ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಜೈಲು ಪಾಲಾಗಿರೋ ನಟ ದರ್ಶನ್, ನ್ಯಾಯಾಧೀಶರ ಬಳಿ ಒಂದು ತೊಟ್ಟು ವಿಷ ಕೊಟ್ಟುಬಿಡಿ ಅಂತ ಜಗನ್ನಾಟಕ ಆಡಿದ್ದಾರಂತೆ. ರಾಜಾತಿಥ್ಯಕ್ಕೆ ಸುಪ್ರೀಂ ಬ್ರೇಕ್ ಹಾಕಿದ್ದು, ತಾನೊಬ್ಬ ಸೂಪರ್ ಸ್ಟಾರ್ ಅನ್ನೋದನ್ನ ಕೂಡ ಮರೆಯಬೇಕು ಅನ್ನೋ ಸೂಚನೆ ನೀಡಿದೆ. ಒಂದ್ಕಡೆ ದಚ್ಚು ಆಲಾಪ.. ಮತ್ತೊಂದ್ಕಡೆ ಪತ್ನಿ ವಿಜಯಲಕ್ಷ್ಮೀ ಮೋಜು-ಮಸ್ತಿ. ಇವುಗಳ ಜೊತೆ ದರ್ಶನ್‌ಗಾಗಿ ಫೀನಿಕ್ಸ್ ಸಿನಿಮಾ ಮಾಡಿಕೊಂಡಿದ್ದ ಓಂ ಪ್ರಕಾಶ್ ರಾವ್ ಹೇಳಿದ್ದೇನು ಅನ್ನೋದ್ರ ಕಂಪ್ಲೀಟ್ ಕಹಾನಿ ಇಲ್ಲಿದೆ, ನೋಡಿ.
- ಒಂದು ತೊಟ್ಟು ವಿಷ ಕೊಡಿ ಸ್ವಾಮಿ.. ಅಂಗಲಾಚಿದ ದರ್ಶನ್
- ಜೈಲಲ್ಲಿ ಕೊಳಕು ಬಟ್ಟೆಯಲ್ಲಿ ದಚ್ಚು.. ಮೋಜು-ಮಸ್ತಿಯಲ್ಲಿ ಪತ್ನಿ
- ದಚ್ಚುಗೆ ಕ್ಯಾರೆಕ್ಟರ್ ಸರ್ಟಿಫಿಕೇಟ್.. ಪುಷ್ಪವತಿ ಶೇಕಿಂಗ್ ಹೇಳಿಕೆ
- ಮಾಧ್ಯಮಗಳನ್ನ ಪರೋಕ್ಷವಾಗಿ ಪ್ರಶ್ನಿಸಿದ ನಿಮಿಕಾ ರತ್ನಾಕರ್..!!
ಯಾರು ಬಿಟ್ರೂ ಕರ್ಮ ಬಿಡಲ್ಲ ಅನ್ನೋ ಮಾತಿದೆ. ಅಧಿಕಾರ, ದುಡ್ಡು, ದರ್ಪ ಎಲ್ಲಾ ಕಡೆ ನಡೆಯಲ್ಲ ಅನ್ನೋದಕ್ಕೆ ನಟ ದರ್ಶನ್ ಜೈಲುಪಾಲಾಗಿರೋದೇ ಜ್ವಲಂತ ನಿದರ್ಶನ. ಹೌದು.. ಎಷ್ಟೇ ದೊಡ್ಡ ಸ್ಟಾರ್ ಆದ್ರೂ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಒಬ್ಬ ಸಾಮಾನ್ಯ ಕೈದಿಯಂತೆ ಕೈಕಟ್ಟಿ, ಬಾಯ್ ಮುಚ್ಚಿ, ಪರಪ್ಪನ ಅಗ್ರಹಾರದಲ್ಲಿ ಜೈಲೂಟ ಸವಿಯುವಂತಾಗಿದೆ. ಸುಪ್ರೀಂ ಕೋರ್ಟ್ ಬೇಲ್ ಮಾತ್ರ ಕ್ಯಾನ್ಸಲ್ ಮಾಡಿಲ್ಲ. ದಚ್ಚುಗೆ ನೀಡಿದ್ದ ಸ್ಟಾರ್ ಟ್ರೀಟ್‌ಮೆಂಟ್‌ಗೂ ಬ್ರೇಕ್ ಹಾಕಿದೆ.
ದರ್ಶನ್ ತಾನೊಬ್ಬ ಸ್ಟಾರ್ ಅನ್ನೋದೇ ಮರೆಯಬೇಕು. ಎಲ್ಲರಿಗೂ ಯಾವ ರೀತಿ ಟ್ರೀಟ್ ಮಾಡ್ತೀರೋ ಆತನನ್ನೂ ಅದೇ ರೀತಿ ಟ್ರೀಟ್ ಮಾಡಿ ಅಂತ ಜೈಲಾಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದೆ ಸುಪ್ರೀಂ. ಆ ಹಿನ್ನೆಲೆಯಲ್ಲಿ ಮನೆಯೂಟ, ಬೆಡ್ಡು, ಬ್ಲ್ಯಾಂಕೆಟ್ ಕೂಡ ನೀಡಲು ನ್ಯಾಯಾಲಯ ಒಪ್ಪುತ್ತಿಲ್ಲ. ಈ ಹಿಂದೆ ಬಳ್ಳಾರಿ ಜೈಲಿನಲ್ಲಿ ಬೆನ್ನು ನೋವು ಅಂತ ನಾಟಕ ಆಡಿದ್ದ ದರ್ಶನ್, ಹೊರಗೆ ಬಂದು ಜಿಂಕೆಮರಿ ತರ ಓಡಾಡ್ಕೊಂಡಿದ್ದಿದ್ದು ಕೋರ್ಟ್ ಗಮನಕ್ಕೆ ಬಂದಿದೆ. ಹಾಗಾಗಿ ಏನೇ ರೀಸನ್ ಕೊಟ್ರೂ ಕೋರ್ಟ್ ಮಾತ್ರ ದಚ್ಚು ಮಾತಿಗೆ ಕ್ಯಾರೆ ಅಂತಿಲ್ಲ.
ಬ್ಯಾರಕ್‌ನಿಂದ ಹೊರಗೆ ಬರಲು ಬಿಡ್ತಿಲ್ಲ. ಒಂದೇ ಕಡೆ ಇದ್ದು ಬಿಸಿಲಿನ ಮುಖ ಕೂಡ ನೋಡಿಲ್ಲ. ಬಟ್ಟೆ ವಾಸನೆ ಬರ್ತಿದೆ. ಜೈಲೂಟ ಮೈ ಹಿಡಿಯುತ್ತಿಲ್ಲ. ಸರಿಯಾಗಿ ನಿದ್ದೆ ಬರ್ತಿಲ್ಲ.. ಹಾಗಾಗಿ ಚಿಂತಾಕ್ರಾಂತನಾಗಿರೋ ದಾಸ, ನ್ಯಾಯಾಧೀಶರ ಬಳಿ ಒಂದು ತೊಟ್ಟು ವಿಷ ಕೊಟ್ಟುಬಿಡಿ ಸ್ವಾಮಿ ಅಂತ ಹತಾಶೆಯಿಂದ ಕೇಳಿಕೊಂಡಿದ್ದಾರೆ ಎನ್ನಲಾಗ್ತಿದೆ. ಅತ್ತ ಗಂಡ ಕೊಳಕು ಬಟ್ಟೆಯಲ್ಲಿ ಜೈಲು ಹಕ್ಕಿಯಾಗಿದ್ರೆ, ಇತ್ತ ವಿಜಯಲಕ್ಷ್ಮೀ ಮಾತ್ರ ಫ್ರೆಂಡ್ಸ್ ಬರ್ತ್ ಡೇ ಅಂತ ಮೋಜು-ಮಸ್ತಿ ಮಾಡ್ತಿದ್ದಾರೆ. ಸಾಲದು ಅಂತ ಆ ಫೋಟೋಗಳನ್ನ ಸೋಶಿಯಲ್ ಮೀಡಿಯಾದಲ್ಲಿ ಬೇರೆ ಹಂಚಿಕೊಳ್ತಿದ್ದಾರೆ.
ಯೆಸ್.. ಈ ಹಿಂದೆ ಕ್ರಾಂತಿ ಚಿತ್ರದಲ್ಲಿ ದರ್ಶನ್ ಜೊತೆ ಐಟಂ ಹಾಡೊಂದಕ್ಕೆ ಸೊಂಟ ಬಳುಕಿಸಿರೋ ಸ್ಯಾಂಡಲ್‌ವುಡ್ ಚೆಲುವೆ ನಿಮಿಕಾ ರತ್ನಾಕರ್, ಶಾಕಿಂಗ್ ಸ್ಟೇಟ್‌ಮೆಂಟ್ ಒಂದನ್ನು ನೀಡಿದ್ದಾರೆ. ದರ್ಶನ್ ಇರೋದಕ್ಕೂ ಕೆಲವರು ಅವರನ್ನ ತೋರಿಸೋದಕ್ಕೂ ವ್ಯತ್ಯಾಸ ಇದೆ ಅಂತ ಕ್ಯಾರೆಕ್ಟರ್ ಸರ್ಟಿಫಿಕೇಟ್ ನೀಡಿ, ಪರೋಕ್ಷವಾಗಿ ಮಾಧ್ಯಮಗಳನ್ನ ಪ್ರಶ್ನಿಸಿದ್ದಾರೆ.
ಅವರೊಟ್ಟಿಗೆ ನಟಿಸಿದ ಮಾತ್ರಕ್ಕೆ ಕಾನೂನು, ಕೋರ್ಟ್, ಕಟ್ಟಳೆಗಳಿಗೆ ವಿರುದ್ಧವಾಗಿ ಮಾತನಾಡುವುದು ಎಷ್ಟು ಸರಿ ಅಲ್ಲವೇ..? ಅಲ್ಲದೆ, ಮಾಧ್ಯಮಗಳು ಅವುಗಳ ಕೆಲಸ ಮಾಡ್ತಿವೆ. ಇರೋದನ್ನ ಇದ್ದಂಗೆ ತೋರಿಸ್ತಿವೆ. ಅವುಗಳನ್ನ ಪ್ರಶ್ನಿಸಿ, ಎಡವಟ್ ಮಾಡಿಕೊಂಡ್ರಾ ಅನಿಸಲಿದೆ.
ಕಲಾಸಿಪಾಳ್ಯ, ಅಣ್ಣಾವ್ರು, ಅಯ್ಯ, ಮಂಡ್ಯ, ಯೋಧ, ಪ್ರಿನ್ಸ್.. ಹೀಗೆ ಒಂದಲ್ಲ ಎರಡಲ್ಲ ಬರೋಬ್ಬರಿ ಆರು ಸಿನಿಮಾಗಳನ್ನ ದರ್ಶನ್‌ಗೆ ಡೈರೆಕ್ಟ್ ಮಾಡಿರೋ ಅಂತಹ ಸ್ಟಾರ್ ಡೈರೆಕ್ಟರ್ ಓಂ ಪ್ರಕಾಶ್ ರಾವ್, ಸದ್ಯ ಫೀನಿಕ್ಸ್ ಅನ್ನೋ ಸಿನಿಮಾ ಮಾಡ್ತಿದ್ದಾರೆ. ಇತ್ತೀಚೆಗೆ ಅದರ ಸೆಟ್ ವಿಸಿಟ್‌ಗೆ ತೆರಳಿದ್ದಾಗ ಈ ಚಿತ್ರದ ಕಥೆಯನ್ನ ದಾಸನಿಗಾಗಿ ಮಾಡಿಕೊಂಡಿದ್ದಾಗಿ ಹೇಳಿದ್ದಾರೆ. ಕಾರಣಾಂತರಗಳಿಂದ ಅದು ಸಾಧ್ಯವಾಗಲಿಲ್ಲ. ಆದ್ರೆ ವಿಧಿಯ ಆಟವೋ ಏನೋ ಗೊತ್ತಿಲ್ಲ. ದರ್ಶನ್ ಜೈಲಲ್ಲಿದ್ದಾರೆ ಅಂತ ಹಳೆಯ ನೆನಪುಗಳನ್ನ ಮೆಲುಕು ಹಾಕಿದ್ದಾರೆ.
ಅಯ್ಯ ಸಿನಿಮಾ ಹಿಟ್ ಆದ ದಿನದಿಂದ ನನ್ನ ಬಳಿ ದರ್ಶನ್ ಕಥೆ ಕೇಳ್ತಾ ಇರಲಿಲ್ಲ. ಕಾಸ್ಟ್ಯೂಮ್ ಏನು..? ಶೂಟಿಂಗ್ ಯಾವಾಗ ಅಂತಷ್ಟೇ ಕೇಳ್ತಿದ್ರು. ತುಂಬಾ ಸೈಲೆಂಟ್ ಕ್ಯಾರೆಕ್ಟರ್ ಅವರದ್ದು, ಹಾರ್ಟ್ ಇಂದು ಒಳ್ಳೆಯ ವ್ಯಕ್ತಿ ಅಂತೆಲ್ಲಾ ಕೊಂಡಾಡಿದ್ದಾರೆ.
ಆದ್ರೆ ಎಷ್ಟು ಒಳ್ಳೆಯವರಾದ್ರೆ ಏನು ಪ್ರಯೋಜನ ಅಲ್ಲವೇ..? ಕಾನೂನನ್ನ ಕೈಗೆತ್ತಿಕೊಂಡರೆ ಅದರ ಪರಿಣಾಮ ಏನಾಗುತ್ತೆ ಅನ್ನೋದಕ್ಕೆ ದರ್ಶನ್‌ಗಿಂತ ಪ್ರತ್ಯಕ್ಷ ಸಾಕ್ಷಿ ಬೇಱವುದೂ ಬೇಕಿಲ್ಲ ಅನಿಸುತ್ತೆ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್