಲ್ಲದೆ ರಾಜ್ಯದ ಬಹುತೇಕ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ದರ್ಶನ್ ಅಭಿಮಾನಿ ಸಂಘಗಳಿಂದ ಥಿಯೇಟರ್‌ಗಳ ಬಳಿ ಕಟೌಟ್, ಫ್ಲೆಕ್ಸ್‌ಗೆ ಹಾಲಿನ ಅಭಿಷೇಕ ಮಾಡಿ, ಪಟಾಕಿ ಸಿಡಿಸಿ, ಅನ್ನದಾನ, ರಕ್ತದಾನ ಎಲ್ಲಾ ಮಾಡ್ತಿದ್ದಾರೆ. ರಿಲೀಸ್ ದಿನ ಅದ್ರ ಸಂಭ್ರಮ ಮುಗಿಲು ಮುಟ್ಟಲಿದ್ದು, ಸದ್ಯ ರಾಜ್ಯದ ಮೂಲೆ ಮೂಲೆಗಳಲ್ಲಿ ನಡೆಯುತ್ತಿರೋ ಸೆಲೆಬ್ರೇಷನ್ ವಿಡಿಯೋಸ್ ಡೆವಿಲ್ ಸಿನಿಮಾದ ಜೋಶ್ ಹೆಚ್ಚಿಸ್ತಿದೆ. ಪ್ರಕಾಶ್ ವೀರ್‌ಗೆ ಹಾಕಿರೋ ಬಂಡವಾಳ ಎರಡೇ ದಿನದಲ್ಲಿ ಬಂದು, ಬಾಕ್ಸ್ ಆಫೀಸ್‌ನಲ್ಲಿ ದೊಡ್ಡ ಮೊತ್ತದ ಹಣ ಕಲೆಹಾಕುವ ನಿರೀಕ್ಷೆಯಿದೆ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್
